Rafale Deal: ಸತ್ಯವು ನಿಮ್ಮೊಂದಿಗಿರುವಾಗ ಭಯಪಡಬೇಡಿ‌ : ರಾಹುಲ್ ಗಾಂಧಿ!

By Suvarna News  |  First Published Nov 9, 2021, 9:51 PM IST

*ರಫೇಲ್‌ ಒಪ್ಪಂದದಲ್ಲಿ ಮಧ್ಯವರ್ತಿಗೆ ಹಣ
*ಫ್ರೆಂಚ್ ಮಾಧ್ಯಮ ವರದಿ ಹಿನ್ನೆಲೆ ರಾಹುಲ್‌ ಟ್ವೀಟ್‌
*INC ಎಂದರೆ 'ಐ ನೀಡ್‌ ಕಮಿಷನ್' ಎಂದ Sambit Patra!
 


ನವದೆಹಲಿ(ನ. 9 ): 2007 ಮತ್ತು 2012 ರ ನಡುವೆ ಭಾರತದೊಂದಿಗೆ ರಫೇಲ್ (Rafale) ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಮಧ್ಯವರ್ತಿಯೊಬ್ಬರಿಗೆ (Agent) ಕಿಕ್‌ಬ್ಯಾಕ್ ಪಾವತಿಸಿದ ಕುರಿತು ಫ್ರೆಂಚ್ ಮಾಧ್ಯಮ ವರದಿ ಮಾಡಿತ್ತು. ಈ ವಿವಾದದ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಮಂಗಳವಾರ ಪ್ರತಿ ಹಂತದಲ್ಲೂ "ಸತ್ಯ ಅವರೊಂದಿಗಿದೆ" ಎಂದು ಹೇಳಿದರು ಮತ್ತು "ಭ್ರಷ್ಟ" ಬಿಜೆಪಿ ಸರ್ಕಾರದ ವಿರುದ್ಧ ಹೋರಾಡುವುದನ್ನು ನಿಲ್ಲಿಸಬೇಡಿ ಅಥವಾ ಅವರಿಗೆ ಭಯಪಡಬೇಡಿ ಎಂದು ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಸಲಹೆ ನೀಡಿದರು.‌

'ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರಿ!'

Tap to resize

Latest Videos

"ಪ್ರತಿ ಹೆಜ್ಜೆಯಲ್ಲೂ ಸತ್ಯವು ನಿಮ್ಮೊಂದಿಗಿರುವಾಗ, ಚಿಂತೆ ಮಾಡಲು ಏನಿದೆ? ನನ್ನ ಕಾಂಗ್ರೆಸ್ ಸಹೋದ್ಯೋಗಿಗಳೇ - ಭ್ರಷ್ಟ ಕೇಂದ್ರ ಸರ್ಕಾರದ ವಿರುದ್ಧ ಹೀಗೆಯೇ ಹೋರಾಟ ಮಾಡುತ್ತಿರಿ. ನಿಲ್ಲಬೇಡಿ, ಆಯಾಸಗೊಳ್ಳಬೇಡಿ, ಭಯಪಡಬೇಡಿ, ಎಂದು ಕಾಂಗ್ರೇಸ್‌ ನಾಯಕ ರಾಹುಲ್ ಗಾಂಧಿ "#RafaleScam" ಎಂಬ ಹ್ಯಾಶ್‌ಟ್ಯಾಗ್ ಬಳಸಿ ಹಿಂದಿಯಲ್ಲಿ ಟ್ವಿಟ್‌ ಮಾಡಿದ್ದಾರೆ. 2007 ಮತ್ತು 2012 ರ ನಡುವೆ ಭಾರತದೊಂದಿಗೆ ರಫೇಲ್ ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಮಧ್ಯವರ್ತಿಯೊಬ್ಬರಿಗೆ ಕಿಕ್‌ಬ್ಯಾಕ್ ಪಾವತಿಸಿದ ಕುರಿತು ಫ್ರೆಂಚ್ ಮಾಧ್ಯಮದ ವರದಿಯ ಹಿನ್ನೆಲೆಯಲ್ಲಿ ಈ ಟ್ವೀಟ್ ಬಂದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 2004 ಮತ್ತು 2014 ರ ನಡುವೆ ಅಧಿಕಾರದಲ್ಲಿತ್ತು.

 

जब पग-पग पर सत्य साथ है,
तो फ़िक्र की क्या बात है?

मेरे कांग्रेस साथियों-
भ्रष्ट केंद्र सरकार के ख़िलाफ़ ऐसे ही लड़ते रहो। रुको मत, थको मत, डरो मत! pic.twitter.com/McJJJGEI5c

— Rahul Gandhi (@RahulGandhi)

 

ರಾಹುಲ್‌ಗೆ ತಿಳಿವಳಿಕೆ ಇಲ್ಲ, ನೀವು ಅವರಂತೆ ಆಡಬೇಡಿ: ಡಿಕೆಶಿ, ಸಿದ್ದುಗೆ ಜೋಶಿ ಸಲಹೆ

ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ಏವಿಯೇಷನ್‌ಗೆ (Dassault Aviation ) ಭಾರತದೊಂದಿಗೆ ರಫೇಲ್ ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡಲು ಮಧ್ಯವರ್ತಿಯೊಬ್ಬರಿಗೆ ಕನಿಷ್ಠ 7.5 ಮಿಲಿಯನ್ ಯುರೋಗಳನ್ನು ರಹಸ್ಯ ಕಮಿಷನ್‌ಗಳ(Commission) ರೂಪದಲ್ಲಿ ಪಾವತಿಸಲು ಸಾಧ್ಯವಾಗುವಂತೆ ನಕಲಿ ಇನ್‌ವಾಯ್ಸ್‌ಗಳನ್ನು (Fake Invoice) ಬಳಸಿದೆ ಎಂದು ತನಿಖಾ ಜರ್ನಲ್ ಮೀಡಿಯಾಪಾರ್ಟ್ ( Mediapart) ಹೇಳಿಕೊಂಡಿದೆ.

'INC ಎಂದರೆ 'ಐ ನೀಡ್‌ ಕಮಿಷನ್' '

ಏತನ್ಮಧ್ಯೆ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ (Sambit Patra) ಅವರು ಕಾಂಗ್ರೆಸ್ ನಾಯಕರು ಮತ್ತು ಯುದ್ಧ ವಿಮಾನ ಖರೀದಿಯಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿರುವ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ತಪ್ಪು ಮಾಹಿತಿ  ನೀಡುವುದರ ಮೂಲಕ ಸುಳ್ಳು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ಡ್ರಗ್‌ ಪೆಡ್ಲರ್‌ ಅಲ್ಲ ಎಂದರೆ ಸರ್ಟಿಫಿಕೆಟ್‌ ತೋರಿಸಿ: ರವಿಕುಮಾರ

"ಐಎನ್‌ಸಿಯನ್ನು (INC)'ಐ ನೀಡ್‌ ಕಮಿಷನ್'‌ (ನನಗೆ ಕಮಿಷನ್‌ ಬೇಕು) ಎಂದು ಮರುನಾಮಕರಣ ಮಾಡಬೇಕು ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ. ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra), ರಾಬರ್ಟ್ ವಾದ್ರಾ - ಎಲ್ಲರೂ ನನಗೆ ಕಮಿಷನ್ ಬೇಕು ಎಂದು ಹೇಳುತ್ತಾರೆ. ಯುಪಿಎ (UPA) ಸರ್ಕಾರವು ಪ್ರತಿ ಒಪ್ಪಂದದಲ್ಲಿ ಇನ್ನೊಂದು ಒಪ್ಪಂದ ಮಾಡಿಕೊಂಡಿದೆ ಎಂದು ಸಂಬಿತ್ ಪಾತ್ರಾ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. ರಾಹುಲ್‌ಗೆ ಚಾಟಿ ಬೀಸಿದ ಪಾತ್ರಾ "ಪ್ರಸ್ತುತ ಭಾರತದಲ್ಲಿಲ್ಲದ ಕಾಂಗ್ರೆಸ್ ನಾಯಕ ಇಟಲಿಯಿಂದಲೇ (Italy) ಉತ್ತರಿಸಬೇಕು" ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಡ್ರಗ್‌ ಅಡಿಕ್ಟ್‌: ಕಟೀಲ್‌ ಹೇಳಿಕೆಗೆ ಬಿಜೆಪಿ ಸಮರ್ಥನೆ

ಬಿಜೆಪಿ (BJP) ನೇತೃತ್ವದ ಸರ್ಕಾರವು ಡಸಾಲ್ಟ್ ಏವಿಯೇಷನ್‌ನಿಂದ 36 ರಫೇಲ್ ಜೆಟ್‌ಗಳನ್ನು ಖರೀದಿಸಲು ಸೆಪ್ಟೆಂಬರ್ 23, 2016 ರಂದು ರಫೇಲ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು ಮತ್ತು ಯುಪಿಎ ಸರ್ಕಾರ ಅಂತಿಮಗೊಳಿಸಿದ 526 ಕೋಟಿ ರೂಪಾಯಿಗಳಿಗೆ ಬದಲಾಗಿ ಮೋದಿ ಸರ್ಕಾರವು ಪ್ರತಿ ವಿಮಾನವನ್ನು 1,670 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಖರೀದಿಸುತ್ತಿದೆ ಎಂದು ಆರೋಪಿಸಿತ್ತು.

click me!