ಕೋಲ್ಕತಾ(ಸೆ.10): ಭಾರತದಲ್ಲಿ ರಾಜಕಾರಣಿಗಳು ಶ್ರೀಮಂತರು. ಅವರ ಕುಟುಂಬಸ್ಥರು, ಮುಂದಿನ ತಲೆಮಾರಿಗೆ ಅಗುವಷ್ಟು ಆಸ್ತಿ ಮಾಡಿಕೊಂಡಿರುತ್ತಾರೆ ಅನ್ನೋದು ಸಾಮಾನ್ಯ ಮಾತು. ಇದಕ್ಕೆ ಕೆಲ ರಾಜಕಾರಣಿಗಳು ಅಪವಾದ. ಇದೀಗ ಮಾಜಿ ಸಿಎಂ, 10 ವರ್ಷಕ್ಕೂ ಹೆಚ್ಚು ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿ ಹತ್ತಿರ ಸಂಬಂಧಿ ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಐಶ್ವರ್ಯಾ ರೈ ಅವರ ಈ ನಾದಿನಿ ಯಾವುದೇ ಹಿರೋಯಿನ್‌ಗಿಂತ ಕಡಿಮೆಯಿಲ್ಲ !ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಪತ್ನಿ ಸಹೋದರಿ ಇರಾ ಬಸು ಜೀವನಕ್ಕಾಗಿ ಬೀದಿ ಬದಿಯಲ್ಲಿ ಭಿಕ್ಷೆ ಬೇಡಿ ಜೀವನ ಸಾಗುತ್ತಿದ್ದಾರೆ. ಫುಟ್‌ಪಾತ್‌ನಲ್ಲೇ ಮಲಗಿ ದಿನ ದೂಡುತ್ತಿರುವ ಮಾಹಿತಿ ಹೊರಬಿದ್ದಿದೆ.
ಇರಾ ಬಸು ವಿರೋಲಜಿಯಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಟೆನಿಸ್ ಹಾಗೂ ಕ್ರಿಕೆಟ್‌ನಲ್ಲಿ ಬಂಗಾಳದ ಪ್ರತಿನಿಧಿಸಿದ ಇರಾ ಬಸು, ಪ್ರಿಯನಾಥ್ ಬಾಲಕಿಯ ಶಾಲೆಯ ಟೀಚರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೀಷ್ ಹಾಗೂ ಬಂಗಾಳಿ ಭಾಷೆ ಮಾತನಾಡುವ ಇರಾ ಬಸು ಇದೀಗ ಭಿಕ್ಷೆ ಬೇಡುತ್ತಾ, ದಾನಿಗಳು ನೀಡಿದ ಆಹಾರ ಸೇವಿಸುತ್ತಾ ದಿನದೂಡುತ್ತಿದ್ದಾರೆ ಅನ್ನೋ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಖಿಲ್ ಕುಮಾರಸ್ವಾಮಿ- ರೇವತಿ ಫೋಟೋಗಳನ್ನು ಕ್ಲಿಕ್ ಮಾಡುವುದು ಯಾರು ಗೊತ್ತಾ?ಕಳೆದ ಎರಡು ವರ್ಷದಿಂದ ಯಾರಿಗೂ ತಿಳಿಯದೆ ಇರಾ ಬಸು ಬೀದಿ ಬದಿಯಲ್ಲಿ ವಾಸಿಸುತ್ತಿದ್ದಾರೆ. 1976ರಿಂದ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ಇರಾ ಬಸು, 2009ರಲ್ಲಿ ನಿವೃತ್ತಿ ಹೊಂದಿದರು. ಈ ವೇಳೆ ಭುದ್ಧದೇವ್ ಭಟ್ಟಾಚಾರ್ಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದರು.
ಶಿಕ್ಷಕಿಯಾಗಿದ್ದ ಸಂದರ್ಭದಲ್ಲಿ ಬಾರಾನಗರದಲ್ಲಿ ವಾಸವಿದ್ದ ಇರಾ ಬಸು ನಿವೃತ್ತಿಯಾದ ಬಳಿಕ ಕರ್ದಾದ ಲಿಚು ಬಗಾನ್‌ಗೆ ಸ್ಥಳಾಂತರವಾಗಿದ್ದರು. ಆದರೆ ಕಳೆದ ಎರಡು ವರ್ಷದಿಂದ ಇರಾ ಬಸು ನಾಪತ್ತಯಾಗಿದ್ದರು. ಇವರಿಗೆ ಪಿಂಚಣಿ ನೀಡಲು ಶಾಲೆ ಆಡಳಿತ ಮಂಡಳಿ ನಡೆಸಿದ ಪ್ರಯತ್ನಗಳು ವಿಫಲವಾಗಿತ್ತು.
ಕೋಲ್ಕತಾ ಸನಿಹದಲ್ಲಿರುವ ದನ್‌ಲೂಪ್ ರಸ್ತೆಯಲ್ಲಿ ಇರಾ ಬಸು ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಗೆ ಈ ಮಾಹಿತಿ ಬೆಳಕಿಗೆ ಬಂದಿದೆ. ತಕ್ಷಣವೆ ಸ್ಥಳೀಯ ಜಿಲ್ಲಾಡಳಿತ ಆ್ಯಂಬುಲೆನ್ಸ್ ಮೂಲಕ ಇರಾ ಬಸು ಅವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಇರಾ ಬಸು ಅವರನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.