ಆಯೋಧ್ಯೆ ರಾಮ ಮಂದಿರ ಕಾರ್ಯ ಭರದಿಂದ ಸಾಗುತ್ತಿದೆ. ಇದೀಗ ಹಿಂದೂಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. 2024ರ ಜನವರಿ 14ರಂದು ನೂತನ ಮಂದಿರದಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆಯಾಗುತ್ತಿದೆ.
ಆಯೋಧ್ಯೆ(ಸೆ.13): ಸತತ ಹೋರಾಟದ ಮೂಲಕ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದರ ನಡುವೆ ಹಿಂದೂಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಜನವರಿ 14, 2024ರಲ್ಲಿ ನೂತನ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆ ಮಾಡಲಿದ್ದೇವೆ ಎಂದು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ. 2023ರ ಅಂತ್ಯದ ವೇಳೆಗೆ ತಳಮಟ್ಟದ ಎಲ್ಲಾ ನಿರ್ಮಾಣ ಕಾರ್ಯಗಳು ಮುಗಿಯಲಿದೆ. ಹೀಗಾಗಿ 2024ರ ಜನವರಿಯಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆ ಮಾಡಲಿದ್ದೇವೆ. ವಿಶೇಷ ಪೂಜೆ ಮೂಲಕ ರಾಮ ಲಲ್ಲಾ ಪ್ರತಿಷ್ಠಾಪನೆಯಾಗಲಿದೆ. ಬಳಿಕ ಎಂದಿನಂತೆ ಪ್ರತಿ ದಿನ ಪೂಜೆ ನಡೆಯಲಿದೆ ಎಂದು ಚಂಪತ್ ಹೇಳಿದ್ದಾರೆ.
ಆಯೋಧ್ಯೆಯಲ್ಲಿ(Ayodhya ) ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೂರು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮೊದಲನೇ ವಿಚಾರ, ನಡೆಯುತ್ತಿರುವ ಕಾಮಗಾರಿ. ಈ ಚರ್ಚೆಯಲ್ಲಿ ಕಾಮಕಾರಿ(Ram Mandir Ayodhya) ಕುರಿತು ಸಂಪೂರ್ಣ ಮಾಹಿತಿಯನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಮಳೆ ಅಬ್ಬರದ ನಡುವೆಯೂ ಕಾಮಾಕಾರಿಗೆ ಬ್ರೇಕ್ ನೀಡಿಲ್ಲ. ಸತತ ಕಾಮಗಾರಿಗಳು ನಡೆಯುತ್ತಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ವಿವರಿಸಲಾಗಿದೆ. ರಾಮ ಲಲ್ಲಾ(Ram Lalla) ಪ್ರತಿಷ್ಠಾಪನೆ ಕುರಿತು ಚರ್ಚಿಸಲಾಗಿದೆ. ಈ ವೇಳೆ 2024ರ ಜನವರಿ 14 ರಂದು ರಾಮ ಲಲ್ಲಾ(Uttar Pradesh Sri Ram mandhir) ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ. ಕೊನೆಯದಾಗಿ ರಾಮ ಮಂದಿರ ನಿರ್ಮಾಣದ ಖರ್ಚು ವೆಚ್ಚ ಕುರಿತು ಸವಿಸ್ತಾರ ವರದಿ ಸಲ್ಲಿಸಲಾಗಿದೆ. ಇದುವರೆಗಿನ ಖರ್ಚು, ಒಟ್ಟಾರೆ ಖರ್ಚು ವೆಚ್ಚದ ಕುರಿತು ಸಂಪೂರ್ಣ ವರದಿಯನ್ನು ಸಭೆಯಲ್ಲಿ ಒಪ್ಪಿಸಲಾಗಿದೆ ಎಂದು ಚಂಪತ್ ರೈ ಹೇಳಿದ್ದಾರೆ.
Gyanvapi Mosque Case, ಕಾಶಿ ಜ್ಞಾನವ್ಯಾಪಿ ವಿವಾದ ಅಯೋಧ್ಯೆಯ ದಾರಿ ಹಿಡಿಯುತ್ತಾ?
ಶೀಘ್ರ ಅಯೋಧ್ಯೆ ರಾಮಮಂದಿರ ಕಾರ್ಯ ಪೂರ್ಣ
2024ರ ಮಕರ ಸಂಕ್ರಾಂತಿ ಮುಗಿದ ಬಳಿಕ ಉತ್ತರಾಯಣದಲ್ಲಿ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳ ತಿಳಿಸಿದರು. ತುಮಕೂರಿನಲ್ಲಿ ನವೀಕೃತ ಕೃಷ್ಣಮಂದಿರದ ನವೀಕೃತ ಕಟ್ಟಡ ಹಾಗೂ ಲಿಫ್‌್ಟಉದ್ಘಾಟನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕದಿಂದ ಹೋಗಿರುವ ಶಿಲೆಯಿಂದ ರಾಮಮಂದಿರದ ಪೀಠದ ಕಾಮಗಾರಿ ಆರಂಭಗೊಂಡಿದೆ. ಗರ್ಭಗುಡಿಯ ಕೆಲಸ ಕೂಡ ಶೀಘ್ರ ಆರಂಭಗೊಳ್ಳಲಿದೆ. ಹೀಗಾಗಿ ನಿಗದಿತ ಸಮಯದಂದೆ ರಾಮಮಂದಿರ ಪೂರ್ಣಗೊಳ್ಳಲಿದೆ. ಇದುವರೆಗೂ ಭೂಮಿ ಗುರುತಿಸುವುದೇ ದೊಡ್ಡ ಜವಾಬ್ದಾರಿಯಾಗಿತ್ತು. ಆ ಕಾರ್ಯ ಪೂರ್ಣಗೊಂಡಿದೆ ಎಂದರು.
ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣ ಶಿಖರ ಅರ್ಪಣೆಗೆ ಚಿಂತನೆ
ಭರದಿಂದ ಸಾಗಿದ ಅಯೋಧ್ಯೆ ರಾಮಮಂದಿರ ಗರ್ಭಗುಡಿ ಕಾರ್ಯ
ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯ ಶಂಕು ಸ್ಥಾಪನೆಯನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(CM Yogi adityanath) ನೆರವೇರಿಸಿದ್ದರು. ಆದಿತ್ಯನಾಥ್ ಗುದ್ದಲಿ ಪೂಜೆ ಮಾಡಿದ್ದರು. ಇದೀಗ ಗರ್ಭಗುಡಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮಂದಿರ ನಿರ್ಮಾಣದ ಹೊಣೆ ಹೊತ್ತ ರಾಮ ಜನ್ಮಭೂಮಿ ಟ್ರಸ್ಟ್, ‘ದೇವಾಲಯದ ಗರ್ಭಗುಡಿಯನ್ನು ರಾಜಸ್ಥಾನದ ಮಖ್ರಾನಾ ಬೆಟ್ಟದಿಂದ ತರಿಸಲಾದ ಬಿಳಿ ಅಮೃತಶಿಲೆಯಿಂದ ನಿರ್ಮಾಣ ಮಾಡಲಾಗುವುದು. ಸುಮಾರು 13,300 ಕ್ಯುಬಿಕ್ ಅಡಿ ಅಮೃತ ಶಿಲೆಯನ್ನು ಬಳಸಲಾಗುತ್ತಿದೆ. . ದೇವಾಲಯದ ಗರ್ಭಗುಡಿಯ ನಿರ್ಮಾಣ ಕಾಮಗಾರಿಯು 2023 ರ ಅಂತ್ಯದೊಳಗೆ ಹಾಗೂ ಇಡೀ ರಾಮ ಮಂದಿರದ ನಿರ್ಮಾಣ ಕಾಮಗಾರಿಯು 2024ರ ಅಂತ್ಯದೊಳಗೆ ಮುಕ್ತಾಯವಾಗಬಹುದು ಎನ್ನಲಾಗಿದೆ.