ಕೊರೋನಾ ಕೇಕೆ ನಡುವೆ ಪಶ್ಚಿಮ ಬಂಗಾಳದಿಂದ ಬಂತು ಸಿಹಿ ಸುದ್ದಿ!

By Suvarna NewsFirst Published Jun 23, 2020, 7:27 PM IST
Highlights

ಕೊರೋನಾ ವೈರಸ್ ದೇಶದಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಏರುತ್ತಿದೆ. ಇದರ ನಡುವೆ ಪಶ್ಚಿಮ ಬಂಗಾಳದಿಂದ ಸಿಹಿ ಸುದ್ದಿಯೊಂದು ಹೊರಬಂದಿದೆ. 

ಪ.ಬಂಗಾಳ(ಜೂ.23): ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಹೆಜ್ಜೆ ಹೆಜ್ಜೆಗೂ ಆತಂಕ ಸೃಷ್ಟಿಸುತ್ತಿದೆ. ಭಾರತದಲ್ಲಿ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದೆ. ಕೊರೋನಾ ಅಬ್ಬರದ ನಡುವೆ ಪಶ್ಚಿಮ ಬಂಗಾಳದಲ್ಲಿ ಕೊರೋನಾ ಸೋಂಕಿತರ ಶೀಘ್ರದಲ್ಲೇ ಗುಣಮುಖರಾಗುತ್ತಿದ್ದಾರೆ. ಬಂಗಾಳದಲ್ಲಿ ಕೊರೋನಾ ಗುಣಮುಖರಾದವರ ಸಂಖ್ಯೆ ಶೇಕಡಾ 60.50.

ಬೆಂಗ್ಳೂರಲ್ಲಿ ಸೊಂಕಿತರ ಸಂಖ್ಯೆ ಜತೆಗೆ ಸಾವಿನ ಪ್ರಮಾಣದಲ್ಲೂ ಏರಿಕೆ

ಭಾರತದಲ್ಲಿ ಕೊರೋನಾ ಸೋಂಕಿತರ ಗುಣಮುಖರ ಸಂಖ್ಯೆ ಶೇಕಡಾ 55. ಭಾರತ ಹಾಗೂ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಬಂಗಾಳದಲ್ಲಿ ಗುಣಮುಖರ ಸಂಖ್ಯೆಗರಿಷ್ಠವಾಗಿದೆ. ಬಂಗಾಳದಲ್ಲಿ  8, 687 ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 3 ದಿನಗಳಲ್ಲಿ ಗುಣಮುಖರ ಸಂಖ್ಯೆ 1,384.

ಪತಂಜಲಿಯಿಂದ ಕೊರೋನಿಲ್ ಔಷಧ ಬಿಡುಗಡೆ: 5 ದಿನದಲ್ಲಿ ಸೋಂಕಿತ ಗುಣಮುಖ..

ಜೂನ್ 22ರ ವೇಳೆಗೆ ಬಂಗಾಳದಲ್ಲಿ 4 ಲಕ್ಷ ಮಂದಿಯನ್ನು ತಪಾಸಣೆ ಮಾಡಲಾಗಿತ್ತು. ಇದರಲ್ಲಿ 14,358 ಮಂದಿಗೆ ಕೊರೋನಾ ಪಾಸಿಟೀವ್ ದೃಢವಾಗಿದೆ. ಇನ್ನು ಸೋಂಕಿತರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಈ ಮೂಲಕ ಬಂಗಾಳ ಇದೀಗ ಮಾದರಿಯಾಗುತ್ತಿದೆ.

ರಾಜ್ಯದಲ್ಲಿ ಕೊರೋನಾ ವೈರಸ್ ತಪಾಸಣೆಗೆ 49 ಕೇಂದ್ರಗಳನ್ನು ತೆರೆಯಲಾಗಿದೆ. ವಲಸೆ ಕಾರ್ಮಿಕರು ರಾಜ್ಯ ವಾಪಸ್ ಆದಾಗ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಇದಕ್ಕಾಗಿ ಕಟ್ಟು ನಿಟ್ಟಿನ ಕ್ರಮ, ಸೂಕ್ತ ಚಿಕಿತ್ಸೆ, ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ಕೊರೋನಾ ವೈರಸ್ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಬಂಗಾಳ ರಾಜ್ಯ ಕಾರ್ಯದರ್ಶಿ ಅಲ್ಪೂನ್ ಬಂಡೋಪಾದ್ಯಯ ಹೇಳಿದ್ದಾರೆ.
 

click me!