ಲಾಕ್‌ಡೌನ್ ನಿರ್ಬಂಧವೇ ಕಹಿಯಾಗಿದ್ದ ನಮಗೆ, 1975ರ ತುರ್ತು ಪರಿಸ್ಥಿತಿ ಊಹಿಸಲು ಸಾಧ್ಯವೇ?

By Suvarna NewsFirst Published Jun 23, 2020, 5:32 PM IST
Highlights

ನೋವು-ನಲಿವು, ಆರೋಪ-ಪ್ರತ್ಯಾರೋಪ ಹೀಗೆ ಎಲ್ಲವನ್ನು ಸೋಶಿಯಲ್ ಮೀಡಿಯಾದಿಂದಲೇ ಅರ್ಥಮಾಡಿಕೊಳ್ಳವು ಕಾಲ ಇದು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅತೀಯಾಗಿ ಅನುಭವಿಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿ ಎಲ್ಲಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಕರಾಳ ಸಂದರ್ಭ ಎಷ್ಟು ಘನಘೋರ ಎಂಬುದನ್ನು ಊಹಿಸಲು ಅಸಾಧ್ಯ.  ಸ್ವಾತಂತ್ರ್ಯವನ್ನೇ ಕಿತ್ತುಕೊಂಡ ತುರ್ತು ಪರಿಸ್ಥಿತಿಗೆ  ಇಂದಿರಾ ಗಾಂಧಿ ನೀಡಿದ ಕಾರಣಗಳೇ ವಿಚಿತ್ರ.

ದೇಶದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕಪ್ಪು ಚುಕ್ಕೆಯಾಗಿದೆ. ಈಗಿನ ರಾಜಕಾರಣಿಗಳ ಮಾತಿನಲ್ಲಿ ಹೇಳುವುದಾದರೆ, ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಇಂದಿರಾ ಗಾಂಧಿ ಸರ್ಕಾರದ ವಿರುದ್ಧ  ಪ್ರತಿಪಕ್ಷದ ಒತ್ತಡ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಕೋರ್ಟ್ ಆದೇಶ ಪ್ರಧಾನಿ ಇಂದಿರಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ನ್ಯಾಯಾಲಯ ಪ್ರವೇಶದಿಂದ ತನ್ನ ಅಧಿಕಾರ ಅಂತ್ಯದ ವಾಸನೆ ಗ್ರಹಿಸಿದ ಇಂದಿರಾ ಗಾಂಧಿ,  ಪ್ರಜಾಪ್ರಭುತ್ವ ಅಥವಾ ನೈತಿಕ ಮಾರ್ಗ ಅನುಸರಿಸಲಿಲ್ಲ. ಬದಲಾಗಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಅಧಿಕಾರದಲ್ಲಿ ಮುಂದುವರಿಯಲು ನಿರ್ಧರಿಸಿದರು. ತಮ್ಮ ತುರ್ತು ಪರಿಸ್ಥಿತಿ ನಿರ್ಧಾರವನ್ನು 3 ಕಾರಣಗಳನ್ನು ನೀಡಿ ಸಮರ್ಥಿಸಿಕೊಂಡರು. 

ವಿಧಿಯ ಕೈವಾಡ ಆ ದಿನ 2 ದುರಂತ ನಡೆಯಿತು; ಶಾಸ್ತ್ರಿ ನಿಧನರಾದರು, ಇಂದಿರಾ ಪ್ರಧಾನಿಯಾದರು!.

ತುರ್ತು ಪರಿಸ್ಥಿತಿ ಹೇರಲು ಇಂದಿರಾ ನೀಡಿದ ಕಾರಣ:

ಜೆಪಿ ಚಳವಳಿ ಹಾಗೂ ಜೆಪಿ ಭಾಷಣದಿಂದ ಭಾರತದ ಸ್ಥಿರತೆ, ಸಮಗ್ರತೆ, ಭದ್ರತೆ ಹಾಗೂ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ಜೆಪಿ ಭಾಷಣಗಳು ದಂಗೆಗೆ ಪ್ರಚೋದನೆ ನೀಡುತ್ತಿದೆ. ಶಸ್ತ್ರ ಸಜ್ಜಿತ ಪಡೆಗಳು, ಪೊಲೀಸರಿಗೆ ಜೆಪಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಗೆ ನೀಡಿದ ಮೊದಲ ಸಮರ್ಥನೆಯಾಗಿತ್ತು. ಎರಡನೆ ಸಮರ್ಥನೆ ಎಂದರೆ,   ಬಡವರಿಗೆ ಮತ್ತು ಹಿಂದುಳಿದವರಿಗೆ ತ್ವರಿತ ಆರ್ಥಿಕ ಅಭಿವೃದ್ಧಿಯ ಕಾರ್ಯಕ್ರಮವನ್ನು ಜಾರಿಗೆ ತರಬೇಕಾಗಿದೆ. ಇನ್ನು ಅಂತಿಮ ಸಮರ್ಥನೆಯಲ್ಲಿ ಗಾಂಧಿ, ಭಾರತವನ್ನು ಅಸ್ಥಿರಗೊಳಿಸುವ ಮತ್ತು ದುರ್ಬಲಗೊಳಿಸುವ ಉದ್ದೇಶದಿಂದ ವಿದೇಶಿ ಹಸ್ತಕ್ಷೇಪ ಮತ್ತು ವಿಧ್ವಂಸಕತೆಯ ಬಗ್ಗೆ ದೇಶವನ್ನು ಕಾಪಾಡಬೇಕಿದೆ ಎಂದರು. ಇದಕ್ಕಾಗಿ ತುರ್ತು ಪರಿಸ್ಥಿತಿ ಅಗತ್ಯವಿದೆ ಎಂದು ಸಮರ್ಥಿಸಿದ್ದರು. 

ಮಾಜಿ ಪ್ರಧಾನಿ ಇಂದಿರಾರನ್ನು ಬಂಧಿಸಿದ್ದ ಮಾಜಿ IPS ಅಧಿಕಾರಿ ನಿಧನ!.

ಪತ್ರಿಕಾ ಸ್ವಾತಂತ್ರ್ಯ ಕಿತ್ತುಕೊಂಡ ಇಂದಿರಾ:

ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮ ಅಂದರೆ ಅಂದಿನ ಮುದ್ರಣಾಲಯದ ಮೇಲೂ ನಿರ್ಬಂಧ ಹೇರಲಾಯಿತು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಇಂದಿರಾ ಗಾಂಧಿ, ಪ್ರಶ್ನಿಸುವ ಅಧಿಕಾರ ಹಾಗೂ ಪ್ರಶ್ನಿಸುವ ಹಕ್ಕು ಮಾನವನ ಪ್ರಗತಿಯ ಆಧಾರ ಎಂದಿದ್ದರು. ಇದೇ ಇಂದಿರಾ ಗಾಂಧಿ, ಮಾಧ್ಯಮದ ಪ್ರಶ್ನಿಸುವ ಹಕ್ಕನೇ ತುರ್ತು ಪರಿಸ್ಥಿತಿ ಹೇರಿ ಕಿತ್ತುಕೊಂಡರು.

ಇಂಧಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳು ಸರ್ಕಾರದ ಅಣತಿಯಂತಿರಬೇಕು ಎಂದು ಬಯಸಿದ್ದರು. ಮಾಧ್ಯಮಗಳು ತನ್ನೆಲ್ಲಾ ನಡೆಯನ್ನು ಕುರುಡಾಗಿ ಬೆಂಬಲಿಸುತ್ತದೆ ಹಾಗೂ ತನ್ನ ಅಧಿಕಾರ ಹಾಗೂ ಸಾಮರ್ಥ್ಯ ಹಾಗೂ ನಿರ್ಧಾರಗಳನ್ನು ಪ್ರಶ್ನಿಸಬಾರದು ಎಂದು ಬಯಸಿದ್ದರು. ಹೀಗಾಗಿ ಭಾರತದ ಮಾಧ್ಯಮಗಳು ಸರ್ಕಾರದ ವಕ್ತಾರನಾಗಿರಬೇಕು ಎಂದು ನಂಬಿದ್ದರು. ಸರ್ಕಾರವನ್ನು ಹೊಗಳುತ್ತಾ, ಕೆಲಸ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿತ್ತೂ ಮತ ಬಾಚಿಕೊಳ್ಳುವ ಎಜೆಂಟ್ ಆಗಿ ಮಾಧ್ಯ ವರ್ತಿಸಬೇಕು ಎಂದುಕೊಂಡಿದ್ದರು. 

ಇಂದಿರಾ-ಲಾಲಾ ಭೇಟಿ ಹೇಳಿಕೆ ವಾಪಸ್ ಪಡೆದ ಸಂಜಯ್ ರಾವುತ್!

ಮಾಧ್ಯಮದ ವಿರುದ್ಧ ಕೆಂಡಕಾರಿದ ಇಂದಿರಾ:

ಇಂದಿರಾ ಗಾಂಧಿಯನ್ನು ಟೀಕಿಸಿದ ಮಾಧ್ಯಮಕ್ಕೆ ತಿರುಗೇಟು ನೀಡಲು ಇಂದಿರಾ ಸದ್ದಿಲ್ಲದ ತಯಾರಿ ನಡೆಸುತ್ತಿದ್ದರು. ತನ್ನ ಸರ್ವಾಧಿಕಾರಿ ನಡೆಯನ್ನು ಟೀಕಿಸಿದ ಮಾಧ್ಯಮ ಸ್ವಾತಂತ್ರ್ಯವನ್ನು ಇಂಧಿರಾ ಗಾಂಧಿ ಒಪ್ಪಲಿಲ್ಲ. 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಬಹುತೇಕ ಮಾಧ್ಯಮಗಳು ಖಂಡಿಸಿತ್ತು. ಟೈಮ್ಸ್ ಮ್ಯಾಗಝಿನ್ ತನ್ನ ವರದಿಯಲ್ಲಿ ಸರ್ವಾಧಿಕಾರದ ಒಳಹೊಕ್ಕ ಇಂದಿರಾ ಗಾಂಧಿ ಎಂಬ ಹೆಡ್‌ಲೈನ್ ನೀಡಿತ್ತು.  ಇಂಧಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲೇ ಮಾಧ್ಯಮದಿಂದ ತೀವ್ರ ಟೀಕೆ ಎದುರಿಸಿದರು. ಪತ್ರಿಕೆಗಳ ಸ್ವಾತಂತ್ರ್ಯ ಕುರಿತು ಇಂದಿರಾ ಗಾಂಧಿಗೆ ಮೊದಲಿನಿಂದಲೇ ಅಸಮಧಾನವಿತ್ತು. 1969ರಲ್ಲೇ ಇಂದಿರಾ ಗಾಂಧಿ ಪತ್ರಿಕಾ ಸ್ವಾತಂತ್ರ್ಯವನ್ನು ನಿಗ್ರಹಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. 

ಜುಲೈ 3, 1975 ರಂದು ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಇಂದಿರಾ ಗಾಂಧಿ, ಪತ್ರಿಕೆ ಹಾಗೂ ಪತ್ರಿಕೆಗಳ ಸ್ವಾತಂತ್ರ್ಯದ ಕುರಿತು ತನ್ನ ಅಸಮದಾನ ಹೊರಹಾಕಿದ್ದರು. 1969ರಲ್ಲಿ ತನ್ನ ವಿರುದ್ಧ ದ್ವೇಷ ಹಾಗೂ ಅಸಹ್ಯಕರ ಸುದ್ದಿಗಳನ್ನು ಪ್ರಕಟಿಸಲಾಯಿತು. ಅಲಹಾಬಾದ್ ತೀರ್ಪಿನ ಬಳಿಕ,   ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಪತ್ರಕರ್ತ ಕೂಮಿ ಕಪೂರ್ ತನ್ನ ಸಂಪಾದಕೀಯದಲ್ಲಿ, ಇಂದಿರಾ ಗಾಂಧಿ ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದರು. ಇದರೊಂದಿಗೆ ಇತರ ಪತ್ರಿಕೆಗಳು ರಾಜೀನಾಮೆ ನೀಡುವಂತೆ ಒತ್ತಾಯಿಸಿತ್ತು ಎಂದು ಪತ್ರಿಕೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಯಿತು.

ಇಂದಿರಾ ಒಲೈಕೆಗೆ ಮುಂದಾದ ಕಾಂಗ್ರೆಸ್:

ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಪತ್ರಿಕೆಗಳು ಇಂದಿರಾ ನಡೆ, ನಿರ್ಧಾರ ಹಾಗೂ ಸಾಮರ್ಥ್ಯವನ್ನು ಪ್ರಶ್ನಿಸುತ್ತಲೇ ಇತ್ತು. ಇಂದಿರಾ ನಡೆಯನ್ನು ರಾಮ್ ಮೋಹನ್ ಲೋಯಿಯಾ ವಿರೋಧಿಸುತ್ತಲೇ ಇದ್ದರು. ಪ್ರಧಾನಿಯಾದ ಆರಂಭಿಕ ದಿನದಲ್ಲಿ ಮಾಧ್ಯಮಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಹಸಕ್ಕೆ ಇಂದಿರಾ ಗಾಂಧಿ ಕೈಹಾಕಲಿಲ್ಲ. ಆದರೆ ನೆಹರು ಪುತ್ರಿ, ಗಾಂಧಿ ಕುಡಿ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇಂದಿರಾ ಒಲೈಕೆಯಲ್ಲಿ ತೊಡಗಿತ್ತು. ಇದನ್ನೇ ಬಳಸಿಕೊಂಡ ಇಂದಿರಾ ಗಾಂಧಿ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷವನ್ನೇ ನಿಯಂತ್ರಿಸಲು ಆರಂಭಿಸಿದರು. 

ವೈರಲ್ ಚೆಕ್: ಇಂದಿರಾ ಗಾಂಧಿಯವರ ಜೊತೆಗಿದ್ರಾ ನರೇಂದ್ರ ಮೋದಿ?.

ಇಂದಿರಾ ಗಾಂಧಿ ವಿರುದ್ಧ ಮಾಧ್ಯಮದ ಹೋರಾಟ:

1971ರ ಲೋಕಸಭೆ ಚುನಾವಣೆಯ ಗೆಲುವು ಹಾಗೂ ಬಾಂಗ್ಲಾದೇಶ ಸ್ವಾತಂತ್ರ್ಯಕ್ಕೆ ಭಾರತದ ನೆರವಿನ ಬಳಿಕ ಇಂದಿರಾ ಗಾಂಧಿ ದೇಶವೇ ತನ್ನ ಕೈಯಲ್ಲಿದೆ ಎಂದು ಭಾವಿಸಿದ್ದರು. ಇಷ್ಟೇ ಅಲ್ಲ ಮಾಧ್ಯವನ್ನು ನಿಯಂತ್ರಿಸಬಲ್ಲೇ ಎಂದುಕೊಂಡಿದ್ದರು. ಮುದ್ರಣಾಲಯದ ಕಾರ್ಯ ಚಟುವಟಿಕೆಗೆ ಒಂದೊಂದೆ ನಿಯಂತ್ರಣಗಳನ್ನು ಹೇರಲಾಯಿತು. ಸರ್ಕಾರದಿಂದ ಬೆದರಿಕೆಗಳು ಬರತೊಡಗಿತು. ಇಂಗ್ಲೀಷ್ ಮಾಧ್ಯಮಗಳು ಬಳಸುವ ಸುದ್ದಿ ಮೇಲೆ ನಿರ್ಬಂಧ ಹೇರಲು ಮೊನೊಪೊಲಿ ಆ್ಯಂಡ್ ರಿಸ್ಟ್ರಿಕ್ಟೀವ್ ಟ್ರೇಡ್ ಪ್ರಾಕ್ಟೀಸ್(MRTP) ಕಾಯ್ದೆ ಮೂಲಕ ಪ್ರಸರಣ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಲಾಯಿತು. ಪತ್ರಿಕಾ ಸ್ವಾತಂತ್ರ್ಯ ದೇಶದ ರಾಷ್ಟ್ರೀಯ ನೀತಿಗೆ ವಿರುದ್ಧವಾಗಿರಬಾರದು ಎಂದು ಸಂಸತ್ತಿನಲ್ಲಿ ಇಂದಿರಾ ಗಾಂಧಿ ಹೇಳಿಕೆ ನೀಡಿದರು. 1972ರಲ್ಲಿ ಮಾಧ್ಯಮದ ಮೇಲಿನ ಹಸ್ತಕ್ಷೇಪ ಹೆಚ್ಚಾದಾಗ ಪತ್ರಿಕೆ ಹೋರಾಟ ಆರಂಭಿಸಿತು. ಸಮೂಹ ಸಂವಹನಕ್ಕೆ ಭಾರತದಲ್ಲಿರುವ ಏಕೈಕ ಮಾಧ್ಯಮ ಪತ್ರಿಕೆ ಎಂದ ಮುದ್ರಣಾಲಯ ಇಂದಿರಾ ವಿರುದ್ಧ ಆಂದೋಲನವೇ ನಡೆಸಿತು. 

ರಾಜಕಾರಣಿಗಳಿಗೆ ಕಾದಿದೆ ಚಿನ್ನದ ಗಣಿ!...

1975ರಲ್ಲಿ ಇಂದಿರಾ ಗಾಂಧಿ ಹಾಗೂ ಸರ್ಕಾರದ ವಿರುದ್ಧ ಟೀಕೆಗಳು ಹೆಚ್ಚಾಯಿತು. ಇಂದಿರಾ ಗಾಂಧಿ ವಿರುದ್ಧ ನಡೆದ ಜೆಪಿ ಹಾಗೂ ಪ್ರತಿಪಕ್ಷಗಳ ಚಳುವಳಿಗೆ ಪತ್ರಿಕೆಗಳು ಸಂಪೂರ್ಣ ಬೆಂಬಲ ನೀಡಿತು. ಮುಂಬರುವ ಅಪಾಯವನ್ನು ಗ್ರಹಿಸಿದ ಇಂದಿರಾ ಗಾಂಧಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿ, ಪತ್ರಿಕೆಗಳ ಮೇಲೆ ನಿಯಂತ್ರಣ ಸಾಧಿಸಿದರು. ಪತ್ರಿಕೆಗಳು ಸರ್ಕಾರದ ಒಪ್ಪಿಗೆ ಇಲ್ಲದೆ ದೇಶಿ ಹಾಗೂ ಅಂತಾರಾಷ್ಟ್ರೀಯ  ಸುದ್ದಿಗಳ ವರದಿ ಮಾಡುವುದನ್ನು ನಿರ್ಬಂಧಿಸಲಾಯಿತು. 

ಓಶೋ ಕಾರ್ಯದರ್ಶಿ ಮೊರೆ ಹೋಗಿದ್ದರು ಇಂದಿರಾ ಗಾಂಧಿ: ಯಾಕೆ ಗೊತ್ತಾ..?

258 ಪತ್ರಕರ್ತರ ಬಂಧನ

ಭಾರತದಲ್ಲಿ ವರದಿ ಮಾಡುತ್ತಿದ್ದ 7 ವಿದೇಶಿ ಪತ್ರಕರ್ತರನ್ನು ಭಾರತದಿಂದ ಹೊರಗಟ್ಟಲಾಯಿತು. ಇನ್ನು  ಭಾರತಕ್ಕೆ ಆಗಮಿಸಿ ವರದಿ ಮಾಡಲು ನಿರ್ಧರಿಸಿದ್ದ 29 ವಿದೇಶಿ ಪತ್ರಕರ್ತರಿಗೆ ಅನುಮತಿ ನಿರಾಕರಿಸಲಾಯಿತು. ರಾಜಧಾನಿಯಲ್ಲಿನ 46ಕ್ಕೂ ಹೆಚ್ಚು ವರದಿಗಾರರು, 2 ವ್ಯಂಗ್ಯಚಿತ್ರಕಾರರು ಹಾಗೂ 6 ಫೋಟೋಗ್ರಾಫರ್‌ಗಳ ಮಾನ್ಯತೆ ರದ್ದು ಮಾಡಲಾಯಿತು.  21 ತಿಂಗಳ ತುರ್ತು ಪರಿಸ್ಥಿತಿಯಲ್ಲಿ 258 ಪತ್ರಕರ್ತರನ್ನು ಬಂಧಿಸಲಾಯಿತು. ಅಂತರಾಷ್ಟ್ರೀಯ ಮಟ್ಟದ ಪ್ರಸಿದ್ಧ ಪತ್ರಕರ್ತರಾದ ಕುಲದೀಪ್ ನಾಯರ್ ಅವರನ್ನು MISA (ಆಂತರಿಕ ಭದ್ರತಾ ಕಾಯಿದೆ ನಿರ್ವಹಣೆ) ಅಡಿಯಲ್ಲಿ ಬಂಧಿಸಲಾಯಿತು. ಪತ್ರಿಕೆಗಳ ಆರ್ಥಿಕತೆ ಕುಸಿತಗೊಳಿಸಿ, ಮಾಧ್ಯವನ್ನು ಮುಚ್ಚಲು ಸರ್ಕಾರದ ಜಾಹೀರಾತು ಸ್ಥಗಿತಗೊಳಿಸಲಾಯಿತು. ಸುಮಾರು 100ಕ್ಕೂ ಹೆಚ್ಚು ಪತ್ರಿಕೆಗಳಿಗೆ ಜಾಹೀರಾತು ನಿಲ್ಲಿಸಲಾಯಿತು. ಸರ್ಕಾರದ ನಿಯಂತ್ರಣ ಅರಿತ ಪತ್ರಿಕೆಗಳು ತುರ್ತುಪರಿಸ್ಥಿತಿಯಲ್ಲಿ ಇದಕ್ಕಿಂತ ಭಿನ್ನವಾಗಿರುವುದನ್ನು ನಿರೀಕ್ಷಿಸಲು ಅಸಾಧ್ಯ ಎಂದಿತು.  

ಇಂದಿರಾ ಗಾಂಧಿಯನ್ನು ಹಿಟ್ಲರ್ ಗೆ ಹೋಲಿಸಿದ ಜೇಟ್ಲಿ!

ಸೋಶಿಯಲ್ ಮೀಡಿಯಾಗಳಲ್ಲೇ ಜೀವನ ನಡೆಯುತ್ತಿರುವ ಈ ಕಾಲ ಘಟ್ಟದಲ್ಲಿ  ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಭಾರತೀಯ ಸಂವಿಧಾನದ ಆರ್ಟಿಕಲ್ 19 (1) (ಎ) ಪತ್ರಿಕಾ ಸೇರಿದಂತೆ ಭಾರತದ ಎಲ್ಲಾ ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು  ನೀಡಿದೆ. ಇನ್ನು ಆರ್ಟಿಕಲ್ 19 (2) ಭಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳನ್ನು ವಿವರಿಸುತ್ತದೆ. ಇಂದಿರಾ ಗಾಂಧಿ, ಎರಡನೇ ಭಾಗವನ್ನು ತಮಗೆ ಬೇಕಾದಂತೆ ಬಳಸಿದರು. ರಾಜ್ಯದ ಭದ್ರತೆ, ಸಮಗ್ರತೆ, ಅಭಿವೃದ್ಧಿ ಹೆಸರಿನಲ್ಲಿ ಪತ್ರಿಕೆ, ರೇಡಿಯಾ ಹಾಗೂ ಟಿವಿ ಮೇಲೆ ಇಂದಿರಾ ಗಾಂಧಿ ಸಂಪೂರ್ಣ ನಿಯಂತ್ರಣ ಸಾಧಿಸಿದರು. 

click me!