40 ಮೀ ಉದ್ದದ ಸುರಂಗ ಕೊರೆದು ಐಒಸಿಎಲ್‌ನ ತೈಲಕ್ಕೆ ಕನ್ನ: ಖದೀಮನ ಬಂಧನ

By Kannadaprabha News  |  First Published Oct 7, 2023, 7:42 AM IST

ಸುಮಾರು 40 ಮೀ. ಉದ್ದದ ಸುರಂಗ ತೋಡಿ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಲಿಮಿಟೆಡ್‌ಗೆ ಸೇರಿದ ಲಕ್ಷಾಂತರ ರು. ಮೌಲ್ಯದ ತೈಲ ಕಳ್ಳತನ ಮಾಡಿದ ಘಟನೆ ದೆಹಲಿಯ ದ್ವಾರಕಾ ಬಳಿ ನಡೆದಿದೆ.


ನವದೆಹಲಿ: ಸುಮಾರು 40 ಮೀ. ಉದ್ದದ ಸುರಂಗ ತೋಡಿ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಲಿಮಿಟೆಡ್‌ಗೆ ಸೇರಿದ ಲಕ್ಷಾಂತರ ರು. ಮೌಲ್ಯದ ತೈಲ ಕಳ್ಳತನ ಮಾಡಿದ ಘಟನೆ ದೆಹಲಿಯ ದ್ವಾರಕಾ ಬಳಿ ನಡೆದಿದೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈತ ಕಳೆದ ಜೂನ್‌ನಿಂದಲೂ ತೈಲ ಕಳ್ಳತನ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದ್ವಾರಕ ಬಳಿ ತೈಲ ಪೂರೈಕೆ ಮಾಡುವ ಪೈಪ್‌ಗಳನ್ನು ಐಒಸಿಎಲ್‌ 2 ಮೀ. ಆಳದಲ್ಲಿ ಹೂತಿದೆ. ಇದರಿಂದ ಕಳ್ಳತನ ಮಾಡುವುದಕ್ಕಾಗಿ ಆರೋಪಿ ಸುಮಾರು 40 ರಿಂದ 45 ಮೀ. ಉದ್ದದ ಸುರಂಗ ಕೊರೆದು, ತಿಂಗಳುಗಟ್ಟಲೇ ತೈಲ ಕಳ್ಳತನ ಮಾಡಿದ್ದಾನೆ. ಈಗಾಗಲೇ ಲಕ್ಷಾಂತರ ರು. ಮೌಲ್ಯದ ತೈಲ ಕಳ್ಳತನವಾಗಿರಬಹುದು ಎಂದು ಹೇಳಲಾಗಿದೆ. ದ್ವಾರಕ ಬಳಿ ತೈಲ ಕಳ್ಳತನ ನಡೆಯುತ್ತಿರಬಹುದು ಎಂಬ ಅನುಮಾನದ ಮೇಲೆ ಕಣ್ಗಾವಲು ವಹಿಸಲಾಗಿತ್ತು. ಹೀಗಾಗಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಬಂಧಿತ ವ್ಯಕ್ತಿಯನ್ನು 52  ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ. 

Tap to resize

Latest Videos

ನಾಪತ್ತೆಯಾದ 22 ಸೈನಿಕರ ಪೈಕಿ 7 ಮಂದಿ ಯೋಧರ ಶವ ಪತ್ತೆ: ಉಳಿದವರಿಗಾಗಿ ಮುಂದುವರಿದ ಶೋಧ

ಪ್ರೇಯಸಿ ಜಾಕ್ವೆಲಿನ್ ಫೋಟೋಗೆ ಕಾಮೆಂಟ್: ಗಾಯಕ ಮಿಕಾ ಸಿಂಗ್‌ಗೆ ನೊಟೀಸ್ ಕಳುಹಿಸಿದ ಸುಕೇಶ್ ಚಂದ್ರಶೇಖರ್

click me!