ಲೋಕಸಭೆಯಲ್ಲಿ ಮೋದಿ ಮಾತು ಆರಂಭಿಸಿದ ಬೆನ್ನಲ್ಲೇ ವಿಪಕ್ಷಗಳ ಅಡ್ಡಿ, ಕೆರಳಿದ ಸ್ಪೀಕರ್ ಓಂ ಬಿರ್ಲಾ!

By Chethan Kumar  |  First Published Jul 2, 2024, 4:30 PM IST

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಮೇಲೆ ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಆದರೆ ಮೋದಿಗೆ ಮಾತಿಗೆ ವಿಪಕ್ಷಗಳು ಸಂಪೂರ್ಣ ಅಡ್ಡಿಪಡಿಸಿದೆ. 
 


ನವದೆಹಲಿ(ಜು.2) ರಾಷ್ಟ್ರಪತಿಗಳ ಭಾಷಣ ವಂದನಾ ನಿರ್ಣಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಆರಂಭದಿದಲೇ ವಿಪಕ್ಷಗಳು ತೀವ್ರ ಅಡ್ಡಿಪಡಿಸಿದೆ. ವಿಪಕ್ಷಗಳ ಗದ್ದಲ ತೀವ್ರಗೊಳ್ಳುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಕೆರಳಿದ್ದಾರೆ. ವಿಪಕ್ಷಗಳ ನಾಯಕರನ್ನು ತರಾಟೆಗೆ ತೆಗೆದುಕೊಂಡು ಮೋದಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ವಿಪಕ್ಷಗಳು ಮಾತ್ರ ಮೋದಿ ಪ್ರತಿ ಮಾತಿಗೆ ಅಡ್ಡಿಪಡಿಸಿದೆ.

ರಾಷ್ಟ್ರಪತಿಗಳ ಭಾಷಣ ಮೇಲೆ ವಂದನಾ ನಿರ್ಣಯ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿಗೆ ವಿಪಕ್ಷಗಳು ಭಾರಿ ಅಡ್ಡಿ ಮಾಡಿತು. ಕೆಲ ಸದಸ್ಯರು ರಾಷ್ಟ್ರಪತಿ ಭಾಷಣದ ಮೇಲೆ ವಿಚಾರ, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮೊದಲ ಬಾರಿಗೆ ಸಂಸದರಾಗಿ ಆಗಮಿಸಿರುವ ಸದಸ್ಯರು, ಎಲ್ಲಾ ನಿಯಮಗಳನ್ನು ಪಾಲನೆ ಮಾಡುತ್ತಾ ಸದನದ ಗೌರವ ಹೆಚ್ಚಿಸಿದ್ದಾರೆ. 

Tap to resize

Latest Videos

ಸ್ಫೀಕರ್‌ ಓಂ ಬಿರ್ಲಾಗೆ  ಪತ್ರ; ಮತ್ತೆ ಸಿಡಿದೆದ್ದ ರಾಹುಲ್ ಗಾಂಧಿ

ವಿಶ್ವದ  ಅತೀ ದೊಡ್ಡ ಚುನಾವಣೆಯಲ್ಲಿ ಜನತೆ ನಮ್ಮನ್ನು ಗೆಲ್ಲಿಸಿದ್ದಾರೆ. ನಾನು ಕೆಲ ಸದಸ್ಯರ ಪರಿಸ್ಥಿತಿ ಅರ್ಥಮಾಡಿಕೊಳ್ಳಬಲ್ಲೆ. ಸುಳ್ಳನ್ನೇ ಮುಂದಿಟ್ಟುಕೊಂಡು ಜನರ ಬಳಿ ತೆರಳಿದ ನಾಯಕರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ. ಈ ವೇಳೆ ವಿಪಕ್ಷಗಳ ಗದ್ದಲ ಅತಿಯಾಗಿದೆ ಕೆರಳಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಮಧ್ಯಪ್ರವೇಶಿಸಿ ವಿಪಕ್ಷಗಳ ನಾಯಕರನ್ನು ತರಾಟಗೆ ತೆಗೆದುಕೊಂಡಿದ್ದಾರೆ. ನಿಮಗೆ ಸಾಕಷ್ಟು ಸಮಯ ನೀಡಲಾಗಿದೆ. ಒಬ್ಬರು ಮಾತನಾಡುತ್ತಿರುವಾಗ ಗದ್ದಲ ಸೃಷ್ಟಿಸಿ ಸದನದ ಗೌರವ ಕಳೆಯಬೇಡಿ ಎಂದು ಎಚ್ಚರಿಸಿದ್ದಾರೆ.

ಮಾತು ಮುಂದುರಿಸಿದ ಮೋದಿ, ನಮಗೆ ಈ ದೇಶದ ಜನತೆ ಜನಾದೇಶ ನೀಡಿದ್ದಾರೆ. ಕಳೆದ 10 ವರ್ಷದ ನಮ್ಮ ಆಡಳಿತ ನೋಡಿದ ಜನ, ಬಡವರ ಕಲ್ಯಾಣಕ್ಕಾಗಿ ನಾವು ಮಾಡಿದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ನೋಡಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ, ಭ್ರಷ್ಟಾಚಾರ ಕುರಿತು ನಾವು ಶೂನ್ಯ ಸಹಷ್ಣುತೆ ಹೊಂದಿದ್ದೇವೆ ಎಂದಿದ್ದೇವೆ. ಕಳೆದ 10 ವರ್ಷದಲ್ಲಿ ನಾವು ಭ್ರಷ್ಟಾಚಾರ ವಿರುದ್ದ ಹೋರಾಡಿದ್ದೇವೆ. ಪಾರದರ್ಶಿಕ ಆಡಳಿತ ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ. 

ದೇಶ ಮೊದಲು, ಇದು ನಮ್ಮ ಮೂಲ ಮಂತ್ರವಾಗಿದೆ.ಕಳೆದ 10 ವರ್ಷ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಎಲ್ಲರ ಅಭಿವೃದ್ಧಿಗೆ ಶ್ರಮಿಸಿದ್ದೇವೆ.  ಈ ದೇಶ ತುಷ್ಠಿಕರಣದ ಆಡಳಿತ ನೋಡಿದೆ. ನಾವು ತುಷ್ಠೀಕರಣ ಆಡಳಿತ ಮಾಡಿಲ್ಲ, ಜನರ ಸಂತುಷ್ಠಿಕರಣ ಆಡಳಿತ ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಕಡತದಿಂದ ವಿವಾದಿತ ಅಂಶ ತೆಗೆದಿದ್ದಕ್ಕೆ ರಾಹುಲ್ ಗಾಂಧಿ ಮೊದಲ ಪ್ರತಿಕ್ರಿಯೆ

click me!