ಈ ಹೇಳಿಕೆಗಳಿಂದ ಹಿಂದೂ ಹಾಗೂ ಇಡೀ ಸಂತ ಸಮಾಜ ಕೋಪಗೊಂಡಿದೆ. ಕೂಡಲೇ ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಕ್ಷಮ ಕೇಳಬೇಕೆಂದು ಸ್ವಾಮೀಜಿ ಆಗ್ರಹಿಸಿದ್ದಾರೆ
ನವದೆಹಲಿ: ಜುಲೈ 1ರಂದು ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಮೊದಲ ಬಾರಿಗೆ ಮಾತನಾಡಿದ ರಾಹುಲ್ ಗಾಂಧಿ (Opposition Leader Rahul Gandhi) ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸಂಸತ್‌ನಲ್ಲಿ ಶಿವನ ಫೋಟೋ (Lord Shiva Photo) ಪ್ರದರ್ಶಿಸಿ ರಾಹುಲ್ ಗಾಂಧಿ ಮಾತನಾಡಿದರು. ರಾಹುಲ್ ಗಾಂಧಿ ತಮ್ಮ ಹೇಳಿಕೆ ಮೂಲಕ ಹಿಂದೂ ಸಮಾಜವನ್ನು ಅವಮಾನಿಸಿದ್ದು, ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹಿಸುತ್ತಿದೆ. ಇದೀಗ ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಧರ್ಮಗುರುಗಳು ತಮ್ಮ ಅಭಿಪ್ರಾಯವನ್ನು ವ್ಯಕ್ಯಪಡಿಸುತ್ತಿದ್ದಾರೆ.
1.ಅವಧೇಶಾನಂದ ಗಿರಿ ಸ್ವಾಮೀಜಿ
ಹಿಂದೂಗಳು ಎಲ್ಲದರಲ್ಲಿಯೂ ದೇವರನ್ನು ಕಾಣುತ್ತಾರೆ. ಹಿಂದೂಗಳು ಅಹಿಂಸಾವಾದಿ ಮತ್ತು ಉದಾರಿಗಳು. ಇಡೀ ವಿಶ್ವವೇ ಕುಟುಂಬ ಎಂಬ ಪರಿಕಲ್ಪನೆ ಹಿಂದೂ ಸಮಾಜದಲ್ಲಿದೆ. ಇಡೀ ಸಮಾಜದ ಅಭಿವೃದ್ಧಿ ಮತ್ತು ಒಳಿತಿಗಾಗಿ ಹಿಂದೂಗಳು ಕೆಲಸ ಮಾಡುತ್ತೇವೆ. ಹಿಂದೂಗಳು ಹಿಂಸೆಯ ಪ್ರತಿಪಾದಕರು ಎಂದು ಹೇಳುವ ಮೂಲಕ ದ್ವೇಷ ಹರಡುವ ಕೆಲಸ ನಡೆದಿದೆ. ಇಂತಹ ಹೇಳಿಕೆಗಳು ಇಡೀ ಹಿಂದೂ ಸಮಾಜವನ್ನು ಅವಮಾನಿಸುತ್ತವೆ. ಹಿಂದೂ ಸಮಾಜ ತುಂಬಾ ಉದಾರವಾಗಿದ್ದು, ಎಲ್ಲರನ್ನು ಗೌರವಿಸುತ್ತದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಪದೇ ಪದೇ ಹಿಂದೂಗಳು ಹಿಂಸಕರು ಮತ್ತು ದ್ವೇಷ ಬಿತ್ತುತ್ತಾರೆ ಎಂದು ಹೇಳುತ್ತಾರೆ. ರಾಹುಲ್ ಗಾಂಧಿಯವರ ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಹೇಳಿಕೆಗಳಿಂದ ಹಿಂದೂ ಹಾಗೂ ಇಡೀ ಸಂತ ಸಮಾಜ ಕೋಪಗೊಂಡಿದೆ. ಕೂಡಲೇ ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಕ್ಷಮ ಕೇಳಬೇಕೆಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
2.ಸೈಯ್ಯದ್ ನಾಸಿರೂದ್ದೀನ್ ಚಿಶ್ತಿ
ಆಲ್ ಇಂಡಿಯಾ ಸೂಫಿ ಸಜ್ಜಾದನಶೀನ್ ಕೌನ್ಸಿಲ್ ಅಧ್ಯಕ್ಷರಾದ ಸೈಯ್ಯದ್ ನಾಸಿರೂದ್ದೀನ್ ಚಿಶ್ತಿ, ಇಸ್ಲಾಂನಲ್ಲಿ ಅಭಯಮುದ್ರೆಯ ಉಲ್ಲೇಖವಿಲ್ಲ ಹಾಗೂ ಮೂರ್ತಿ ಪೂಜೆಯ ಕುರಿತು ವಿವರಣೆ ಇಲ್ಲ. ಆದ್ರೆ ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ ಎರಡು ಹಸ್ತಗಳ ಚಿಹ್ನೆ ತೋರಿಸಿ ಇಸ್ಲಾಂ ಎಂದು ಸೂಚಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ಬದಲಿಸಿಕೊಳ್ಳಬೇಕು ಎಂದು ಸೈಯ್ಯದ್ ನಾಸಿರೂದ್ದೀನ್ ಚಿಶ್ತಿ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ಸಿಗರಿಗೆ ಸರಳ ಟೆಕ್ನಾಲಾಜಿಯ ಬಗ್ಗೆಯೂ ಗೊತ್ತಿಲ್ಲವೇ? ಸದನದ ಮೈಕ್ ಆಟೋಮೇಟಿಕ್: ರಾಜ್ಯಸಭಾಧ್ಯಕ್ಷ
3.ಜಗಜೋತ್ ಸಿಂಗ್
ಬಿಹಾರದ ಗುರುದ್ವಾರ ಪಟನಾ ಸಾಹಿಬ್ ಅಧ್ಯಕ್ಷ ಜಗಜೋತ್ ಸಿಂಗ್, ಇಂದು ತುಂಬಾ ದುಃಖಕರವಾದ ದಿನವಾಗಿದೆ. ರಾಹುಲ್ ಗಾಂಧಿ ಅವರು ಸದನದಲ್ಲಿ ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಮಂಡಿಸಿದ ರೀತಿ ನೋಡಿದ್ರೆ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎಂಬುವುದು ತಿಳಿಯುತ್ತದೆ. ಸದನದಲ್ಲಿ ರಾಹುಲ್ ಗಾಂಧಿಯವರು ತಪ್ಪಾದ ವಿಷಯಗಳನ್ನು ಹೇಳಿದ್ದಾರೆ. ಸಿಖ್,ಹಿಂದೂ ಅಥವಾ ಯಾವುದೇ ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿದ್ರೆ ಅದರ ಬಗ್ಗೆ ಮಾತನಾಡಬಾರದು. ಸಂಪೂರ್ಣ ಮಾಹಿತಿ ಪಡೆದ ನಂತರವೇ ಮಾತನಾಡಬೇಕು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. 1984ರಲ್ಲಿ ಸಿಖ್ ಸಮುದಾಯದ ಜೊತೆ ನಡೆದ ಹಿಂಸೆ ಬಗ್ಗೆ ಮಾಹಿತಿ ಇಲ್ಲ ಅನ್ನಿಸುತ್ತದೆ. ದೆಹಲಿಯಲ್ಲಿಯೇ ಹಿಂಸೆಗೆ ಒಳಗಾದ ಸಂತ್ರಸ್ತ ಕುಟುಂಬಗಳಿವೆ. ರಾಹುಲ್ ಗಾಂಧಿ ಒಮ್ಮೆ ಅವರೆಲ್ಲರನ್ನೂ ಭೇಟಿಯಾಗಿ ಕ್ಷಮೆ ಕೇಳಲ ಎಂದು ಜಗಜೋತ್ ಸಿಂಗ್ ಆಗ್ರಹಿಸಿದರು.
ಸ್ಫೀಕರ್ ಓಂ ಬಿರ್ಲಾಗೆ ಪತ್ರ; ಮತ್ತೆ ಸಿಡಿದೆದ್ದ ರಾಹುಲ್ ಗಾಂಧಿ
| On Congress MP Rahul Gandhi's speech in Parliament, Haji Syed Salman Chishty, Gaddi Nashin-Dargah Ajmer Sharif says, "We have heard the statement made by the Leader of the Opposition Rahul Gandhi, in which he talked about linking the symbol of 'Abhayamudra' to Islamic… pic.twitter.com/95KHkadd2K
— ANI (@ANI)