ಅಮೆರಿಕದ ಡಾಕ್ಟರೇಟ್ ಆಫರ್ ತಿರಸ್ಕರಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಯುವ ದಂಪತಿ ನೆರವು!

By Suvarna NewsFirst Published Sep 13, 2022, 5:48 PM IST
Highlights

ಅಮೆರಿಕದಲ್ಲಿ ಡಾಕ್ಟರೇಟ್ ಮಾಡುವ ಆಫರ್ ತಿರಸ್ಕರಿಸಿದ ಯುವ ದಂಪತಿ, ಭಾರತದಲ್ಲೇ ಉಳಿದುಕೊಂಡು ಬಡ ಮಕ್ಕಳು, ಕೂಲಿ ಕಾರ್ಮಿಕರ ಜೀವನ ಹಸನು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಯುವ ದಂಪತಿಗಳ ಕಾರ್ಯ ಎಲ್ಲರಿಗೂ ಸ್ಪೂರ್ತಿಯಾಗಿದೆ.
 

ಕೋಲ್ಕತಾ(ಸೆ.13) ಅನಿರ್ಬಾನ್ ನಂದಿ ಹಾಗೂ ಪೌಲೊಮಿ ನಂದಿ ದಂಪತಿಗೆ ಅಮೆರಿದಲ್ಲಿ ಡಾಕ್ಟರೇಟ್ ಮಾಡುವ ಆಫರ್ ಒಲಿದು ಬಂದಿತ್ತು. Phdಯ ಸಂಪೂರ್ಣ ಖರ್ಚು ವೆಚ್ಚ ಸ್ಕಾಲರ್‌ಶಿಪ್ ಮೂಲಕ ಸಿಗಲಿದೆ. ಆದರೆ ಈ ಆಫರ್ ತಿರಸ್ಕರಿಸಿದ ಈ ಜೋಡಿ ಭಾರತದಲ್ಲೇ ಉಳಿದು ಬಡ ಮಕ್ಕಳ ವಿದ್ಯಾಭ್ಯಾಸ, ಕೆಲಸ ಕಳೆದುಕೊಂಡ ಕೂಲಿ ಕಾರ್ಮಿಕರಿಗೆ ಹೊಸ ಜೀವನ ನಡೆಸಲು ದಾರಿ ದೀಪವಾಗುವ ಸಾಹಸಕ್ಕೆ ಕೈಹಾಕಿದ್ದಾರೆ. ಇಷ್ಟೇ ಅಲ್ಲ ಈ ಕಾರ್ಯದಲ್ಲಿ ಯಶಸ್ಸು ಕಂಡಿದ್ದಾರೆ. ಅನಿರ್ಬಾನ್ ನಂದಿ ಹಾಗೂ ಪೌಲೊಮಿ ನಂದಿ ಪಶ್ಚಿಮ ಬಂಗಾಳದ ಸಿಲಿಗುರಿಯ ನಿವಾಸಿಗಳು. ದೊಡ್ಡ ದೊಡ್ಡ ಕಂಪನಗಳ ಆಫರ್ ತಿರಸ್ಕರಿಸಿದ ಈ ಜೋಡಿ, ಬಡ ಮಕ್ಕಳು, ನಿರ್ಗತಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದಾರೆ. ಉಚಿತ ಪುಸ್ತಕ, ಉಚಿತ ಸಮಮವಸ್ತ್ರ, ಬಟ್ಟೆ ಸೇರಿದಂತೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದಾರೆ. ಇಷ್ಟೇ ಅಲ್ಲ ಮೊಬೈಲ್ ಲೈಬ್ರರಿ ಮೂಲಕ ಹಳ್ಳಿ ಹಳ್ಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಈ ಮೂಲಕ ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ಬಡ ಕಾರ್ಮಿಕರು, ಕೂಲಿ ಕಾರ್ಮಿಕರು, ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕಾರ್ಮಿಕರಿಗೆ ಹೊಸ ಜೀವನ ನಡೆಸಲು ಮಾರ್ಗರ್ಶನ ನೀಡುತ್ತಿದ್ದಾರೆ. ಇದೀಗ ಇವರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾರಿನಲ್ಲೇ ಮೊಬೈಲ್ ಲೈಬ್ರರಿ ಮಾಡಿಕೊಂಡಿದ್ದಾರೆ. ಪುಸ್ತಗಳನ್ನ ತುಂಬಿಕೊಂಡು ಹಳ್ಳಿ, ಸ್ಲಂ, ಬುಡಕಟ್ಟು ಸಮುದಾಯ ಪ್ರದೇಶಕ್ಕೆ ತೆರಳಿ ಮಕ್ಕಳಿಗೆ ಶಿಕ್ಷಣದ(Free Education) ಜೊತೆಗೆ ಉಚಿತವಾಗಿ ಪುಸ್ತಕಗಳನ್ನು(Free Book) ವಿತರಿಸುತ್ತಿದ್ದಾರೆ. ಇವರ ಮೊಬೈಲ್ ಗ್ರಂಥಾಲಯದಿಂದ(Mobile Library ಈಗಾಗಲೇ 6,400ಕ್ಕೂ ಹೆಚ್ಚು ಮಕ್ಕಳು(underprivileged children) ಪ್ರಯೋಜನ ಪಡೆದುಕೊಂಡಿದ್ದಾರೆ. ಇನ್ನು ಉಚಿತವಾಗಿ ಟ್ಯೂಶನ್(Tution) ನೀಡುತ್ತಿದ್ದಾರೆ. ಇವರು ಟ್ಯೂಶನ್ ನೀಡುತ್ತಿರುವ ಮಕ್ಕಳ ಪೈಕಿ ಶೇಕಡಾ 80 ರಷ್ಟು ವಿದ್ಯಾರ್ಥಿನಿಯರಾಗಿದ್ದಾರೆ. 

ಬಡವರಿಗೆ ಸಹಾಯ ಮಾಡಲು ಮನೆಯನ್ನೇ ಅಡವಿಟ್ಟ ಬಿಹಾರದ ಚಹಾ ಮಾರಾಟಗಾರ

ಲೈವ್ ಲೈಫ್ ಹ್ಯಾಪಿಲಿ ಅನ್ನೋ ಸಂಸ್ಥೆ ಕಟ್ಟಿರುವ ಅನಿರ್ಬಾನ್ ಹಾಗೂ ಪೌಲೊಮಿ ಪಶ್ಚಿಮ ಬಂಗಾಳ ಸುತ್ತಿ, ಬಡ ಮಹಿಳೆಯರ ಸಬಲೀಕರಣಕ್ಕೆ ಪಣತೊಟ್ಟಿದ್ದಾರೆ. ಟಿ ಎಸ್ಟೇಟ್ ಸಮಸ್ಯೆಯಿಂದ ಕೆಲಸ ಕಳೆದುಕೊಂಡ ಮಹಿಳೆಯರು, ಕೂಲಿ ಕಾರ್ಮಿಕರಿಗೆ ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದಾರೆ. ಅಣಬೆ ಕೃಷ್ಟಿ ಸೇರಿದಂತೆ ಇತರ ಆದಾಯದ(Income) ಮೂಲಗಳನ್ನು ಮಾಡಿಕೊಟ್ಟಿದ್ದಾರೆ. ಟಿ ಎಸ್ಟೇಟ್ ಮಹಿಳೆಯರಿಗೆ(Tribal Women) ತರಬೇತಿ ನೀಡುತ್ತಿದ್ದಾರೆ. 8,000ಕ್ಕೂ ಹೆಚ್ಚು ಬುಡಕಟ್ಟು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. 

ಹಲವು ಕುಟುಂಬಗಳು ಮಶ್ರೂಮ್ ಕೃಷಿಯನ್ನು ಆದಾಯದ ಮೂಲವಾಗಿಸಿಕೊಂಡಿದೆ. ಅವರಿಗೆ ಮಶ್ರೂಮ್ ಬೆಳೆಗೆ ಮಾರುಕಟ್ಟೆಯನ್ನು ಈ ದಂಪಂತಿಗಳು ಒದಗಿಸಿದ್ದಾರೆ. ವಿದ್ಯಾರ್ಥಿನಿಯರು, ಯುವತಿಯರಿಗೆ ಮುಟ್ಟಿನ ಕುರಿತು ಮಾಹಿತಿಗಳನ್ನು ತಿಳಿಸಿಕೊಡುತ್ತಿದ್ದಾರೆ. ಬಡ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಇದೀಗ ಅನಿರ್ಬಾನ್ ಹಾಗೂ ಪೌಲೊಮಿ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ತಮ್ಮ ಕಾರ್ಯಯೋಜನೆಯನ್ನು ವಿಸ್ತರಿಸಲು ದಂಪತಿಗಳು ಸಜ್ಜಾಗಿದ್ದಾರೆ. 

ಕಷ್ಟದಲ್ಲಿರುವವರಿಗೆ 200 ಮನೆ ಕಟ್ಟಿಕೊಟ್ಟ ನಿವೃತ್ತ ಉಪನ್ಯಾಸಕಿ
 

click me!