ಅಗಲಿದ ಭಾರತ ರತ್ನ ಪ್ರಣಬ್ ಮುಖರ್ಜಿ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಅತ್ಯುತ್ತಮ ರಾಜಕಾರಣಿಯೂ ಹೌದು. ಆದರೂ ಅವರನ್ನು ಪ್ರಧಾನಿಯಾಗದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತಡೆದರು. ಏಕೆ?
- ಪ್ರಶಾಂತ್ ನಾಥು, ದೆಹಲಿ ಪ್ರತಿನಿಧಿ, ಸುವರ್ಣ ನ್ಯೂಸ್
ಅಪ್ರತಿಮ ಬುದ್ಧಿವಂತಿಕೆ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಕೂಡ ನಿಚ್ಚಣಿಕೆ ಆಗಬಲ್ಲದು ಆದರೆ ರಾಜಕಾರಣದಲ್ಲಿ ಮಾತ್ರ ಕೆಲವೊಮ್ಮೆ ಹಿನ್ನೆಡೆಗೆ ಕಾರಣ ಆಗುತ್ತದೆ. ದೇಶ ಕಂಡ ಬುದ್ಧಿವಂತ ಕಾಂಗ್ರೆಸ ನಿಷ್ಠಾವಂತ ಮತ್ತು ಮುತ್ಸದ್ದಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆದರಾದರು, ಪ್ರಧಾನಿ ಸ್ಥಾನವನ್ನು ಕೂದಲೆಳೆ ಅಂತರದಿಂದ ಎರಡಲ್ಲ, ಮೂರು ಬಾರಿ ತಪ್ಪಿಸಿ ಕೊಂಡರು.
1 1984 ದಿಲ್ಲಿಯ ಪ್ರಧಾನಿ ನಿವಾಸದಲ್ಲಿ ಸಿಖ್ ಅಂಗರಕ್ಷಕ ರಿಂದ ಇಂದಿರಾ ಹತ್ಯೆಯಾದಾಗ ಕಾಂಗ್ರೆಸ ಪ್ರಧಾನ ಕಾರ್ಯದರ್ಶಿ ರಾಜೀವ ಗಾಂಧಿ ಜೊತೆ ಪ್ರಣಬ್ ಮುಖರ್ಜಿ ಜೊತೆ ಪಶ್ಚಿಮ ಬಂಗಾಳದ ಜಿಲ್ಲೆ ಒಂದರಲ್ಲಿ ಇರುತ್ತಾರೆ. ಹೇಗೋ ವಾಯುಸೇನೆಯ ವಿಮಾನ ಹಿಡಿದು ಪ್ರಣಬ್ ರಾಜೀವ್ ಜೊತೆ ಸಂಜೆ ದಿಲ್ಲಿಗೆ ಬಂದ ನಂತರ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಜೊತೆ ಚರ್ಚೆ ನಡೆಸಿ ಕಾಂಗ್ರೆಸ್ ಸಂಸದೀಯ ಮಂಡಳಿ ನಿರ್ಣಯ ಮಾಡಿಸಿ ರಾಜೀವ್ ಗಾಂಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಕೊಡಿಸಲಾಗುತ್ತದೆ. ಪ್ರಣಬ್ ಹೇಳುವ ಪ್ರಕಾರ ನಾನು ಮತ್ತು ಪಿ ವಿ ನರಸಿಂಹ ರಾವ್ ರಾಜೀವ್ ಗಾಂಧಿಗೆ ಪ್ರಧಾನಿ ಆಗಲು ತಯಾರಿ ಮಾಡಿದ್ವಿ ಎಂದು. ಆದರೆ ಗಾಂಧಿ ಪರಿವಾರದ ಆಪ್ತರು ಹೇಳುವ ಪ್ರಕಾರ 'ಕೊಲ್ಕತ್ತಾದಿಂದ ದಿಲ್ಲಿಗೆ ಬರುವಾಗ ಪ್ರಣಬ್ ರಾಜೀವ್ ಗೆ ಗುಲ್ಜಾರಿ ಲಾಲ್ ನಂದಾ ರೀತಿಯಲ್ಲಿ ತನ್ನನ್ನು ಮಧ್ಯಂತರ ಪ್ರಧಾನಿ ಮಾಡುವಂತೆ ಕೇಳಿಕೊಂಡಿದ್ದರು' ಎಂದು. ಇದನ್ನು ಪ್ರಣಬ್ ಒಪ್ಪಿಕೊಂಡಿಲ್ಲ ಆದರೂ 2 ತಿಂಗಳ ತರುವಾಯ ಚುನಾವಣೆಯಲ್ಲಿ ರಾಜೀವ ಗಾಂಧಿ ದೊಡ್ಡ ಬಹುಮತದೊಂದಿಗೆ ಆರಿಸಿ ಬಂದ ನಂತರ ಪ್ರಣಬ್ ದ ರನ್ನು ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ ಕೆಲ ತಿಂಗಳ ನಂತರ ಪ್ರಣಬ್ ರನ್ನು ಕಾಂಗ್ರೆಸ್ ನಿಂದ ಕೂಡಹೊರ ಹಾಕಲಾಗಿತ್ತು. ರಾಜೀವ್ ಗಾಂಧಿ ಅಧಿಕಾರದ 5 ವರ್ಷ ಕಾಂಗ್ರೆಸ್ ನಿಂದ ಹೊರಗಿದ್ದ ಪ್ರಣಬ್ ವಾಪಸ್ ಬಂದದ್ದು 1989ರಲ್ಲಿ.
2 ನರಸಿಂಹರಾವ್ ಕಾಲದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಎರಡನೇ ಇನ್ನಿಂಗ್ಸ್ ಶುರು ಮಾಡಿದ ಪ್ರಣಬ್ ದಾ ಗಾಂಧಿ ಪರಿವಾರದ ಜೊತೆ ಸಂಬಂಧ ಸುಧಾರಿಸಿದ್ದು ರಾಜೀವ ಹತ್ಯೆಯ ನಂತರವೇ. 1998ರಲ್ಲಿ ಸೀತಾರಾಮ್ ಕೇಸರಿ ಪದಚ್ಯುತಿ ಯಲ್ಲಿ ಸೋನಿಯಾ ಗೆ ಹತ್ತಿರವಾದ ಪ್ರಣಬ್ 2004ರಲ್ಲಿ ಸೋನಿಯಾ ಪ್ರಧಾನಿ ಆಗಲು ಒಲ್ಲೆ ಎಂದಾಗ ಮತ್ತೊಮ್ಮೆ ಪ್ರಧಾನಿ ಆಗುವ ಹತ್ತಿರ ಬಂದಿದ್ದರು. ಆದರೆ ಕಾಂಗ್ರೆಸ ಒಳ ರಾಜಕೀಯ ಅರಿತಿದ್ದ ನರಸಿಂಹ ರಾವ್ ರಿಂದ ತೊಂದರೆ ಅನುಭವಿಸಿದ್ದ ಗಾಂಧಿ ಕುಟುಂಬಕ್ಕೆ ಪ್ರಣಬ್ ರಂಥ ಬುದ್ಧಿವಂತ ಬೇಕಿರಲಿಲ್ಲ. ಹೀಗಾಗಿ ಪ್ರಣಬ್ ರನ್ನು ಬಿಟ್ಟು ತುಂಬಾ ಅರ್ಥಶಾಸ್ತ್ರಿ ಆಗಿದ್ದ ಮನ ಮೋಹನ್ ಸಿಂಗ್ ರನ್ನು ಪ್ರಧಾನಿ ಮಾಡಲಾಯಿತು. ಆಗ ನಾನು ಮನಮೋಹನ ಸಿಂಗ್ ಕೆಳಗಡೆ ಕೆಲಸ ಮಾಡಲು ಆಗೋಲ್ಲ ಎಂದು ಪ್ರಣಬ್ ಸ್ಪಷ್ಟವಾಗಿ ಹೇಳಿದರು. ಕೇಳದ ಸೋನಿಯಾ ಹೇಗೋ ಮಾಡಿ ಪ್ರಣಬ್ ರನ್ನು ಒಪ್ಪಿಸಿದರು. 1982ರಲ್ಲಿ ಇಂದಿರಾ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದಾಗ ಪ್ರಣಬ್ ಮುಖರ್ಜಿ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಗೆ ಡಾ ಮನಮೋಹನ ಸಿಂಗ ರನ್ನು ನೇಮಿಸಿದ್ದರು.
3 2012 ರಲ್ಲಿ ಪ್ರಣಬ್ ಮತ್ತು ಸೋನಿಯಾ ನಡುವೆ ಮೊದಲ ಮೀಟಿಂಗ್ ನಡೆದಾಗ ಪ್ರಣಬ್ ದಾದಾ ಗೆ ಸೋನಿಯಾ ಮನಸ್ಸಿನಲ್ಲಿ ಮನಮೋಹನ್ ಸಿಂಗ್ ರಾಷ್ಟ್ರಪತಿ ಆಗಬೇಕು ಎಂದು ಇದೆ ಬಹುಶಃ ನಾನೇ ಮುಂದಿನ ಪ್ರಧಾನಿ ಆಗಬಹುದು ಎಂದು ಅನ್ನಿಸಿತ್ತಂತೆ.ಆದರೆ ಮುಂದೆ ಮುಲಾಯಂ ಮತ್ತು ಮಮತಾ ಬ್ಯಾನರ್ಜಿ ಆಡಿದ ಆಟದಲ್ಲಿ ಸಿಟ್ಟಿಗೆದ್ದ ಸೋನಿಯಾ ಗಾಂಧಿ ಪ್ರಣಬ್ ದಾ ಗೆ ನೀವೇ ಮುಂದಿನ ರಾಷ್ಟ್ರಪತಿ ಎಂದು ಹೇಳಿದಾಗ ಪ್ರಣಬ್ ದಾ ಗೆ ಆಶ್ಚರ್ಯ ಆಯಿತಂತೆ
ಗಾಂಧೀಜಿ ಕೊಂದ RSS ಶಿಬಿರದಲ್ಲಿ ಪ್ರಣಬ್ ಭಾಷಮ ಮಾಡಿದ್ದೇಕೆ?
4 ಪ್ರಣಬ್ ಮುಖರ್ಜಿ ಮೊದಲು ಇಂದಿರಾ ಕಣ್ಣಿಗೆ ಬಿದ್ದಿದ್ದು ತನ್ನ ವಿರುದ್ಧ ಇದ್ದ ವಿ ಕೆ ಕೃಷ್ಣ ಮೆನನ್ ಎಂಬ ಮಲೆಯಾಳಿಯನ್ನು ಬಾಂಗ್ಲಾದಿಂದ ಗೆಲ್ಲಿಸಿದ್ದ ಕಾರಣದಿಂದ. ಕೂಡಲೇ ಪ್ರಣಬ್‌ರನ್ನು ಕಾಂಗ್ರೆಸ್‌ಗೆ ಎಳೆದು ಕೊಂಡು ಬಂದು ರಾಜ್ಯ ಸಭಾ ಸಂಸದ ಮಾಡ್ತಾರೆ ಇಂದಿರಾ. ಪ್ರಣಬ್ ಹೇಳುವ ಪ್ರಕಾರ ಸಿದ್ಧಾರ್ಥ ಶಂಕರ್ ರೇ ಜೊತೆ ಇಂದಿರಾ ಸಂಬಂಧ ಹಳಸಿದ ನಂತರ ಪ್ರಣಬ್ ಇನ್ನಷ್ಟು ಇಂದಿರಾಗೆ ಹತ್ತಿರ ಅದರಂತೆ.
5. ಪ್ರಣಬ್ ಅನೇಕ ಕಡೆ ಹೇಳಿಕೊಂಡಿರುವ ಪ್ರಕಾರ ಅವರು ಹಳೆಯ ಸಮಾಜವಾದಿ ಚಿಂತನೆಯ ಸರ್ಕಾರಿ ನಿಯಂತ್ರಣದ ಆರ್ಥಿಕ ಚಿಂತನೆ ಇದ್ದವರು.ಹೀಗಾಗಿ ಮುಕ್ತ ಮಾರುಕಟ್ಟೆ ಗಾಗಿ ಆರ್ಥಿಕ ಸುಧಾರಣೆಗೆ ಸಂಬಂಧ ಪಟ್ಟಂತೆ ಡಾ ಮನಮೋಹನ ಸಿಂಗ್ ಮತ್ತು ಪಿ ಚಿದಂಬರಂ ಜೊತೆ ಪ್ರಣಬ್ ದಾ ಅವರ ಕ್ಯಾಬಿನೆಟ್ ನಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದ್ದವು. 2004ರಲ್ಲಿ ಇದನ್ನೇ ತಪ್ಪಿಸಲು ಪ್ರಣಬ್ ಸೋನಿಯಾರನ್ನು ಹಣಕಾಸು ಇಲಾಖೆ ಬೇಡ ಬೇರೆ ಕೊಡಿ ಎಂದು ಕೇಳಿದ್ದರಂತೆ.
6. 2012 ರಲ್ಲಿ ಹಣಕಾಸು ಸಚಿವರಾಗಿದ್ದಾಗ ಪ್ರಣಬ್ ಜಾರಿಗೆ ತಂದ ಭಾರತದಲ್ಲಿ ವ್ಯವಹರಿಸುವ ಬಹು ರಾಷ್ಟ್ರೀಯ ಕಂಪನಿಗಳಿಗೆ 2007 ರಿಂದ ತೆರಿಗೆ ಹಾಕುವ ಕಾನೂನಿನಿಂದ ಪ್ರಧಾನಿ ಮನ ಮೋಹನ ಸಿಂಗ್ ಪಿ ಚಿದಂಬರಂ ಮತ್ತು ಉಳಿದ ಸಂಪುಟದ ಸದಸ್ಯರು ತೀವ್ರವಾಗಿ ಬೇಸರ ಗೊಂಡಿದ್ದರಂತೆ.ಸ್ವತಃ ಸೋನಿಯಾ ಈ ತೆರಿಗೆ ಹಿಂದೆ ತೆಗೆದುಕೊಳ್ಳಿ ವಿದೇಶಿ ಬಂಡವಾಳ ನಿಂತು ಹೋಗುತ್ತದೆ ಎಂದು ಎಚ್ಚರಿಸಿದ್ದರು.
8. ಮುಂಬೈ ದಾಳಿಯ ನಂತರ ವಿದೇಶಾಂಗ ಸಚಿವ ಪ್ರಣಬ್ ಕೊಲ್ಕತ್ತಾ ದಲ್ಲಿದ್ದಾಗ ಅಮೆರಿಕಾದ ಕಾರ್ಯದರ್ಶಿ ಕೊಂಡೊಲಿನಾ ರೈಸ ಫೋನ್ ಮಾಡಿ "ನೀವು ಪಾಕಿಸ್ತಾನದ ಅಧ್ಯಕ್ಷ ಜರ್ದಾರಿಗೆ ಫೋನ್ ಮಾಡಿ ಯುದ್ಧ ಮಾಡುತ್ತೇವೆ ಎಂದು ಹೇಳಿದ್ದೀರಿ ಪಾಕ್ ಸೈನ್ಯ ಗಡಿ ಯಲ್ಲಿ ಸನ್ನದ್ಧ ವಾಗಿದೆ ಯುದ್ಧ ಬೇಡ " ಎಂದು ಹೇಳಿದರಂತೆ.ಕೊನೆಗೆ ಗೊತ್ತಾಗಿದ್ದು ಪಾಕ್ ಜೈಲಿನಲ್ಲಿರುವ ಲಂಡನ್ ನ ಭಯೋತ್ಪಾದಕ ಕಂದಹಾರ ನಲ್ಲಿ ನಮ್ಮಿಂದ ಬಿಡುಗಡೆಗೊಂಡ ಭಯೋತ್ಪಾದಕ ಓಮರ್ ಶೇಖ ಪ್ರಣಬ್ ಹೆಸರು ಹೇಳಿ ಪಾಕ್ ಅಧ್ಯಕ್ಷರಿಗೆ ಫೋನ್ ಮಾಡಿರುತ್ತಾನೆ.
7. ಪ್ರಣಬ್ ದಾ ರನ್ನು ಬಂಗಾಳಿ ಕಾಂಗ್ರೆಸ್ಸಿಗರು ಕಲ್ಲಂಗಡಿ ಎಂದು ಕರೆಯುತ್ತಿದ್ದರು.ಹೊರಗಿನಿಂದ ಹಸಿರಾದರು ಒಳಗಿನಿಂದ ಕೆಂಪು.ಹೀಗಾಗಿಯೇ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಇಂದ ಬುದ್ಧದೇವ ವರೆಗೆ ಪ್ರಣಬ್ ಸಂಬಂಧಗಳು ಚೆನ್ನಾಗಿದ್ದವು.ಮುಂದೆ ಮಮತಾ ಆರೋಪಿಸಿದ ಪ್ರಕಾರ ಜ್ಯೋತಿ ಬಸು ಮತ್ತು ಪ್ರಣಬ್ ಸಮಿಕರಣದ ಕಾರಣದಿಂದಲೇ 30 ವರ್ಷ ಎಡ ರಂಗದ ಎದುರು ಕಾಂಗ್ರೆಸ ವಿರೋಧ ಪಕ್ಷವಾಗಿ ಬೆಳೆಯಲಿಲ್ಲ.ಇದೇ ಕಾರಣದಿಂದ ಮಮತಾ ಮತ್ತು ಪ್ರಣಬ್ ನಡುವೆ ಎಂದು ಜಮಾಯಿಸಲಿಲ್ಲ.
ಪ್ರಣಬ್ ಮುಖರ್ಜಿ ಜೀವನದ ಇಂಟರೆಸ್ಟಿಂಗ್ ಮಾಹಿತಿ
10. ಜೀವನ ಪೂರ್ತಿ ಆರ್ ಎಸ್ ಎಸ್ ಬಿಜೆಪಿ ಯನ್ನು ವಿರೋಧಿಸಿದ ಪ್ರಣಬ್ ದಾ ಮಾಜಿ ರಾಷ್ಟ್ರಪತಿ ಆದ ಮೇಲೆ ನಾಗಪುರದ ಆರ್ ಎಸ್ ಎಸ ತೃತೀಯ ಸಂಘ ಶಿಕ್ಷಾ ವರ್ಗದ ಸಮರೋಪಕ್ಕೆ ಹೋಗಿದ್ದು ಸೋನಿಯಾ ರಾಹುಲ್ ಅಹ್ಮದ್ ಪಟೇಲ್ ಮತ್ತು ಚಿದಂಬರಂ ಅವರನ್ನು ಕೆರಳಿಸಿತ್ತು.ದಾದಾ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಹೋಗ ಕೂಡದು ಎಂದು ಪುತ್ರಿ ಶರ್ಮಿಷ್ಠ ಹೇಳಿದರು ಕೇಳದ ಪ್ರಣಬ್ ನಾಗಪುರಕ್ಕೆ ಹೋಗಿ ಡಾ ಹೆಡಗೇವಾರ್ ರನ್ನು ಭಾರತ ಮಾತೆಯ ಪುತ್ರ ಎಂದು ಕರೆದಿದ್ದು ಕಾಂಗ್ರೆಸ ಗೆ ಬಹಳ ಮುಜುಗರ ತಂದಿತ್ತು.ಕೆಲವರು ಹೇಳುವ ಪ್ರಕಾರ ಆರ್ ಎಸ್ ಎಸ್ ಕಾರ್ಯಾಲಯಕ್ಕೆ ಹೋಗಿ ಪ್ರಣಬ್ ಜೀವನ ಪೂರ್ತಿ ನಿಷ್ಠನಾಗಿ ದುಡಿದರು ತನ್ನನ್ನು ಪ್ರಧಾನಿ ಮಾಡದ ಗಾಂಧಿ ಪರಿವಾರದ ವಿರುದ್ಧ ಸೇಡು ತೀರಿಸಿ ಕೊಂಡಿದ್ದರು.
9. ಕಾಂಗ್ರೆಸ ಪಕ್ಷ ಮತ್ತು ಗಾಂಧಿಗಳನ್ನು ಬದ್ಧವಾಗಿ ದ್ವೇಷಿಸುವ ನರೇಂದ್ರ ಮೋದಿ ಜನೇವರಿ 25 2019 ರ ಸಂಜೆ 620 ಕ್ಕೆ ಸರಿಯಾಗಿ ಪ್ರಣಬ್ ದಾ ಗೆ ಫೋನ್ ಮಾಡಿದರಂತೆ.ನಾನೇ ಬರಬೇಕಿತ್ತು ಆದರೆ ಬ್ಯುಸಿ ಇದ್ದೇನೆ. ಭಾರತ ರತ್ನ ವನ್ನು ಸ್ವೀಕರಿಸುತ್ತೀರಾ ಎಂದು ಕೇಳಿದಾಗ ಪ್ರಣಬ್ ಕೂಡಲೇ ಒಪ್ಪಿಕೊಂಡರಂತೆ.ಆದರೆ ರಾಷ್ಟ್ರಪತಿ ಭವನ ದಿಂದ ಆದೇಶ ಹೊರ ಬೀಳುವ ವರೆಗೆ ಪುತ್ರಿ ಶರ್ಮಿಷ್ಠ ಪುತ್ರ ಅಭಿಜಿತ್ ಗೂ ಹೇಳಿರಲಿಲ್ಲ ಅಂತೆ.ಆದರೆ ಪ್ರಣಬ್ ದಾ ಭಾರತ ರತ್ನ ಸ್ವೀಕರಿಸಿದಾಗ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಇಬ್ಬರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
11. 1980 ರ ಸಮಯದಲ್ಲಿ ಧೀರುಬಾಯಿ ಅಂಬಾನಿ ಉದ್ಯಮ ಬೆಳೆಯಲು ವಾಣಿಜ್ಯ ಮತ್ತು ಹಣಕಾಸು ಸಚಿವರಾಗಿ ಪ್ರಣಬ್ ಪಾತ್ರ ದೊಡ್ಡದಿತ್ತು ಎಂದು ಹೇಳಲಾಗುತ್ತದೆ.ಮುಂದೆ ಮುಕೇಶ ಅಂಬಾನಿ ಜೊತೆಗೆ ಚೆನ್ನಾಗಿ ಇದ್ದ ಪ್ರಣಬ್ ದಾ ಸಂಬಂಧ ಅನಿಲ್ ಅಂಬಾನಿ ಜೊತೆಗೆ ಅಷ್ಟಕಷ್ಟೇ ಇತ್ತು.ಪ್ರಣಬ್ ದಾ ಅಂಬಾನಿ ಪುತ್ರಿಯ ಮದುವೆಯಲ್ಲೂ ಭಾಗವಹಿಸಿ ಸುದ್ದಿ ಆಗಿದ್ದರು.
12. ಬಂಗಾಳಿ ಪ್ರಣಬ್ ದಾ ದಿಲ್ಲಿಗೆ ಬಂದ ನಂತರವೂ ಬಹಳಷ್ಟು ವರ್ಷ ಗಳ ವರೆಗೆ ಪೈಪ್ ಸಿಗಾರ್ ಸೇದುತ್ತಿದ್ದರು. ಆಮೇಲೆ ವೈದ್ಯರು ಬಲವಂತ ವಾಗಿ ಬಿಡಿಸಿದ್ದರು.ಆದರೆ ನಿಕೋಟಿನ್ ಇಲ್ಲದೆಯೂ ಪೈಪ್ ಬಾಯಲ್ಲಿ ಇಟ್ಟು ಕೊಳ್ಳುತ್ತಿದ್ದರು ದಾದಾ. ದಿಲ್ಲಿಗೆ ಬಂದಾಗ ದೇವಕಾ0ತ ಬರುವಾ ಪ್ರಣಬ್ ದಾ ಗೆ ಮೊದಲ ಸಿಗಾರ್ ಪೈಪ್ ಕೊಟ್ಟಿದ್ದರಂತೆ.ದಾದಾ ರಾಷ್ಟ್ರಪತಿ ಯಾಗಿ ನಿವೃತ್ತ ರಾದಾಗ ಬೇರೆ ಬೇರೆ ದೇಶಗಳ ಮುಖ್ಯಸ್ಥರು ಕೊಟ್ಟ 500 ಪೈಪ್ ಗಳಿದ್ದವು.ಅವೆಲ್ಲವನ್ನೂ ಅವರು ರಾಷ್ಟ್ರಪತಿ ಭವನದ ಮ್ಯೂಸಿಯಂ ಗೆ ಕೊಟ್ಟು ಹೋಗಿದ್ದರು.