2008 Ahmedabad Bomb Blasts: 38 ಅಪರಾಧಿಗಳಿಗೆ ಗಲ್ಲು, 11 ಮಂದಿಗೆ ಜೀವಾವಧಿ ಶಿಕ್ಷೆ!

Published : Feb 18, 2022, 11:51 AM IST
2008 Ahmedabad Bomb Blasts: 38 ಅಪರಾಧಿಗಳಿಗೆ ಗಲ್ಲು, 11 ಮಂದಿಗೆ ಜೀವಾವಧಿ ಶಿಕ್ಷೆ!

ಸಾರಾಂಶ

 * ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ * 13 ವರ್ಷ ವಿಚಾರಣೆ ಬಳಿಕ 49 ಮಂದಿಗೆ ಶಿಕ್ಷೆ ಪ್ರಕಟ * 38 ಅಪರಾಧಿಗಳಿಗೆ ಗಲ್ಲು, 11 ಮಂದಿಗೆ ಜೀವಾವಧಿ ಶಿಕ್ಷೆ

ಅಹಮದಾಬಾದ್(ಫೆ.18): ಜುಲೈ 2008 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದ ಸಂಬಂಧ ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ನ್ಯಾಯಾಲಯವು 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ವಿಧಿಸಿದ್ದು, 11 ಅಪರಾಧಿಗಳು ತಮ್ಮ ಕೊನೆಯ ಉಸಿರು ಇರುವವರೆಗೂ ಸೆರೆಯಲ್ಲಿರಲು ಶಿಕ್ಷೆ, ಅಂದರೆ ಜೀವಾವಧಿ ಶಿಕ್ಷೆ ವಿಧಿಸಿದೆ. ಫೆಬ್ರವರಿ 8 ರಂದು ವಿಶೇಷ ನ್ಯಾಯಾಲಯವು ಅವರೆಲ್ಲರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. 28 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಈ ಪ್ರಕರಣದ ವಿಚಾರಣೆ 13 ವರ್ಷಗಳಿಂದ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

21 ಸ್ಫೋಟಗಳಿಂದ ಅಹಮದಾಬಾದ್ ನಲುಗಿತ್ತು, 56 ಮಂದಿ ಸಾವು

26 ಜುಲೈ 2008 ರಂದು, ಅಹಮದಾಬಾದ್ ನಗರದಲ್ಲಿ 70 ನಿಮಿಷಗಳ ಅಂತರದಲ್ಲಿ ಒಟ್ಟು 21 ಬಾಂಬ್ ಸ್ಫೋಟಗಳು (Bomb Blasts) ಸಂಭವಿಸಿದವು. ಈ ಬಾಂಬ್ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದರು. ಸ್ಫೋಟದಲ್ಲಿ ಸುಮಾರು 200 ಜನರು ಗಾಯಗೊಂಡಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸಂಬಂಧಿಸಿದ ವ್ಯಕ್ತಿಗಳು ಈ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಸಿಮಿಯೊಂದಿಗೆ ಸಂಯೋಜಿತ ಸಂಘಟನೆಯಾಗಿದೆ ಎಂದು ಹೇಳಲಾಗುತ್ತದೆ.

ಗೋದ್ರಾಗೆ ಸೇಡು?

2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರದ ಗಲಭೆಗೆ ಪ್ರತೀಕಾರ ತೀರಿಸಿಕೊಳ್ಳಲು ಇಂಡಿಯನ್ ಮುಜಾಹಿದ್ದೀನ್ ಈ ಸ್ಫೋಟ ನಡೆಸಿದೆ ಎಂದು ಆರೋಪದಲ್ಲಿ ಹೇಳಲಾಗಿದೆ. ಅಹಮದಾಬಾದ್‌ನಲ್ಲಿ ಸ್ಫೋಟದ ಕೆಲವು ದಿನಗಳ ನಂತರ, ಪೊಲೀಸರು ಸೂರತ್‌ನ ವಿವಿಧ ಸ್ಥಳಗಳಿಂದ ಬಾಂಬ್‌ಗಳನ್ನು ವಶಪಡಿಸಿಕೊಂಡರು. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಹಮದಾಬಾದ್‌ನಲ್ಲಿ 20 ಮತ್ತು ಸೂರತ್‌ನಲ್ಲಿ 15 ಎಫ್‌ಐಆರ್‌ಗಳು ದಾಖಲಾಗಿವೆ.

26/11 Attack: ಕಸಬ್‌ ಫೋನನ್ನು ಆಗಿನ ಪೊಲೀಸ್‌ ಕಮೀಷನರ್‌ ನಾಶಗೊಳಿಸಿದರು: ನಿವೃತ್ತ ಅಧಿಕಾರಿಯ ಆರೋಪ

ಜೈಲಿನಲ್ಲಿ 213 ಅಡಿ ಉದ್ದದ ಸುರಂಗ ಕೊರೆದು ಪರಾರಿಯಾಗಲು ಯತ್ನ

ವಿಶೇಷ ನ್ಯಾಯಾಲಯವು ಆರಂಭದಲ್ಲಿ ಈ ಪ್ರಕರಣವನ್ನು ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ನಡೆಸುತ್ತಿತ್ತು. ನಂತರ, ಹೆಚ್ಚಿನ ವಿಚಾರಣೆಗಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದವು. 2013ರಲ್ಲಿ ಈ ಪ್ರಕರಣದ ಕೆಲ ಆರೋಪಿಗಳು ಜೈಲಿನಲ್ಲಿ 213 ಅಡಿ ಉದ್ದದ ಸುರಂಗ ಕೊರೆದು ಪರಾರಿಯಾಗಲು ಯತ್ನಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ