ಸೆಂಚುರಿ ಬಾರಿಸಿ ಮರು ಮದುವೆಯಾದ ತಾತ... ಮೊಮ್ಮಕ್ಕಳಿಂದಲೇ ವಿವಾಹ ಆಯೋಜನೆ

By Suvarna News  |  First Published Feb 18, 2022, 12:18 PM IST
  • 100ನೇ ಹುಟ್ಟುಹಬ್ಬದಂದು ಮರು ಮದುವೆಯಾದ ಬೆಂಗಾಲಿ ತಾತ
  • 90 ವರ್ಷದ ಪತ್ನಿಯನ್ನೇ ಮತ್ತೆ ಮದುವೆಯಾದ ವಿಶ್ವನಾಥ್ ಸರ್ಕಾರ್‌
  • ಆರು ಮಕ್ಕಳು, 23 ಮೊಮ್ಮಕ್ಕಳು ಮತ್ತು 10 ಮರಿ ಮಕ್ಕಳನ್ನು ಹೊಂದಿರುವ ದಂಪತಿ

ವ್ಯಕ್ತಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬದಂದು ತಮ್ಮ ಪತ್ನಿಯನ್ನು ಮತ್ತೊಮ್ಮೆ ಮದುವೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ(Murshidabad) ಈ ಘಟನೆ ನಡೆದಿದೆ. ತಮ್ಮ ಕುಟುಂಬದ ಹಿರಿಯಜ್ಜನ 100ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು  ಇವರ ಮಕ್ಕಳು ಹಾಗೂ ಮೊಮ್ಮಕ್ಕಳು ಈ ಐಡಿಯಾ ಮಾಡಿದ್ದರು.

ಶತಾಯುಷಿ ವಿಶ್ವನಾಥ್ ಸರ್ಕಾರ್‌ (Vishwanath Sarkar) ಅವರು ಇತ್ತೀಚೆಗಷ್ಟೇ ತಮ್ಮ 100ನೇ ವಸಂತಕ್ಕೆ ಕಾಲಿರಿಸಿದ್ದರು. ಇವರ ಪತ್ನಿ ಸುರೋದ್ವನಿ ಸರ್ಕಾರ್‌ (Surodwani Sarkar) ಅವರಿಗೆ 90 ವರ್ಷವಾಗಿದ್ದು, ತುಂಬು ಜೀವನವನ್ನು ನಡೆಸಿದ ಈ ದಂಪತಿ ತುಂಬು ಕುಟುಂಬವನ್ನು ಹೊಂದಿದ್ದಾರೆ. ಈ ಹಿರಿಯ ದಂಪತಿಗೆ ಆರು ಮಕ್ಕಳು, 23 ಮೊಮ್ಮಕ್ಕಳು ಮತ್ತು 10 ಮರಿ ಮಕ್ಕಳಿದ್ದಾರೆ. ಅಜ್ಜನ 100 ನೇ ಹುಟ್ಟುಹಬ್ಬದಂದು ಏನಾದರೂ ವಿಶೇಷವಾದುದನ್ನು ಮಾಡಬೇಕೆಂದು ಇವರ ಮೊಮ್ಮಕ್ಕಳು ನಿರ್ಧರಿಸಿ ಈ ಮದುವೆಯ ಕಾರ್ಯಕ್ರಮ ಆಯೋಜಿಸಿದ್ದಾರೆ.

Tap to resize

Latest Videos

ತಮ್ಮ ತಾತನನ್ನು ಮೆರವಣಿಗೆ ಕರೆದೊಯ್ದ ಈ ಮಕ್ಕಳು ನಂತರ ಬುಧವಾರದಂದು ಮತ್ತೆ ಅವರಿಗೆ ತಮ್ಮ ಪತ್ನಿಯೊಂದಿಗೆ ಮದುವೆ ಮಾಡಿಸಿದರು. ಮದುವೆಯ ನಂತರ ಕುದುರೆಯ ಮೂಲಕ ಅಜ್ಜ ವಿಶ್ವನಾಥ್‌ ಹಾಗೂ ಅವರ ಪತ್ನಿ ಸುರೊದ್ವನಿ ಅವರನ್ನು ಮೆರವಣಿಗೆ ಮೂಲಕ ಬೆನಿಯಾಪುಕುರ್ ( Beniyapukur) ನಲ್ಲಿರುವ ಅವರ ಮನೆಗೆ ಕರೆದುಕೊಂಡು ಬರಲಾಯಿತು. 1953ರಲ್ಲಿ ವಿಶ್ವನಾಥ್‌ ಹಾಗೂ ಸುರೊದ್ವನಿ ಅವರು ಮೊದಲ ಬಾರಿ ವಿವಾಹವಾಗಿದ್ದರು. ಈ ಮದುವೆ ವಿಚಾರ ಈಗ ಊರಿನ ಜನರ ಚರ್ಚೆಯ ವಿಚಾರವಾಗಿದೆ. 

26ನೇ ವಿದೇಶ ಪ್ರವಾಸಕ್ಕೆ ಕೇರಳ ಟೀ ಅಂಗಡಿ ವೃದ್ಧ ದಂಪತಿ ಸಜ್ಜು!

ಇಡೀ ಕುಟುಂಬಕ್ಕೆ ಇದು ಅದ್ಧೂರಿ ಸಮಾರಂಭವಾಗಿತ್ತು. ಉದ್ಯೋಗದ ಕಾರಣಕ್ಕೆ ಬೇರೆ  ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿರುವ ಈ ಕುಟುಂಬದ ದಂಪತಿಗಳು, ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಮನೆಗೆ ಮರಳಿದರು. ಈ ಮದುವೆಯಲ್ಲಿ, ಹೊಸ ಮದುವೆಯಂತೆ ವಧುವನ್ನು ಅವರನ ಹೆತ್ತವರ ಮನೆಯಿಂದ ವರನ ಮನೆಗೆ ಕರೆತರಲಾಯಿತು. ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿದ್ದೆವು. ನಮ್ಮ ಅಜ್ಜಅಜ್ಜಿ ಜಿಯಾಗಂಜ್‌ನ (Jiaganj) ಬೆನಿಯಾಪುಕೂರ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಪೂರ್ವಿಕರ ಮನೆ ಅಲ್ಲಿಂದ ಸುಮಾರು 5 ಕಿ.ಮೀ ದೂರದ ಬಮುನಿಯಾ ( Bamuniya) ಗ್ರಾಮದಲ್ಲಿದೆ. ಎರಡು ದಿನಗಳ ಹಿಂದೆ ನನ್ನ ಅಜ್ಜಿಯನ್ನು ಅಲ್ಲಿಗೆ ಕರೆದೊಯ್ಯಲಾಯಿತು ಎಂದು ಮೊಮ್ಮಕ್ಕಳಲ್ಲಿ ಒಬ್ಬರಾದ ಪಿಂಟೋ ಮಂಡಲ್ (Pinto Mandal)ಹೇಳಿದರು.

ಮೊಮ್ಮಗಳು ತನ್ನ ಅಜ್ಜಿಯನ್ನು ವಧುವಿನಂತೆ ಮದುವೆಗೆ ಸಿಂಗರಿಸಿದಳು. ಅವಳಿಗೆ ಮೇಕಪ್ ಮಾಡಲು ಸಹಾಯ ಮಾಡಿದಳು. ಅದೇ ಸಮಯದಲ್ಲಿ ಮೊಮ್ಮಗ ಬೆನಿಯಾಪುಕೂರಿನಲ್ಲಿ ವರನನ್ನು ಸಿದ್ಧಗೊಳಿಸಿದನು. ಬುಧವಾರ ವಿಶ್ವನಾಥ್ ಅವರನ್ನು ಬಮುನಿಯಾಗೆ ಕರೆದೊಯ್ಯಲಾಯಿತು. ಕುದುರೆ ಗಾಡಿಯಲ್ಲಿ ವರ ಮನೆಗೆ ಬಂದ ತಕ್ಷಣ ಪಟಾಕಿಗಳನ್ನು ಸಿಡಿಸಿ ವರನನ್ನು ಸ್ವಾಗತಿಸಲಾಯಿತು. ಎಲ್ಲರೂ ಹೊಸ ಧೋತಿ-ಕುರ್ತಾ ಮತ್ತು ಸೀರೆ ಧರಿಸಿ ತಯಾರಾಗಿ ನಿಂತಿದ್ದರು. ನಂತರ ದಂಪತಿಗಳು ಹಾರ ಬದಲಾಯಿಸಿಕೊಂಡರು. ಈ ವೇಳೆ ದಂಪತಿಗಳಿಗೆ ಹೂವಿನ ಬದಲು ಕರೆನ್ಸಿ ನೋಟುಗಳ ಮಾಲೆ ಹಾಕಲಾಗಿತ್ತು. 'ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯದ್ದನ್ನು ನೋಡಿ ನನಗೆ ಹೊಸ ಮದುವೆಯ ಆಲೋಚನೆ  ಮನಸ್ಸಿಗೆ ಬಂದಿತು. ಅದರ ನಂತರ ನಾನು ನನ್ನ ಇತರ ಕುಟುಂಬ ಸದಸ್ಯರೊಂದಿಗೆ ನನ್ನ ಆಲೋಚನೆಗಳನ್ನು ಹಂಚಿಕೊಂಡಿದ್ದೇನೆ. ಈ ವಿಶಿಷ್ಟ ವಿವಾಹವನ್ನು ಏರ್ಪಡಿಸಲು ಎಲ್ಲರೂ ನನಗೆ ಬೆಂಬಲ ನೀಡಿದರು' ಎಂದು ಈ ಹಿರಿಯ ಸರ್ಕಾರ್ ದಂಪತಿಯ ಸೊಸೆ ಗೀತಾ ಸರ್ಕಾರ್ (Geeta Sarkar) ಹೇಳಿದರು.

ಚಿಟ್ಟಿ ಆಯಿ ಹೈ ಹಾಡಿದ ವೃದ್ಧ ದಂಪತಿ... ವೈರಲ್‌ ಆಯ್ತು ವಿಡಿಯೋ

ಶತಾಯುಷಿ ವರ ವಿಶ್ವನಾಥ್ ಮಾತನಾಡಿ, ನಾನು ಸುರೋಧ್ವನಿ ಅವರನ್ನು ಸುಮಾರು 70 ವರ್ಷಗಳ ಹಿಂದೆ ಮದುವೆಯಾಗಿದ್ದೆ. ಬುಧವಾರ, ನನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಸಮ್ಮುಖದಲ್ಲಿ ನಾನು ಅವನನ್ನು ಮರುಮದುವೆ ಮಾಡಿಕೊಂಡೆ. ನನ್ನ ಮಕ್ಕಳು ಭವ್ಯ ಭೋಜನವನ್ನೂ ಏರ್ಪಡಿಸಿದ್ದಾರೆ. ಗ್ರಾಮಸ್ಥರಿಗೆ ಹಬ್ಬದೂಟವೂ ನಡೆಯಿತು. ವಿಶಿಷ್ಟವಾದ ವಿವಾಹವನ್ನು ವೀಕ್ಷಿಸಲು ಅವರು ಒಟ್ಟುಗೂಡಿದರು ಎಂದು ಹೇಳಿದರು. ಈ ದಂಪತಿಯ ಹಿರಿಯ ಪುತ್ರಿ ಆರತಿ ಮಂಡಲ್ (Aarti Mandal) ಮಾತನಾಡಿ, 'ಅದೃಷ್ಟಶಾಲಿಗಳು ಮಾತ್ರ ತಮ್ಮ ಹೆತ್ತವರ ಮದುವೆಯನ್ನು ನೋಡುವ ಅವಕಾಶವನ್ನು ಪಡೆಯುತ್ತಾರೆ.  ಇಂದು ನನ್ನ ಹೆತ್ತವರ ಹೊಸ ಮದುವೆಯನ್ನು ನೋಡಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದರು.

click me!