Union War Book: ಕದನ ಕಾಲದಲ್ಲಿ ಅಧಿಕಾರಿಗಳಿಗೆ ನೆರವಾಗಿದ್ದೇ ಈ ರಹಸ್ಯ ಕೈಪಿಡಿ!

Published : May 13, 2025, 04:24 AM IST
Union War Book: ಕದನ ಕಾಲದಲ್ಲಿ ಅಧಿಕಾರಿಗಳಿಗೆ ನೆರವಾಗಿದ್ದೇ ಈ ರಹಸ್ಯ ಕೈಪಿಡಿ!

ಸಾರಾಂಶ

ಪಾಕಿಸ್ತಾನದ ಉದ್ಧಟತನದಿಂದ ದೇಶದಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ಸಮರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಹಿರಿಯ ಅಧಿಕಾರಿಗಳಿಗೆ ನೆರವಾಗಿದ್ದು 2010ರಲ್ಲಿ ಸರ್ಕಾರ ಹೊರತಂದ, ನೀಲಿ ಮುಖಪುಟದ ‘ಯೂನಿಯನ್‌ ವಾರ್‌ ಬುಕ್‌’ ಎಂಬ ರಹಸ್ಯ ಪುಸ್ತಕ.

  • 2010ರಲ್ಲಿ ಜಿ.ಕೆ. ಪಿಳ್ಳೈ ನೇತೃತ್ವದಲ್ಲಿ ಈ ಪುಸ್ತಕದ ರಚನೆ
  • ಸಂಘರ್ಷ ಸಮಯದಲ್ಲಿ ಸರ್ಕಾರದ ಕರ್ತವ್ಯದ ಬಗ್ಗೆ ವಿವರಣೆ
  • ರಾಜ್ಯಗಳ ಮುಖ್ಯ ಕಾರ್ಯದರ್ಶಿಯ ಬಳಿ 1 ಪ್ರತಿ ಇರುತ್ತದೆ
  • ಪ್ರತಿ 15 ವರ್ಷಗಳಿಗೊಮ್ಮೆ ಅಪ್‌ಡೇಟ್‌ ಮಾಡಲಾಗುತ್ತದೆ

ನವದೆಹಲಿ (ಮೇ.13): ಪಾಕಿಸ್ತಾನದ ಉದ್ಧಟತನದಿಂದ ದೇಶದಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ಸಮರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಹಿರಿಯ ಅಧಿಕಾರಿಗಳಿಗೆ ನೆರವಾಗಿದ್ದು 2010ರಲ್ಲಿ ಸರ್ಕಾರ ಹೊರತಂದ, ನೀಲಿ ಮುಖಪುಟದ ‘ಯೂನಿಯನ್‌ ವಾರ್‌ ಬುಕ್‌’ ಎಂಬ ರಹಸ್ಯ ಪುಸ್ತಕ.

ಏನಿದು ಯೂನಿಯನ್ ವಾರ್ ಬುಕ್? (Union War Book)

ಸಾರ್ವಜನಿಕವಾಗಿ ಲಭ್ಯವಿರದ ಈ ಪುಸ್ತಕದಲ್ಲಿ, ಸಂಘರ್ಷದ ಸಮಯದಲ್ಲಿ ಸರ್ಕಾರದ ವಿವಿಧ ಅಂಗಗಳು ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಕಾರ್ಯ ನಿರ್ವಹಿಸಬೇಕು ಎಂಬುದನ್ನು ವಿವರವಾಗಿ ವಿವರಿಸಲಾಗಿದೆ. 

ಅಗ್ನಿಶಾಮಕ ಕವಾಯತು, ಸ್ಥಳಾಂತರಿಸುವಿಕೆ ಸೇರಿದಂತೆ ತುರ್ತು ಪ್ರತಿಕ್ರಿಯೆಗೆ ಅಗತ್ಯವಾದ ಎಲ್ಲಾ ವಿಶಯಗಳಿರುವ ಈ ಪುಸ್ತಕದ ತಯಾರಿ ಮತ್ತು ಪರಿಷ್ಕರಣೆಯಲ್ಲಿ ತೊಡಗುವ ರಕ್ಷಣೆ, ಗೃಹ ವ್ಯವಹಾರ ಮತ್ತು ಸಂಪುಟ ಸಚಿವಾಲಯದ ಅಧಿಕಾರಿಗಳು ಕೂಡ ಅದಲ್ಲಿರುವ ಮಾಹಿತಿಯನ್ನು ಗೌಪ್ಯವಾಗಿಡುತ್ತಾರೆ. 

ಇದನ್ನೂ ಓದಿ: ಪಾಕಿಸ್ತಾನವೀಗ ಒಂಟಿ, ಈ ಕಾರಣಕ್ಕೆ ಮುಸ್ಲಿಂ ರಾಷ್ಟ್ರಗಳಿಂದಲೂ ಬೆಂಬಲವಿಲ್ಲ!

ಕೇಂದ್ರ ಸಚಿವಾಲಯಗಳನ್ನು ಹೊರತುಪಡಿಸಿ ಪ್ರತಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಬಳಿ ಇದರ ಒಂದು ಪ್ರತಿ ಇರುತ್ತದೆ. 26/11 ಮುಂಬೈ ದಾಳಿ ನಡೆದ ಎರಡೇ ವರ್ಷಗಳಲ್ಲಿ (2010), ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರ ನೇತೃತ್ವದಲ್ಲಿ ಈ ಕೈಪಿಡಿಯ ರಚನೆಯಾಯಿತು. ಇದರಲ್ಲಿ ತಾಂತ್ರಿಕ ಪ್ರಗತಿ ಸೇರಿದಂತೆ ಪ್ರಸ್ತುತ ಸ್ಥಿತಿಯ ಅಗತ್ಯತೆಗಳಿಗೆ ತಕ್ಕಹಾಗೆ ಪ್ರತಿ 15 ವರ್ಷಗಳಿಗೊಮ್ಮೆ ಅಪ್‌ಡೇಟ್‌ ಮಾಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..