ಕೊರೋನಾ ವಿರುದ್ಧ ಹೋರಾಡಲು ಭಾರತ ಏನು ಮಾಡುತ್ತಿದೆ?

By Suvarna News  |  First Published May 19, 2021, 5:59 PM IST

* ಕೊರೋನಾ ನಿಯಂತ್ರಣಕ್ಕೆ ಭಾರತ ಸರ್ಕಾರವೇನು ಮಾಡುತ್ತಿದೆ? ತೆಗೆದುಕೊಂಡ ಕ್ರಮಗಳೇನು?

* ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಹನ್ನೊಂದು ಅಂಶಗಳಲ್ಲಿ ಉತ್ತರ

* ಪಿಎಂ ಕೇರ್ಸ್‌ ಫಂಡ್‌ನಿಂದೇನಾಯ್ತು? ಇಲ್ಲಿದೆ ಎಲ್ಲಾ ಉತ್ತರ


Author: Akhilesh Mishra, New Delhi

ಮೊದಲ ಕೊರೋನಾ ಅಲೆ ನಿವಾರಣೆಯಾಗಿ ನಿಟ್ಟುಸಿರು ಬಿಡಲು ಸಜ್ಜಾಗಿದ್ದ ಭಾರತಕ್ಕೆ ಏಕಾಏಕಿ ಶಾಕ್ ಕೊಟ್ಟಿದ್ದು ಎರಡನೇ ಅಲೆ. ಭಾರೀ ಭೀತಿ ಸೃಷ್ಟಿಸಿದ್ದ ಈ ಎರಡನೇ ಅಲೆ ವಿರುದ್ಧ ಭಾರತ ಗೆಲುವು ಸಾಧಿಸುವ ಭರವಸೆ ಕೊಂಚ ಹುಟ್ಟಿದೆ. ಪ್ರತಿನಿತ್ಯ ದಾಖಲಾಗುತ್ತಿರುವ ಹೊಸ ಪ್ರಕರಣಗಳು(ಮೊದಲ ಚಿತ್ರ) ಹಾಗೂ ಕಳೆದ ಏಳು ದಿನಗಳಲ್ಲಿ ದಾಖಲಾದ ಸರಾಸರಿ ಪ್ರಕರಣಗಳ ಸಂಖ್ಯೆ(ಎರಡನೇ ಚಿತ್ರ) ಇಳಿಕೆಯ ಹಾದಿ ಹಿಡಿದಿರುವುದನ್ನು ಸ್ಪಷ್ಟಪಡಿಸುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಹಾಗೂ ಚೇತರಿಸಿಕೊಂಡವರ ಗ್ರಾಫ್‌ ಕೂಡಾ ಹಸಿರು ರೇಖೆಯಲ್ಲಿದೆ. ಈ ಮೂಲಕ ಹೊಸ ಪ್ರಕರಣಗಳ ಸಂಖ್ಯೆಗಿಂತಲೂ, ಪ್ರತಿನಿತ್ಯ ಗುಣಮುಖರಾಗುತ್ತಿರುವವರ ಸಂಖ್ಯೆ ಅಧಿಕವಿದೆ ಎಂಬುವುದು ಸದ್ಯ ಖುಷಿ ಪಡುವ ವಿಚಾರವಾಗಿದೆ. 

Tap to resize

Latest Videos

undefined

ಹೀಗಿರುವಾಗ ಈ ಸೋಂಕು ನಿವಾರಿಸಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮವೇನು ಎಂಬ ಪ್ರಮುಖ ಪ್ರಶ್ನೆ ಅಂತಾರಾಷ್ಟ್ರೀಯ ಮಾದ್ಯಮಗಳಲ್ಲಿ ಬಹಳ ಸದ್ದು ಮಾಡಿದೆ. ಹೀಗಿರುವಾಗ ಇದಕ್ಕೆ ಬಹುಶಃ ಈ ಹನ್ನೊಂದು ಅಂಶಗಳು ಉತ್ತರವಾಗಬಹುದು.

* ಲಸಿಕೆ

ಕೊರೋನಾ ಮಣಿಸಬಲ್ಲ ಲಸಿಕೆ ಆವಿಷ್ಕಾರಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿತ್ತು. ಈ ನಿಟ್ಟಿನಲ್ಲಿ ಮೊದಲ ಅಲೆ ದಾಳಿ ಇಟ್ಟ ಕೆಲವೇ ದಿನಗಳಲ್ಲಿ 2020ರ ಏಪ್ರಿಲ್ 14ರಂದು ಕೇಂದ್ರ ಇದಕ್ಕಾಗಿ ಕಾರ್ಯಪಡೆ ರಚಿಸಿತು. ಇದಾದ ಕೇವಲ ಒಂಭತ್ತು ತಿಂಗಳಲ್ಲೇ 2021ರ ಜನವರಿ 16ರಂದು ಭಾರತ ತನ್ನ ಸ್ವದೇಶೀ ಲಸಿಕೆ ವಿತರಣೆಗೆ ಚಾಲನೆ ನೀಡಿತು. ಕೋವ್ಯಾಕ್ಸಿನ್ ಮುಂದಿನ ದಿನಗಳಲ್ಲಿ ಈಗ ಉತ್ಪಾದಿಸುವ ಎರಡು ಪಟ್ಟು ಹೆಚ್ಚು ಲಸಿಕೆ ಡೋಸ್‌ಗಳನ್ನು ತಯಾರಿಸುವುದಾಗಿ ಹೇಳಿದೆ. ಏಪ್ರಿಲ್‌ನಲ್ಲಿ ಇದು 10ಮಿಲಿಯನ್ ಡೋಸ್‌ ಉತ್ಪಾದಿಸಿತ್ತು. ಜುಲೈ- ಆಗಸ್ಟ್ ತಿಂಗಳಲ್ಲಿ  60-70ಮಿಲಿಯನ್ ಡೋಸ್‌ ಉತ್ಪಾದಿಸುವ ಭರವಸೆ ಇದು ವ್ಯಕ್ತಪಡಿಸಿದ್ದು, ಸೆಪ್ಟೆಂಬರ್‌ನಿಂದ ಪ್ರತೀ ತಿಂಗಳು 100 ಮಿಲಿಯನ್ ಲಸಿಕೆ ಡೋಸ್‌ ಉತ್ಪಾದಿಸುವುದಾಗಿ ಹೇಳಿದೆ.

ಮೇ 1ರಿಂದ 18 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈವರೆಗೂ ಭಾರತದಲ್ಲಿ 185 ಮಿಲಿಯನ್‌ ಮಂದಿಗೆ ಲಸಿಕೆ ನೀಡಲಾಗಿದೆ.

ಭಾರತದಲ್ಲಿ ಲಸಿಕೆ ಅಭಿಯಾನ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

* ಆಕ್ಸಿಜನ್ ಲಭ್ಯತೆ

ಈ ವಿಚಾರದಲ್ಲಿ ಭಾರತಕ್ಕೆ ಎದುರಾದ ಸವಾಲನ್ನು ಗಮನಿಸಲೇಬೇಕು. ಕೊರೊನಾ ಎರಡನೇ ಅಲೆ ದಾಳಿಗೂ ಮುನ್ನ ಭಾರತದಲ್ಲಿ ಪ್ರತಿ ನಿತ್ಯ ಸುಮಾರು  900 ಮೆಟ್ರಿಕ್ ಟನ್ ಆಕ್ಸಿಜನ್‌ ಬೇಡಿಕೆ ಇತ್ತು. ಆದರೆ ಕೊರೋನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆಯೇ ಈ ಬೇಡಿಕೆ ಹೆಚ್ಚಾಗಿ ಪ್ರತಿ ದಿನ 9,000 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಬೇಕಾದ ಅನಿವಾರ್ಯತೆ ಎದುರಾಯ್ತು. ಆಕ್ಸಿಜನ್ ಇಲ್ಲದೇ ಅನೇಕರು ನರಳಿದ್ದಾರೆ. ಅದು ನಿಜಕ್ಕೂ ನೋವಿನ ದಿನಗಳು. ಆದರೆ ಈ ಕೊರತೆ ನೀಗಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿತು. 

  ಲಾಭದಾಯಕವಾಗಲಿದೆ. ಯಾವುದೇ ರೀತಿಯ ಪೈಪೋಟಿ ಇರುವುದಿಲ್ಲ ಎಂದು ವಾದಿಸಿದ್ದವು. ಇಂತಹ ಪರಿಸ್ಥಿತಿಯಲ್ಲಿ ಆಯೋಗವೂ ಇತರ ಪಕ್ಷಗಳ ಈ ಮನವಿಯನ್ನು ತಳ್ಳಿ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಚುನಾವಣೆಗಳು ಎಂದಿನಂತೆ ನಡೆದವು.

ಸದ್ಯ ಆಕ್ಸಿಜನ್ ಸಮಸ್ಯೆ ಬಹುತೇಕ ನಿವವಾರಣೆಯಾಗಿದೆ. ಆಕ್ಸಿಜನ್ ಉತ್ಪಾದಿಸುವ ಟ್ಯಾಂಕರ್‌ಗಳು ಭಾರತಕ್ಕೆ ಆಗಮಿಸಿವೆ. ವಿದೇಶಗಳೂ ಭಾರತಕ್ಕೆ ಆಕ್ಸಿಜನ್ ಪೂರೈಸಿವೆ. ಕೈಗಾರಿಕಾ ಕ್ಷೇತ್ರಗಳೂ ಈ ನಿಟ್ಟಿನಲ್ಲಿ ಸಹಕರಿಸಿವೆ. ಮುಂದಿನ ದಿನಗಳಲ್ಲಿ ಆಕ್ಸಿಜನ್‌ಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ಭರವಸೆ ಸರ್ಕಾರ ನೀಡಿದ್ದು. ಆಕ್ಸಿಜನ್ ಉತ್ಪಾದಿಸುವ ಪ್ಲಾಂಟ್‌ಗಳ ನಿರ್ಮಾಣಕ್ಕೆ ಸೂಕ್ತ ಹೆಜ್ಜೆ ಇರಿಸಿದೆ.

* ಔಷಧಿ, ಪಿಪಿಇ ಕಿಟ್, ಮಾಸ್ಕ್

ಕೊರೋನಾ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸುವ ರೆಮ್‌ಡೆಸಿವಿರ್ ಉತ್ಪಾದನೆ 3.7ಮಿಲಿಯನ್‌ನಿಂದ 10.1ಮಿಲಿಯನ್‌ಗೇರಿದೆ. ಇವುಗಳನ್ನು ಉತ್ಪಾದಿಸುವ ಘಟಕಗಳ ಸಂಖ್ಯೆಯೂ 57ಕ್ಕೇರಿವೆ. ಹೀಗಾಗಿ ರೆಮ್‌ಡೆಸಿವಿರ್ ಕೊರತೆ ನೀಗಿದೆ.

ಅತ್ತ ಡಿಆರ್‌ಡಿಒ ನಿರ್ಮಿಸಿರುವ ಔಷಧಿಗೆ ಔಷಧ ನಿಯಂತ್ರಣ ಮಂಡಳಿ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು, ಇದು ಕೊರೋನಾ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ. 

ಅತ್ತ ಫ್ರಂಟ್‌ಲೈನ್ ವರ್ಕರ್ಸ್‌ಗಳಿಗೆ 16.19 ಮಿಲಿಯನ್ಪಿಪಿಇ ಕಿಟ್ ಹಾಗೂ 41 ಮಿಲಿಯನ್ N-95 ಮಾಸ್ಕ್‌ಗಳನ್ನು ರಾಜ್ಯಗಳಿಗೆ ಕಳುಹಿಸಿ ಕೊಡಲಾಗಿದೆ. 38,103 ಹೊಸ ವೆಂಟಿಲೇಟರ್‌ಗಳನ್ನೂ ರಾಜ್ಯಗಳಿಗೆ ಕೇಂದ್ರ ಪೂರೈಸಿದೆ.

* ಟೆಸ್ಟಿಂಗ್ ಸೌಲಭ್ಯ

ಟೆಸ್ಟಿಂಗ್ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಂಡಿಲ್ಲ. ಅಗ್ರೆಸಿವ್ ಟೆಸ್ಟಿಂಗ್‌ನಿಂದಷ್ಟೇ ಕೊರೋನಾ ಹೋರಾಟದಲ್ಲಿ ಗೆಲುವು ಕಾಣಲು ಸಾಧ್ಯ ಎಂದು ಅರಿತುಕೊಂಡಿರುವ ಸರ್ಕಾರ ಇದಕ್ಕಾಗಿ ಟೆಸ್ಟಿಂಗ್‌ ಕಿಟ್‌ಗಳ ಪೂರೈಕೆ ಹೆಚ್ಚಿಸಿದೆ. ಪ್ರತಿ ನಿತ್ಯ 1 ಮಿಲಿಯನ್‌ಗೂ ಅಧಿಕ  ಟೆಸ್ಟಿಂಗ್ ಕಿಟ್‌ ತಯಾರಿಸುವ ಸಾಮರ್ಥ್ಯ ಭಾರತ ಹೊಂದಿದೆ.

* ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಸೆಂಟರ್

ಪ್ರಸ್ತುತ ಕೊರೋನಾ ಚಿಕಿತ್ಸೆಗೆಂದೇ ಮೀಸಲಿಟ್ಟ ಆಸ್ಪತ್ರೆಯ  4,68,974 ಬೆಡ್‌ಗಳು ಸೇರಿ ಒಟ್ಟ 1.86ಮಿಲಿಯನ್ ಬೆಡ್‌ಗಳ ವ್ಯವಸ್ಥೆ ಭಾರತದಲ್ಲಿದೆ. ಆದರೆ ಕಳೆದ ವರ್ಷದ ಲಾಕ್‌ಡೌನ್‌ಗೂ ಮುನ್ನ ಭಾರತದಲ್ಲಿ ಕೇವಲ 10,180 ಐಸೋಲೇಟೆಡ್‌ ಬೆಡ್‌ಗಳಿದ್ದವೆಂಬುವುದು ಉಲ್ಲೇಖನೀಯ.

ಐಸಿಯು ಬೆಡ್‌ ನಿರ್ಮಾಣ ವಿಚಾರವಾಗಿಯೂ ಇದೇ ವೇಗವನ್ನು ಕಾಪಾಡಿಕೊಳ್ಳಲಾಗಿದೆ. ಲಾಕ್‌ಡೌನ್‌ ಮುನ್ನ ಕೇವಲ 2,168 ಐಸಿಯು ಬೆಡ್‌ಗಳಿದ್ದ ಭಾರತದಲ್ಲಿ ಪ್ರಸ್ತುತ 92,000.ಐಸಿಯು ಬೆಡ್‌ಗಳಿವೆ. 

ಕೊರೋನಾ ಚಿಕಿತ್ಸೆಗೆಂದೇ ಆರಂಭಿಸಲಾದ 7 ರಾಜ್ಯಗಳ 17 ವಿವಿಧ ಭಾಗಗಳಲ್ಲಿ ನಿರ್ಮಿಸಲಾದ ರೈಲ್ವೇ ಕೋಚ್‌ನ ಐಸೋಲೇಷನ್ ಘಟಕಗಳೂ ಸದ್ಯ ಕಾರ್ಯ ನಿರ್ವಹಿಸುವ ಹಂತದಲ್ಲಿವೆ. 4,400 ಕೋವಿಡ್‌ ಕೋಚ್‌ಗಳನ್ನು ನಿರ್ಮಿಸಿರುವ ರೈಲ್ವೇ, ಒಟ್ಟು 70,000 ಐಸೋಲೇಷನ್ ಬೆಡ್‌ ವ್ಯವಸ್ಥೆ ಹೊಂದಿದೆ.

* ನಾಗರಿಕರಿಗೆ ಪ್ರೋತ್ಸಾಹ

ಗೋಧಿ ಮಾರಾಟ ಮಾಡಿರುವ ಪಂಜಾಬ್‌ನ ರೈತರ ಖಾತೆಗೆ ನೇರವಾಗಿ ಈಗಾಗಲೇ ಮೂರು ಬಿಲಿಯನ್ ಡಾಲರ್ ಮೊತ್ತವನ್ನು ಟ್ರಾನ್ಸ್‌ಫರ್‌ ಮಾಡಲಾಗಿದೆ. ಇದೇ ಮೊದಲ ಬಾರಿ ಪಂಜಾಬ್‌ನ  ರೈತರ ಖಾತೆಗೆ ನೇರವಾಗಿ ಹಣ ಹಾಕಲಾಗಿದೆ. 

ಆರಂಭದ ಹತ್ತು ದಿನಗಳೊಳಗೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ದೇಶದ ಹನ್ನೆರಡು ರಾಜ್ಯಗಳ ಸುಮಾರು 20 ಮಿಲಿಯನ್ ಫಲಾನುಭವಿಗಳಿಗೆ 100,000 ಮೆಟ್ರಿಕ್‌ ಟನ್‌ಗೂ ಅಧಿಕ ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ. ಮೊದಲ ಕೊರೋನಾ ಅಲೆ ಆರಂಭವಾದಾಗ ಘೋಷಿಸಲಾದ ಯೋಜನೆಯ ಮುಂದುವರೆದ ಭಾಗ ಇದಾಗಿದೆ. ಅಂದು ಈ ಯೋಜನೆಯಡಿ ಸುಮಾರು 80- ಮಿಲಿಯನ್ ಮಂದಿ ಲಾಭ ಪಡೆದಿದ್ದರು.

ಕೊರೋನಾ ಲಸಿಕೆ ಕೊರತೆ ನೀಗಿಸಲು ಸರ್ಕಾರದ ನೂತನ ಹೆಜ್ಜೆ: ಗಡ್ಕರಿ ಮೆಚ್ಚುಗೆ!

* ವಿದೇಶಗಳ ಸಹಾಯ ಹಸ್ತ

ಮೇ 11ರವರೆಗೆ ಭಾರತಕ್ಕೆ 8,900 ಆಕ್ಸಿಜನ್ ಕಾನ್ಸಂಟ್ರೇಟರ್ಸ್, 5,043 ಆಕ್ಸಿಜನ್ ಸಿಲಿಂಟರ್ಸ್, 18 ಆಕ್ಸಿಜನ್ ಉತ್ಪಾದನಾ ಘಟಕಗಳು, 5,698 ವೆಂಟಿಲೇಟರ್ಸ್ ಹಾಗೂ 3,40,000 ಕ್ಕೂ ಅಧಿಕ ರೆಮ್‌ಡೆಸಿವಿರ್ ವಿದೇಶಗಳಿಂದ ಬಂದಿದೆ. ಇದನ್ನೂ ಬೇಡಿಕೆಗೆ ತಕ್ಕಂತೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ರವಾನಿಸಲಾಗಿದೆ.

* ರಾಜ್ಯ ಹಾಗೂ ಸ್ಥಳೀಯ ಆಡಳಿತಕ್ಕೆ ಆರ್ಥಿಕ ನೆರವು

ಕೇಂದ್ರ ಸರ್ಕಾರ ಕೊರೋನಾ ಸಂಬಂಧ ಈಗಾಗಲೇ 25 ರಾಜ್ಯಗಳ  ಗ್ರಾಮ ಪಂಚಾಯತಿಗಳಿಗೆ 1.5 ಬಿಲಿಯನ್ ಡಾಲರ್‌ ಮೊತ್ತವನ್ನು ಬಿಡುಗಡೆ ಮಾಡಿದೆ. ಸಾಂಕ್ರಾಮಿಕ ತುರ್ತು ಪರಿಸ್ಥಿತಿ ಹಿನ್ನೆಲೆ ತ್ರೈಮಾಸಿಕದಲ್ಲಿ ಗರಿಷ್ಠ ದಿನಗಳ ಓವರ್‌ಡ್ರಾಫ್ಟ್‌ 36 ರಿಂದ 50 ದಿನಗಳಿಗೇರಿಸಲಾಗಿದೆ. 

ಇಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಎರಡು ಬಿಲಿಯನ್ ಡಾಲರ್‌ನಷ್ಟು ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ ಬಂಡವಾಳ ಯೋಜನೆಗಳಿಗೆ ಬಳಸುವ ನಿಟ್ಟಿನಲ್ಲಿ  ಬಡ್ಡಿರಹಿತವಾಗಿ ನೀಡಲು ನಿರ್ಧರಿಸಿದೆ. 

;* ಆರೋಗ್ಯ ತುರ್ತು ಪರಿಸ್ಥಿತಿ ಸೂಕ್ತವಾಗಿ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಹಣ ಮೀಸಲಿಟ್ಟಿದೆ.

ಕೊರೋನಾ: ಕೇಳಲೇಬೇಕಾದ ಪ್ರಶ್ನೆಗಳು; ಹೇಳಲೇಬೇಕಾದ ಉತ್ತರಗಳು!

* ಪಿಎಂ ಕೇರ್ಸ ಫಂಡ್‌ಗೆ ಬಂದ ಹಣ

ಪಿಎಂ ಕೇರ್ಸ್‌ ಫಂಡ್‌ ಹಣವನ್ನು ಸೂಕ್ತವಾಗಿ ಬಳಸಿರುವ ಸರ್ಕಾರ ಇದರಿಂದ 1,200 ಆಕ್ಸಿಜನ್ ಜನರೇಟಿಂಗ್ ಪ್ಲಾಂಟ್‌ಗಳನ್ನು ಮಂಜೂರುಗೊಳಿಸಿದೆ. ಈ ಮೂಲಕ ದೇಶದ ಎಲ್ಲ ರಾಜಗ್ಯಗಳ ಪ್ರತಿ ಜಿಲ್ಲೆಯಲ್ಲೂ ಒಂದು ಆಕ್ಸಿಜನ್ ಪ್ಲಾಂಟ್‌ ನಿರ್ಮಿಸುವ ಉದ್ದೇಶ ಸರ್ಕಾರದ್ದಾಗಿದೆ. ಜೊತೆಗೆ 150,000 ಲಕ್ಷ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನೂ ಖರೀದಿಸಲಾಗಿದೆ. 

ಇಷ್ಟೇ ಅಲ್ಲದೇ ಪಿಎಂ ಕೇರ್ಸ್ ನಿಧಿಯನ್ನು 50,000 ಸ್ವದೇಶೀ ವೆಂಟಿಲೇಟರ್‌ಗಳಿಗಾಗಿ ವಿನಿಯೋಗಿಸಲಾಗಿದೆ. 

ಈ ಫಂಡ್‌ನ ಸುಮಾರು 150 ಮಿಲಿಯನ್ ಡಾಲರ್ ಮೊತ್ತವನ್ನು ವಲಸೆ ಕಾರ್ಮಿಕರಿಗಾಗಿ ವಿನಿಯೋಗಿಸಲಾಗಿದೆ. 

ಅಲ್ಲದೇ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾದ 66 ಮಿಲಿಯನ್ ಡೋಸ್‌ ಲಸಿಕೆಗೆ ಈ ಪಿಎಂ ಕೇರ್ಸ್‌ ಫಂಡ್‌ ಹಣವನ್ನೇ ವಿನಿಯೋಗಿಸಲಾಗಿದೆ.

* ಮುಂಚೂಣಿಯಲ್ಲಿದ್ದುಕೊಂಡು ಕಾರ್ಯ ನಿರ್ವಹಣೆ: ಪರಿಸ್ಥಿತಿ ಪರಿಶೀಲನೆ

ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಕೊರೋನಾ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುತ್ತಿವೆ. ಯಾವೆಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿವೆ. ಸೌಲಭ್ಯಗಳ ಕೊರತೆ ಎದುರಾಗುತ್ತಿದೆಯೇ? ಕೇಂದ್ರ ಕಳುಹಿಸಿದ ಸೌಕರ್ಯಗಳನ್ನು ಬಳಸಿಕೊಳ್ಳುತ್ತಿದೆಯೇ? ಎಂಬುವುದನ್ನು ಖುದ್ದು ಪ್ರಧಾನಿ ಮೋದಿ ಸಿಎಂ ಹಾಗೂ ಡಿಸಿಗಳ ಸಭೆ ನಡೆಸಿ ಪರಿಶೀಲಿಸುತ್ತಿದ್ದಾರೆ. ಅಲ್ಲದೇ ಪರಿಸ್ಥಿತಿ ತೀರಾ ಹದಗೆಟ್ಟ ಕಡೆ ಯಾವ ರೀತಿ ಸೋಂಕು ನಿವಾರಿಸಬಹುದು ಎಂಬ ಬಗ್ಗೆಯೂ ಸಲಹೆ ನೀಡುತ್ತಿದ್ದಾರೆ. 

ಸೇನಾಧಿಕಾರಿಗಳ ಜೊತೆ ಮಾತನಾಡಿ ಔಷಧ ಪೂರೈಕೆ ಹೇಗಿದೆ ಎಂದು ವಿಚಾರಿಸಿದರೆ, ತಜ್ಞರ ಸಭೆ ನಡೆಸಿ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಹೀಗೆ ಪ್ರತಿ ದಿನ ತಾವೇ ಖುದ್ದು ಪರಿಸ್ಥಿತಿ ಪರಿಶೀಲಿಸಿ ಈ ಹೋರಾಟದಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಶ್ರಮಿಸುತ್ತಿದ್ದಾರೆ. ಭಾರತ ಅತೀ ಶೀಘ್ರದಲ್ಲೇ ಈ ಮಹಾಮಾರಿಯನ್ನು ಮಣಿಸಲಿದೆ. 

ಇನ್ನು ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರಶ್ನಾತೀತ ವೀರರಾದ ವೈದ್ಯಕೀಯ ವೃತ್ತಿಪರರು ಮತ್ತು ಮುಂಚೂಣಿ ಕಾರ್ಮಿಕರ ನಿಸ್ವಾರ್ಥ ಸೇವೆ ಅತೀ ಶೀಘ್ರದಲ್ಲೇ
ಫಲ ಕೊಡಲಿದೆ.

ಲೇಖಕರು: ಅಖಿಲೇಶ್ ಮಿಶ್ರಾ
ಸಿಇಒ, ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಹಾಗೂ MyGovನ ಮಾಜಿ ನಿರ್ದೇಶಕ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!