ಒಡಿಶಾ ರೈಲು ದುರಂತ, ಮೃತ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರಿ ಕೆಲಸದ ಭರವಸೆ ನೀಡಿದ ಮಮತಾ ಬ್ಯಾನರ್ಜಿ!

By Santosh NaikFirst Published Jun 5, 2023, 6:06 PM IST
Highlights

ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದು ಅಪಘಾತದಲ್ಲಿ ಪ್ರಸ್ತುತ ಮಾನಸಿಕ ಮತ್ತು ದೈಹಿಕ ಆಘಾತದಿಂದ ಬಳಲುತ್ತಿರುವವರಿಗೆ ತಮ್ಮ ಸರ್ಕಾರ ನಗದು ಸಹಾಯವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತಾ (ಜೂ.5): ಒಡಿಶಾದ ಬಾಲಸೋರ್‌ನಲ್ಲಿ ತ್ರಿವಳಿ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರು ಹಾಗೂ ಸಂಬಂಧಿಗಳಿಗೆ ರಾಜ್ಯ ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸೋಮವಾರ ಘೋಷಣೆ ಮಾಡಿದ್ದಾರೆ. ಭೀಕರ ಅಪಘಾತದಲ್ಲಿ ಕೈಕಾಲು ಕಳೆದುಕೊಂಡವರ ಸಂಬಂಧಿಕರಿಗೂ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಸಿಎಂ ಮಾಹಿತಿ ನೀಡಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದು, ಅಪಘಾತದಲ್ಲಿ  ಪ್ರಸ್ತುತ ಮಾನಸಿಕ ಮತ್ತು ದೈಹಿಕ ಆಘಾತದಿಂದ ಬಳಲುತ್ತಿರುವವರಿಗೆ ತಮ್ಮ ಸರ್ಕಾರವು ನಗದು ಸಹಾಯವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿರುವ ಗಾಯಗೊಂಡ ಪ್ರಯಾಣಿಕರನ್ನು ಭೇಟಿ ಮಾಡಲು ಅವರು ಮಂಗಳವಾರ ಭುವನೇಶ್ವರ ಮತ್ತು ಕಟಕ್‌ಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನವೇ ಈ ಘೋಷಣೆಗಳನ್ನು ಮಾಡಿದ್ದಾರೆ. ಪ್ರಸ್ತುತ ಪಶ್ಚಿಮ ಬಂಗಾಳದಿಂದ ಮೂಲದ 206 ಪ್ರಯಾಣಿಕರು ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಟಕ್‌ನ ಆಸ್ಪತ್ರೆಯಲ್ಲಿ ಇನ್ನೂ 33 ಪ್ರಯಾಣಿಕರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದು,ಕೆಲವು ಬಂಗಾಳದ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಮಮತಾ ಬ್ಯಾನರ್ಜಿ ಅವರೊಂದಿಗೆ ಆಗಮಿಸಲಿದ್ದಾರೆ. ಬುಧವಾರ ಅವರು ಸಂತ್ರಸ್ತರ ಸಂಬಂಧಿಗಳಿಗೆ ಧನಸಹಾಯದ ಚೆಕ್‌ ಮತ್ತು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಅಪಘಾತದ ಬಗ್ಗೆ ಯಾವುದೇ ರೀತಿಯ ರಾಜಕೀಯಕ್ಕೆ ಇಳಿಯಲು ನಾನು ಬಯಸೋದಿಲ್ಲ ಆದರೆ, ಗಾಯಗೊಂಡ ಪ್ರಯಾಣಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಎಲ್ಲವನ್ನೂ ಮಾಡುತ್ತೇನೆ ಎಂದು ತಿಳಿಸಿದ್ದಾರೆ.  ರೈಲು ಅಪಘಾತದಲ್ಲಿ ಗಾಯಗೊಂಡ ರಾಜ್ಯದ ಪ್ರಯಾಣಿಕರ ಚಿಕಿತ್ಸೆ ಮತ್ತು ಪುನರ್ವಸತಿ ಮೇಲ್ವಿಚಾರಣೆಗಾಗಿ ಬ್ಯಾನರ್ಜಿ ಅವರು ಕೊನೆಯ ಕ್ಷಣದಲ್ಲಿ ಡಾರ್ಜಿಲಿಂಗ್‌ಗೆ ತಮ್ಮ ನಾಲ್ಕು ದಿನಗಳ ಪ್ರವಾಸವನ್ನು ರದ್ದುಗೊಳಿಸಿದರು ಎಂದು ಮೂಲಗಳು ತಿಳಿಸಿವೆ.

ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಡಾರ್ಜಿಲಿಂಗ್‌ಗೆ ಭೇಟಿ ನೀಡಬೇಕಿತ್ತು, ಅಲ್ಲಿ ಅವರು ಈ ವರ್ಷ ನಡೆಯಲಿರುವ ಪಂಚಾಯತ್ ಚುನಾವಣೆಗೆ ಮುನ್ನ ಹಿಲ್ಸ್‌ನಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 'ಆಕೆ ಕೋಲ್ಕತ್ತಾದಲ್ಲಿಯೇ ಇರಲು ಬಯಸಿದ್ದರು. ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಪಶ್ಚಿಮ ಬಂಗಾಳದ ಗಾಯಗೊಂಡ ಪ್ರಯಾಣಿಕರ ಪುನರ್ವಸತಿ ಮತ್ತು ಚಿಕಿತ್ಸೆಯನ್ನು ಅವರು ಮೇಲ್ವಿಚಾರಣೆ ಮಾಡಿದ್ದರು. ನಂತರ ಅವರು ಡಾರ್ಜಿಲಿಂಗ್‌ಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಅಪ್ ಲೈನ್ ಮತ್ತು ಡೌನ್ ಲೈನ್ ಟ್ರ್ಯಾಕ್‌ಗಳನ್ನು ಸರಿಪಡಿಸಿದ ಗಂಟೆಗಳ ನಂತರ, ವೈಜಾಗ್ ಬಂದರಿನಿಂದ ರೂರ್ಕೆಲಾ ಸ್ಟೀಲ್ ಪ್ಲಾಂಟ್‌ಗೆ ಕಲ್ಲಿದ್ದಲು ತುಂಬಿದ ಸರಕುಗಳ ರೈಲು ಭಾನುವಾರ ರಾತ್ರಿ 10.40 ರ ಸುಮಾರಿಗೆ ಮರಳಿ ಸ್ಥಾಪನೆ ಮಾಡಿದ ಹಳಿಗಳಲ್ಲಿ ಮೊದಲ ಬಾರಿಗೆ ಓಡಿತು.

Odisha Train Accident: ಇಂಟರ್‌ ಲಾಕಿಂಗ್‌ ಸಿಸ್ಟಮ್‌ ಲೋಪದಿಂದಲೇ ನಡೆಯಿತಾ ರೈಲು ದುರಂತ ..?

ಮೊದಲ ಹೈಸ್ಪೀಡ್ ಪ್ಯಾಸೆಂಜರ್ ರೈಲು - ಹೌರಾ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ - ಸೋಮವಾರ ಬೆಳಿಗ್ಗೆ ಅದೇ ಹಳಿಗಳ ಮೂಲಕ ಬಾಲಸೋರ್ ಮೂಲಕ ಹಾದುಹೋಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಅಪಘಾತ ಸ್ಥಳದಲ್ಲಿ ಉಪಸ್ಥಿತರಿದ್ದು, ರೈಲು ಹಾದುಹೋದಾಗ ಚಾಲಕರಿಗೆ ಕೈ ಬೀಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋರಮಂಡಲ್‌ ಎಕ್ಸ್‌ಪ್ರೆಸ್‌ ಟ್ರೇನ್‌ ಇದೇ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್‌ ಟ್ರೇನ್‌ಗೆ ಜೂನ್‌ 2ರ ರಾತ್ರಿ 7 ಗಂಟೆಯ ಸುಮಾರಿಗೆ ಡಿಕ್ಕಿ ಹೊಡೆದಿತ್ತು. ಇದೇ ವೇಳೆ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಕೋಚ್‌ಗಳ ಮೇಲೆ ಕೋರಮಂಡಲ್‌ನ ಕೆಲವು ಬೋಗಿಗಳು ಉರುಳಿದವು. ಅಪಘಾತದಲ್ಲಿ ಗೂಡ್ಸ್ ರೈಲು ಕೂಡ ಸೇರಿದೆ. ತನಿಖಾಧಿಕಾರಿಗಳು ಮಾನವ ದೋಷ, ಸಿಗ್ನಲ್ ವೈಫಲ್ಯ ಮತ್ತು ಮೂರು ರೈಲುಗಳ ಅಪಘಾತದ ಹಿಂದಿನ ಸಂಭವನೀಯ ಕಾರಣಗಳನ್ನು ಪರಿಶೀಲಿಸುತ್ತಿದ್ದಾರೆ.

Odisha Train Tragedy: 1,000 ಕ್ಕೂ ಹೆಚ್ಚು ಕಾರ್ಮಿಕರಿಂದ ರಾತ್ರಿ ಹಗಲೆನ್ನದೆ ರೈಲು ಹಳಿ ಜೋಡಣೆ ಕಾರ್ಯ

click me!