Asianet Suvarna News Asianet Suvarna News

ಕೊರೋನಾ: ಕೇಳಲೇಬೇಕಾದ ಪ್ರಶ್ನೆಗಳು; ಹೇಳಲೇಬೇಕಾದ ಉತ್ತರಗಳು!

* ಕೋವಿಡ್ ಎರಡನೇ ಅಲೆಯ ತಲ್ಲಣಗಳು

* ಸರಕಾರಕ್ಕೆ ನಿಜಕ್ಕೂ ಇದೊಂದು ಬೃಹತ್ ಸವಾಲಾ?

* ಅಥವಾ, ಸಂಪನ್ಮೂಲ ಬಳಕೆ ಮಾಡುವಲ್ಲಿ ವಿಫಲವಾಯಿತಾ'

* ಕೋವಿಡ್ ತಜ್ಞನಿಂದ ಪ್ರಶ್ನೆಗಳು ಮತ್ತು ಉತ್ತರಗಳು

Covid Second wave and India The Questions and Answers Akilesh Mishra pod
Author
Bangalore, First Published May 17, 2021, 2:39 PM IST

Author: Akhilesh Mishra, New Delhi

ಕೊರೋನಾ ಮಹಾಮಾರಿ ಇಡೀ ವಿಶ್ವವನ್ನೇ ಬಡಿದೆಚ್ಚರಿಸುವಂತೆ ಮಾಡಿದ ಮಹಾಮಾರಿ. ಮೊದಲನೇ ಅಲೆಯಿಂದ ಹಾಗೋ ಹೀಗೋ ಪಾರಾದೆವು ಎನ್ನುವಷ್ಟರಲ್ಲಿ ಮತ್ತೆ ಯಮನಂತೆ ಬಂದ ಎರಡನೇ ಅಲೆ ಭಾರತಕ್ಕೆ ದುಃಸ್ವಪ್ನವಾಗಿ ಕಾಡಿದೆ. ಹೀಗಿರುವಾಗ ಇಂತಹ ಪರಿಸ್ಥಿತಿಯನ್ನು ಸರ್ಕಾರ ಹೇಗೆ ಎದುರಿಸಿತು ಎಂಬಿತ್ಯಾದಿ ಪ್ರಶ್ನೆಗಳು ಎದ್ದಿವೆ. ಈ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರ ಈ ವೈರಸ್‌ ನಿಯಂತ್ರಣಕ್ಕೆ ಬೇಕಾದ ತನ್ನಿಂದ ಸಾಧ್ಯವಾದ ಎಲ್ಲಾ ಸಂಪನ್ಮೂಲಗಳನ್ನು ರಾಜ್ಯಗಳಿಗೆ ವಿತರಿಸಿದೆ. ಅಲ್ಲದೇ ವಿದೇಶಗಳ ಸಹಾಯವನ್ನೂ ಪಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಸದ್ದು ಮಾಡಿದ ಕೆಲ ವಿವಾದಗಳ ಬಗ್ಗೆ ಒಂದು ನೋಟ

ಎರಡನೇ ಅಲೆ ಬರುವುದನ್ನು ಅಂದಾಜಿಸುವಲ್ಲಿ ಭಾರತ ಎಡವಿತೇ?

2021ರ ಜನವರಿ 1 ರಿಂದ ಮಾರ್ಚ್ 10ರವರೆಗೆ ಭಾರತದಲ್ಲಿ ನಿತ್ಯ ಸರಾಸರಿ 20,000ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದವು.  ಅಲ್ಲದೇ ಕೆಲ ಸಮಯ ಇದು ಮತ್ತಷ್ಟು ಕುಸಿತ ಕಂಡು ನಿತ್ಯ ಸುಮಾರು 10,000 ಪ್ರಕರಣಗಳು ದಾಖಲಾಗಿದ್ದೂ ಇದೆ. ವಿಶ್ವದ ಬಹುತೇಕ ಇತರ ರಾಷ್ಟ್ರಗಳು 2020ರ ಅಕ್ಟೋಬರ್‌ನಿಂದ ಡಿಸೆಂಬರ್‌ ಒಳಗೆ ಎರಡನೇ ಅಲೆಯನ್ನು ಎದುರಿಸಿದ್ದರೆ, ಇತ್ತ ಭಾರತ ಮೊದಲನೇ ಅಲೆ ಇಳಿಕೆಯಾದ ಬಳಿಕ ಈ ಮಹಾಮಾರಿ ಬಲೆಯಿಂದ ತಪ್ಪಿಸಿಕೊಂಡಂತೆ ಕಂಡು ಬಂದಿತ್ತು, ಎರಡನೇ ಅಲೆ ಬರಬಹುದೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಇಷ್ಟೇ ಅಲ್ಲದೇ ಬಹುತೇಕ ತಜ್ಞರು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಎರಡನೇ ಅಲೆ ಯಾಕೆ ಬರುವುದಿಲ್ಲ ಎಂಬುವುದಕ್ಕೆ ಉತ್ತರಿಸುವುದರೊಂದಿಗೆ, ಮಾಸ್ಕ್ ಕಡ್ಡಾಯಗೊಳಿಸುವುದು ಬೇಡ, ಶಾಲೆ, ಕಾಲೇಜುಗಳ ಪುನಾರಂಭ ಸೇರಿ ಜಾರಿಯಲ್ಲಿದ್ದ ಎಲ್ಲಾ ನಿಯಮಗಳನ್ನು ತೆರವುಗೊಳಿಸುವಂತೆ ಶಿಫಾರಸು ಮಾಡಿದ್ದರು. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಇಂತಹ ವರದಿಗಳು ಸದ್ದು ಮಾಡಿದ್ದವು. 

ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಈ ವರದಿಗಳಿಂದ ಸಂಭ್ರಮ ಪಡಲಿಲ್ಲ. ಬದಲಾಗಿ ಜನವರಿ ಹಾಗೂ ಫೆಬ್ರವರಿ ತಿಂಗಳ ಮಧ್ಯೆ, ನಿತ್ಯ ವರದಿಯಾಗುತ್ತಿದ್ದ ಪ್ರಕರಣಗಳು ತೀರಾ ಕಡಿಮೆ ಇದ್ದರೂ ಕೇಂದ್ರ ಸರ್ಕಾರ 17 ಸಲಹೆಗಾರರನ್ನು ನೇಮಿಸಿತು. ಈ ಮೂಲಕ ಈ ರಾಜ್ಯ ಸರ್ಕಾರಗಳಿಗೆ ಜಾರಿಯಲ್ಲಿದ್ದ ನಿಯಮಗಳನ್ನು ತೆರವುಗೊಳಿಸದೇ, ಕೊರೋನಾ ವೈರಸ್‌ ಟೆಸ್ಟಿಂಗ್‌ ಈ ಹಿಂದಿನಂತೆಯೇ ಮುಂದುವರೆಸಲು ಸೂಚಿಸಿತು. ಇಷ್ಟೇ ಅಲ್ಲದೇ ಆರೋಗ್ಯ ಸೌಲಭ್ಯಗಳ ಉತ್ಪಾದನೆ ಹೆಚ್ಚಿಸಿ ಎಲ್ಲಾ ರೀತಿಯ ಸಮಸ್ಯೆ ಎದುರಿಸಲು ಸಜ್ಜಾಗುವಂತೆ ಎಚ್ಚರಿಸಿತು. ಇನ್ನು ಮಾರ್ಚ್ 17, ಕೊರೋನಾ ಪ್ರಕರಣಗಳು ಕೇವಲ 20,000 ಸರಾಸರಿಯಲ್ಲಿದ್ದಾಗ ಖುದ್ದು ಪ್ರಧಾನಿ ಮೋದಿ, ಮುಖ್ಯಮಂತ್ರಿಗಳ ಸಭೆ ಕರೆದು ಎಚ್ಚರ ತಪ್ಪದಂತೆ ಸೂಚಿಸಿದ್ದರು. ಅಲ್ಲದೇ ಮಾಸ್ಕ್, ಸಾಮಾಜಿಕ ಅಂತರ ತಪ್ಪದೇ ಪರಿಪಾಲಿಸುವಂತೆಯೂ ಆದೇಶಿಸಿದ್ದರು. ಈ ವಿಚಾರವಾಗಿ ಆರೋಗ್ಯಾಧಿಕಾರಿಗಳನ್ನು ಎಚ್ಚರಿಸಿ ಎಲ್ಲಾ ರೀತಿಯ ಮಾರ್ಗಸೂಚಿಯನ್ನು ಅನುಸರಿಸಲು ಸೂಚಿಸಿದ್ದರು. ಏಪ್ರಿಲ್‌ ತಿಂಗಳಲ್ಲೂ ಪಿಎಂ ಮೋದಿ ಇದೇ ರೀತಿಯ ಸಭೆ ಕರೆಸಿದ್ದರು.

Covid Second wave and India The Questions and Answers Akilesh Mishra pod

ಆದರೆ ಏನಾಯ್ತು? ಬಹುತೇಕ ರಾಜ್ಯಗಳಲ್ಲಿ ರಾಜ್ಯಾಡಳಿತ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದರಲ್ಲೂ ವಿಶೇಷವಾಗಿ ಎರಡನೇ ಅಲೆ ಹುಟ್ಟಿಕೊಂಡ ಹಾಗೂ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ದೆಹಲಿ, ಛತ್ತೀಸ್‌ಗಢ, ಪಂಜಾಬ್‌ ಹಾಗೂ ಕರ್ನಾಟಕದಲ್ಲಿ ಇಂತಹ ನಿರ್ಲಕ್ಷ್ಯ ಅತಿಯಾಗಿ ಕಂಡು ಬಂದಿತ್ತು. ಆದರೆ ಎಡವಿದ್ದೇವೆಂದು ಅರಿತು ಮತ್ತೆ ನಿಯಮಗಳನ್ನು ಹೇರುವಷ್ಟರಲ್ಲಿ ಕೊರೋನಾ ಎರಡನೇ ಅಲೆ ಈ ರಾಜ್ಯಗಳಲ್ಲಿ ತನ್ನ ರುದ್ರ ನರ್ತನ ಆರಂಭಿಸಿತ್ತು. 

ಹಾಗಾದ್ರೆ ಕೊರೋನಾ ಹಾವಳಿ ಮಧ್ಯೆಯೂ ಚುನಾವಣೆ ನಡೆಸಿದ್ದೇಕೆ?

ಆರು ತಿಂಗಳಿಗೊಮ್ಮೆ ಸಭೆ ಸೇರಲು ಕಡ್ಡಾಯವಾಗಿರುವುದರಿಂದ ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವುದು ಸಾಂವಿಧಾನಿಕ ಅವಶ್ಯಕತೆಯಾಗಿದೆ. ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಹಾಗೂ ಪುದುಚೇರಿ ಈ ಪಂಚರಾಜ್ಯಗಳ ವಿಧಾನಸಭೆಯನ್ನು ಮುಂದುವರೆಸಲು ಸಂವಿಧಾನ ತಿದ್ದುಪಡಿಗೊಳಿಸವುದು ಅಥವಾ ಕೇಂದ್ರದ ಆಡಳಿತ ಹೇರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗುತ್ತಿತ್ತು. ವಿಶ್ವಾದ್ಯಂತ ಕೊರೋನಾ ಹಾವಳಿ ನಡುವೆ ಚುನಾವಣೆಗಳು ನಡೆದಿದ್ದವು. ಭಾರತದಲ್ಲೂ 2020ರ ನವೆಂಬರ್‌ನಲ್ಲಿ ಹೆಚ್ಚಿನ ಆಡಂಬರವಿಲ್ಲದೇ ಬಿಹಾರ ವಿಧಾನಸಭಾ ಚುನಾವಣೆಗಳೂ ನಡೆದಿದ್ದವು.

ಹೀಗಿರುವಾಗ ಬೃಹತ್ ಚುನಾವಣಾ ಸಮಾವೇಶಗಳನ್ನು ತಡೆಯಬಹುದಿತ್ತಾ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಬಿಹಾರ ಚುನಾವಣೆಗೂ ಮೊದಲೇ ಭಾರತೀಯ ಜನತಾ ಪಕ್ಷವೂ ಚುನಾವಣಾ ಆಯೋಗಕ್ಕೆ, ಭೌತಿಕ ಸಮಾವೇಶಗಳನ್ನು ಆಯೋಜಿಸದೆ, ಕೇವಲ ವರ್ಚುವಲ್ ಕ್ಯಾಂಪೇನ್‌ಗನ್ನು ಆಯೋಜಿಸುವಂತೆ ಮನವಿ ಮಾಡಿತ್ತು. ಆದರೆ ಬಿಜೆಪಿಯ ಈ ಮನವಿಯನ್ನು ಉಳಿದೆಲ್ಲಾ ಪಕ್ಷಗಳು ನೇರವಾಗಿ ವಿರೋಧಿಸಿದ್ದವು. ಬಿಜೆಪಿ ಈಆಗಲೇ ಇಂತಹ ಸಭೆಗಳಲ್ಲಿ ನೈಪುಣ್ಯತೆ ಸಾಧಿಸಿದ್ದು, ಎಲ್ಲಾ ರೀತಿಯ ತಯಾರಿ ನಡೆಸಿದೆ, ಇದು ಅವರಿಗೆ ಲಾಭದಾಯಕವಾಗಲಿದೆ. ಯಾವುದೇ ರೀತಿಯ ಪೈಪೋಟಿ ಇರುವುದಿಲ್ಲ ಎಂದು ವಾದಿಸಿದ್ದವು. ಇಂತಹ ಪರಿಸ್ಥಿತಿಯಲ್ಲಿ ಆಯೋಗವೂ ಇತರ ಪಕ್ಷಗಳ ಈ ಮನವಿಯನ್ನು ತಳ್ಳಿ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಚುನಾವಣೆಗಳು ಎಂದಿನಂತೆ ನಡೆದವು.

Covid Second wave and India The Questions and Answers Akilesh Mishra pod

ಇನ್ನು ಸೆಪ್ಟೆಂಬರ್‌ನಲ್ಲಿ ಬಿಹಾರ ಚುನಾವಣೆಗಳು ನಡೆದಾಗ ದೇಶದಲ್ಲಿ ಮೊದಲ ಕೊರೋನಾ ಅಲೆ ಉತ್ತುಂಗದಲ್ಲಿದ್ದು, ಪ್ರತಿನಿತ್ಯ ಸರಾಸರಿ 90000 ಪ್ರಕರಣಗಳು ದಾಖಲಾಗುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲೂ ಬಿಜೆಪಿ ಹೊರತುಪಡಿಸಿ ಉಳೆದೆಲ್ಲ ಪಕ್ಷಗಳು ಭೌತಿಕ ಸಮಾವೇಶಗಳಿಗೆ ಒತ್ತು ನೀಡಿದವು. ಇನ್ನು ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಗಳು ಘೋಷಣೆಯಾಗಿದ್ದು ಫೆಬ್ರವರಿಯಲ್ಲಿ, ಈ ವೇಳೆ ನಿತ್ಯವೂ ಸರಾಸರಿ 10,000 ಪ್ರಕರಣgಳು ದಾಖಲಾಗುತ್ತಿದ್ದವು. ಹೀಗಿರುವಾಗ ಎಲ್ಲಾ ಪಕ್ಷಗಳು ಭೌತಿಕ ಸಮಾವೇಶಗಳನ್ನು ನಡೆಸಿದವು. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತಮಿಳುನಾಡು ಹಾಗೂ ಕೇರಳದಲ್ಲಿ ಬೃಹತ್ ರೋಡ್‌ ಶೋಗಳನ್ನೂ ಆಯೋಜಿಸಿದರು. ಅತ್ತ ಪ್ರಿಯಾಂಕಾ ಗಾಂಧಿ ಕೂಡಾ ಅಸ್ಸಾಂನಲ್ಲಿ ಬಿರುಸಿನ ಪ್ರಚಾರ ನಡೆಸಿದರು,. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯೂ ಚುನಾವಣಾ ಕಣಕ್ಕಿಳಿದಿದ್ದರು. ಬಿಜೆಪಿಯೂ ತಾನು ಸ್ಪರ್ಧಿಸುತ್ತಿದ್ದ ಕಡೆ ಸಮಾವೇಶಗಳನ್ನು ಆಯೋಜಿಸಿತು. 

ಆದರೆ ಗಮನಿಸಬೇಕಾದ ವಿಚಾರವೆಂದರೆ ಮಹಾರಾಷ್ಟ್ರ, ಛತ್ತೀಸ್‌ಗಢ, ದೆಹಲಿ, ಪಂಜಾಬ್‌ನಲ್ಲಿ ಯಾವುದೇ ಚುನಾವಣೆಗಳು ನಡೆದಿರಲಿಲ್ಲ. ಹೀಗಿದ್ದರೂ ಮಾರ್ಚ್‌ ಅಂತ್ಯದಲ್ಲಿ ಈ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಯಾಗಲಾರಂಭಿಸಿತು. ಹೀಗಾಗಿ ಚುನಾವಣಾ ಸಮಾವೇಶಗಳು ಕೊರೋನಾ ಎರಡನೇ ಅಲೆಗೆ ಕಾರಣವಾಯ್ತು ಎನ್ನಲು ಸಾಧ್ಯವಿಲ್ಲ.

ಹರಿದ್ವಾರದ ಕುಂಭಮೇಳದ ಕತೆ ಏನು?

ಕುಂಭ ಮೇಳ ಭಾರತದಲ್ಲಿ ನಡೆಯುವ ಪವಿತ್ರ ಧಾರ್ಮಿಕ ಆಚರಣೆಗಳಲ್ಲೊಂದು. ಇದು ನಡೆಯುವ ಸಮಯ ಹಾಗೂ ಸಮಯ ಸಂತರಿಂದ ನಿಗದಿಯಾಗುತ್ತದೆಯೇ ವಿನಃ ಸರ್ಕಾರದಿಂದಲ್ಲ. ಜನವರಿ ಹಾಗೂ ಫೆಬ್ರವರಿಯಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾಗುತ್ತಿದ್ದಂತೆಯೇ ಇದರ ಆಯೋಜನೆಗಾಗಿ ದಿನಾಂಕ ಹಾಗೂ ಸಮಯಕ್ಕೆ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಲಾಯ್ತು. ಈ ವೇಳೆ ಪ್ರವೇಶ, ಟೆಸ್ಟಿಂಗ್, ಕ್ವಾರಂಟೈನ್ ಸೇರಿ ಇತರ ವೈದ್ಯಕೀಯ ಮಾರ್ಗಸೂಚಿಯನ್ನು ಅತ್ಯಂತ ಕಠಿಣವಾಗಿ ಹೇರಲಾಯ್ತು. ಇನ್ನು ಏಪ್ರಿಲ್ 1ರಂದು ಕುಂಭಮೇಳ ಆರಂಭವಾದಾಗ ಭಾರತದಲ್ಲಿ ನಿತ್ಯವೂ 72,000 ಪ್ರಕರಣಗಳು ದಾಖಲಾಗುತ್ತಿದ್ದವು. ಮಹಾರಾಷ್ಟ್ರ, ಛತ್ತೀಸ್‌ಗಢ, ಕೇರಳ, ಕರ್ನಾಟಕ, ದೆಹಲಿ ಹಾಗೂ ಪಂಜಾಬ್ ಕೇವಲ ಈ ರಾಜ್ಯಗಳಲ್ಲೇ ಶೇ. 76ರಷ್ಟು ಪ್ರಕರಣಗಳು ವರದಿಯಾಗುತ್ತಿದ್ದವು.

ಕೊರೋನಾ ಮಧ್ಯೆ ನಡೆದ ಕುಂಭಮೇಳ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಮನಿಸಬೇಕಾದ ವಿಚಾರವೆಂದರೆ ಈ ರಾಜ್ಯಗಳಿಗೂ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ. ಇನ್ನು ಕುಂಭಮೇಳ ನಡೆಯುತ್ತಿದ್ದ ಉತ್ತರಾಖಂಡದಲ್ಲಿ ಏಪ್ರಿಲ್ 1ರಂದು ದಾಖಲಾಗಿದ್ದು, ಕೇವಲ 293 ಪ್ರಕರಣಗಳು ದಾಖಲಾಗಿದ್ದವು. ಇನ್ನು ಏಪ್ರಿಲ್ 8ರಂದು ಇಲ್ಲಿ ವರದಿಯಾಗಿದ್ದು, 1,100 ಪ್ರಕರಣಗಳು. ಆದರೆ ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ F ಈ ಕುಂಭಮೇಳವನ್ನು ನಿಗದಿತ ಸಮಯಕ್ಕಿಂತ ಮೊದಲೇ ಕೊನೆಗೊಳಿಸುವಂತೆ ಸಂತರ ಬಳಿ ಮನವಿ ಮಾಡಿದವರು. 

ಭಾರತದಲ್ಲಿ ಆರಂಭವಾದ ಲಸಿಕೆ ಅಭಿಯಾನ ಸರಿಯಾಗಿತ್ತೇ?

ಕೊರೋನಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಎರಡು ದೇಶೀ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಭಾರತ ಸರ್ಕಾರ ಅನುಮತಿ ನೀಡಿದೆ. ಇದರಲ್ಲಿ ಕೋವ್ಯಾಕ್ಸಿನ್ ಲಸಿಕೆ ಸಂಪೂರ್ಣ ಸ್ಥಳೀಯವಾಗಿದೆ. ಪಿಎಂ ಮೋದಿ ಅನುಮೋದಿಸಿದ ವಿಶೇಷ ಕಾರ್ಯಕ್ರಮದಡಿ ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್‌ ಸಹಭಾಗಿತ್ವಲ್ಲಿ ಈ ಲಸಿಕೆ ಉತ್ಪಾದನೆಗೆ ಅನುಮತಿ ನೀಡಲಾಯ್ತು. ಹೀಗಿದ್ದರೂ ಈ ಲಸಿಕೆ ವಿರುದ್ಧ ಕಾಂಗ್ರೆಸ್‌ ನಾಯಕರು ಅಭಿಯಾನ ಆರಂಭಿಸಿದರು. ಈ ಎಲ್ಲಾ ಅಡೆ ತಡೆಗಳನ್ನೂ ಮೀರಿ ಭಾರತ ಸರ್ಕಾರ 2021ರ ಜನವರಿ 16ರಂದು ಅಧಿಕೃತವಾಗಿ ಲಸಿಕೆ ಅಭಿಯಾನ ಆರಂಭಿಸಿತು. ವೈದ್ಯಕೀಯ ಸಲಹೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನ ಮೇರೆಗೆ ಈ ಲಸಿಕೆ ತಯಾರಿಸಲಾಗಿದೆ. 

Covid Second wave and India The Questions and Answers Akilesh Mishra pod

ಇನ್ನುಳಿದಂತೆ ಅಮೆರಿಕ, ಬ್ರಿಟನ್ ಹಾಗೂ ಯೂರೋಪ್‌ ಹಾಗೂ ರಷ್ಯಾದಲ್ಲಿ ಅನುಮತಿ ಪಡೆದ ಸ್ಪುಟ್ನಿಕ್ ಲಸಿಕೆಗೂ ಭಾರತ ಸರ್ಕಾರ ಅನುಮತಿ ನೀಡಿದ್ದು, ಇನ್ನು ಕೆಲ ದಿನಗಳಲ್ಲೇ ಭಾರತಕ್ಕೆ ತಲುಪಲಿದೆ. ಡಿಸೆಂಬರ್ 2021ರೊಳಗೆ ಸುಮಾರು 2.16 ಬಿಲಿಯನ್ ಡೋಸ್‌ ಲಸಿಕೆ ಭಾರತ ತಲುಪಲಿದೆ. 

ವಿದೇಶಕ್ಕೆ ಲಸಿಕೆ ರಫ್ತು?

ಇವೆಲ್ಲದರ ನಡುವೆ ಭಾರತ ತನ್ನ ದೇಶದ ಜನತೆಗೆ ಲಸಿಕೆ ನೀಡುವ ಅಭಿಯಾನ ಸಂಪೂರ್ಣಗೊಳ್ಳುವ ಮೊದಲೇ ವಿದೇಶಕ್ಕೆ ಯಾಕೆ ರಫ್ತು ಮಾಡಿತು ಎಂದೂ ಕೇಳಲಾಯ್ತು. 2021 ರ ಮೇ 11ರೊಳಗೆ ಭಾರತ ಸುಮಾರು 66.3698 ಮಿಲಿಯನ್ ಡೋಸ್‌ ಲಸಿಕೆಯನ್ನು  ವಿದೇಶಗಳಿಗೆ ರಫ್ತು ಮಾಡಿತ್ತು. ಆದರೆ ಈ ಸಮಯದಲ್ಲಿ ಭಾರತದಲ್ಲೂ ಇದರ ಮೂರು ಪಟ್ಟು ಲಸಿಕೆಯನ್ನು ನೀಡುವ ಕಾರ್ಯ ಪೂರ್ಣಗೊಂಡಿತ್ತು. 

ಭಾರತದಲ್ಲಿ ಲಸಿಕೆ ಅಭಿಯಾನ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ನಡುವೆ ಲಸಿಕೆ ತಯಾರಿಕೆ ಕಂಪನಿಗಳಿಗೂ ಇತರ ದೇಶಗಳಿಂದಿಗೆ ತಮ್ಮದೇ ಆದ ಒಪ್ಪಂದಗಳಿದ್ದವು. ವಿಶೇಷವಾಗಿ ತಾವು ಕಚ್ಛಾವಸ್ತುಗಳನ್ನು ಪಡೆದ ರಾಷ್ಟ್ರಗಳಿಗೆ ಇವು ಲಸಿಕೆ ಪೂರೈಸಬೇಕಿತ್ತು. ಇದರೊಂದಿಗೆ ಭಾರತವೂ ಇಂತಹ ವಿಷಮ ಪರಿಸ್ಥಿತಿಯಲ್ಲಿ ತನ್ನ ಮೂಲ ಗುಣವಾದ ಮಾನವೀಯತೆಯನ್ನು ತೋರಬೇಕಿತ್ತು. ಇದಕ್ಕೆ ತಕ್ಕಂತೆ ಇತ್ತೀಚೆಗಷ್ಟೇ ಅಮೆರಿಕ ಹಾಗೂ ಫ್ರಾನ್ಸ್ ಅಧ್ಯಕ್ಷರೂ ತಮ್ಮ ಮಾತಿನಲ್ಲಿ ಇಡೀ ಜಗತ್ತು ಸಂಕಷ್ಟದಲ್ಲಿದ್ದಾಗ ಭಾರತ ಔಷಧ ಪೂರೈಕೆ ಮಾಡಿ ಸಹಾಯ ಮಾಡಿತ್ತು. ಆದರೀಗ ಭಾರತಕ್ಕೆ ಸಹಾಯದ ಅಗತ್ಯವಿದ್ದಾಗ ನಾವು ಈ ಸಹಾಯ ಮಾಡಿ ಅವರ ಋಣ ತೀರಿಸುತ್ತಿದ್ದೇವೆ ಎಂದಿದ್ದರು.

ಹಾಗಾದ್ರೆ ಕೊರೋನಾ ನರ್ತನ ನಡುವೆ ಸೆಂಟ್ರಲ್ ವಿಸ್ತಾ ಯೋಜನೆ ಏಕೆ?

ತೀವ್ರ ಹಣದುಬ್ಬರದ ನಡುವೆಯೂ ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್‌ವೆಲ್ಟ್ ಬಳಿ ವಾಷಿಂಗ್ಟನ್ ಡಿಸಿ ಸೇರಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಯಾಕೆ ಹಣ ವಿನಿಯೋಗಿಸುತ್ತಿದ್ದೀರಿ? ಇದನ್ನು ಬೇರೆ ಯೋಜನೆಗಳಿಗೆ ಖರ್ಚು ಮಾಡಬಹುದಲ್ಲವೇ ಎಂಬ ಪ್ರಶ್ನೆ ಕೇಳಲಾಗಿತ್ತು. ಅಂದು ಅವರು ಬಹಳ ಅದ್ಭುತವಾಗಿ ಉತ್ತರಿಸಿದ್ದರು. ಮೂಲಸೌಕರ್ಯ ಹೂಡಿಕೆಯು ಆರ್ಥಿಕ ಚೇತರಿಕೆಯ ಒಂದು ಉತ್ತಮ ಚಕ್ರವನ್ನು ಹುಟ್ಟುಹಾಕುತ್ತದೆ ಎಂದಿದ್ದ ಅವರ ಮಾತು ಬಹಳ ಇಂದಿಗೂ ಅನ್ವಯಿಸುತ್ತದೆ. ಈ ಯೋಜನೆ ಅನೇಕರಿಗೆ ಉದ್ಯೋಗ ಕಲ್ಪಿಸಲಿದೆ. ಒಂದು ವರ್ಷದ ಲಾಕ್‌ಡೌನ್ ಹಾಗೂ ಆರ್ಥಿಕ ನಷ್ಟದಿಂದ ಚೇತರಿಸಿಕೊಳ್ಳಲು ಸೂಕ್ತ ವಿಚಾರದಲ್ಲಿ ಸರ್ಕಾರ ಹೂಡಿಕೆ ಮಾಡುತ್ತಿದೆ. ಇದೆಲ್ಲವನ್ನೂ ಹೊರತುಪಡಿಸಿ ಸೆಂಟ್ರಲ್ ವಿಸ್ತಾ ಯೋಜನೆ ಈ ಮೊದಲೇ ಅನುಮೋದನೆ ಪಡೆದ ಯೋಜನೆಯಾಗಿದ್ದು, ಇಬನ್ನು ನಿಲ್ಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಆರ್ಥಿಕ ನಷ್ಟಕ್ಕೆ ಮತ್ತಷ್ಟು ಕೊಡುಗೆಯಾಗಲಿದೆ.

ಮುಂದೇನು?

ಭಾರತ ಕೊರೋನಾ ಎರಡನೇ ಅಲೆಯನ್ನು ಬಹಳ ಧೈರ್ಯದಿಂದ ಎದುರಿಸುತ್ತಿದೆ. ಕಳೆದ ಏಳು ದಿನಗಳಲ್ಲಿ ದಾಖಲಾದ ಸಕ್ರಿಯ ಪ್ರಕರಣಗಳು ಕೊರೋನಾ ಹಾವಳಿ ಕಡಿಮೆಯಾಗಿರುವುದನ್ನು ತೋರಿಸುತ್ತಿದೆ. ಉತ್ತರ ಪ್ರದೇಶ, ಕರ್ನಾಟಕದಂತಹ ರಾಜ್ಯಗಲ್ಲಿ ಕಠಿಣ ಮಾರ್ಗಸೂಚಿ ಜಾರಿಗೊಳಿಸಿ, ವೈದ್ಯಕೀ ಸೌಲಭ್ಯಗಳು ಕೊರತೆ ನೀಗಿಸಿದ್ದು, ಭಾರತ ಅತೀ ಶೀಘ್ರದಲ್ಲೇ ಈ ಮಹಾಮಾರಿಯನ್ನು ಮಣಿಸಲಿದೆ. ಈ ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರಶ್ನಾತೀತ ವೀರರಾದ ವೈದ್ಯಕೀಯ ವೃತ್ತಿಪರರು ಮತ್ತು ಮುಂಚೂಣಿ ಕಾರ್ಮಿಕರ ನಿಸ್ವಾರ್ಥ ಸೇವೆ ಅತೀ ಶೀಘ್ರದಲ್ಲೇ ಫಲ ಕೊಡಲಿದೆ. 

ಲೇಖಕರು| ಅಖಿಲೇಶ್ ಮಿಶ್ರಾ: ಸಿಇಒ, ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಹಾಗೂ MyGovನ ಮಾಜಿ  ನಿರ್ದೇಶಕ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios