ಏಕೆ ಜಾತಿಗಣತಿ ದತ್ತಾಂಶ ಪ್ರಕಟಿಸಿದ್ದೀರಿ: ಬಿಹಾರಕ್ಕೆ ಸುಪ್ರೀಂ ಪ್ರಶ್ನೆ, ನೋಟಿಸ್ ಜಾರಿ

Published : Oct 07, 2023, 09:01 AM IST
ಏಕೆ ಜಾತಿಗಣತಿ ದತ್ತಾಂಶ ಪ್ರಕಟಿಸಿದ್ದೀರಿ: ಬಿಹಾರಕ್ಕೆ ಸುಪ್ರೀಂ ಪ್ರಶ್ನೆ, ನೋಟಿಸ್ ಜಾರಿ

ಸಾರಾಂಶ

ದೇಶದಲ್ಲಿ ಮೊದಲ ಬಾರಿಗೆ ಜಾತಿಗಣತಿ ಮಾಡಿರುವ ಬಿಹಾರ ಸರ್ಕಾರಕ್ಕೆ ನೋಟಿಸ್‌ ನೀಡಿರುವ ಸುಪ್ರೀಂಕೋರ್ಟ್‌, ಜಾತಿಗಣತಿಯ ಅಂಕಿ ಅಂಶಗಳನ್ನು ಏಕೆ ಪ್ರಕಟಿಸಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದೆ.

ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಜಾತಿಗಣತಿ ಮಾಡಿರುವ ಬಿಹಾರ ಸರ್ಕಾರಕ್ಕೆ ನೋಟಿಸ್‌ ನೀಡಿರುವ ಸುಪ್ರೀಂಕೋರ್ಟ್‌, ಜಾತಿಗಣತಿಯ ಅಂಕಿ ಅಂಶಗಳನ್ನು ಏಕೆ ಪ್ರಕಟಿಸಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದೆ. ಅದಾಗ್ಯೂ ಸಮೀಕ್ಷೆಯ ಕುರಿತು ಹೆಚ್ಚಿನ ಮಾಹಿತಿಗಳನ್ನು ಪ್ರಕಟಿಸುವುದನ್ನು ನಿರ್ಬಂಧಿಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ.

ರಾಜ್ಯ ಸರ್ಕಾರಗಳಿಗೆ ಜಾತಿ ಗಣತಿ ಅಧಿಕಾರವಿಲ್ಲವೆಂದು ವಾದಿಸಿ ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ ಈ ಕುರಿತು ಬಿಹಾರ ಸರ್ಕಾರಕ್ಕೆ ಔಪಚಾರಿಕ ನೋಟಿಸ್‌ ಜಾರಿ ಮಾಡಿದೆ.

ಇನ್ನೊಂದೆಡೆ ಬಿಹಾರ ಸರ್ಕಾರವು ಜಾತಿಗಣತಿ (caste census) ಮಾಡಿದ್ದಲ್ಲದೇ ತಡೆಹಿಡಿಯಬೇಕಾಗಿದ್ದ ಹಲವು ದತ್ತಾಂಶಗಳನ್ನು ಪ್ರಕಟಿಸಿದೆ. ಈ ಮಾಹಿತಿಯ ಪ್ರಕಟಣೆಗೆ ಪೂರ್ಣ ತಡೆಯಾಜ್ಞೆ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠವು ‘ಈ ಕ್ಷಣದಲ್ಲಿ ನಾವು ಏನೂ ಹೇಳಲು ಸಾಧ್ಯವಿಲ್ಲ. ಜಾತಿಗಣತಿ ಮಾಡಲು ರಾಜ್ಯ ಸರ್ಕಾರಕ್ಕಿರುವ ಅಧಿಕಾರಿಗಳ ಕುರಿತು ಪರಿಶೀಲನೆ ನಡೆಸುತ್ತೇವೆ. ಯಾವುದೇ ಸರ್ಕಾರ (Bihar) ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅದು ತಪ್ಪಾಗುತ್ತದೆ. ಜಾತಿಗಣತಿ ಕುರಿತು ರಾಜ್ಯ ಸರ್ಕಾರಕ್ಕಿರುವ ಅಧಿಕಾರದ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದಿದೆ.

ಬಿಹಾರದಲ್ಲಿ ಮೇಲ್ವರ್ಗದ ಬಡವರಿಗೆ ನ್ಯಾಯಾಂಗ ಇಲಾಖೆ, ಕಾಲೇಜಲ್ಲಿ ಶೇ.10ರಷ್ಟು ಮೀಸಲಾತಿ

ಇನ್ನು ಅಂಕಿ ಅಂಶ ಪ್ರಕಟಣೆಯಿಂದ ಜನರ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂಬ ಅರ್ಜಿದಾರರ ವಾದಕ್ಕೆ ಉತ್ತರಿಸಿದ ಪೀಠವು ‘ಯಾವುದೇ ವ್ಯಕ್ತಿಯ ಹೆಸರು ಅಥವಾ ಇತರ ಯಾವುದೇ ಗುರುತು ಬಹಿರಂಗಪಡಿಸಲಾಗಿಲ್ಲ. ಹೀಗಾಗಿ ಖಾಸಗಿತದ ಉಲ್ಲಂಘನೆ ಆಗಿದೆ ಎಂಬುದು ಸರಿಯಲ್ಲ’ ಎಂದಿದೆ. ಅಲ್ಲದೇ ಈ ಅರ್ಜಿಯ ವಿಚಾರಣೆಯನ್ನು 2024ರ ಜನವರಿಗೆ ಮುಂದೂಡಿದೆ.

ರಾಜ್ಯ ಸರ್ಕಾರಗಳಿಗೆ ಜಾತಿ ಗಣತಿ ನಡೆಸುವ ಹಕ್ಕಿಲ್ಲ ಎಂಬುದು ಅರ್ಜಿದಾರರ ಮೂಲವಾದವಾಗಿದೆ

ಲೋಕಸಭೆಯಲ್ಲಿ ಮಾಜಿ ಪ್ರಧಾನಿಗಳ ಸ್ಮರಣೆ: ಅಟಲ್, ನೆಹರು ಹೊಗಳಿದ ಮೋದಿ

ಸಾಲದ ಬಡ್ಡಿ ಕಟ್ಟದ್ದಕ್ಕೆ ದೌರ್ಜನ್ಯ: ಮಹಿಳೆಯ ಬೆತ್ತಲೆಗೊಳಿಸಿ ಬಾಯಿಗೆ ಮೂತ್ರ ವಿಸರ್ಜನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ