ಸುಳ್ಳು ಸುದ್ದಿ ಹಬ್ಬಿಸಿದ್ದ ಪ್ರಿಯಾಂಕಾಗೆ ಬಂತು ನೋಟಿಸ್!

By Suvarna NewsFirst Published Jun 23, 2020, 5:41 PM IST
Highlights

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾಗೆ ನೋಟಿಸ್/ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಕ್ಷಮೆ ಕೇಳಬೇಕು/ ನೋಟಿಸ್ ನೀಡಿದ ಆಗ್ರಾದ ಆಡಳಿತ/ ಆಗ್ರಾದಲ್ಲಿ ಇಪ್ಪತ್ತೆಂಟು ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ ಎಂದಿದ್ದ ಪ್ರಿಯಾಂಕಾ

ಆಗ್ರಾ(ಜೂ. 23) ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಗಾಂಧಿ ಅವರಿಗೆ ನೋಟಿkಸ್ ಜಾರಿಮಾಡಲಾಗಿದೆ.  ಆಗ್ರಾದ  ಆಡಳಿತ ಪ್ರಿಯಾಂಕಾ ಅವರಿಗೆ ನೋಟಿಸ್ ನೀಡಿದೆ. ಸುಳ್ಳು ಸುದ್ದಿ ಹಬ್ಬಿಸಿ ಜನರಲ್ಲಿ ಭಯ ಹುಟ್ಟಿಸಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ನೋಟಿಸ್ ಹೇಳಿದೆ.

ಕೊರೋನಾ ಸೋಂಕಿಗೆ ತುತ್ತಾಗಿ 28  ಜನ ಆಗ್ರಾದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದರು.  ಇದು ಸುಳ್ಳಾಗಿದ್ದು ಕೊರೋನಾ ವಾರಿಯರ್ಸ್ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಆಗ್ರಾ ಆಡಳಿತ ಹೇಳಿದೆ.

ಕೊರೋನಾ ಕಾಡುತ್ತಿರುವ ಬೆಂಗಳೂರು ಹೇಗಿದೆ?

ಆಗ್ರಾದಲ್ಲಿ ಕೊರೋನಾಕ್ಕೆ ಇಷ್ಟೊಂದು ಜನ ಬಲಿಯಾಗಿದ್ದಾರೆ. ಉತ್ತರ ಪ್ರದೇಶ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ವಾದ್ರಾ ಆರೋಪಿಸಿದ್ದರು. ದೇಶದಲ್ಲಿ ಪ್ರತಿದಿನ ಹತ್ತು ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ದೃಢಪಡುತ್ತಿದೆ.

ಉತ್ತರ ಪ್ರದೇಶ ಸಿಎಂ ಪರಿಹಾರ ನಿಧಿಗೆ ಹೆಚ್ಚುವರಿಯಾಗಿ 406  ಕೋಟಿ ರೂ. ದೇಣೀಗೆ ಬಂದಿದೆ.  192. 19  ಕೋಟಿ ರೂ. ಸಾರ್ವಜನಿಕರಿಂದ ಸಂಗ್ರಹ ಆಗಿದೆ ಎಂದು ಉತ್ತರ ಪ್ರದೇಶ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವನೀಶ್ ಮಾಹಿತಿ ನೀಡಿದ್ದಾರೆ. 

ಒಂದು ಕಡೆ ಚೀನಾದ ಕಿತಾಪತಿ ಇನ್ನೊಂದು ಕಡೆ ಕೊರೋನಾ ಇವೆರಡು ಸಮಸ್ಯೆಗಳ ವಿರುದ್ಧ ದೇಶ ಹೋರಾಡುತ್ತಿದ್ದು ಇಂಥಹ ಸುದ್ದಿಗಳು ಜನರಲ್ಲಿ ಮತ್ತಷ್ಟು ಭಯ  ಉಂಟುಮಾಡಲು ಕಾರಣವಾಗಬಹುದು. 

 

click me!