ಲಡಾಖ್ ಪ್ರಾಂತ್ಯದ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರು ಕಾಲು ಕೆರೆದು ಭಾರತೀಯ ಯೋಧರ ಮೇಲೆರಗಿದ ಘಟನೆ ಬಳಿಕ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಕೇಂದ್ರ ಸರ್ಕಾರ ದಿಢೀರ್ 59 ಚೀನಾ ಆ್ಯಪ್ ಬ್ಯಾನ್ ಮಾಡಿ ತಿರುಗೇಟು ನೀಡಿದೆ. ಆದರೆ ಭಾರತದಲ್ಲಿ PUBG ಆ್ಯಪ್ ಬ್ಯಾನ್ ಆಗಿಲ್ಲ. ಕಾರಣ ಯಾಕೆ?
ನವದೆಹಲಿ(ಜು.05): ಭಾರತ ಹಾಗೂ ಚೀನಾ ಘರ್ಷಣೆಯಿಂದ ದೇಶದಲ್ಲೇ ದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇಷ್ಟೇ ಅಲ್ಲ ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ 59 ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ಟಿಕ್‌ಟಾಕ್, ಯುಸಿ ಬ್ರೌಸರ್, ಹೆಲೋ, ಶೇರ್ ಇಟ್ ಸೇರಿದಂತೆ 59 ಆ್ಯಪ್ ನಿಷೇಧಕ್ಕೊಳಗಾಗಿದೆ. ಆದರೆ ಈ ನಿಷೇಧದಲ್ಲಿ PUBG ಗೇಮಿಂಗ್ ಆ್ಯಪ್ ಉಳಿದುಕೊಂಡಿದೆ.
59 ಚೀನಾ ಆ್ಯಪ್ ಜೊತೆ Zoom ಆ್ಯಪ್ ಬ್ಯಾನ್ ಮಾಡಿಲ್ಲ ಯಾಕೆ? ಕುತೂಹಲಕ್ಕೆ ಇಲ್ಲಿದೆ ಉತ್ತರ!
undefined
PUBG ಮೂಲ
ಭಾರತದಲ್ಲಿ PUBG ಅತ್ಯಂತ ಜನಪ್ರಿಯ ಗೇಮಿಂಗ್ ಆ್ಯಪ್. ಕೇಂದ್ರ ಸರ್ಕಾರದ ಬ್ಯಾನ್ ಬಳಿಕ ಹಲವರು ಗೊಂದಲಕ್ಕೊಳಗಾಗಿದ್ದಾರೆ. PUBG ಕೂಡ ಬ್ಯಾನ್ ಆಗಿದೆ ಎಂದರೆ, ಹಲವರು PUBG ಚೀನಾ ಮೂಲದ್ದು ಅನ್ನೋ ವಾದವನ್ನು ಮಂಡಿಸಿದ್ದಾರೆ. ಆದರೆ PUBG ಮೂಲ ಸೌತ್ ಕೊರಿಯಾ. 2017ರಲ್ಲಿ ಸೌತ್ ಕೊರಿಯಾದ ಬ್ಲೂಹೊಲ್ ವಿಡಿಯೋ ಗೇಮ್ ಕಂಪನಿಯ ಸಹ ಸಂಸ್ಥೆಯಾಗಿರುವ PUBG ಕಾರ್ಪೋರೇಶನ್ ಮೈಕ್ರೋಸಾಫ್ಟ್ ವಿಂಡೋಗಾಗಿ PUBG ಗೇಮಿಂಗ್ ಆರಂಭಿಸಿತು.
ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್; ಟಿಕ್‌ಟಾಕ್ ಸೇರಿ 59 ಚೀನಾ ಆ್ಯಪ್ ಬ್ಯಾನ್ ಮಾಡಿದ ಭಾರತ
ಚೀನಾ ಸಂಪರ್ಕ ಹೇಗೆ?
PUBG ಗೇಮ್‌ನಲ್ಲಿ ಹೆಚ್ಚು ಗೇಮ್ ಪರಿಚಯಿಸಲು ಸೌತ್ ಕೊರಿಯಾ ಡೆವಲಪ್ಪರ್, ಚೀನಾದ ಟೆನ್ಸೆಂಟ್ ಗೇಮಿಂಗ್ ಕಂಪನಿ ಜೊತೆ ಪಾಲುದಾರಿಕೆ ಮಾಡಿಕೊಂಡಿತು. ಇಷ್ಟೇ ಅಲ್ಲ ಈ ಒಪ್ಪಂದದಿಂದ PUBG ಚೀನಾ ಮಾರುಕಟ್ಟೆಗೆ ಪ್ರವೇಶ ಪಡೆಯಿತು. ಚೀನಾದ ಟೆನ್ಸೆಂಟ್ ಕಂಪನಿ PUBG ಮೊಬೈಲ್ ಆ್ಯಪ್ ಪರಿಚಯಿಸಿತು. ಆ್ಯಪ್ ಪರಿಚಯಿಸಿದ್ದು ಚೀನಾದ ಟೆನ್ಸೆಂಟ್ ಕಂಪನಿಯಾಗಿದ್ದರೂ ಇದರ ಮೂಲ ಸೌತ್ ಕೊರಿಯಾ ಆಗಿದೆ.
ಭಾರತದಲ್ಲಿ ಚೀನಾ ಆ್ಯಪ್ ಬ್ಯಾನ್ ಜೊತೆ PUBG ಬ್ಯಾನ್ ಮಾಡಿಲ್ಲ. PUBGಗೆ ಚೀನಾದ ಟೆನ್ಸೆಂಟ್ ಕಂಪನಿ ವಿಡಿಯೋ ಗೇಮ್ ಪಬ್ಲಿಶಿಂಗ್ ಪಾರ್ಟ್ನರ್ ಮಾತ್ರ. ಹೀಗಾಗಿ ಭಾರತದ PUBG ಆ್ಯಪ್ ಬ್ಯಾನ್ ಮಾಡಿಲ್ಲ.