
ತಲೆಯ ಮೇಲೊಂದು ಸೂರಿದ್ದರೆ ಎಲ್ಲರಿಗೂ ನೆಮ್ಮದಿ ಅದು ಹಕ್ಕಿಗಳಾದರೂ ಸೈ ಮನುಷ್ಯರಾದರೂ ಸೈ... ಗೀಜಗ ಹಕ್ಕಿಯನ್ನು ಹಕ್ಕಿಗಳಲ್ಲೇ ಅತ್ಯಂತ ಬುದ್ಧಿವಂತ ಹಕ್ಕಿ ಎಂದು ಕರೆದರೆ ತಪ್ಪಾಗಲಾರದು. ಅದರ ಗೂಡು ಕಟ್ಟು ಕೌಶಲವಂತೂ ಯಾವ ಸಿವಿಲ್ ಇಂಜಿನಿಯರಿಗೂ ಸರಿಸಾಟಿ ಇಲ್ಲದ ಕಲೆ. ಇಂತಹ ಗೀಜಗ ಹಕ್ಕಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೋಡುಗರು ಈ ಹಕ್ಕಿಯ ಬುದ್ಧಿವಂತಿಕೆ ಕೌಶಲ್ಯಕ್ಕ ಬೆರಗಾಗಿ ಭೇಷ್ ಎಂದಿದ್ದಾರೆ. absolutemindgroomers ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು ಸೋಜಿಗ ಮೂಡಿಸುತ್ತಿದೆ. ವೀಡಿಯೋದಲ್ಲಿ ಹಳದಿ ಬಣ್ಣದ ಗೀಜಗ ಹಕ್ಕಿಗಳೆರಡು ಜೊತೆ ಸೇರಿ ಗೂಡು ಹೆಣೆಯುವುದನ್ನು ಕಾಣಬಹುದಾಗಿದೆ.
ಎಂಜಿನಿಯರಿಂಗ್: ಹಕ್ಕಿಗಳು ಮತ್ತು ಅವುಗಳ ಸಂಕೀರ್ಣವಾದ ಗೂಡು ತಯಾರಿಕೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಹಳದಿ ಬಣ್ಣದ ಎರಡು ಬಿಳಿ ಹಕ್ಕಿಗಳು ಜೊತೆಗೂಡಿ ಗೂಡು ಹೆಣೆಯುತ್ತಿವೆ. ಗೂಡು ಹೆಣೆಯುವುದು ಹಕ್ಕಿಗಳಿಗೆ ಸುಲಭದ ಕೆಲಸವೇನಲ್ಲ, ಗಿಡಗಳ ಎಲೆಗಳು, ಹುಲ್ಲು ಕಡ್ಡಿಗಳನ್ನು ದೂರದಿಂದ ಒಂದೊಂದೇ ತನ್ನ ಪುಟ್ಟ ಕೊಕ್ಕುಗಳಲ್ಲಿಟ್ಟು ಹೊತ್ತು ತರುವ ಹಕ್ಕಿ ಅವುಗಳನ್ನು ಸೊಗಸಾಗಿ ಜೋಡಿಸಿ ಪುಟ್ಟದೊಂದು ಸೂರು ಕಟ್ಟಿಕೊಳ್ಳುತ್ತದೆ. ಪ್ರಕೃತಿ ಸ್ನೇಹಿಯಾದ ಈ ಗೂಡುಗಳು ಕಾಲಾಂತರದಲ್ಲಿ ಉರುಳಿ ಭೂಮಿಯಲ್ಲಿ ವಿಲೀನಗೊಳ್ಳುತ್ತದೆ.
ರಾತ್ರಿ ಗೂಡುಗಳಲ್ಲಿ ಬೆಳಕಿರಲಿ ಎಂಬ ಕಾರಣಕ್ಕೆ ಮಿಂಚುಳ್ಳಿಗಳನ್ನು ತೆಗೆದುಕೊಂಡು ಹೋಗಿ ಗೂಡಿನಲ್ಲಿ ಇಡುವಷ್ಟು ಬುದ್ಧಿವಂತಿಕೆ ಈ ಗೀಜಗ ಹಕ್ಕಿಗಳದ್ದಾಗಿದೆ. ಜೊತೆಗೆ ತನ್ನಿಟ್ಟ ಮೊಟ್ಟೆ ಮರಿಗಳನ್ನು ಹಾವು ಅಥವಾ ಇನ್ಯಾವುದೇ ಪ್ರಾಣಿಗಳು ತಿನ್ನದಿರಲಿ ಎಂಬ ಕಾರಣಕ್ಕೆ ಗೀಜಗ ಹಕ್ಕಿಗಳು ಗೂಡುಗಳಲ್ಲೆ ಕಂಪಾರ್ಟ್‌ಮೆಂಟ್‌ಗಳನ್ನು ಮಾಡಿ ಸಡನ್ ಆಗಿ ದಾಳಿ ಮಾಡುವ ಹಾವಿಗೆ ಮೊಟ್ಟೆಯಾಗಲಿ ಮರಿಯಾಗಲಿ ಕಾಣದಂತೆ ಚಾಣಾಕ್ಷತನ ವಹಿಸುತ್ತದೆ. ಕೇವಲ ಮನುಷ್ಯರಂತೆ ಮಾತನಾಡಲು ಬಾರದು ಎಂಬುದನ್ನು ಬಿಟ್ಟರೆ ಈ ಹಕ್ಕಿಗಳು ಬುದ್ಧಿವಂತಿಕೆಯಲ್ಲಿ ಯಾರಿಗೂ ಕಡಿಮೆ ಏನಲ್ಲ,
ಮಲೆನಾಡು ಅಥವಾ ಕಾಡಿನ ಸಮೀಪ ವಾಸಿಸುವವರಿಗೆ ಮಿಂಚುಳ್ಳಿ ಬಗ್ಗೆ ಹೆಚ್ಚೇನು ವಿವರಿಸಬೇಕಿಲ್ಲ, ಇದೊಂದು ರೀತಿಯ ಕೀಟವಾಗಿದ್ದು, ರಾತ್ರಿಯ ಸಮಯದಲ್ಲಿ ಈ ಮಿಂಚುಳ್ಳಿಗಳು ತಾನಿರುವ ಪ್ರದೇಶವನ್ನು ಲೈಟಿಂಗ್ಸ್ ರೀತಿ ಜಗಮಗಿಸುತ್ತಿರುತ್ತವೆ. ಈ ಹಕ್ಕಿಗಳ ಹಿಂಭಾಗದಲ್ಲಿ ಪುಟ್ಟ ಬಲ್ಬ್ ರೀತಿಯ ರಚನೆ ಇದ್ದು, ರಾತ್ರಿ ಈ ಹಕ್ಕಿಗಳು ಹೋದಲೆಲ್ಲಾ ಬೆಳಕಿನ ಸಂಚಾರವಿರುತ್ತದೆ. ಮರಗಳಲ್ಲಿ ಈ ಮಿಂಚುಳ್ಳಿಗಳು ಕುಳಿತಿದ್ದರೆ ಇಡೀ ಮರವೇ ಲೈಂಟಿಂಗ್ಸ್ ಮಾಡಿದ ರೀತಿ ಜಗಮಗಿಸುತ್ತಿರುತ್ತದೆ. ಇಂತಹ ಮಿಂಚುಳ್ಳಿಯನ್ನು ಈ ಗೀಜಗ ಹಕ್ಕಿ ಬೆಳಕಿಗಾಗಿ ತನ್ನ ಗೂಡಿನಲ್ಲಿ ತೆಗೆದುಕೊಂಡು ಹೋಗಿ ಸಿಲುಕಿಸಿ ಬಿಡುತ್ತದೆ. ಈಗ ನೀವೇ ಹೇಳಿ ಈ ಗೀಜಗಕ್ಕೆ ಇನ್ನೆಷ್ಟು ಬುದ್ಧಿವಂತಿಕೆ ಇರಬೇಡ.
ಇನ್ನು ಗೀಜಗ ಹಕ್ಕಿ ಗೂಡು ಕಟ್ಟುತ್ತಿರುವ ಸುಂದರ ವೀಡಿಯೋವನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ಹಕ್ಕಿಗಳು ನಿಜವಾದ ವಾಸ್ತುಶಿಲ್ಪಿಗಳು ಹಾಗೂ ನಿರ್ಮಾಣಕಾರರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ದೇವರು ಮಾತ್ರ ಇಂತಹ ಸುಂದರವಾದದ್ದನ್ನು ಸೃಷ್ಟಿಸಬಲ್ಲ, ಅವರೇ ನಿಜವಾದ ವಾಸ್ತುಶಿಲ್ಪಿಗಳು, ನೈಸರ್ಗಿಕ ಬಿಲ್ಡರ್‌ಗಳಾಗಿ ಜನಿಸಿದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಹಕ್ಕಿ ಶ್ರೇಷ್ಠ ವಾಸ್ತುಶಿಲ್ಪಿ ಓರ್ವ ಎಂಜಿನಿಯರ್, ಜೊತೆಗೆ ಉತ್ತಮ ವಿನ್ಯಾಸಕಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ: https://www.instagram.com/p/CtVlMkKsY7a/
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ