2008ರ ಜೈಪುರ ಸ್ಫೋಟದ ಆರೋಪಿಗಳ ಬಿಟ್ಟಿದ್ದೇಕೆ: ರಾಜಸ್ತಾನ ಸರ್ಕಾರಕ್ಕೆ ಮೋದಿ ಪ್ರಶ್ನೆ

Published : May 11, 2023, 10:08 AM IST
 2008ರ ಜೈಪುರ ಸ್ಫೋಟದ ಆರೋಪಿಗಳ ಬಿಟ್ಟಿದ್ದೇಕೆ: ರಾಜಸ್ತಾನ ಸರ್ಕಾರಕ್ಕೆ ಮೋದಿ ಪ್ರಶ್ನೆ

ಸಾರಾಂಶ

ಎಲ್ಲರನ್ನು ಸಮಾಧಾನಗೊಳಿಸುವ ನೀತಿಯನ್ನು ಅನುಸರಿಸುತ್ತಿರುವ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಉಗ್ರರ ಕುರಿತಾಗಿ ಮೃದು ನಿಲುವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

ಜೈಪುರ: ಎಲ್ಲರನ್ನು ಸಮಾಧಾನಗೊಳಿಸುವ ನೀತಿಯನ್ನು ಅನುಸರಿಸುತ್ತಿರುವ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಉಗ್ರರ ಕುರಿತಾಗಿ ಮೃದು ನಿಲುವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ. 2008ರ ಜೈಪುರ ಸರಣಿ ಸ್ಫೋಟದ ಆರೋಪಿಗಳನ್ನು ಬಿಡುಗಡೆ ಮಾಡಿದ ಕ್ರಮವನ್ನು ಆವರು ಟೀಕಿಸಿದ್ದಾರೆ. ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ, 2008ರ ಸ್ಫೋಟ ಪ್ರಕರಣವನ್ನು ಸರಿಯಾಗಿ ನಿರ್ವಹಿಸದೇ ಆರೋಪಿಗಳನ್ನು ಬಿಡುಗಡೆ ಮಾಡಿದೆ. ಓಟ್‌ಬ್ಯಾಂಕ್‌ಗಾಗಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹೆದರುತ್ತಿದೆ. ರಾಜಸ್ಥಾನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಅವರು ಟೀಕಿಸಿದರು.

ಒಳ್ಳೇ ಕೆಲಸ ಕೆಲವರಿಗೆ ಇಷ್ಟವಾಗಲ್ಲ:

ಬಳಿಕ ನಾಥ್‌ದ್ವಾರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬಳಿಕ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಎಲ್ಲವನ್ನು ಮತದ ಆಧಾರದಿಂದಲೇ ಅಳೆಯುವ ಜನರಿಂದ ದೇಶದ ಅಭಿವೃದ್ಧಿಯ ಕುರಿತಾಗಿ ಚಿಂತಿಸಲು ಸಾಧ್ಯವಿಲ್ಲ. ಕೆಲವು ಜನರಿಗೆ ದೇಶದಲ್ಲಿ ಯಾವುದೇ ಒಳ್ಳೆಯ ಕೆಲಸಗಳು ಆಗುವುದು ಇಷ್ಟವಿಲ್ಲ. ಹಾಗಾಗಿ ನಕಾರಾತ್ಮಕತೆಯನ್ನೇ ಎಲ್ಲೆಡೆ ಹಬ್ಬಿಸುತ್ತಾರೆ. ವಿವಾದಗಳನ್ನು ಸೃಷ್ಟಿಸುತ್ತಾರೆ. ದೇಶದ ಕೆಲವು ಜನ ಈ ಸಿದ್ಧಾಂತಕ್ಕೆ ಬಲಿಪಶುಗಳಾಗಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದರು. ಈ ಕಾರ್ಯಕ್ರಮದಲ್ಲಿ ಗೆಹ್ಲೋಟ್‌ ಸಹ ಭಾಗಿಯಾಗಿದ್ದರು.

ಪ್ರಮುಖ ಅಭಿವೃದ್ಧಿ ಯೋಜನೆಗಳಿಂದ ರಾಜಸ್ಥಾನವೂ (Rajasthan) ಸಹ ಹಿಂದೆ ಬಿದ್ದಿತ್ತು. ಯಾವುದೇ ಸೌಲಭ್ಯಗಳಿಲ್ಲದೇ ಮರಳುಗಾಡಿನಲ್ಲಿ ಓಡಾಡುವುದು ಕಷ್ಟಎಂಬುದು ಎಲ್ಲರಿಗೂ ಗೊತ್ತು. ನಮ್ಮ ಸರ್ಕಾರ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಇದರಿಂದಾಗಿ ಹಲವು ಗ್ರಾಮಗಳು ಹಾಗೂ ನಗರಗಳು ಸಂಪರ್ಕವನ್ನು ಪಡೆದುಕೊಂಡಿವೆ. ಮುಂದಿನ 25 ವರ್ಷಗಳಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (Ashok Gehlot) ಪ್ರಧಾನಿ ಅವರು ವಿಪಕ್ಷಗಳನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಈ ರಾಜ್ಯದಲ್ಲಿನ್ನು ಹಸು ಸಾಕಲು ಲೈಸನ್ಸ್‌ ಕಡ್ಡಾಯ, ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ನಿಯಮ!

ಮೋದಿ ವಿಪಕ್ಷಗಳನ್ನು ಗೌರವಿಸ್ತಾರೆ ಎಂದು ಭಾವಿಸುವೆ: ಗೆಹ್ಲೋಟ್‌

ಜೈಪುರ: ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳನ್ನು ಗೌರವಿಸಬೇಕು, ಪ್ರಧಾನಿ ನರೇಂದ್ರ ಮೋದಿ ಆ ದಿಕ್ಕಿನಲ್ಲಿ ಸಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ರಾಜಸ್ಥಾನ ಸಿಎಂ ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ. ರಾಜಸ್ಥಾನದ ನಾಥ್‌ದ್ವಾರಾ (Nathdwar)ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಮೋದಿ ಸಮ್ಮುಖದಲ್ಲಿ ಮಾತನಾಡಿದ ಅವರು ಪ್ರತಿಪಕ್ಷಗಳನ್ನು ಗೌರವಿಸಬೇಕು. ಪ್ರಧಾನಿ ಮೋದಿ ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಾರೆ ಎಂದು ಭಾವಿಸುತ್ತೇನೆ. ವಿಪಕ್ಷಗಳಿಗೆ ಗೌರವ ಕೊಟ್ಟರೆ ಆಡಳಿತ ಹಾಗೂ ವಿಪಕ್ಷಗಳು ಉತ್ಸಾಹದಿಂದ ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ದ್ವೇಷ ಇಲ್ಲ. ಆದರೆ ಸೈದ್ಧಾಂತಿಕ ಹೋರಾಟವಿದೆ. ಎಲ್ಲರಿಗೂ ಮಾತನಾಡುವ ಹಕ್ಕಿದೆ. ಎಲ್ಲ ಜಾತಿ ಹಾಗೂ ಸಮುದಾಯಗಳ ಮಧ್ಯೆ ಸಹೋದರತ್ವ ಹಾಗೂ ಪ್ರೀತಿ ಇರಬೇಕು ಎಂದರು. ಅಲ್ಲದೇ ನಿಮ್ಮ ಸಂದೇಶ ಯಾವಾಗಲೂ ದೇಶವನ್ನು ಒಗ್ಗಟ್ಟಾಗಿಸುತ್ತದೆ ಎಂದು ನಂಬಿಕೆ ಇದೆ ಎಂದು ಮೋದಿಗೆ ಹೇಳಿದರು.

 ಶಾಸಕರನ್ನೇ ಸಿಎಂ ನಂಬಲ್ಲ. ಇದೆಂಥ ಸರ್ಕಾರ?: ಮೋದಿ ಟೀಕೆ

ಜೈಪುರ: ಸರ್ಕಾರ ತಮ್ಮ ಶಾಸಕರನ್ನೇ ನಂಬುತ್ತಿಲ್ಲ. ಇದಕ್ಕೆ ಬದಲಾಗಿ ಶಾಸಕರು ಮುಖ್ಯಮಂತ್ರಿಯನ್ನು ನಂಬುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದ್ದಾರೆ. ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್‌ (Ashok Gehlot) ನಡುವಿನ ಜಗಳವನ್ನು ಉಲ್ಲೇಖಿಸಿ ಪ್ರಧಾನಿ ಈ ಟೀಕಾಪ್ರಹಾರ ನಡೆಸಿದ್ದಾರೆ. ಇಲ್ಲಿ ನಡೆದ ಬಿಜೆಪಿ ರಾರ‍ಯಲಿಯೊಂದರಲ್ಲಿ ಮಾತನಾಡಿದ ಅವರು, ‘ರಾಜಸ್ಥಾನ ಸರ್ಕಾರದಲ್ಲಿ ಪ್ರತಿಯೊಬ್ಬರು ಒಬ್ಬರನ್ನೊಬ್ಬರು ಮೂದಲಿಸುವ ಪ್ರಕ್ರಿಯೆಯಲ್ಲಿ ಸೆಣಸಾಡುತ್ತಿದ್ದಾರೆ. 5 ವರ್ಷವೂ ಮುಖ್ಯಮಂತ್ರಿ ಕುರ್ಚಿಯೇ ತೊಂದರೆಯಲ್ಲಿದ್ದಾಗ, ರಾಜಸ್ಥಾನದ ಅಭಿವೃದ್ಧಿಯ ಬಗ್ಗೆ ಯಾರು ಚಿಂತಿಸುತ್ತಾರೆ’ ಎಂದು ಹೇಳಿದರು.

ಕನ್ಹಯ್ಯಲಾಲ್ ಕುಟುಂಬಕ್ಕೆ ಸಹಾಯ, 24 ಗಂಟೆಯಲ್ಲಿ 1 ಕೋಟಿ ರೂಪಾಯಿ ದೇಣಿಗೆ!

ಮಂಗಳವಾರ ಅಶೋಕ್‌ ಗೆಹ್ಲೋಟ್‌ ಅವರನ್ನು ಟೀಕಿಸಿದ್ದ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ನನಗೆ ವಸುಂಧರಾ ರಾಜೆ (Vasundhara Raje) ಅವರ ರೀತಿ ಕಾಣುತ್ತಾರೆಯೇ ಹೊರತು, ಸೋನಿಯಾ ಗಾಂಧಿ (sonia Gandhi) ಅವರಂತಲ್ಲ ಎಂದು ಹೇಳಿದ್ದರು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಸಿಗುವ ಉತ್ತಮ ಅವಕಾಶಕ್ಕಾಗಿ ನಾನು ಪಕ್ಷವನ್ನು ತೊರೆಯುವುದಿಲ್ಲ ಎಂದು ಅವರು ಹೇಳಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?