ಬೆಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಿದ್ದ ಡಿಜಿಸಿಎ, 140 ಪ್ರಯಾಣಿಕರಿದ್ದ ವಿಮಾನ ಸೇಫ್‌ ಆಗಿ ಸಾಮಾನ್ಯ ಲ್ಯಾಂಡಿಂಗ್‌!

By Santosh NaikFirst Published Oct 11, 2024, 8:27 PM IST
Highlights

ಹೈಡ್ರಾಲಿಕ್ ಸಮಸ್ಯೆಯಿಂದಾಗಿ ಶಾರ್ಜಾಕ್ಕೆ ತೆರಳುವ ಏರ್ ಇಂಡಿಯಾ ವಿಮಾನ AXB613 ತಿರುಚ್ಚಿಯಲ್ಲಿ ಸಾಮಾನ್ಯವಾಗಿ ಲ್ಯಾಂಡ್‌ ಆಗಿದೆ. 140 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಇದಕ್ಕೂ ಮುನ್ನ ಡಿಜಿಸಿಎ ಬೆಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಿತ್ತು.

ತಿರುಚಿರಾಪಳ್ಳಿ (ಅ.11): ಹೈಡ್ರಾಲಿಕ್ ಸಮಸ್ಯೆಯಿಂದಾಗಿ ಶಾರ್ಜಾಕ್ಕೆ ತೆರಳುವ ಏರ್ ಇಂಡಿಯಾ ವಿಮಾನ AXB613 ತಮಿಳುನಾಡಿನ ತಿರುಚ್ಚಿಯ ವಾಯಪ್ರದೇಶದ ಮೇಲೆ ಕಳೆದ ಎರಡು ಗಂಟೆಗಳಿಂದ ಹಾರಾಟ ನಡೆಸುತ್ತಿದ್ದು, 140 ಪ್ರಯಾಣಿಕರು ಈ ವಿಮಾನದಲ್ಲಿದ್ದರು. ತಿರುಚ್ಚಿ ವಿಮಾನ ನಿಲ್ದಾಣದಲ್ಲಿಯೇ ವಿಮಾನವನ್ನು ಲ್ಯಾಂಡ್‌ ಮಾಡುವಂತೆ ಪೈಲಟ್‌ಗೆ ಸೂಚನೆ ನೀಡಲಾಗಿತ್ತು. ವಿಮಾನದಲ್ಲಿರುವ ಹೆಚ್ಚುವರಿ ಇಂಧನವನ್ನು ಸುಡುವ ನಿಟ್ಟಿನಲ್ಲಿ ಹೋಲ್ಡಿಂಗ್‌ ಮಾದರಿಯಲ್ಲಿ ತಿರುಚ್ಚಿಯ ವಾಯುಪ್ರದೇಶದಲ್ಲಿ ಹಾರಾಟ ಮಾಡುವಂತೆ ತಿಳಿಸಲಾಗಿತ್ತು. ರಾತ್ರಿ 7.45ರ ವೇಳೆಗೆ ವಿಮಾನ ನಿಲ್ದಾಣ ಸುರಕ್ಷಿತವಾಗಿ ಸಾಮಾನ್ಯವಾಗಿ ಲ್ಯಾಂಡಿಂಗ್‌ ಆಗಿದ್ದು, ಎಲ್ಲಾ ಪ್ರಯಾಣಿಕರು ಸೇಫ್‌ ಆಗಿದ್ದಾರೆ. 140 ಪ್ರಯಾಣಿಕರಿದ್ದ ವಿಮಾನವು ತಿರುಚ್ಚಿ ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ಸಂಜೆ 5.43 ಕ್ಕೆ ಹೊರಟಿತ್ತು. ವಿಮಾನ ಮೇಲೇರುತ್ತಲೇ ತಾಂತ್ರಿಕ ಅಡಚಣೆ ಉಂಟಾಗಿತ್ತು. ಇದಕ್ಕೂ ಮುನ್ನ ವಿಮಾನ ಬೆಲ್ಲಿ ಲ್ಯಾಂಡಿಂಗ್‌ ಆಗಲಿದೆ ಎಂದು ಹೇಳಲಾಗಿತ್ತು. 

ಬೆಲ್ಲಿ ಲ್ಯಾಂಡಿಂಗ್ ಎಂದರೇನು?: ಬೆಲ್ಲಿ ಲ್ಯಾಂಡಿಂಗ್ ಎನ್ನುವುದು ತುರ್ತು ಲ್ಯಾಂಡಿಂಗ್ ಆಗಿದ್ದು, ವಿಮಾನವು ತನ್ನ ಲ್ಯಾಂಡಿಂಗ್ ಗೇರ್ ಅನ್ನು ಬಳಸದೆಯೇ ನೆಲಕ್ಕೆ ಲ್ಯಾಂಡ್‌ ಆಗಲಿದೆ. ಆದರೆ, ಎಂದಿನಂತೆ ವಿಮಾನ ಇಳಿಯೋದಿಲ್ಲ. ಇಲ್ಲಿ ವಿಮಾನದ ಸೊಂಟದ ಭಾಗ ಅಥವಾ ಹಿಂಬಂದಿಯ ಭಾಗ ಮೊದಲಿಗೆ ಇಳಿಯುತ್ತದೆ. ಲ್ಯಾಂಡಿಂಗ್ ಗೇರ್ ವ್ಯವಸ್ಥೆಯಲ್ಲಿ ಅಸಮರ್ಪಕ ಅಥವಾ ವೈಫಲ್ಯ ಉಂಟಾದಾಗ ಈ ಪರಿಸ್ಥಿತಿಯು ಸಾಮಾನ್ಯವಾಗಿ ಉದ್ಭವಿಸುತ್ತದೆ, ಅದು ಸರಿಯಾಗಿ ನಿಯೋಜಿಸುವುದನ್ನು ತಡೆಯುತ್ತದೆ.

Latest Videos

ಬೆಲ್ಲಿ ಲ್ಯಾಂಡಿಂಗ್ ಸಮಯದಲ್ಲಿ, ಪೈಲಟ್‌ಗಳು ಸಾಮಾನ್ಯವಾಗಿ ನಿರ್ದಿಷ್ಟ ತುರ್ತು ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ, ಉದಾಹರಣೆಗೆ ಹೆಚ್ಚುವರಿ ಇಂಧನವನ್ನು ಸುಡುವುದು (ಬೆಂಕಿಯ ಅಪಾಯವನ್ನು ಕಡಿಮೆ ಮಾಡಲು), ಮೃದುವಾದ ಲ್ಯಾಂಡಿಂಗ್ ಮೇಲ್ಮೈಗೆ ಗುರಿಪಡಿಸುವುದು ಮತ್ತು ತುರ್ತು ಸೇವೆಗಳಿಗೆ ತಿಳಿಸುವುದು. ಇದು ಅಪಾಯಕಾರಿಯಾಗಿದ್ದರೂ, ಉತ್ತಮವಾಗಿ ಕಾರ್ಯಗತಗೊಳಿಸಿದ ಬೆಲ್ಲಿ ಲ್ಯಾಂಡಿಂಗ್ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಇರುತ್ತಾರೆ.

Breaking: ಹೈಡ್ರಾಲಿಕ್‌ ವೈಫಲ್ಯ, ವಾಯುಮಾರ್ಗದಲ್ಲೇ ಎಮರ್ಜೆನ್ಸಿ ಘೋಷಿಸಿದ ಏರ್ ಇಂಡಿಯಾ ವಿಮಾನ

ಬೆಲ್ಲಿ ಲ್ಯಾಂಡಿಂಗ್‌ಗಾಗಿ ಸಿದ್ಧತೆಗಳು: ಬೆಲ್ಲಿ ಲ್ಯಾಂಡಿಂಗ್‌ಗಾಗಿ ತುರ್ತು ಸಿದ್ಧತೆಗಳು ನಡೆದಿದ್ದವು. ವಿಮಾನದಲ್ಲಿರುವ ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು 18 ಅಗ್ನಿಶಾಮಕ ಎಂಜಿನ್‌ಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿತ್ತು. ಸುರಕ್ಷಿತವಾಗಿ ಲ್ಯಾಂಡಿಂಗ್ ಅನ್ನು ನಿರ್ವಹಿಸಲು ಸಿಬ್ಬಂದಿ ಕೂಡ ಕೆಲಸ ಮಾಡಿದ್ದರು.

Ratan Tata Funeral ಪಾರ್ಸಿ ಸಂಪ್ರದಾಯದಲ್ಲಿ ಹೆಣ ಸುಡೋದು ಇಲ್ಲ,ಹೂಳೋದು ಇಲ್ಲ; ಏನಿದು ದಖ್ಮಾ?

Update: ಎಂದಿನಂತೆ ಲ್ಯಾಂಡ್‌ ಆಗಿದೆ ಎಂದ ವಿಮಾನಯಾನ ಸಚಿವಾಲಯ:  ವಿಮಾನ ಎಂದಿನಂತೆಯೇ ಲ್ಯಾಂಡ್‌ ಆಗಿದೆ, ಬೆಲ್ಲಿ ಲ್ಯಾಂಡ್‌ ಮಾಡಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. “ತಿರುಚಿರಾಪಳ್ಳಿಯಿಂದ ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 613 ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಡಿಜಿಸಿಎ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ. ಲ್ಯಾಂಡಿಂಗ್ ಗೇರ್ ತೆರೆಯುತ್ತಿತ್ತು. ವಿಮಾನ ಎಂದಿನಂತೆ ಲ್ಯಾಂಡ್ ಆಗಿದೆ. ವಿಮಾನ ನಿಲ್ದಾಣವನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ವಿಮಾನಕ್ಕೆ ಬೆಲ್ಲಿ ಲ್ಯಾಂಡಿಂಗ್‌ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ವಿಮಾನವು ಸಾಮಾನ್ಯವಾಗಿ ಮತ್ತು ಸುರಕ್ಷಿತವಾಗಿ ಇಳಿಯಿತು ಎಂದು ಸಚಿವಾಲಯ ತಿಳಿಸಿದೆ. "ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ (ATC) ಯೊಂದಿಗೆ ನಿರಂತರ ಸಂವಹನದಲ್ಲಿಯೇ ಇದ್ದರು, ಬೆಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಲಾಗಿತ್ತು. ಆದರೆ ಯಾವುದೇ ಸಮಸ್ಯೆಗಳಿಲ್ಲದೆ ವಿಮಾನವು ಸ್ಪರ್ಶಿಸಿತು. ಘಟನೆಯ ಕುರಿತು ಆಂತರಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎಗೆ ತಿಳಿಸಲಾಗಿದೆ, ”ಎಂದು ಅದು ಹೇಳಿದೆ.

click me!