ಜಮ್ಮು, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ರಾತ್ರೋರಾತ್ರಿ ಏನಾಯಿತು?

Published : May 09, 2025, 10:19 AM IST
ಜಮ್ಮು, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ರಾತ್ರೋರಾತ್ರಿ ಏನಾಯಿತು?

ಸಾರಾಂಶ

ಜಮ್ಮುವಿನಲ್ಲಿ ಶುಕ್ರವಾರ ನಸುಕಿನಲ್ಲಿ ಸ್ಫೋಟಗಳು ಸಂಭವಿಸಿ, ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದವು. ಭಾರತೀಯ ಸೇನೆ ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ವಿಫಲಗೊಳಿಸಿತು. ನಿಯಂತ್ರಣ ರೇಖೆ ಬಳಿ ೫೦ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಉದ್ವಿಗ್ನತೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಪಂಜಾಬ್, ಹರಿಯಾಣದಲ್ಲಿ ವಿದ್ಯುತ್ ಕಡಿತಗೊಳಿಸಲಾಯಿತು.

ಶುಕ್ರವಾರ ನಸುಕಿನಲ್ಲಿ ಜಮ್ಮು ನಗರದಲ್ಲಿ ಭಾರಿ ಸ್ಫೋಟಗಳ ಶಬ್ದ ಕೇಳಿಬಂದವು. ಪಾಕಿಸ್ತಾನ ಗಡಿಯ ಬಳಿ ಇರುವ ಭಾರತೀಯ ಸೇನೆಯ ಕ್ಯಾಂಪ್‌ಗಳ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದ ವೇಳೆಯಲ್ಲೇ ಈ ಘಟನೆ ನಡೆಯಿತು. ಆದರೆ ಭಾರತದ ಭದ್ರತಾ ಪಡೆಗಳು ಈ ಪ್ರಯತ್ನವನ್ನು  ವಿಫಲಗೊಳಿಸಿದವು. ಸ್ಫೋಟಗಳ ನಂತರ, ಆಕಾಶದಲ್ಲಿ ಪಟಾಕಿಯಂತೆ ಚಿಮ್ಮುವ ಬೆಳಕುಗಳು ಕಾಣಿಸಿಕೊಂಡವು.

ಬೆಳಗಿನ ಜಾವ 3:50 ರಿಂದ 4:45ರ ನಡುವೆ ಈ ಸ್ಫೋಟಗಳು ಸಂಭವಿಸಿದವು. ಸೈರನ್‌ಗಳು ಮೊಳಗಿಸ ನಂತರ ಭದ್ರತಾ ಪಡೆಗಳು ತಕ್ಷಣವೇ ಕಾರ್ಯಾಚರಣೆ ನಡೆಸಿದವು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಿರುವ ವೀಡಿಯೊಗಳಲ್ಲಿ ಡ್ರೋನ್‌ಗಳು ಹಾರುತ್ತಿರುವುದು ಮತ್ತು ಸ್ಫೋಟಗಳು ಆಗುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ.

ಬುಧವಾರ ರಾತ್ರಿ ನಿಯಂತ್ರಣ ರೇಖೆ (LOC) ಮತ್ತು ಅಂತರರಾಷ್ಟ್ರೀಯ ಗಡಿ (IB) ಬಳಿ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ 50ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಭಾರತದ ಹಲವಾರು ಭಾಗಗಳಲ್ಲಿ ಡ್ರೋನ್‌ ಮೂಲಕ ದಾಳಿ ನಡೆಸಲಿ ಯತ್ನಿಸುತ್ತಿತ್ತು. ಇದಕ್ಕೆ ಪ್ರತಿಯಾಗಿ ಈ ಕಾರ್ಯಾಚರಣೆ ನಡೆದಿದೆ. ಉಧಮ್‌ಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್‌ಕೋಟ್ ಪ್ರದೇಶಗಳಲ್ಲಿ ಡ್ರೋನ್‌ಗಳನ್ನು ಗುರಿಯಾಗಿಸಿಕೊಂಡು ಸೇನೆಯ ವಾಯು ರಕ್ಷಣಾ ಘಟಕಗಳು ತಕ್ಷಣವೇ ತಡೆಯಿತು.

ಪಾಕಿಸ್ತಾನ ಸೇನೆ ಪೂಂಚ್, ರಾಜೌರಿ ಮತ್ತು ಜಮ್ಮು ಭಾಗಗಳಲ್ಲಿ ಶೆಲ್ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ತೊಡಗಿದ ಬಗ್ಗೆ ವರದಿಯಾಗಿದೆ. ಭಾರತೀಯ ಸೇನೆಯು ಕೂಡಾ ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ವರದಿ ತಿಳಿಸಿದೆ.

ಜಮ್ಮುವಿನ ಉಪ ಆಯುಕ್ತರು ಎಲ್ಲ ನಿವಾಸಿಗಳಿಗೆ ಜಾಗರೂಕವಾಗಿರಲು ಹೇಳಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಶಾಲೆಗಳು, ಕಾಲೇಜುಗಳು ಹಾಗೂ ಯೂನಿವರ್ಸಿಟಿಗಳನ್ನೂ ಮುಚ್ಚಲಾಗಿದೆ.

ಭಾರತದ ಆಪರೇಷನ್ ಸಿಂದೂರ ಮತ್ತು ವಾಯುದಾಳಿಯ ನಂತರ ಹೆಚ್ಚಿದ ಮಿಲಿಟರಿ ಉದ್ವಿಗ್ನತೆಯ ನಡುವೆ , ಪಂಜಾಬ್, ಚಂಡೀಗಢ ಮತ್ತು ಪಂಚಕುಲ, ಅಂಬಾಲ ಮತ್ತು ಸಿರ್ಸಾ ಸೇರಿದಂತೆ ಹರಿಯಾಣದ ಕೆಲವು ಭಾಗಗಳಲ್ಲಿ ಗುರುವಾರ ರಾತ್ರಿ ವ್ಯಾಪಕ ವಿದ್ಯುತ್ ಕಡಿತಗೊಳಿಸಲಾಯಿತು. 

ಸೈರನ್‌ಗಳು ಮೊಳಗುತ್ತಿದ್ದಂತೆ  ಪೊಲೀಸರು ನಿರಂತರವಾಗಿ ಸಾರ್ವಜನಿಕ ಪ್ರಕಟಣೆಗಳನ್ನು ಹೇಳುತ್ತಿದ್ದು,  ನಿವಾಸಿಗಳಿಗೆ ದೀಪಗಳನ್ನು ಆರಿಸಿ ಮನೆಯೊಳಗೆ ಇರುವಂತೆ ಸೂಚಿಸಲಾಗುತ್ತಿದೆ. ಅಮೃತಸರ, ಫಿರೋಜ್‌ಪುರ, ತರಣ್ ತರಣ್, ಗುರುದಾಸ್ಪುರ್, ಜಲಂಧರ್, ಕಪುರ್ತಲಾ, ಹೋಶಿಯಾರ್‌ಪುರ್, ಮೊಹಾಲಿ ಮತ್ತು ಫರೀದ್‌ಕೋಟ್ ಜಿಲ್ಲೆಗಳಲ್ಲಿ ಬ್ಲಾಕ್‌ಔಟ್ ಆದೇಶಗಳನ್ನು ನೀಡಲಾಗಿದೆ.

ಪಠಾಣ್‌ಕೋಟ್‌ನಲ್ಲಿ, ವಾಯುದಾಳಿಯ ಎಚ್ಚರಿಕೆಗಳನ್ನು ನೀಡಿದ ಸಮಯಕ್ಕೆ ಸರಿಯಾಗಿ ರಾತ್ರಿ 8:30 ಕ್ಕೆ ವಿದ್ಯುತ್ ಕಡಿತ ಆರಂಭವಾಯಿತು. ಗುರುದಾಸ್‌ಪುರದಲ್ಲಿ ರಾತ್ರಿ 9 ಗಂಟೆಗೆಯಿಂದ ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಯಿತು. ಆಸ್ಪತ್ರೆಗಳು ಮತ್ತು ಜೈಲುಗಳಲ್ಲಿ ಪ್ರಮುಖ ಸೌಲಭ್ಯಗಳನ್ನು ವಿದ್ಯುತ್ ಕಡಿತದಿಂದ ವಿನಾಯಿತಿ ನೀಡಲಾಯಿತು, ಆದರೂ ಕಿಟಕಿಗಳನ್ನು ಮುಚ್ಚುವಂತೆ ಸೂಚಿಸಲಾಯ್ತು.

 

ಸ್ಥಳೀಯ ನಿವಾಸಿಗಳು ಹೇಳುವುದೇನೆಂದರೆ:
"ನಿನ್ನೆ ರಾತ್ರಿ ವಿದ್ಯುತ್ ಕಡಿತವಾಗಿತ್ತು. ನಂತರ ಡ್ರೋನ್‌ಗಳು ಹಾರಲು ಆರಂಭಿಸಿದವು. ಗುಂಡಿನ ಶಬ್ದಗಳು ಇಡೀ ರಾತ್ರಿ ಕೇಳಿಬಂದವು. ನಮ್ಮ ಪಡೆಗಳು ತಕ್ಷಣ ಪ್ರತಿಕ್ರಿಯೆ ನೀಡಿದವು. ನಮಗೆ ನಮ್ಮ ಸೇನೆಯ ಮೇಲೆ ನಂಬಿಕೆ ಇದೆ."

"ನಾವು ರಾತ್ರಿ ಊಟ ಮಾಡುತ್ತಿದ್ದಾಗಲೇ ಸ್ಫೋಟದ ಶಬ್ದ ಕೇಳಿಬಂತು. ಬೆಳಿಗ್ಗೆ ಮತ್ತೆ ಸ್ಫೋಟ ಆಯಿತು. ಆದರೆ ಚಿಂತೆಗೆ ಕಾರಣವಿಲ್ಲ. ಭಗವತಿ ವೈಷ್ಣೋದೇವಿ ನಮ್ಮನ್ನು ಕಾಪಾಡುತ್ತಿದ್ದಾರೆ."

"ನಾವು ರಾತ್ರಿ 8 ಗಂಟೆ ಸುಮಾರಿಗೆ 3-4 ಡ್ರೋನ್‌ಗಳನ್ನು ನೋಡಿದ್ದೆವು. ಪ್ರತಿಯಾಗಿ ಗುಂಡಿನ ದಾಳಿ ನಡೆಯಿತು. ಪಾಕಿಸ್ತಾನ ಇಂಥ ಕೃತ್ಯ ಮಾಡುವುದು ಸರಿಯಲ್ಲ."

"ಶೆಲ್ ದಾಳಿ ಹಾಗೂ ಗುಂಡಿನ ಶಬ್ದಗಳು ಈಗಲೂ ಕೇಳಿಸುತ್ತಿವೆ. ಆಕಾಶದಲ್ಲಿ ಹೊಗೆ ಕಾಣುತ್ತಿದೆ. ಇಲ್ಲಿ ಸಂಪೂರ್ಣ ಕತ್ತಲೆ. ಆದರೆ ನಾವು ಭಯಪಡುವ ಅಗತ್ಯವಿಲ್ಲ."

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!