ಹೆಲಿಕಾಪ್ಟರ್ ನಲ್ಲಿ ಜಾರಿಬಿದ್ದ ಮಮತಾ ಬ್ಯಾನರ್ಜಿ, ಮತ್ತೆ ಗಾಯಗೊಂಡ ದೀದಿ!

By Suvarna News  |  First Published Apr 27, 2024, 2:55 PM IST

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಏರಿದ ನಂತರ ತಮ್ಮ ಸೀಟಿನಲ್ಲಿ ಕುಳಿತುಕೊಳ್ಳುವಾಗ ಜಾರಿ ಬಿದ್ದಿದ್ದಾರೆ.


ಕೊಲ್ಕತ್ತಾ (ಏ.27):   ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಏರಿದ ನಂತರ ತಮ್ಮ ಸೀಟಿನಲ್ಲಿ ಕುಳಿತುಕೊಳ್ಳುವಾಗ ಜಾರಿ ಬಿದ್ದಿದ್ದಾರೆ. ಪರಿಣಾಮ ಮಮತಾ ಬ್ಯಾನರ್ಜಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ. ಮಮತಾ ಆಯತಪ್ಪಿ ಬೀಳುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸಹಾಯ ಮಾಡಿದರು. ಈ ವಿಡಿಯೋವನ್ನು ANI ವರದಿ ಮಾಡಿದೆ.  ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಅವರು ಅಸನ್ಸೋಲ್‌ಗೆ   ಪ್ರಯಾಣಕ್ಕೆ ಮುಂದಾದ ವೇಳೆ ಈ ಘಟನೆ ನಡೆದಿದೆ. ಅಲ್ಲಿಂದ ಮತ್ತೆ ಪ್ರಯಾಣ ಮುಂದುವರೆಸಿದ್ದಾರೆ.

ಬರ ಪರಿಹಾರದ ಬಗ್ಗೆ ಅಧಿಕೃತ ಪತ್ರ ಬಂದಿಲ್ಲ, ಕೇಳಿದ್ದಷ್ಟು ಸಿಕ್ಕಿಲ್ಲ: ಸಚಿವ ಕೃಷ್ಣ ಬೈರೇಗೌಡ ಆಕ್ರೋಶ

Tap to resize

Latest Videos

ಇನ್ನು ಕಳೆದ ಮಾರ್ಚ್ ತಿಂಗಳಲ್ಲಿ ಕೂಡ ಅವರು ಬಿದ್ದು ಹಣೆಗೆ ಗಾಯಮಾಡಿಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಮೂರು ಹೊಲಿಗೆಗಳನ್ನು ಹಾಕಿದ್ದರು. ಮೂಗಿಗೆ ಒಂದು ಹೊಲಿಗೆ ಹಾಕಲಾಗಿತ್ತು. ಮಮತಾ ಬ್ಯಾನರ್ಜಿಯವರ ಹಣೆಯಿಂದ ರಕ್ತ ಸೋರುತ್ತಿರುವ ಫೋಟೋಗಳನ್ನು TMC ಹಂಚಿಕೊಂಡಿತ್ತು. 

Karnataka drought relief ರಾಜ್ಯ ಕೇಳಿದ್ದು 18 ಸಾವಿರ ಕೋಟಿ, ಕೇಂದ್ರ ಬಿಡುಗಡೆ ಮಾಡಿದ್ದು 3 ಸಾವಿರ ಕೋಟಿ

ಕಳೆದ ವರ್ಷ 2023ರ ಜೂನ್‌ ನಲ್ಲಿ ಪಶ್ಚಿಮ ಬಂಗಾಳದಲ್ಲಿನ ಪಂಚಾಯತ್ ಚುನಾವಣೆ ಸಮಯದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ದೀದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತ್ತು. ಈ ವೇಳೆ ಕೂಡ ಸಣ್ಣಪುಟ್ಟ ಗಾಯಗಳಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು.

click me!