
ಕೋಲ್ಕತ್ತಾ(ಫೆ.18): 35 ವಾರಗಳ ನಂತರ ಮಹಿಳೆಯೊಬ್ಬಳು ಅಬಾರ್ಷನ್ ಮಾಡಿಸಬಹುದು ಎಂದು ಕಲ್ಕತ್ತಾ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ. ಮಹಿಳೆಯ ವೈದ್ಯಕೀಯ ಮಂಡಳಿಯ ವರದಿಯು ಅರ್ಜಿದಾರಳ ಬೆನ್ನುಮೂಳೆಯಲ್ಲಿರುವ ದೋಷ ಮತ್ತು ಭ್ರೂಣ ಸರಿಯಾಗಿ ಬೆಳೆಯದಿರುವುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಈ ಅಪರೂಪದ ಅನುಮತಿಯನ್ನು ಕೋರ್ಟ್ ನೀಡಿದೆ. ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯ ಒಂಬತ್ತು ಸದಸ್ಯರ ವೈದ್ಯಕೀಯ ಮಂಡಳಿಯ ವರದಿಯಲ್ಲಿ, ತಕ್ಷಣದ ಗರ್ಭಧಾರಣೆಯಿಂದ ಮಗು ಬದುಕುಳಿಯುವ ಅಥವಾ ಸಾಮಾನ್ಯ ಜೀವನವನ್ನು ನಡೆಸುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ನ್ಯಾಯಾಲಯವು ಗಮನಿಸಿದೆ.
ತಾಯಿ ಮತ್ತು ಮಗು ಅಪಾಯದಲ್ಲಿ
ವಾಸ್ತವವಾಗಿ, ವೈದ್ಯಕೀಯ ಮಂಡಳಿಯ ವರದಿಯಲ್ಲಿ, ತಾಯಿ ಮತ್ತು ಮಗುವಿಗಿರುವ ಅಪಾಯದ ಬಗ್ಗೆ ಮಾತನಾಡಲಾಗಿದೆ. ನ್ಯಾಯಮೂರ್ತಿ ರಾಜಶೇಖರ್ ಮಂಥಾ ಅವರು ವರದಿಯನ್ನು ಪರಿಶೀಲಿಸಿದ ನಂತರ, ಸತ್ಯ ಮತ್ತು ಸಂದರ್ಭಗಳ ಸಂಪೂರ್ಣ ವ್ಯಾಪ್ತಿಯನ್ನು ಗಣನೆಗೆ ತೆಗೆದುಕೊಂಡು, ಅರ್ಜಿದಾರರಿಗೆ ವೈದ್ಯಕೀಯವಾಗಿ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಈ ನ್ಯಾಯಾಲಯವು ಅಧಿಕಾರ ನೀಡುತ್ತದೆ ಎಂದು ಹೇಳಿದೆ.
ಒಂಬತ್ತು ಹಿರಿಯ ವೈದ್ಯರ ತಂಡವು ವೈದ್ಯಕೀಯ ಮಧ್ಯಸ್ಥಿಕೆಯಿಂದ ಮಗು ಜನಿಸಿದರೂ ಅದು ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂಬ ವಿಚಾರ ವರದಿಯಲ್ಲಿ ಗಮನಸೆಳೆದಿದೆ ಎಂದು ಹೈಕೋರ್ಟ್ ಗಮನಿಸಿದೆ. ಮಗುವಿನಲ್ಲಿ ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವಿದೆ. ಅದನ್ನು ಉಳಿಸಲು ಕಷ್ಟವಾಗುತ್ತದೆ ಎಂದೂ ಇದರಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆ ಅರ್ಜಿ ಸಲ್ಲಿಸಿ ಅನುಮತಿ ಕೋರಿದ್ದರು
ವಾಸ್ತವವಾಗಿ, 36 ವರ್ಷದ ಮಹಿಳೆ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಮಹಿಳೆ ತನ್ನ 35 ತಿಂಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅನುಮತಿ ಕೋರಿದ್ದರು. ವಿವಿಧ ವೈಪರೀತ್ಯಗಳಿಂದಾಗಿ ತಾನು ಮತ್ತು ಆಕೆಯ ಪತಿ ಗರ್ಭಪಾತಕ್ಕೆ ವೈದ್ಯಕೀಯವಾಗಿ ಸಿದ್ಧರಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿತ್ತು. ಮಗುವಿನ ಜನನಕ್ಕೆ ಕಷ್ಟವಿದೆ, ಜನಿಸಿದರೂ ಅದು ಹಲವು ದೀರ್ಘಕಾಲದ ಕಾಯಿಲೆಗಳನ್ನು ಎದುರಿಸಬೇಕಾಗಿದ್ದು, ಜೀವ ಉಳಿಸಲು ಸಾಧ್ಯವಾಗಲ್ಲ ಎಂದು ವೈದ್ಯಕೀಯ ವರದಿಯನ್ನು ಮಹಿಳೆ ಉಲ್ಲೇಖಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡುವ ಹಕ್ಕಿದೆ: ಉತ್ತರಾಖಂಡ ಹೈಕೋರ್ಟ್
1971ರ ವೈದ್ಯಕೀಯ ಗರ್ಭಪಾತ ಕಾಯಿದೆಯ ಷರತ್ತುಗಳಿಗೆ ಒಳಪಟ್ಟು ಅತ್ಯಾಚಾರ ಸಂತ್ರಸ್ತ ಮಹಿಳೆ ಗರ್ಭಪಾತ ಮಾಡುವ ಹಕ್ಕನ್ನು ಹೊಂದಿದ್ದಾಳೆ ಎಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿದೆ. ಜಸ್ಟಿಸ್ ಅಲೋಕ್ ಕುಮಾರ್ ವರ್ಮಾ ಅವರು ಬದುಕುವ ಹಕ್ಕು ಎಂದರೆ "ಬದುಕು ಅಥವಾ ಪ್ರಾಣಿಗಳ ಅಸ್ತಿತ್ವ" ಕ್ಕಿಂತ ಹೆಚ್ಚು ಎಂದು ಒತ್ತಿ ಹೇಳಿದರು. ಅಲ್ಲದೇ ಇದು ಘನತೆಯಿಂದ ಬದುಕುವ ಹಕ್ಕನ್ನು ಒಳಗೊಂಡಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ,
"ಅತ್ಯಾಚಾರದ ಆಧಾರದ ಮೇಲೆ ಗರ್ಭಾವಸ್ಥೆಯನ್ನು ಮುಕ್ತಾಯಗೊಳಿಸುವ ಹಕ್ಕಿದೆ. ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಆಯ್ಕೆ ಮಾಡುವ ಹಕ್ಕಿದೆ. ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಷರತ್ತುಗಳಿಗೆ ಒಳಪಟ್ಟು ಇಂತಹುದ್ದೊಂದು ಹೆಜ್ಜೆ ಇರಿಸಲು ಆಕೆಗೆ ಹಕ್ಕಿದೆ." ಎಂದಿದೆ.
ಏನಿದು ಪ್ರಕರಣ?
- 16 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಯ ತಂದೆ ಆಕೆಯ 28 ವಾರಗಳ ಗರ್ಭಧಾರಣೆಯನ್ನು ತಕ್ಷಣವೇ ಅಂತ್ಯಗೊಳಿಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ. ಗರ್ಭಾವಸ್ಥೆಯನ್ನು ಮುಂದುವರಿಸಲು ಅವಕಾಶ ನೀಡಿದರೆ ಸಂತ್ರಸ್ತೆ ಮಾನಸಿಕವಾಗಿ ಘಾಸಿಗೊಳ್ಳುತ್ತಾಳೆ ಮತ್ತು ಮಗು ಅನೇಕ ಸಮಸ್ಯೆಗಳೊಂದಿಗೆ ಜನಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ನ್ಯಾಯಾಲಯದ ಹಿಂದಿನ ಆದೇಶಗಳಿಗೆ ಅನುಗುಣವಾಗಿ, ವೈದ್ಯಕೀಯ ಮಂಡಳಿಯು ತನ್ನ ವರದಿಯನ್ನು ಸಲ್ಲಿಸಿದ್ದು, ಸಂತ್ರಸ್ತೆ ಮತ್ತು ಭ್ರೂಣದ ಕಾರ್ಯಸಾಧ್ಯತೆಯ ಅಪಾಯವನ್ನು ಪರಿಗಣಿಸಿ, ಈ ಸಂದರ್ಭದಲ್ಲಿ ಅಬಾರ್ಷನ್ ಮಾಡಿಸುವುದು ಸೂಕ್ತವಲ್ಲ ಎಂದು ಹೇಳಿದೆ. ಅಲ್ಲದೇ ಇದು ಸಂತ್ರಸ್ತೆಯ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
- ಹೀಗಿರುವಾಗ ಗರ್ಭಾವಸ್ಥೆಯನ್ನು ಮುಂದುವರಿಸಲು ಒತ್ತಾಯಿಸುವುದು ಆರ್ಟಿಕಲ್ 21 ರ ಅಡಿಯಲ್ಲಿ ಖಾತರಿಪಡಿಸಲಾದ ಮಾನವ ಘನತೆಯೊಂದಿಗೆ ಬದುಕುವ ಹುಡುಗಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ;
- ಸಂತ್ರಸ್ತೆಯ ಜೀವಕ್ಕೆ ಯಾವುದೇ ಅಪಾಯ ಕಂಡುಬಂದಲ್ಲಿ ಕಾರ್ಯವಿಧಾನವನ್ನು ರದ್ದುಗೊಳಿಸುವ ನಿರ್ದೇಶನದೊಂದಿಗೆ ಾಬಾರ್ಷನ್ ಮಾಡಿಸಲು ಅನುಮತಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ