
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಜೂನ್‌ನಲ್ಲಿ ಅಮೆರಿಕ ಭೇಟಿ ಕೈಗೊಳ್ಳಲಿದ್ದಾರೆ. ಜೂ.22ರಂದು ಬೈಡೆನ್‌ರ ಔತಣದಲ್ಲಿ ಭಾಗಿಯಾಗಲಿದ್ದಾರೆ. ಇದು ಬೈಡನ್ ಆಹ್ವಾನದ ಮೇರೆಗೆ ಮೋದಿ ನೀಡುತ್ತಿರುವ ಮೊದಲ ಅಮೆರಿಕ ಭೇಟಿಯಾಗಿದೆ.
ಈ ಕುರಿತು ಬುಧವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ಅಧ್ಯಕ್ಷರ ಗೃಹ ಕಚೇರಿ ಶ್ವೇತಭವನದ (White House)ಪತ್ರಿಕಾ ಕಾರ್ಯದರ್ಶಿ ಕರೈನ್ ಜೀನ್, ‘ಪ್ರಧಾನಿ ಮೋದಿ (Narendra Modi) ಅವರ ಮುಂಬರುವ ಭೇಟಿಯು ಅಮೆರಿಕ ಮತ್ತು ಭಾರತದ ನಡುವಣ ಆಳ ಮತ್ತು ಆಪ್ತ ಸಂಬಂಧ ಹಾಗೂ ಭಾರತ ಮತ್ತು ಅಮೆರಿಕರನ್ನರ ನಡುವಣ ನಂಟಾಗಿರುವ ಕುಟುಂಬ ಮತ್ತು ಸ್ನೇಹ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸಲಿದೆ. ಪ್ರಧಾನಿ ಮೋದಿ ಅವರ ಭೇಟಿಯು ಮುಕ್ತ, ಸಂಪದ್ಭರಿತ ಮತ್ತು ಇಂಡೋ ಪೆಸಿಫಿಕ್ ವಲಯದ (Indo pecific area) ಕುರಿತ ಉಭಯ ದೇಶಗಳ ಬಾಧ್ಯತೆಯನ್ನು ಇನ್ನಷ್ಟುಬಲಪಡಿಸಲಿದೆ. ಜೊತೆಗೆ ಭೇಟಿಯೂ ರಕ್ಷಣೆ, ಸ್ವಚ್ಛ ಇಂಧನ ಮತ್ತು ಬಾಹ್ಯಾಕಾಶ ವಲಯದಲ್ಲಿನ ದ್ವಿಪಕ್ಷೀಯ ವ್ಯೂಹಾತ್ಮಕ ತಂತ್ರಜ್ಞಾನ ಪಾಲುದಾರಿಕೆಯನ್ನು ಇನ್ನಷ್ಟುವಿಸ್ತರಿಸಲಿದೆ’ ಎಂದಿದ್ದಾರೆ.
'ಸರ್ಕಾರ ಬಿದ್ದುಹೋಗಲಿ ಎಂದು ಸುಮ್ಮನಿದ್ದೆ : ಅದಕೆ ಅಮೆರಿಕಾಗೆ ಹೋದೆ'
ಜೊತೆಗೆ ‘ಉಭಯ ನಾಯಕರು ನಮ್ಮಗಳ ನಡುವಣ ಶೈಕ್ಷಣಿಕ ವಿನಿಮಯ, ವ್ಯಕ್ತಿ-ವ್ಯಕ್ತಿ ಸಂಬಂಧ, ಸಮಾನ ಸವಾಲುಗಳಾದ ಹವಾಮಾನ ಬದಲಾವಣೆ, ಆರೋಗ್ಯ ವಲಯದಲ್ಲಿನ ವೃತ್ತಿಪರರ ಕೌಶಲ್ಯ ಅಭಿವೃದ್ಧಿ ಬಗ್ಗೆಯೂ ಚರ್ಚಿಸಲಿದ್ದಾರೆ. ಜೊತೆಗೆ ಜೂನ್ 22ರಂದು ಅಧ್ಯಕ್ಷ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಔತಣ ಆಯೋಜಿಸಿದ್ದಾರೆ’ ಎಂದು ಜೀನ್ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ಮತ್ತೊಂದು ಪ್ರವಾಸ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ