
ಲಕ್ನೋ (ಸೆ. 01) ಬಿಜೆಪಿ ಶಾಸಕರೊಬ್ಬರು ಅಲ್ಲಿನ ವಿಧಾನಸಭೆಯಲ್ಲಿ ಎತ್ತಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಸರ್ಕಾರ , ಎಷ್ಟು ಸಂಖ್ಯೆಯ ಬ್ರಾಹ್ಮಣರು ಗನ್ ಲೈಸನ್ಸ್ ಗೆ ಅರ್ಜಿ ಹಾಕಿದ್ದಾರೆ ಮಾಹಿತಿ ಕೊಡಿ ಎಂದು ಜಿಲ್ಲಾ ಮಾಜಿಸ್ಟ್ರೇಟ್ ಗಳಿಗೆ ಪತ್ರ ಬರೆದಿದೆ.
ಗೃಹ ಇಲಾಖೆಯ ಕಾರ್ಯದರ್ಶಿ ಪ್ರಕಾಶ್ ಚಂದ್ರ ಅಗರ್ ವಾಲ್ ಸಹಿ ಮಾಡಿರುವ ಪತ್ರ ಆಗಸ್ಟ್ 18 ರಂದು ರವಾನೆಯಾಗಿದೆ ಎನ್ನಲಾಗಿದೆ. ಬಿಜೆಪಿಯ ಶಾಸಕ ದೇವಮಣಿ ದ್ವಿವೇದಿ ಉತ್ತರ ಪ್ರದೇಶ ವಿಧಾನ ಸಭೆಯ ಮುಖ್ಯ ಕಾರ್ಯದರ್ಶಿ ಪ್ರದೀಪ್ ದುಬೆ ಅವರಿಗೆ ಪತ್ರ ಬರೆದು ಅನೇಕ ವಿಚಾರಗಳನ್ನು ಎತ್ತಿದ್ದರು.
ಯೋಗಿ ಸರ್ಕಾರದ ದಿಟ್ಟ ಕ್ರಮ, ಪಾತಕಿ ಮನೆ ನೆಲಸಮ
ಗೃಹ ಸಚಿವರ ಉದ್ದೇಶಿಸಿ ಬರೆದಿದ್ದ ಪತ್ರದಲ್ಲಿ, ಕಳೆದ ಮೂರು ವರ್ಷದಲ್ಲಿ ಎಷ್ಟು ಜನ ಬ್ರಾಹ್ಮಣರ ಹತ್ಯೆ ರಾಜ್ಯದಲ್ಲಾಗಿದೆ? ಇಂಥ ಪ್ರಕರಣಕ್ಕೆ ಸಂಬಂಧಿಸಿ ಎಷ್ಟು ಜನರನ್ನು ಬಂಧಿಲಾಗಿದೆ? ಎಷ್ಟು ಜನಕ್ಕೆ ಶಿಕ್ಷೆಯಾಗಿದೆ? ಬ್ರಾಹ್ಮಣರಿಗೆ ಸುರಕ್ಷತೆ ನೀಡಲು ಸರ್ಕಾರ ಮಾಡಿಕೊಂಡಿರುವ ಯೋಜನೆಗಳು ಏನು? ಅಗತ್ಯಕ್ಕೆ ಅನುಗುಣವಾಗಿ ಸರ್ಕಾರ ಬ್ರಾಹ್ಮಣರಿಗೆ ಶಸ್ತ್ರಾಸ್ತ್ರ ಪರವಾನಗಿ ನೀಡುತ್ತಿದ್ದೆಯೇ? ಎಷ್ಟು ಜನ ಬ್ರಾಹ್ಮಣರು ಅರ್ಜಿ ಹಾಕಿದ್ದಾರೆ? ಎಷ್ಟು ನೀಲಾಗಿದೆ? ಎಂದು ಮಾಹಿತಿ ಕೇಳಿದ್ದರು.
ಇದಾದ ಮೇಲೆ ಉತ್ತರ ಪ್ರದೇಶ ಸರ್ಕಾರ ಈ ಮಾಹಿತಿ ಪಡೆದುಕೊಳ್ಳಲು ಜಿಲ್ಲಾ ಆಡಳಿತ ಕೇಂದ್ರಕ್ಕೆ ಮಾಹಿತಿ ರವಾನಿಸಿದೆ ಎನ್ನಲಾಗಿದೆ. ಆದರೆ ಅಲ್ಲಿನ ವಿಧಾನಸಭೆ ಕಾರ್ಯದರ್ಶಿನ ಸರ್ಕಾರ ಇಂಥ ಯಾವುದೆ ಪತ್ರ ಬರೆದಿಲ್ಲ ಎಂದಿದ್ದಾರೆ.
ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ ಕೌಂಟರ್ ವಿಚಾರವೂ ಇದಕ್ಕೆ ಥಳುಕು ಹಾಕಿಕೊಂಡಿದೆ. ಒಟ್ಟಿನಲ್ಲಿ ಸರ್ಕಾರ ತಾನು ಇಂಥ ಮಾಹಿತಿ ಕೇಳಿದ್ದೇನೆ ಎಂದು ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ