ಮೆಲೋನಿ ಮೋದಿ ಸೆಲ್ಫಿಗೆ ಸೋನಿಯಾ ರಿಯಾಕ್ಷನ್ ಹೇಗಿರುತ್ತೆ: ಟ್ರೋಲರ್ಸ್‌ ಕಲ್ಪಿತ ಎಡಿಟೆಡ್ ವಿಡಿಯೋ ಸಖತ್ ವೈರಲ್

By Anusha Kb  |  First Published Dec 5, 2023, 11:50 AM IST

Italian Prime Minister ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ UAEಯಲ್ಲಿ ನಡೆದ COP28 ಸಭೆಯಲ್ಲಿ ಭಾಗಿಯಾದ ವೇಳೆ ತೆಗೆದ ಸೆಲ್ಫಿಯೊಂದು ಭಾರೀ ವೈರಲ್ ಆಗಿದ್ದು ಎಲ್ಲರಿಗೂ ಗೊತ್ತೆ ಇದೆ. ಆದರೆ ಇದಕ್ಕೆ  ಒಂದು ಕಾಲದಲ್ಲಿ ಭಾರತದ ಪ್ರಧಾನಿಯನ್ನೇ ಮದುವೆ ಆದ ಪ್ರಸ್ತುತ ಕಾಂಗ್ರೆಸ್‌ ನಾಯಕಿಯಾಗಿರುವ ಇಟಲಿ ಮೂಲದ Sonia Gandhi ರಿಯಾಕ್ಷನ್ ಹೇಗಿರಬಹುದು ಎಂಬ ಬಗ್ಗೆ ಟ್ರೋಲರ್ಸ್‌ಗಳು ಕಲ್ಪಿಸಿ ಎಡಿಟ್ ಮಾಡಿದ ವೀಡಿಯೋವೊಂದು ಈಗ Social Mediaದಲ್ಲಿ ಸಖತ್ ವೈರಲ್ ಆಗಿದೆ. 


ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಯುಎಇಯಲ್ಲಿ ನಡೆದ COP28 ಸಭೆಯಲ್ಲಿ ಭಾಗಿಯಾದ ವೇಳೆ ತೆಗೆದ ಸೆಲ್ಫಿಯೊಂದು ಭಾರೀ ವೈರಲ್ ಆಗಿರುವ ವಿಚಾರ ಬಹುತೇಕ ಎಲ್ಲರಿಗೂ ಗೊತ್ತೆ ಇದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭಾರತದ ಪ್ರಧಾನಿ ಮೋದಿ ಜೊತೆಗಿನ ಈ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಮೆಲೋಡಿ ಎಂದು ಶೇರ್ ಮಾಡಿದ್ದೆ ಇದಕ್ಕೆ ಕಾರಣ. ಇದಾದ ನಂತರ ಇಂಟರ್‌ನೆಟ್‌ನಲ್ಲಿ ಈ ಫೋಟೋ ಸಂಚಲನ ಸೃಷ್ಟಿಸಿದ್ದಲ್ಲದೇ ಜಾರ್ಜಿಯಾ ಹಾಗೂ ಪ್ರಧಾನಿ ಇರುವ ಹಲವು ಫೋಟೋಗಳನ್ನು ಇರಿಸಿಕೊಂಡು ಒಬ್ಬರಾದ ಮೇಲೊಬ್ಬರಂತೆ ಮೀಮ್ಸ್ ಕ್ರಿಯೇಟರ್‌ಗಳು ಪೋಸ್ಟ್‌ಗಳನ್ನು ಸೃಷ್ಟಿಸುತ್ತಿದ್ದು, ಈ ಪೋಸ್ಟ್‌ಗಳು ಸಖತ್ ವೈರಲ್ ಆಗುತ್ತಿವೆ. ಅದಕ್ಕಿಂತ ಹೆಚ್ಚಾಗಿ ಈ ಪೋಸ್ಟ್‌ಗಳಿಗೆ ನೋಡುಗರು ಮಾಡಿದ ಕಾಮೆಂಟ್‌ಗಳು ನಗೆಯುಕ್ಕಿಸುತ್ತಿದ್ದು,  ಅಂತಹ ಕೆಲ ಪೋಸ್ಟ್‌ಗಳ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ...

ಇಟಲಿ ಜನಕ್ಕೂ ಭಾರತದ ಪ್ರಧಾನಿಗಳಿಗೂ ಇರುವ ಸಂಬಂಧ ಇದೇನು ಹೊಸದಲ್ಲ, ಈ ಹಿಂದಿನ ಪ್ರಧಾನಿ ರಾಜೀವ್ ಗಾಂಧಿ ಮದುವೆಯಾಗಿದ್ದು, ಇಟಲಿ ಮಹಿಳೆಯನ್ನೇ (ಪ್ರಸ್ತುತ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ) ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸ್ನೇಹವನ್ನು ಜನ ಪ್ರೇಮ ಪ್ರಕರಣಕ್ಕೆ ಹೋಲಿಸುತ್ತಿದ್ದಾರೆ. ಇದು ಕೇವಲ ನೋಡುಗರ ಕಲ್ಪನೆಯಷ್ಟೇ ಈ ಮಧ್ಯೆ ನೋಡುಗರೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮೆಲೋನಿ ಸ್ನೇಹಕ್ಕೆ ಸೋನಿಯಾ ಗಾಂಧಿ ರಿಯಾಕ್ಷನ್ ಹೇಗಿರಬಹುದು ಎಂಬುದನ್ನು ತೋರಿಸುವಂತೆ ಎಡಿಟ್ ಮಾಡಲಾದ ಪನ್ನಿ ವೀಡಿಯೋವೊಂದನ್ನು ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Tap to resize

Latest Videos

ವೈರಲ್ ಆದ ಇಟಲಿ ಪ್ರಧಾನಿಯ ಮೆಲೋಡಿ ಸೆಲ್ಫಿಗೆ ನರೇಂದ್ರ ಮೋದಿ ಪ್ರತಿಕ್ರಿಯೆ!

ಹೋ, ಈ ನಗರದಲ್ಲಿರುವ ಇಟಲಿಯನ್ ನಾನು ಒಬ್ಬಳೇ ಅಲ್ಲ ಎಂದು ಪ್ರಧಾನಿ ಮೋದಿ ಹಾಗೂ ಮೆಲೋನಿ ಫೋಟೋ ನೋಡಿ ಸೋನಿಯಾ ಗಾಂಧಿ ಅಂದುಕೊಳ್ಳುತ್ತಾ ಒಳಗೊಳಗೆ  ನಗುತ್ತಿರುವಂತೆ ಈ ವೀಡಿಯೋವನ್ನು ಚಿತ್ರಿಸಲಾಗಿದೆ. ಇದಕ್ಕೆ ನೆಟ್ಟಿಗರು ಮಾಡಿರುವ ಕಾಮೆಂಟ್ ಇನ್ನು ಮಜಾವಾಗಿದೆ. ಭಾರತದವರು ಹಾಗೂ ಅವರ ಇಟಲಿ ಗೀಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬರೀ ಇದೊಂದೇ ಪೋಸ್ಟ್ ಅಲ್ಲ, ಕೆಲವರು ಜಾರ್ಜಿಯಾ ಮೆಲೋನಿ ಹಾಗೂ ಪ್ರಧಾನಿ ಮೋದಿ ಮದುವೆಯಾದಂತೆ ಆರ್ಟಿಫಿಷಿಯಲ್ ತಂತ್ರಜ್ಞಾನದ ಮೂಲಕ ಫೋಟೋ ಸೃಷ್ಟಿ ಮಾಡಿ ಮೀಮ್ಸ್ ಕ್ರಿಯೇಟ್ ಮಾಡಿದ್ದಾರೆ.

ಈ ಪೋಸ್ಟ್‌ಗೂ ಹಾಕಿರುವ ಕಾಮೆಂಟ್ ನೋಡಿದರೆ ನೀವು ಬಿದ್ದು ಬಿದ್ದು ನಗುವುದು ಪಕ್ಕಾ, ಇದನ್ನು ನೋಡಿದ ಅಮಿತ್ ಷಾ ವರದಕ್ಷಿಣೆಯಾಗಿ ನಮಗೆ ಇಡೀ ಇಟಲಿಯೇ ಬೇಕು ಎಂದು ಕೇಳುತ್ತಾರೆ ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.  ಮತ್ತೆ ಕೆಲವರು ಈ ಇಟಲಿಯನ್ ಲವ್ ಹಿಸ್ಟರಿ ಮತ್ತೆ ಪುನಾರವರ್ತನೆಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇವರ ಮದುವೆಯನ್ನು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಡಿದರೆ ಆಗಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಹುಡುಗರು ಮೋದಿಗೂ ಗರ್ಲ್‌ಫ್ರೆಂಡ್ ಇದ್ದಾರೆ ನಂಗೆ ಮಾತ್ರ ಇಲ್ಲ ಎಂದು ಬೇಸರಿಕೊಂಡಿದ್ದಾರೆ. ಇನ್ನು ಇವರಿಬ್ಬರು ಇರುವ ವೀಡಿಯೋಗೆ ಎಲ್ಲದಕ್ಕೂ ಪ್ರಧಾನಿ ಮೋದಿ ಧ್ವನಿಯನ್ನೇ ಹೋಲುವಂತೆ ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಿರುವ ಬಾಲಿವುಡ್ ಸಿನಿಮಾ ಹಾಡುಗಳನ್ನು ಹಾಕಲಾಗಿದೆ. ಮತ್ತೆ ಕೆಲವರು ಇವರು ತುಂಬಾ ಐಷಾರಾಮಿ ಜೋಡಿ, ಅಂತಾರಾಷ್ಟ್ರೀಯ ಸಭೆಗಳಲ್ಲಷ್ಟೇ ಪರಸ್ಪರ ಭೇಟಿಯಾಗುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಜಾರ್ಜಿಯಾ ಮೆಲೋನಿಯನ್ನು ಅತ್ತಿಗೆ (ಬಾಬಿಜೀ ಎಂದು ಕರೆಯಲು ಶುರು ಮಾಡಿದ್ದು, ಈ ಪೋಸ್ಟ್‌ನಿಂದ ಬಾಬಿಜೀ ಫಾಲೋವರ್ಸ್‌ ಒಮ್ಮೆಗೆ ಹೆಚ್ಚಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ

ಮೆಲೋಡಿ ಹ್ಯಾಷ್‌ಟ್ಯಾಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗಿರುವ ಫೋಟೋ ಬಳಸಿಕೊಂಡು ಇನ್ಸ್ಟಾಗ್ರಾಮ್‌ನಲ್ಲಿ ಮೀಮರ್ಸ್‌ಗಳು ನೂರಾರು ಪೋಸ್ಟ್‌ಗಳನ್ನು ಸೃಷ್ಟಿಸಿದ್ದು, ಬಹುತೇಕ ಎಲ್ಲವೂ ವೈರಲ್ ಆಗುತ್ತಿದೆ. ಇದನ್ನು ನೋಡಿದ ಕೆಲವರು ನೀವು ಈ ರೀತಿ ಮಾಡಿ ಮಾಡಿ ಇನ್ಸ್ಟಾಗ್ರಾಮ್‌ ಕೂಡ ಬ್ಯಾನ್ ಆಗುವಂತೆ ಮಾಡ್ತಿರಾ ಎಂದೆನಿಸುತ್ತಿದ ಎಂದು ಪ್ರತಿಕ್ರಿಯಿಸಿದ್ದಾರೆ. 

ಯುಎಇಯಲ್ಲಿ ನಡೆದ ಸಿಒಪಿ28 ಸಭೆಯಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ಫೋನ್‌ನಲ್ಲಿ ಭಾರತದ ಪ್ರಧಾನಿ ಮೋದಿ ಜೊತೆ ಸೆಲ್ಫಿ ತೆಗೆದುಕೊಂಡು ಮೆಲೋಡಿ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ನಂತರ ಈ ಮೀಮ್ಸ್‌ಗಳು ಸೃಷ್ಟಿಯಾಗಿವೆ. ಜಾರ್ಜಿಯಾ ಅವರು ಮಾಡಿದ ಈ ಇನ್ಸ್ಟಾಗ್ರಾಮ್ ಪೋಸ್ಟನ್ನು ಲಕ್ಷಾಂತರ ಜನ ವೀಕ್ಷಿಸುವ ಮೂಲಕ ಅದು ವೈರಲ್ ಆಗಿದ್ದಲ್ಲದೇ ಅವರ ಫಾಲೋವರ್ಸ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೊಂದೆಡೆ ಜಾರ್ಜಿಯಾ ಮೆಲೋನಿ ಅವರು ಇತ್ತೀಚೆಗಷ್ಟೇ ತಮ್ಮ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. 

 
 
 
 
 
 
 
 
 
 
 
 
 
 
 

A post shared by BhardwajFlix (@bhardwajflix)

 

 

click me!