
ಹಾವು ಅಂದ್ರೆ ಹೆದರಿ ಓಡೋರೆ ಜಾಸ್ತಿ. ಹಾವು ಹಿಡಿದು ಅದನ್ನು ರಕ್ಷಿಸುವವರ ಸಂಖ್ಯೆ ಬಹಳ ಕಡಿಮೆ. ಅದ್ರಲ್ಲೂ ಹಾವು ಹಿಡಿಯುವ ಕೆಲ್ಸವನ್ನು ಬಹುತೇಕ ಪುರುಷರೇ ಮಾಡ್ತಾರೆ. ಆದ್ರೆ ಉತ್ತರ ಪ್ರದೇಶದ ನಜ್ರುನ್ ನಿಶಾ ಸ್ನೇಕ್ ರೆಸ್ಕ್ಯೂ ನಲ್ಲಿ ಮುಂದಿದ್ದಾರೆ. ಈಗಾಗಲೇ ಅನೇಕ ಹಾವುಗಳನ್ನು ರಕ್ಷಿಸಿರುವ ಅವರು, ಹಾವು ಕಚ್ಚಿದ್ರೂ ಧೈರ್ಯ ಕಳೆದುಕೊಳ್ಳದೆ ತಮ್ಮ ಕೆಲ್ಸ ಮುಂದುವರೆಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ನಜ್ರುನ್ ನಿಶಾ, ಲಖಿಂಪುರ ಖೇರಿಯಲ್ಲಿ ಹಾವೊಂದನ್ನು ರಕ್ಷಿಸಲು ಮುಂದಾಗಿದ್ದರು. ಹಾವು ಹಿಡಿಯುವ ಸಂದರ್ಭದಲ್ಲಿ ಆರು ಅಡಿ ಉದ್ದದ ಧಮನ್ ಹಾವು ಅವರನ್ನು ಕಚ್ಚಿದೆ. ಪಾಲಿಯಾ ರೇಂಜ್ನ ಅಜಿತ್ ನಗರದಲ್ಲಿರುವ ಅಂಗಡಿಯೊಂದಕ್ಕೆ ಹಾವು ನುಗ್ಗಿತ್ತು. ರಕ್ಷಣೆಗಾಗಿ ನಜ್ರುನ್ ನಿಶಾ ಅವರನ್ನು ಕರೆಸಲಾಗಿತ್ತು. ಹಾವು ಹಿಡಿಯುವ ವೇಳೆ ನಜ್ರುನ್ ಅವರಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ್ರೂ ಭಯಗೊಳ್ಳದ ನಜ್ರುನ್, ರಕ್ಷಣೆ ಕೆಲಸ ಮುಗಿಸಿದ್ದಾರೆ.
ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಂಗಳೂರು ಪೊಲೀಸ್, 'ಸಸ್ಪೆಂಡ್ ಮಾಡಿದ್ದೀವಿ' ಎಂದ ಪ್ರಿಯಾಂಕ್ ಖರ್ಗೆ
22 ವರ್ಷದ ನಜ್ರುನ್ ನಿಶಾ ಅವರನ್ನು ದುಧ್ವಾ ಫೌಂಡೇಶನ್ನ ಅತ್ಯಂತ ನಿರ್ಭೀತ ರಕ್ಷಣಾ ಹುಡುಗಿ ಎಂದು ಕರೆಯಲಾಗುತ್ತದೆ. ಪಾಲಿಯಾ ಪ್ರದೇಶದ ಜನರು ಅವರನ್ನು "ಜಂಗಲ್ ಕ್ವೀನ್," "ರೆಸ್ಕ್ಯೂ ಗರ್ಲ್," ಮತ್ತು "ಸ್ನೇಕ್ ಫ್ರೆಂಡ್" ಎಂದೂ ಕರೆಯುತ್ತಾರೆ. ಪಾಲಿಯಾ ನಿವಾಸಿ ನಜ್ರುನ್, ಅವರ ತಂದೆ ಮೆಕ್ಯಾನಿಕ್ ಕೆಲ್ಸ ಮಾಡ್ತಾರೆ. ಧಮನ್ ಹಾವು ಅಂದ್ರೆ ಇಲಿ ಹಾವು ನಿಶಾ ಅವರನ್ನು ಕಚ್ಚಿದೆ. ಇಲಿ ಹಾವುವ ವಿಷಕಾರಿಯಲ್ಲ. ಅವು ವಿಷವನ್ನು ಹೊಂದಿರುವುದಿಲ್ಲ. ಆದ್ರೆ ಹಾವು ಕಚ್ಚಿದ ನಂತ್ರ ಚಿಕಿತ್ಸೆ ಅಗತ್ಯವಿರುತ್ತದೆ. ಮಾಟ ಮಂತ್ರಕ್ಕೆ ಹೋಗದೆ ಚಿಕಿತ್ಸೆ ಪಡೆಯಿರಿ ಅಂತ ಅವರ ತಂದೆ ಸಲಹೆ ನೀಡಿ ದ್ದಾರೆ.
100 ಕ್ಕೂ ಹೆಚ್ಚು ಹಾವುಗಳ ರಕ್ಷಣೆ
ನಜ್ರುನ್ ನಿಶಾ ಇದುವರೆಗೆ 100 ಕ್ಕೂ ಹೆಚ್ಚು ಹಾವುಗಳು ಮತ್ತು 10 ಮೊಸಳೆಗಳನ್ನು ರಕ್ಷಿಸಿದ್ದಾರೆ. ಇಲಿ ಹಾವು ಕಚ್ಚಿದ ನಂತರ, ಅವರು ಸಮುದಾಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದರು. ನಿಶಾ ಸಾಮಾಜಿಕ ಮಾಧ್ಯಮದಲ್ಲಿ ತನ್ನ ವೀಡಿಯೊವನ್ನು ಪೋಸ್ಟ್ ಮಾಡಿ, ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಹಾವು ಕಚ್ಚಿದೆ ಎಂದು ವಿವರಿಸಿದ್ದಾರೆ. ಭಯಪಡುವ ಅಗತ್ಯವಿಲ್ಲ. ತಕ್ಷಣ ಆಸ್ಪತ್ರೆಗೆ ಹೋಗಿ ಅಗತ್ಯ ಚಿಕಿತ್ಸೆ ಮತ್ತು ಚುಚ್ಚುಮದ್ದನ್ನು ಪಡೆದಿದ್ದು, ಈಗ, ಸಂಪೂರ್ಣವಾಗಿ ಸುರಕ್ಷಿತರಾಗಿದ್ದೇನೆ ಎಂದಿದ್ದಾರೆ.
ಮೊಬೈಲ್ ನಂಬರ್ 10 ಅಂಕಿಗಳಲ್ಲೇ ಯಾಕಿರುತ್ತೆ? 8 ಅಥವಾ 9 ಯಾಕಿಲ್ಲ? ಇಲ್ಲಿದೆ
19 ನೇ ವಯಸ್ಸಿನಲ್ಲಿ ಹಾವು ಹಿಡಿಯಲು ಪ್ರಾರಂಭಿಸಿದರು
ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರೇರಕರಾಗಿ ಕೆಲಸ ಮಾಡುವ ನಜ್ರುನ್ ನಿಶಾ ಒಬ್ಬ ಧೈರ್ಯಶಾಲಿ ಮಹಿಳೆ. ಅವರು 19 ನೇ ವಯಸ್ಸಿನಲ್ಲಿ ತಮ್ಮ ಗ್ರಾಮದಲ್ಲಿ ಹಾವು ಹಿಡಿಯಲು ಪ್ರಾರಂಭಿಸಿದರು ಮತ್ತು ಈಗ ದುಧ್ವಾ ಸುತ್ತಮುತ್ತಲಿನ ಹಳ್ಳಿಗಳಿಗೆ ರಕ್ಷಕರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ