
ನವದೆಹಲಿ (ಅ.11): ಏರ್ ಇಂಡಿಯಾ ವಿಮಾನವೊಂದು ಶುಕ್ರವಾರ ಸಂಜೆ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಹೈಡ್ರಾಲಿಕ್ ವೈಫಲ್ಯದಿಂದಾಗಿ ವಾಯು ಮಾರ್ಗದಲ್ಲಿಯೇ ಎಮರ್ಜೆನ್ಸಿ ಘೋಷಣೆ ಮಾಡಿದೆ. ತಮಿಳುನಾಡಿನ ತಿರುಚ್ಚಿ ವಾಯುಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ನಡೆಸುತ್ತಿದ್ದು, ಮುಂದಿನ 45 ನಿಮಿಷದಲ್ಲಿ ಇಳಿಯುವ ನಿರೀಕ್ಷೆ ಇದೆ ಎಂದು ತಿರುಚಿರಾಪಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ತಿರುಚಿ ವಿಮಾನ ನಿಲ್ದಾಣದ ನಿರ್ದೇಶಕರ ಪ್ರಕಾರ, ಪೈಲಟ್ ಹೈಡ್ರಾಲಿಕ್ ವೈಫಲ್ಯದ ಬಗ್ಗೆ ಏರ್ ಸ್ಟೇಷನ್‌ಗೆ ಎಚ್ಚರಿಕೆ ನೀಡಿದ್ದಾರೆ. ಲ್ಯಾಂಡಿಂಗ್ ಗೇರ್, ಬ್ರೇಕ್‌ಗಳು ಮತ್ತು ಫ್ಲಾಪ್‌ಗಳಂತಹ ಪ್ರಮುಖ ಭಾಗಗಳನ್ನು ನಿಯಂತ್ರಿಸಲು ಪ್ರೆಶರೈಸ್ಡ್ ಫ್ಲ್ಯೂಡ್ ಬಳಸುವ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯ ಸಂಭವಿಸುತ್ತದೆ. ಈ ವಿಮಾನದಲ್ಲಿ ಒಟ್ಟು 140 ಮಂದಿ ಪ್ರಯಾಣಿಕರಿದ್ದಾರೆ ಎಂದು ತಿಳಿಸಿದೆ. ಯಾವುದೇ ಆತಂಕಕ್ಕೆ ಕಾರಣವಿಲ್ಲ ಮತ್ತು ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಸಾಧ್ಯವಾಗುತ್ತದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ ಎಂದು ತಿರುಚ್ಚಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ಇಂಧನವನ್ನು ಖಾಲಿ ಮಾಡಲು ವಾಯುಪ್ರದೇಶದ ಸುತ್ತ ಸುತ್ತುತ್ತಿದೆ, ಮುಂಜಾಗ್ರತಾ ಕ್ರಮವಾಗಿ ನಾವು ಆಂಬ್ಯುಲೆನ್ಸ್ ಮತ್ತು ರಕ್ಷಣಾ ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ವಿಮಾನವು ತನ್ನ ಲ್ಯಾಂಡಿಂಗ್ ಗೇರ್ ಅನ್ನು ಬಳಸದೆಯೇ ಲ್ಯಾಂಡ್ ಆಗುವ ಬೆಲ್ಲಿ ಲ್ಯಾಂಡಿಂಗ್‌ಗೆ ವಿಮಾನ ನಿಲ್ದಾಣವು ತಯಾರಿ ನಡೆಸುತ್ತಿದೆ. ಈ ಮೊದಲು ವಿಮಾನವನ್ನು ಹಗುರಗೊಳಿಸಲು ಇಂಧನ ಡಂಪಿಂಗ್ ಮಾಡುವ ಚಿಂತನೆ ನಡೆದಿದೆ. ಆದರೆ, ವಿಮಾನವು ವಸತಿ ಪ್ರದೇಶಗಳ ಮೇಲೆ ಸುತ್ತುತ್ತಿರುವ ಕಾರಣ ಅದನ್ನು ಆಯ್ಕೆ ಮಾಡಲಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಆಂಬ್ಯುಲೆನ್ಸ್ ಹಾಗೂ ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Ratan Tata Funeral ಪಾರ್ಸಿ ಸಂಪ್ರದಾಯದಲ್ಲಿ ಹೆಣ ಸುಡೋದು ಇಲ್ಲ,ಹೂಳೋದು ಇಲ್ಲ; ಏನಿದು ದಖ್ಮಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ