
ನವದೆಹಲಿ: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು ಬಿಜೆಪಿ ಭಾರಿ ಬಹುಮತ ಗಳಿಸಿದ ಬೆನ್ನಲ್ಲೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಹುಟ್ಟಿಕೊಂಡಿರುವ ವಿಪಕ್ಷಗಳ ಇಂಡಿಯಾ ಒಕ್ಕೂಟದಲ್ಲಿ ಒಡಕಿನ ಧ್ವನಿಗಳು ಕೇಳಿಬಂದಿವೆ. ಅಲ್ಲದೆ ಈ ಸೋಲು ಇಂಡಿಯಾ ಒಕ್ಕೂಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಅಭಿಪ್ರಾಯಗಳೂ ಪ್ರತಿಧ್ವನಿಸಿವೆ.
ಇಂಡಿಯಾ ಕೂಟದ ಪ್ರಮುಖ ಸದಸ್ಯೆಯಾಗಿರುವ ತೃಣಮೂಲ ಕಾಂಗ್ರೆಸ್ (TMC Chief) ಮುಖ್ಯಸ್ಥೆ ಮಮತಾ ಬ್ಯಾನರ್ಜಿ(mamta Banerji), ಇದು ಕಾಂಗ್ರೆಸ್‌ನ ಸೋಲೇ ಹೊರತು ಜನರದ್ದಲ್ಲ. ಇಂಡಿಯಾ ಕೂಟದ (INDIA Alliance) ಸದಸ್ಯ ಪಕ್ಷಗಳ ಜೊತೆಗೆ ಸೀಟು ಹಂಚಿಕೆ ಒಪ್ಪಂದ ಇಲ್ಲದೆ ಕಾಂಗ್ರೆಸ್‌ಗೆ ಸೋಲಾಯಿತು. ತೆಲಂಗಾಣದಲ್ಲಿ ಅವರು ಗೆದ್ದಿದ್ದಾರೆ. ಮಧ್ಯಪ್ರದೇಶ(Madhya Pradesh), ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಸೋತಿದ್ದಾರೆ. ಅವರ ಕೆಲವು ಮತಗಳನ್ನು ಇಂಡಿಯಾ ಪಕ್ಷಗಳೇ ಕಬಳಿಸಿವೆ. ಇದು ವಾಸ್ತವ. ಸೀಟು ಹಂಚಿಕೆ ಆಗಬೇಕೆಂದು ನಾವು ಮೊದಲೇ ಹೇಳಿದ್ದೆವು. ಕಾಂಗ್ರೆಸ್‌ನವರು ಮತ ವಿಭಜನೆಯಿಂದ ಸೋತರು ಎಂದು ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಹೇಳಿದರು.
ಕನುಗೋಲು ಮಾತು ಕೇಳದೆ 2 ರಾಜ್ಯ ಸೋತ ಕಾಂಗ್ರೆಸ್: ಕಮಲನಾಥ್, ಗೆಹ್ಲೋಟ್‌ರಿಂದ ನಿರ್ಲಕ್ಷ್ಯ
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ (Akhilesh Yadav) ಮಾತನಾಡಿ, ಇದು ದೀರ್ಘ ಹೋರಾಟ. ಬಿಜೆಪಿಯನ್ನು ಸೋಲಿಸಲು ಎಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿವೆಯೋ ಅಲ್ಲಿ ಪ್ರಾದೇಶಿಕ ಪಕ್ಷಗಳೇ ಹೋರಾಟದ ಚುಕ್ಕಾಣಿ ಹಿಡಿಯಬೇಕು ಎಂದು ಹೇಳಿದರು. ಸಮಾಜವಾದಿ ಪಕ್ಷದ ವಕ್ತಾರ ಮನೋಜ್ ಯಾದವ್ ಮಾತನಾಡಿ, ಕಮಲನಾಥ್ (Kamalnath) ಅವರು ಅಖಿಲೇಶ್ ಬಗ್ಗೆ ಆಡಿದ ಅವಮಾನಕಾರಿ ಮಾತುಗಳಿಂದ ಕಾಂಗ್ರೆಸ್ ಸೋತಿತು. ಒಂದು ಹಂತದಲ್ಲಿ ಅವರು ಅಖಿಲೇಶ್ ವಿಕಿಲೇಶ್‌ಗಳನ್ನೆಲ್ಲ ಬಿಡಿ ಎಂದಿದ್ದರು ಎಂದು ತಿಳಿಸಿದರು. ಜೆಡಿಯು ನಾಯಕ ಕೆ.ಸಿ.ತ್ಯಾಗಿ, ಕಾಂಗ್ರೆಸ್‌ನವರು ಇಂಡಿಯಾ ಪಕ್ಷಗಳನ್ನು ನಿರ್ಲಕ್ಷಿಸಿದರು. ಆದರೆ ಸ್ವಂತ ಬಲದ ಮೇಲೆ ಗೆಲ್ಲಲಾಗದೆ ಸೋತರು ಎಂದು ಕಾಲೆಳೆದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan), ಹಿಂದಿ ಹೃದಯ ಭಾಗದಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ಹೇಳಿದರು.
ಶಿವಸೇನೆ ನಾಯಕ ಸಂಜಯ್ ರಾವುತ್ ಮಾತನಾಡಿ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನವರು ಇಂಡಿಯಾ ಪಕ್ಷಗಳ ಜೊತೆ ಕೆಲ ಸೀಟುಗಳನ್ನು ಹಂಚಿಕೊಂಡಿದ್ದರೆ ಫಲಿತಾಂಶವೇ ಬೇರೆಯಿರುತ್ತಿತ್ತು ಎಂದರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರುಕ್ ಅಬ್ದುಲ್ಲಾ(Farukh Abdulla), ಈ ಫಲಿತಾಂಶದಿಂದ ಇಂಡಿಯಾ ಕೂಟದ ಮೇಲೆ ಏನೂ ಪರಿಣಾಮವಾಗುವುದಿಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ಸೋಲಿನಿಂದ ಪಾಠ ಕಲಿಯಬೇಕು. ಇಂಡಿಯಾ ಒಕ್ಕೂಟ ಒಂದಾಗಿ ಹೋರಾಡಬೇಕು ಎಂದು ಹೇಳಿದರು.
ಬೆಂಗಳೂರಿನ ಚಿಕ್ಕಪೇಟೆ ಬಟ್ಟೆ ವ್ಯಾಪಾರಿ ಲಾಡು ಲಾಲ್ ಈಗ ರಾಜಸ್ಥಾನದಲ್ಲಿ ಶಾಸಕ
ಆರ್‌ಜೆಡಿ ನಾಯಕ ಮನೋಜ್ ಝಾ, ಇದು ರಾಜ್ಯಗಳ ಚುನಾವಣೆ. ಇದನ್ನು ಇಲ್ಲಿಗೇ ಬಿಡಬೇಕು. ಲೋಕಸಭೆ ಚುನಾವಣೆ ಬೇರೆ ವಿಷಯಗಳ ಮೇಲೆ ನಡೆಯುತ್ತದೆ. ಈ ಫಲಿತಾಂಶದಿಂದ ಇಂಡಿಯಾ ಕೂಟದ ಮೇಲೆ ಯಾವುದೇ ಪರಿಣಾಮವಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ