ಕಾಂಗ್ರೆಸ್ ಪಕ್ಷದ ಕಟ್ಟಾಳು ಕಮಲನಾಥ್ ಬಿಜೆಪಿಗೆ? ಪುತ್ರನಿಗೆ ಬಿಜೆಪಿ ಲೋಕಸಭಾ ಟಿಕೆಟ್ ಸಾಧ್ಯತೆ

By Kannadaprabha News  |  First Published Feb 11, 2024, 8:58 AM IST

ಕಾಂಗ್ರೆಸ್‌ನಿಂದ ಅನೇಕ ನಾಯಕರು ಬಿಜೆಪಿ ಹಾಗೂ ಬಿಜೆಪಿಯ ಮಿತ್ರ ಪಕ್ಷಗಳಿಗೆ ವಲಸೆ ಹೋಗುತ್ತಿರುವ ನಡುವೆಯೇ, ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ಸಿಗ ಕಮಲ್‌ನಾಥ್ ಹಾಗೂ ಅವರ ಆಪ್ತನಾದ ರಾಜ್ಯಸಭಾ ಸದಸ್ಯ ವಿವೇಕ್ ತಂಖಾ ಅವರು ಬಿಜೆಪಿಯನ್ನು ಸೇರಬಹುದು ಎಂಬ ಗುಲ್ಲು ಹರಡಿದೆ.


• ರಾಜ್ಯಾಧ್ಯಕ್ಷಸ್ಥಾನದಿಂದ ಕಮಲನಾಥ್‌ರನ್ನು ಕೆಳಗಿಳಿಸಿದ್ದ ಕಾಂಗ್ರೆಸ್
• ದಿಗ್ವಿಜಯ್ ಸಿಂಗ್ ಜೊತೆ ಕಮಲನಾಥ್ ಕಿತ್ತಾಟ
• ಕಮಲ್ ಜೊತೆ ರಾಜ್ಯಸಭಾ ಸದಸ್ಯ ವಿವೇಕ್ ತಂಖಾ ಕೂಡ ಬಿಜೆಪಿ ಸೇರ್ಪಡೆ?
• ಬಿಜೆಪಿಯಲ್ಲಿ ಕಮಲ್‌ಗೆ ರಾಜ್ಯಸಭಾ ಸ್ಥಾನ, ಪುತ್ರನಿಗೆ ಲೋಕಸಭೆ ಟಿಕೆಟ್ ಸಾಧ್ಯತೆ

ಭೋಪಾಲ್: ಕಾಂಗ್ರೆಸ್‌ನಿಂದ ಅನೇಕ ನಾಯಕರು ಬಿಜೆಪಿ ಹಾಗೂ ಬಿಜೆಪಿಯ ಮಿತ್ರ ಪಕ್ಷಗಳಿಗೆ ವಲಸೆ ಹೋಗುತ್ತಿರುವ ನಡುವೆಯೇ, ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ಸಿಗ ಕಮಲ್‌ನಾಥ್ ಹಾಗೂ ಅವರ ಆಪ್ತನಾದ ರಾಜ್ಯಸಭಾ ಸದಸ್ಯ ವಿವೇಕ್ ತಂಖಾ ಅವರು ಬಿಜೆಪಿಯನ್ನು ಸೇರಬಹುದು ಎಂಬ ಗುಲ್ಲು ಹರಡಿದೆ. ಈ ಸುದ್ದಿ ದೃಢಪಟ್ಟರೆ ಕಳೆದ 45 ವರ್ಷ ಗಳಿಂದ ಕಾಂಗ್ರೆಸ್‌ನ ಕಟ್ಟಾಳುವಾಗಿದ್ದ ಕಮಲ್ ನಾಥ್ ರಾಜಕೀಯ ಜೀವನ ಬಹುದೊಡ್ಡ ತಿರುವು ಪಡೆದಂತಾಗಲಿದೆ. ಇತ್ತೀಚೆಗೆ ಕಮಲ್ ಅವರು ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್, ಬಿಜೆಪಿ ನಾಯಕರಾದ ಕೈಲಾಶ್ ವಿಜಯ ವರ್ಗೀಯ, ನರೇಂದ್ರ ಸಿಂಗ್ ತೋಮರ್ ಹಾಗೂ ಇತರರನ್ನು ಭೇಟಿಯಾಗಿದ್ದರು.

Tap to resize

Latest Videos

ಬಿಜೆಪಿ ಸಚಿವೆಗೆ ‘ಐಟಂ’ ಎಂದ ಮಾಜಿ ಸಿಎಂ ಕಮಲನಾಥ್‌!

ಈ ನಡುವೆ, ಮೋಹನ ಯಾದವ್ ಕೂಡ ಬಿಜೆಪಿ ಕೇಂದ್ರೀಯ ವರಿಷ್ಠರ ಜತೆ ಕಮಲ್ ಸೇರ್ಪಡೆ ಬಗ್ಗೆ ಮಾತನಾಡಿದ್ದಾರೆ. ಕಮಲ್ ಬಗ್ಗೆ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೂಡ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಬಳಿಕ ಕಮಲ್‌ ಬಿಜೆಪಿ ಸೇರ್ಪಡೆ ಸುದ್ದಿ ಹರಡಿದೆ. ಕಮಲ್‌ಗೆ ಬಿಜೆಪಿ ರಾಜ್ಯಸಭಾ ಸ್ಥಾನ ನೀಡಬಹುದು. ಪುತ್ರ ನಕುಲ್ ನಾಥ್‌ಗೆ ಛಂದ್ವಾಡಾ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡಬಹುದು. ಇನ್ನು ತಂಖಾ ಅವರನ್ನೂ ಬಿಜೆಪಿ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಬಹುದು ಎಂದು ಮೂಲಗಳು ಹೇಳಿವೆ.

ಕಮಲ್‌ನಾಥ್‌ 1980ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದು ಬಳಿಕ ಸುದೀರ್ಘ ಸಂಸದೀಯ ಇತಿಹಾಸ ಹೊಂದಿದ್ದಾರೆ. ಜೊತೆಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ ಇತ್ತೀಚಿನ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ವೇಳೆ ದಿಗ್ವಿಜಯ್‌ ಸಿಂಗ್ ಮತ್ತು ಕಮಲ್‌ನಾಥ್ ನಡುವಿನ ವೈಮನಸ್ಯ ಪಕ್ಷದ ಸೋಲಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಕಮಲ್ ಅವರಿಗೆ ಸೂಚಿಸಿತ್ತು ಎನ್ನಲಾಗಿದೆ. ಅದರ ಬೆನ್ನಲ್ಲೇ ಇದೀಗ ಅವರ ಬಿಜೆಪಿ ಸೇರ್ಪಡೆ ಗುಸುಗುಸು ಹಬ್ಬಿದೆ. ಆದರೆ ಇದನ್ನು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದಾರೆ. 'ಇತ್ತೀಚೆಗೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಲಪಡಿಸಲು ಕಮಲ್ ಸಭೆ ನಡೆಸಿದ್ದರು. ಹೀಗಾಗಿ ಅವರ ಬಿಜೆಪಿ ಸೇರ್ಪಡೆ ಸುದ್ದಿ ಸುಳ್ಳು ಎಂದಿದ್ದಾರೆ.

ಕನುಗೋಲು ಮಾತು ಕೇಳದೆ 2 ರಾಜ್ಯ ಸೋತ ಕಾಂಗ್ರೆಸ್‌: ಕಮಲನಾಥ್‌, ಗೆಹ್ಲೋಟ್‌ರಿಂದ ನಿರ್ಲಕ್ಷ್ಯ

click me!