280 ಕಿಲೋ ಮೀಟರ್ ಸ್ಪೀಡ್‌ನಲ್ಲಿ ಓಡುವ 'ಬುಲೆಟ್ ಟ್ರೈನ್ ಹಳಿ' ಹೇಗಿರುತ್ತದೆ, ಫೋಟೋಗಳು ವೈರಲ್

Published : Nov 03, 2026, 05:11 PM IST
bullet train track

ಸಾರಾಂಶ

ಭಾರತದಲ್ಲಿ 2027ರ ವೇಳೆಗೆ ಮುಂಬೈ-ಅಹಮದಾಬಾದ್ ನಡುವೆ ಮೊದಲ ಬುಲೆಟ್ ರೈಲು ಸಂಚರಿಸುವ ನಿರೀಕ್ಷೆಯಿದೆ. ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುವ ಈ ರೈಲಿಗಾಗಿ ಜಪಾನ್ ತಂತ್ರಜ್ಞಾನದ ವಿಶೇಷ 'ಜೆ-ಸ್ಲ್ಯಾಬ್' ಕಾಂಕ್ರೀಟ್ ಹಳಿಗಳನ್ನು ನಿರ್ಮಿಸಲಾಗುತ್ತಿದೆ.

ಭಾರತವು ಬುಲೆಟ್ ರೈಲುಗಳ ಓಡಾಟಕ್ಕೆ ಕಾಯುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶದ ಬುಲೆಟ್ ಟ್ರೈನ್ ಕಾಮಗಾರಿಗೆ ಸಂಬಂಧಿಸಿ ಮಹತ್ವದ ಮಾಹಿತಿ ನೀಡಿದ್ದರು. ಬೆನ್ನಲ್ಲೇ ಬುಲೆಟ್ ಟ್ರೈನ್‌ ಕುರಿತು ಒಂದೊಂದೇ ಮಾಹಿತಿಗಳು ಹೊರಗೆ ಬರುತ್ತಿವೆ.

ದೇಶದ ಅತೀ ವೇಗದ ರೈಲು ಇದಾಗಲಿದ್ದು, ಗಂಟೆಗೆ 280 ಕಿಲೋ ಮೀಟರ್ ವೇಗದಲ್ಲಿ ಹಳಿಗಳ ಮೇಲೆ ಓಡಾಡಲಿವೆ. ಪ್ರಸ್ತುತ ಒಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 180 ಕಿಲೋ ಮೀಟರ್ ಸ್ಪೀಡ್‌ನಲ್ಲಿ ಸಂಚಾರ ಮಾಡಲಿದೆ. ಗಂಟೆಗೆ 280ಕ್ಕೂ ಹೆಚ್ಚು ಕಿಲೋ ಮೀಟರ್ ವೇಗದಲ್ಲಿ ಓಡುವ ಈ ರೈಲು ಸಾಧಾರಣ ರೈಲುಗಳ ಹಳಿ ಮೇಲೆ ಚಲಿಸುತ್ತದೆಯೇ? ಅಥವಾ ಅದಕ್ಕಾಗಿ ಸ್ಪೆಷಲ್ ಹಳಿಗಳು ಅಗತ್ಯ ಇದೆಯೇ?

ಬುಲೆಟ್ ಟ್ರೈನ್ ಓಡಾಡುವ ಹಳಿ ಸಾಮಾನ್ಯ ಹಳಿಗಿಂತ ಭಿನ್ನ. ಸಾಮಾನ್ಯ ಹಳಿಗಳ ಅಡಿಯಲ್ಲಿ ಕಲ್ಲುಗಳನ್ನ ಹಾಕಲಾಗಿರುತ್ತದೆ. ಆದರೆ ಇಲ್ಲಿ ಕಲ್ಲುಗಳನ್ನ ಹಾಕುವ ಬದಲು ಕಾಂಕ್ರೀಟ್ ಚಪ್ಪಡಿಯನ್ನು ನಿರ್ಮಾಣ ಮಾಡಲಾಗುತ್ತದೆ. ಅದಕ್ಕಾಗಿ ಇದನ್ನು ballastless J-slab ಎಂದು ಕರೆಯಲಾಗುತ್ತದೆ. ಮುಂಬೈ-ಅಹ್ಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ ಜಪಾನ್‌ನ ಶಿಂಕೆನ್ಸರ್ ತಂತ್ರಜ್ಞಾನ ಆಧಾರಿಸಿ J-slab ಟ್ರಾಕ್ ನಿರ್ಮಾಣ ಮಾಡಲಾಗುತ್ತಿದೆ. ಅಂದ್ಹಾಗೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಜೆ-ಸ್ಲ್ಯಾಬ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಹಳಿಗಳು ಹೇಗೆ ಇರುತ್ತದೆ?

  • ಬಲವಾದ ತಳಹದಿ ನಿರ್ಮಾಣ, ನಂತರ ಅದರ ಮೇಲೆ ಹಳಿಗಳನ್ನು ಹಾಕುತ್ತದೆ. ಅಂದರೆ ಕೆಳಭಾಗದಲ್ಲಿ ಬಲವಾದ ಕಾಂಕ್ರೀಟ್ ನೆಲೆ ನಿರ್ಮಾಣ ಮಾಡಲಾಗುತ್ತದೆ. ಇದು ಹಳಿಗೆ ಸಪೋರ್ಟ್ ನೀಡುತ್ತದೆ.
  • CAM ಎಂದು ಕರೆಲ್ಪಡುವ ವಿಶೇಷ ಸಿಮೆಂಟ್ ಮತ್ತು ಡಾಂಬರು ಮಿಶ್ರಣವನ್ನು ಕಾಂಕ್ರಿಟ್ ಬೇಸ್‌ ಮೇಲೆ ಹಾಕಲಾಗುತ್ತದೆ. ಇದರಿಂದ ಸ್ಲ್ಯಾಬ್ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುತ್ತದೆ.
  • ನಂತರ ಈ ಮೊದಲೇ ಸಿದ್ಧಪಡಿಸಿದ್ದ ಕಾಂಕ್ರೀಟ್‌ನ ಚಪ್ಪಡಿಯನ್ನು ಇದರ ಮೇಲೆ ಹಾಕಲಾಗುತ್ತದೆ. ಇವುಗಳನ್ನ ಅಲ್ಲೇ ಎರಕ ಹೊಯ್ಯುವ ಬದಲು ಕಾರ್ಖಾನೆಗಳಲ್ಲಿ ನಿಖರವಾದ ಅಳತೆಗಳಲ್ಲಿ ತಯಾರಿಸಲಾಗುತ್ತಿದೆ
  • ಅದಾದ ಬಳಿಕ ಎರಡು ಕಬ್ಬಿಣದ ಹಳಿಗಳನ್ನು ಅಳವಡಿಸಲಾಗುತ್ತದೆ. ಸ್ಪೆಷಲ್ ಫಾಸ್ಟೆನರ್‍ಗಳನ್ನು ಬಳಸಿ ಕಾಂಕ್ರೀಟ್ ಚಪ್ಪಡಿಗೆ ಜೋಡಿಸಲಾಗುತ್ತದೆ. ಬುಲೆಟ್ ರೈಲು ಈ ಹಳಿಗಳ ಮೇಲೆ ಚಲಿಸುತ್ತದೆ.

ಬುಲೆಟ್ ರೈಲಿನ ಹಳಿಗಳ ಅಗಲವೂ ವಿಭಿನ್ನ. ಗೇಜ್ ಎಂದರೆ ರೈಲ್ವೆಯಲ್ಲಿ ಎರಡು ಹಳಿಗಳ ನಡುವಿನ ಅಂತರ. ಬ್ರಾಡ್ ಗೇಜ್ ಎಂದರೆ ಪ್ರಮಾಣಿತ ಭಾರತೀಯ ರೈಲ್ವೆಗಳಲ್ಲಿ ಬಳಸುವುದಾಗಿದೆ. ಪ್ರಮಾಣಿತ ಗೇಜ್ 1676 ಮಿಲಿ ಮೀಟರ್ ಇದ್ದರೆ, ಬುಲೆಟ್ ರೈಲುಗಳ ಕಾರಿಡಾರ್ ಪ್ರಾಮಾಣಿತ ಗೇಜ್ 1235 ಮಿಲಿ ಮೀಟರ್ ಅಳತೆಯನ್ನ ಹೊಂದಿರಲಿದೆ.

ಭಾರತದ ಮೊದಲ ಬುಲೆಟ್ ಟ್ರೈನ್ 2027ರ ವೇಳೆಗೆ ಅಹಮದಾಬಾದ್‌ನಿಂದ ಮುಂಬೈಗೆ ಸಂಚರಿಸುವ ನಿರೀಕ್ಷೆಯಿದೆ. ಮುಂಬೈನ ಬಿಕೆಸಿಯಲ್ಲಿ 10 ಅಂತಸ್ತಿನಷ್ಟು ಆಳದ ಭೂಗತ ನಿಲ್ದಾಣ ಮತ್ತು ಥಾಣೆ ಕ್ರೀಕ್ ಬಳಿ ದೇಶದ ಮೊದಲ ಸಾಗರದೊಳಗಿನ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುವ ಈ ರೈಲಿನ ಕಾಮಗಾರಿ ಭರದಿಂದ ಸಾಗುತ್ತಿದೆ. ಬುಲೆಟ್ ಟ್ರೈನ್ ಉದ್ಘಾಟನೆಗೆ ಸಮರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿದ್ದು, 2027ರ ವೇಳೆಗೆ ಅತೀ ವೇಗದ ರೈಲು ಸಂಚಾರ ನಡೆಸುವ ನಿರೀಕ್ಷೆಗಳಿವೆ. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶದ ಮೊದಲ ಬುಲೆಟ ಟ್ರೈನ್ ಈಗ ಆಕಾರ ಪಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಏಕಾಏಕಿ ಹರಿದುಬಂತು 76 ಲಕ್ಷ ಕೋಟಿ: ಮತ್ತೊಮ್ಮೆ ನಂಬರ್​ 1 ಶ್ರೀಮಂತರಾದ ಮುಖೇಶ್​ ಅಂಬಾನಿ
ನಿಮ್ಮ ಟೈಯರ್​ ಜಾತಕ ಅದರ ಮೇಲಿರುವ ಅಕ್ಷರಗಳಲ್ಲೇ ಇದೆ- ಕೊನೆಯ ಅಕ್ಷರದಲ್ಲಿದೆ ರೋಚಕ ಸತ್ಯ