ಕೋಲ್ಕತಾ(ಏ.27): ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಉಚ್ಚಾಟಿತ ಟಿಎಂಸಿ ಮುಖಂಡ ಶೇಖ್ ಶಾಜಹಾನ್ ಆಪ್ತರು ನಡೆಸಿದ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಶುಕ್ರವಾರ ಇಲ್ಲಿಟಿಎಂಸಿ ಕಾರ್ಯಕರ್ತನೊಬ್ಬನ ಮನೆ ಮೇಲೆ ದಾಳಿ ಮಾಡಿ ವಿದೇಶಿ ಪಿಸ್ತೂಲುಗಳು ಸೇರಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿ ಕೊಂಡಿದೆ. ಈ ದಾಳಿಗೆ ಸಿಬಿಐ ಅಧಿಕಾರಿಗಳ ಜೊತೆಗೆ ಎನ್‌ಐಎ, ಎನ್‌ಎಸ್‌ಜಿ ಮತ್ತು ಸ್ಥಳೀಯ ಪೊಲೀಸರೂ ಸಾಥ್ ನೀಡಿದ್ದಾರೆ.
ಜೊತೆಗೆ ನೆಲದಾಳದಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಬಹುದಾದ ಶಂಕೆ ಮೇಲೆ ಅದನ್ನು ಪರಿಶೀಲಿಸಲು ರೋಬೋಟ್‌ಗಳ ನೆರವನ್ನೂ ಪಡೆದುಕೊಳ್ಳಲಾಗಿದೆ. ಇ.ಡಿ. ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಶಜಹಾನ್‌ನ ಆಪ್ತ ಅಬು ತಲೇಬ್ ಮೊಲ್ಲಾ ಎಂಬಾತನ ಮನೆಯಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. ಈ ವೇಳೆ ಬಾಕ್ಸ್‌ಗಳಲ್ಲಿ ಸಂಗ್ರಹಿಸಲಾಗಿದ್ದ 12 ಬಂದೂಕು, 1 ಪೊಲೀಸ್ ರಿವಾಲ್ವರ್, 4 ವಿದೇಶಿ ಪಿಸ್ತೂಲ್, ಸ್ಫೋಟಕಗಳು. ಶಂಕಿತ ಸ್ವದೇಶಿ ನಿರ್ಮಿತ ಬಾಂಬ್ ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿದೆ. ಶಾಜಹಾನ್ ಗೆ ಸಂಬಂಧಿಸಿದ ಕೆಲವು ಶಂಕಾಸ್ಪದ ದಾಖಲೆ ಗಳನ್ನು ವಶಪಡಿಕೊಳ್ಳಲಾಗಿದೆ. ಮನೆಯಲ್ಲಿ ಇಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಯಾಕಾಗಿ ಸಂಗ್ರಹಿಸಲಾಗಿತ್ತು ಎಂಬುದು ತಿಳಿದುಬಂದಿಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಂಡ್ತಿ ಮಗಳನ್ನು ನೋಡಿ ಮಗುವಿನಂತೆ ಅತ್ತ ಸಂದೇಶ್‌ಖಾಲಿ ಗಲಭೆ ಪ್ರಕರಣದ ಆರೋಪಿ ಶೇಖ್ ಶಹಜಾಹಾನ್
ಸಂದೇಶ್‌ಖಾಲಿ ದ್ವೀಪದ ಹಿಂದೂಗಳು, ಆದಿವಾಸಿಗಳ ಮೇಲೆ ಟಿಎಂಸಿ ನಾಯಕ ಶಹಜಹಾನ್ ಮತ್ತು ಆತನ ಬೆಂಬಲಿಗರು ಲೈಂಗಿಕ ದೌರ್ಜನ್ಯ ನಡೆಸಿದ್ದೂ ಅಲ್ಲದೆ ಅವರ ಆಸ್ತಿಯನ್ನು ಬಲವಂತವಾಗಿ ಕಬಳಿಸಿದ್ದ. ಈ ಪ್ರಕರಣದ ಕುರಿತು ತನಿಖೆಗೆ ತೆರಳಿದ್ದ ಇ.ಡಿ. ತಂಡದ ಮೇಲೆ ಕಳೆದ ಜ.5ರಂದು. ಆತನ ಆಪ್ತರು ಹಿಂಸಾತ್ಮಕ ದಾಳಿ ಮಾಡಿದ್ದರು
ಸಿಬಿಐ ತನಿಖೆ ವಿರುದ್ಧ ಬಂಗಾಳ ಸುಪ್ರೀಂಗೆ ಮೊರೆ
ಕೋಲ್ಕತಾ: ದೇಶವನ್ನೇ ಬೆಚ್ಚಿ ಬೀಳಿಸಿದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಿರು ವುದನ್ನು ವಿರೋಧಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಘಟನೆಯ ತನಿಖೆಯನ್ನು ಸಿಬಿಐನಿಂದ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ