ಪ್ರತ್ಯೇಕತಾವಾದಿ ಕೃತ್ಯ ಬೆಂಬಲಿಸುವ ಕೆಲ ಪತ್ರಕರ್ತರು ಹಾಗೂ ಏಜೆನ್ಸಿಗಳ ಜೊತೆಗೆ ಖಲಿಸ್ತಾನಿ ಪರವಾಗಿರುವ ಘಟಕಗಳು ಸಂಪರ್ಕದಲ್ಲಿವೆ ಎಂದು ಪಂಜಾಬ್ನ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
ಚಂಡೀಗಢ: ಪ್ರತ್ಯೇಕತಾವಾದಿ ಕೃತ್ಯ ಬೆಂಬಲಿಸುವ ಕೆಲ ಪತ್ರಕರ್ತರು ಹಾಗೂ ಏಜೆನ್ಸಿಗಳ ಜೊತೆಗೆ ಖಲಿಸ್ತಾನಿ ಪರವಾಗಿರುವ ಘಟಕಗಳು ಸಂಪರ್ಕದಲ್ಲಿವೆ ಎಂದು ಪಂಜಾಬ್ನ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
‘ಖಲಿಸ್ತಾನಿ ಪರವಾಗಿರುವ ಘಟಕಗಳು ತಮ್ಮ ಆಲೋಚನೆಗಳು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಲು ಫೇಸ್ಬುಕ್, ಯೂಟ್ಯೂಬ್ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತವೆ. ಇದರೊಂದಿಗೆ ಈ ಘಟಕಗಳು ಕೆಲವು ಪತ್ರಕರ್ತರು ಮತ್ತು ನ್ಯೂಸ್ ಏಜೆನ್ಸಿಗಳ ಜೊತೆಗೂ ಸಂಪರ್ಕದಲ್ಲಿವೆ. ಇವರು ಖಲಿಸ್ತಾನಿ ಉಗ್ರರನ್ನು ಸಂದರ್ಶನ ಮಾಡಿ ಅದನ್ನು ತಮ್ಮ ಖಾಸಗಿ ಸುದ್ದಿ ವಾಹಿನಿಗಳನ್ನು ಪ್ರಸಾರ ಮಾಡುವ ಮೂಲಕ ಪ್ರಚಾರ ನೀಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೇ ಖಲಿಸ್ತಾನಿ ಪರವಾದ ಘಟಕಗಳು ಇತ್ತೀಚಿಗೆ ಮಾದಕವಸ್ತು, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಾಗಣೆ ಮಾಡಲು ಸಹ ಆರಂಭಿಸಿವೆ. ಹಾಗೆಯೇ ಆನ್ಲೈನ್ನಲ್ಲಿ ಪ್ರಚಾರ ಮಾಡಿಕೊಳ್ಳುವ ಮೂಲಕ ನಿಧಿ ಸಂಗ್ರಹಣೆ ಮಾಡುತ್ತಿದ್ದು, ಅದನ್ನು ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಚಂಡೀಗಢದ ಪಂಜಾಬ್ ಸಿಎಂ ನಿವಾಸದ ಬಳಿ ಬಾಂಬ್ ಪತ್ತೆ: ಭಾರತೀಯ ಸೇನೆಯಿಂದ ತನಿಖೆ
ಪಂಜಾಬ್‌ನಲ್ಲಿ ಪೊಲೀಸ್ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ..!