ವಿದೇಶಿ ಮಾಧ್ಯಮಗಳು ಯುರೋಪ್ ದೇಶಗಳನ್ನೇಕೆ ಕ್ರಿಶ್ಚಿಯನ್ ನ್ಯಾಷನಲಿಸ್ಟ್ ಸರ್ಕಾರ ಎಂದು ಕರೆಯಲ್ಲ?

By Anusha Kb  |  First Published Jan 29, 2023, 1:22 PM IST

ಅಂತಾರಾಷ್ಟ್ರೀಯ ವಿಚಾರಗಳು ಸೇರಿದಂತೆ ದೇಶದ ಪ್ರತಿ ನಿರ್ಧಾರಗಳನ್ನು ಎಲ್ಲೆಡೆ ಸಮರ್ಥವಾಗಿ ಸಮರ್ಥಿಸಿಕೊಂಡು ಬರುತ್ತಿರುವ ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.


ನವದೆಹಲಿ:  ಅಂತಾರಾಷ್ಟ್ರೀಯ ವಿಚಾರಗಳು ಸೇರಿದಂತೆ ದೇಶದ ಪ್ರತಿ ನಿರ್ಧಾರಗಳನ್ನು ಎಲ್ಲೆಡೆ ಸಮರ್ಥವಾಗಿ ಸಮರ್ಥಿಸಿಕೊಂಡು ಬರುತ್ತಿರುವ ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಜೊತೆ ನಡೆದ ಸಂವಾದದಲ್ಲಿ ಭಾಗಿಯಾದ ಅವರಿಗೆ ಪಾಕಿಸ್ತಾನ ನಮ್ಮ ಪಾಲಿನ ಆಸ್ತಿಯೇ ಅಥವಾ ಕಂಟಕವೇ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ನಗುತ್ತಾ ಉತ್ತರಿಸಿದ ವಿದೇಶಾಂಗ ಸಚಿವರು, ಇದು ವಾಸ್ತವ, ಜೀವನದಲ್ಲಿ  ನಮಗೆ ನೆರೆಹೊರೆಯವರನ್ನು ಬಂಧುಗಳನ್ನು ಆಯ್ಕೆ ಮಾಡಲಾಗದು ಹೇಗೆ  ಪಾಂಡವರಿಗೆ ತಮ್ಮ ಸಹೋದರರನ್ನು ಆಯ್ಕೆ ಮಾಡುಲು ಸಾಧ್ಯವಿರಲಿಲ್ಲವೋ ಹಾಗೆಯೇ ನಮ್ಮ ನೆರೆ ದೇಶ ಇದೇ ಇರಬೇಕು ಎಂದು ನಾವು ಆಯ್ಕೆ ಮಾಡಲಾಗದು. ಆದರೆ ಒಳ್ಳೆಯ ವಿಚಾರಗಳು ಮೇಲುಗೈ ಸಾಧಿಸಬಹುದು ಎಂಬ ನಿರೀಕ್ಷೆ ನಮ್ಮದು ಎಂದು ಉತ್ತರಿಸಿದರು. 

ದೇಶದ ಶ್ರೇಷ್ಠ ರಾಜತಾಂತ್ರಿಕರು ಶ್ರೀಕೃಷ್ಣ, ಹನುಮಾನ್

Tap to resize

Latest Videos

ಇದೇ ವೇಳೆ ಭಾರತದ ಶ್ರೇಷ್ಠ ರಾಜತಾಂತ್ರಿಕರು ಶ್ರೀ ಕೃಷ್ಣ (Shri Krishna) ಮತ್ತು ಹನುಮಂತ (Hanuman) ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು ಹೇಳಿದರು, ಹನುಮಂತ ಬಹುಪಯೋಗಿ ರಾಜತಾಂತ್ರಿಕನಾಗಿದ್ದು,  ಹನುಮಂತನು ಇದಕ್ಕಾಗಿ ದೇಶ ಬಿಟ್ಟು ಹೋಗಿದ್ದಾನೆ. ಶ್ರೀ ಕೃಷ್ಣನು ಕಾರ್ಯತಂತ್ರದ ತಾಳ್ಮೆಗೆ ಉತ್ತಮ ಉದಾಹರಣೆಯಾಗಿದ್ದನು. ಮಹಾಭಾರತದ ಕಥೆಯು ನಿಯಮಗಳನ್ನು ಉಲ್ಲಂಘಿಸುವವರ ಕಥೆಯಾಗಿದೆ ಎಂದು ಹೇಳಿದರು.

ಅಲ್ಲದೇ ವಿದೇಶಿ ಮಾಧ್ಯಮಗಳು ಭಾರತದ ಸರ್ಕಾರವನ್ನು ಹಿಂದೂ ನ್ಯಾಷನಲಿಷ್ಟ್ ಪಾರ್ಟಿ (Hindu Nationalist Party) ಎಂದು ಕರೆಯುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಹಾಗಾದರೆ ಐರೋಪ್ಯ ದೇಶಗಳ ಸರ್ಕಾರವನ್ನು ವಿದೇಶಿ ಮಾಧ್ಯಮಗಳು ಕ್ರಿಶ್ಚಿಯನ್ ನ್ಯಾಷನಲಿಸ್ಟ್ ಸರ್ಕಾರ ಎಂದು ಕರೆಯುತ್ತವೆಯೇ ಎಂದು ಪ್ರಶ್ನಿಸಿದರು. ಗೋಧ್ರೋತ್ತರ ಗಲಭೆಗೆ ಸಂಬಂಧಿಸಿದಂತೆ ವಿದೇಶಿ ಮಾಧ್ಯಮ ಬಿಬಿಸಿ ಸಿದ್ಧಪಡಿಸಿದ ವಿವಾದಿತ ಡಾಕ್ಯುಮೆಂಟರಿ ಬಗ್ಗೆ ದೇಶದಲ್ಲಿ ಪರ ವಿರೋಧ ಸೃಷ್ಟಿಯಾಗಿದೆ. ಈ ವಿಚಾರವಾಗಿ ಭಾರತ ಸರ್ಕಾರಕ್ಕೆ ವಿದೇಶಿ ಮಾಧ್ಯಮಗಳು ಹಿಂದೂ ಪರ ಸರ್ಕಾರ ಎಂದು ಹಣೆಪಟ್ಟಿ ಕಟ್ಟಿವೆ  ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜೈ ಶಂಕರ್,  ಅಮೆರಿಕಾ, ಯುರೋಪ್‌ನ ಸರ್ಕಾರಗಳಿಗೆ ಕ್ರಿಶ್ಚಿಯನ್ ನ್ಯಾಷನಲಿಸ್ಟ್ ಸರ್ಕಾರ ಎಂದು ಕರೆಯುವ ತಾಕತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. 

ಚೀನಾ ಅತಿಕ್ರಮಣಕ್ಕೆ ಉಪಗ್ರಹ ಸಾಕ್ಷಿ ಇದೆ: ಜೈಶಂಕರ್‌

ಭಾರತ ಸರ್ಕಾರವನ್ನು ಹಿಂದೂ ರಾಷ್ಟ್ರೀಯವಾಗಿ ಸರ್ಕಾರ ಎನ್ನಲಾಗುತ್ತಿದೆ. ಪಾಶ್ಚಿಮಾತ್ಯ ಸರ್ಕಾರಗಳು ಕ್ರಿಶ್ಚಿಯನಿಟಿ ಆಧಾರವಾಗಿವೆ ಎಂದು ಹೇಳುವುದಿಲ್ಲ. ಆದರೆ ಭಾರತಕ್ಕೆ ಮಾತ್ರ ಈ ಹಣೆಪಟ್ಟಿ ಕಟ್ಟಲಾಗುತ್ತಿದೆ. ಪ್ರಸ್ತುತ ನಮ್ಮ ದೇಶ ಯಾವ ವಿಚಾರದಲ್ಲೂ ಕಡಿಮೆ ಇಲ್ಲ. ವಿಶ್ವದ ಇತರ ದೇಶಗಳಿಗಿಂತ ಯಾವ ವಿಚಾರದಲ್ಲೂ ಹಿಂದೆ ಬಿದ್ದಿಲ್ಲ.  ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ರಾಜಕೀಯದಾಚೆಗೂ ಕೆಲಸ ಮಾಡಿದೆ. ರಾಷ್ಟ್ರೀಯ ವಾದವನ್ನು ಮೀರಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಸಂಕಷ್ಟಕಾಲದಲ್ಲಿ ಈ ಹಿಂದೂ ರಾಷ್ಟ್ರೀಯವಾದಿ ಎಂಬ ಹಣೆಪಟ್ಟಿ ಹೊತ್ತ ಸರ್ಕಾರವೇ ವಿದೇಶಗಳಿಗೆ ನೆರವು ನೀಡಿದೆ. ನಮ್ಮ ಸರ್ಕಾರ ಯಾವುದೋ ಒಂದು ಜಾತಿ ಧರ್ಮದ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಜೈಶಂಕರ್ ಬಲವಾಗಿ ಉಚ್ಚರಿಸಿದರು. 

ನಮ್ಮ ಕೆಲಸದ ಬಗ್ಗೆ ನಮಗೆ ಹೆಮ್ಮೆ ಇದೆ. ರಾಷ್ಟ್ರೀಯವಾದದ ಹೊರತಾಗಿಯೂ ಸರ್ಕಾರ ಧೃಡ ನಿರ್ಧಾರ ತೆಗೆದುಕೊಳ್ಳುತ್ತದೆ.  ಸರ್ಕಾರದ ನೀತಿ ನಿಯಮಗಳಲ್ಲಿ ಯಾವುದೇ ಹಿಂಜರಿಕೆಯ ಮನೋಭಾವ ಇಲ್ಲ. ಹಾಗೆಯೇ ಕ್ಷಮೆ ಕೇಳುವ ಅಗತ್ಯವೂ ಇಲ್ಲ. ಹಾಗೆಯೇ ಸಂಕಷ್ಟದ ಸಮಯದಲ್ಲಿ ಇಡೀ ವಿಶ್ವಕ್ಕೆ ನೆರವಾಗಲು ದೇಶ ಸದಾ ಸಿದ್ಧವಿದೆ. ವಿದೇಶಿ ಮಾಧ್ಯಮಗಳನ್ನು ಓಡಿ ನೋಡಿ ಅವರು ಯಾವಾಗಲೂ ನಮ್ಮ ದೇಶವನ್ನು  ಹಿಂದೂ ಹಣೆಪಟ್ಟಿಯಲ್ಲೇ ಗುರುತಿಸುತ್ತವೆ. ಆದರೆ ಅಲ್ಲಿನ ಸರ್ಕಾರಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ತಳುಕು ಹಾಕುವುದಿಲ್ಲ. ಭಾರತವನ್ನು ಮಾತ್ರ ಅವು ಟಾರ್ಗೆಟ್ ಮಾಡುತ್ತಿವೆ. ಇದು ದಾರಿ ತಪ್ಪಿಸುವ ಕೆಲಸವಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಚೀನಾ ಗಡಿಗೆ ರಾಹುಲ್ ಸೂಚನೆ ಮೇರೆಗೆ ಸೇನೆ ಕಳಿಸಿದ್ದಲ್ಲ: ಜೈಶಂಕರ್‌ ತಿರುಗೇಟು

ಇತ್ತ ಭಾರತಕ್ಕೆ ಜಿ20 ಅಧ್ಯಕ್ಷತೆ ಸಿಕ್ಕ ನಂತರ ಎಲ್ಲಾ ರಾಷ್ಟ್ರಗಳ ಅಧ್ಯಕ್ಷರು ನಮ್ಮ ಪ್ರಧಾನಿ ನರೇಂದ್ರ ಮೋದಿ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ವಿದೇಶಾಂಗ ಸಚಿವರು ಹೇಳಿದರು.  ಇದಕ್ಕೂ ಮೊದಲು ಜೈಶಂಕರ್ ಅವರೇ ಬರೆದಿರುವ ಇಂಗ್ಲೀಷ್ ಪುಸ್ತಕ, 'ದೀ ಇಂಡಿಯಾ ವೇ ಸ್ಟ್ರಾಟಜೀಸ್ ಫಾರ್ ಆನ್ ಅನ್ಸರ್ಟೇನ್ ವರ್ಲ್ಡ್' ಪುಸ್ತಕವೂ ಮರಾಠಿಗೆ ಭಾಷಾಂತರವಾಗಿದ್ದು,  ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಪುಸ್ತಕವನ್ನು ಬಿಡುಗಡೆಗೊಳಿಸಿದರು. 

click me!