ಬರಲಿದೆ ಬೈಕ್‌ನಂತೆ ಬಾಗುವ ರೈಲು: 2025ಕ್ಕೆ ಟಿಲ್ಟಿಂಗ್ ರೈಲು ಆಗಮನ

By Kannadaprabha News  |  First Published Nov 26, 2022, 8:42 AM IST

ತಿರುವಿನಲ್ಲಿ ಬೈಕ್‌ನಂತೆ ಬಾಗುವ ರೈಲು ಶೀಘ್ರ ಭಾರತಕ್ಕೆ ಬರಲಿದ್ದು, 2025-26ರ ವೇಳೆಗೆ ಭಾರತದಲ್ಲಿ ಟಿಲ್ಟಿಂಗ್‌ ರೈಲು ಚಲಿಸಲಿದೆ ಎಂದು ಹೇಳಲಾಗಿದೆ. 100 ವಂದೇ ಭಾರತ ರೈಲಿಗೆ ಇವು​ಗಳನ್ನು ಅಳ​ವ​ಡಿ​ಕೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 


ನವದೆಹಲಿ: ತಿರುವುಗಳಲ್ಲಿ (Turning) ಮೋಟಾರ್‌ ಬೈಕ್‌ನಂತೆ (Motor Bike) ಬಾಗುವ ಅತ್ಯಾಧುನಿಕ, ಹೈಸ್ಪೀಡ್‌ ಟಿಲ್ಟಿಂಗ್‌ ರೈಲುಗಳು (Tilting Train) ಶೀಘ್ರದಲ್ಲೇ ಭಾರತಕ್ಕೆ ಬರಲಿವೆ. 2025-26ರ ವೇಳೆಗೆ ಭಾರತಕ್ಕೆ ತನ್ನ ಮೊದಲ ಟಿಲ್ಟಿಂಗ್‌ ರೈಲು ಸಿಗಲಿದ್ದು, 100 ವಂದೇ ಭಾರತ ರೈಲುಗಳನ್ನು (Vande Bharat Train) ಈ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗುತ್ತದೆ. ಈ ರೈಲುಗಳ ನಿರ್ಮಾಣಕ್ಕಾಗಿ ತಂತ್ರಜ್ಞಾನ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲು ಸ್ವಿಜರ್ಲೆಂಡ್‌ ಸರ್ಕಾರ ಹಾಗೂ ಸ್ಪ್ಯಾನಿಶ್‌ ಉತ್ಪಾದಕ ಕಂಪನಿ ಟಾಲ್ಗೊ ಜತೆ ರೈಲ್ವೆ ಇಲಾಖೆ (Railway Department) ಮಾತುಕತೆ ನಡೆಸುತ್ತಿದೆ. ಇನ್ನು 2-3 ವರ್ಷಗಳಲ್ಲೇ ಅತ್ಯಾಧುನಿಕ ಟಿಲ್ಟಿಂಗ್‌ ರೈಲು ಹೊಂದಿದ ದೇಶಗಳಲ್ಲಿ ಭಾರತ (India) ಒಂದಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ನಾವು ದೇಶದಲ್ಲಿ ಟಿಲ್ಟಿಂಗ್ ರೈಲುಗಳನ್ನು ಹೊಂದಲಿದ್ದೇವೆ. ಇದಕ್ಕಾಗಿ ನಾವು ತಂತ್ರಜ್ಞಾನ ಪಾಲುದಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ. ಮುಂದಿನ 2 - 3 ವರ್ಷಗಳಲ್ಲಿ ನಾವು 100 ವಂದೇ ಭಾರತ್ ರೈಲುಗಳಲ್ಲಿ ಈ ತಂತ್ರಜ್ಞಾನವನ್ನು ಹೊಂದಲಿದ್ದೇವೆ" ಎಂದು ರೈಲ್ವೆ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಶುಕ್ರವಾರ ವರದಿ ಮಾಡಿದೆ. 

ಭಾರತೀಯ ರೈಲ್ವೆ ಈ ಹಿಂದೆ ಬಾಗಿಸುವ ರೈಲುಗಳಿಗೆ ಸಂಬಂಧಿಸಿದಂತೆ ವಿವಿಧ ಆಯ್ಕೆಗಳನ್ನು ಅನ್ವೇಷಿಸಿದೆ. ಆದರೆ ಯಾವುದೇ ವಿವರವನ್ನು ಅಂತಿಮಗೊಳಿಸಿಲ್ಲ. ಇದು ಸ್ಪ್ಯಾನಿಷ್ ತಯಾರಕ ಟಾಲ್ಗೊ ಮತ್ತು ಸ್ವಿಟ್ಜರ್ಲೆಂಡ್ ಸರ್ಕಾರದೊಂದಿಗೆ ಚರ್ಚೆ ನಡೆಸಿದೆ ಎಂದೂ ಮಾಹಿತಿ ನೀಡಿದೆ.

Tap to resize

Latest Videos

ಇದನ್ನು ಓದಿ: ರೈಲು ಯೋಜನೆಗಳ ಜಾರಿಗೆ ಜಂಟಿ ತಂಡ: ಸಿಎಂ, ರೈಲ್ವೆ ಸಚಿವ ನಿರ್ಧಾರ

ಟಿಲ್ಟಿಂಗ್‌ ರೈಲುಗಳು ಪ್ರಸ್ತುತ ಬ್ರಿಟನ್‌, ರಷ್ಯಾ, ಸ್ವಿಜರ್‌ಲೆಂಡ್‌, ಜರ್ಮನಿ, ರೋಮಾನಿಯಾ ಸೇರಿದಂತೆ ಕೇವಲ 11 ದೇಶಗಳಲ್ಲಿ ಮಾತ್ರ ಕಾರ್ಯಗತವಾಗಿವೆ.

ಟಿಲ್ಟಿಂಗ್ ರೈಲು ಹೇಗೆ ಕೆಲಸ ಮಾಡುತ್ತದೆ..?
ರೈಲು ವೇಗದಲ್ಲಿ ತಿರುವಿನಲ್ಲಿ ಸುತ್ತಿದಾಗ, ಒಳಗಿನ ವಸ್ತುಗಳು (ಮತ್ತು ಜನರು) ಸೆಂಟ್ರಿಫ್ಯೂಗಲ್‌ ಫೋರ್ಸ್‌ (Centrifugal Force) ಅನ್ನು ಅನುಭವಿಸುತ್ತವೆ. ಅದು ವಸ್ತುಗಳನ್ನು ಹೊರಕ್ಕೆ ತಳ್ಳುತ್ತದೆ. ಇದರ ಪರಿಣಾಮ ರೈಲಿನ ಳಗಿರುವ ಲಗೇಜ್‌ ಜಾರಿಬೀಳಬಹುದು, ಹಾಗೂ ಕುಳಿತಿರುವ ಪ್ರಯಾಣಿಕರು ಅಕ್ಕ ಪಕ್ಕ ಜರುಗುತ್ತಾರೆ ಮತ್ತು ನಿಂತಿರುವ ಪ್ರಯಾಣಿಕರು ಬ್ಯಾಲೆನ್ಸ್‌ ಕಳೆದುಕೊಂಡು ಬೀಳಬಹುದು.  ಆದರೆ, ಈ ಟಿಲ್ಟಿಂಗ್‌ ರೈಲುಗಳನ್ನು ತಿರುವಿನಲ್ಲಿ ಒಳಭಾಗದ ಕಡೆಗೆ ಗಾಡಿಗಳನ್ನು ಬಾಗಿಸುವುದರ ಮೂಲಕ ಪರಿಣಾಮವನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ, ಹೀಗಾಗಿ ಜಿ -ಫೋರ್ಸ್‌ (g - force) ಅನ್ನು ಸರಿದೂಗಿಸುತ್ತದೆ.

ಇದನ್ನೂ ಓದಿ: ರೈಲಲ್ಲಿ ಈ ಮೂರು ವಸ್ತು ಕೊಂಡೊಯ್ದರೆ ಜೈಲು ಗ್ಯಾರಂಟಿ

ಸ್ವೀಡನ್ ಮೂಲದ KTH ಇಂಜಿನಿಯರಿಂಗ್ ಸೈನ್ಸಸ್ ಪ್ರಕಾರ, ಟಿಲ್ಟ್ ಬಲವನ್ನು ತಟಸ್ಥಗೊಳಿಸಲು ಮತ್ತು ಸಮತೋಲನ ಸಾಧಿಸಲು ವಿವಿಧ ಕಾರ್ಯವಿಧಾನಗಳು ಇರಬಹುದು. ಕಾರುಗಳು ಬಾಗುವ ಸಮಯವನ್ನು ಸರಿಹೊಂದಿಸುವ ಮೂಲಕ Motion Sickness ಅನ್ನು ಮೂಲಭೂತವಾಗಿ ಹೇಗೆ ತೆಗೆದುಹಾಕಬಹುದು ಎಂಬುದನ್ನು ಇದು ವಿವರಿಸುತ್ತದೆ.

ಟಿಲ್ಟಿಂಗ್‌ ರೈಲಿನ ಲಾಭ​ವೇ​ನು..?
ಸಾಮಾನ್ಯವಾಗಿ ಬ್ರಾಡ್‌ಗೇಜ್‌ ಹಳಿ​ಗ​ಳಲ್ಲಿ ಸಾಮಾನ್ಯ ರೈಲು​ಗಳು ಸಾಗು​ವಾಗ ತಿರುವು ಬಂದರೆ ವೇಗ​ವನ್ನು ತಗ್ಗಿ​ಸ​ಬೇ​ಕಾ​ಗು​ತ್ತದೆ. ಏಕೆಂದರೆ ತಿರು​ವಿ​ನಲ್ಲಿ ವೇಗ​ವಾಗಿ ಹೋದರೆ ಹಳಿ ತಪ್ಪುವ ಸಾಧ್ಯತೆ ಇರು​ತ್ತದೆ. ಆದರೆ ಟಿಲ್ಟಿಂಗ್‌ ಬೋಗಿ​ಗ​ಳಲ್ಲಿ ಈ ಸಮಸ್ಯೆ ಇಲ್ಲ. ಬೈಕನ್ನು ಬಾಗಿ​ಸಿ​ದಂತೆ ತಿರು​ವಿ​ನಲ್ಲಿ ರೈಲು ಬಾಗಿ​ಸಿ​ದಾಗ ಹಳಿ ತಪ್ಪು​ವು​ದಿಲ್ಲ. ನೇರ ಮಾರ್ಗ​ದಲ್ಲಿ ಹೋದಷ್ಟೇ ವೇಗ​ದ​ಲ್ಲೇ ತಿರು​ವಿ​ನಲ್ಲೂ ಸಾಗು​ತ್ತ​ವೆ. ಈ ಮೂಲ​ಕ ಪ್ರಯಾಣಿಕರಿಗೆ ವಿಶಿಷ್ಟ ಅನುಭವ ನೀಡುತ್ತವೆ.

ಇದನ್ನೂ ಓದಿ: Vande Bharat Express: ಮೈಸೂರು-ಚೆನ್ನೈ ರೈಲಿಗೆ ಹಸು ಡಿಕ್ಕಿ, ಮುಂಭಾಗಕ್ಕೆ ಹಾನಿ!

click me!