ಉಗ್ರರು, ರಾಷ್ಟ್ರ ವಿರೋಧಿಗಳಿಂದ ತುಂಬಿರುವ ಬಂಗಾಳ ಕಾಶ್ಮೀರಕ್ಕಿಂತ ಕಡೆಯಾಗಿದೆ

By Suvarna News  |  First Published Nov 15, 2020, 9:33 PM IST

ಉಗ್ರರ ತಾಣ, ರಾಷ್ಟ್ರ ವಿರೋಧಿಗಳ ನೆಲೆಯಾಗಿರುವ ಪಶ್ಚಿಮ ಬಂಗಾಳ ಇದೀಗ ಕಾಶ್ಮೀರಕ್ಕಿಂತ ಶೋಚನೀಯವಾಗಿದೆ. ಇದು ಪಶ್ಚಿಮ ಬಂಗಾಳದ ಪರಿಸ್ಥಿತಿ. ಬಂಗಾಳ , ಕಾಶ್ಮೀರಕ್ಕಿಂತ ಕಡೆಯಾಗಲು ಕಾರಣವೇನು? ಇಲ್ಲಿದೆ ವಿವರ.


ಕೋಲ್ಕತಾ(ನ.15): ಕವಿ, ಕಾದಂಬರಿಕಾರರ ನಾಡು, ಶಾಂತಿ, ಸೌಹಾರ್ಧತೆಯ ಬೀಡಾಗಿದ್ದ ಪಶ್ಚಿಮ ಬಂಗಾಳ ಇದೀಗ ಕಾಶ್ಮೀರಕ್ಕಿಂತ ಕಡೆಯಾಗಿದೆ. ಪಶ್ಚಿಮ ಬಂಗಾಳ ಇದೀಗ ಉಗ್ರರ ತಾಣವಾಗಿ ಮಾರ್ಪಟ್ಟಿದೆ. ರಾಷ್ಟ್ರವಿರೋಧಿಗಳ ನೆಲೆಯಾಗಿ ಬದಲಾಗಿದೆ ಎಂದು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. 

ಪಶ್ಚಿಮ ಬಂಗಾಳ ಗೂಂಡಾ ಅಳ್ವಿಕೆಯ ರಾಜ್ಯವಾಗಿದೆ; ಬಿಜೆಪಿ!.

Tap to resize

Latest Videos

ಕಾಶ್ಮೀರದಲ್ಲೀಗ ಭಯೋತ್ಪಾದಕತೆ ಮರೆಯಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಕಾಶ್ಮೀರಕ್ಕಿಂತ ಕಡೆಯಾಗಿದೆ. ಇತ್ತೀಚೆಗೆ ಉತ್ತರ ಬಂಗಾಳ ಅಲಿಪುರದೌರದಲ್ಲಿ 6 ಮಂದಿ ಆಲ್ ಖೈದಾ ಉಗ್ರರನ್ನು ಬಂಧಿಸಲಾಗಿದೆ. ಬಂಗಾಳ ಹಲವೆಡೆ ಉಗ್ರರು ಬೇರೂರಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ನಾಯಕ ಖಲೇದಾ ಝಿಯಾ ನೀಡಿದ ಹೇಳಿಕೆ ಬಂಗಾಳಕ್ಕೆ ಹೋಲಿಸಿದರೆ ತಾಳೆಯಾಗುತ್ತಿದೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.

ಭಾರತದಲ್ಲಿ ಉಗ್ರರು ತರಬೇತಿ ಪಡೆಯುತ್ತಿದ್ದಾರೆ. ಬಳಿಕ ಬಾಂಗ್ಲಾದೇಶಕ್ಕೆ ನುಸುಳಿ ಇಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಖಲೇದಾ ಝಿಯಾ ಹೇಳಿದ್ದರು. ಬಂಗಾಳದಲ್ಲಿ ಉಗ್ರರು ತುಂಬಿಕೊಳ್ಳುತ್ತಿದ್ದಾರೆ. ಉಗ್ರರ ಬಹುದೊಡ್ಡ ನೆಟ್‌ವರ್ಕ್ ಬಂಗಾಳದ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇತ್ತಿಚೆಗೆ ನಡೆದ ಉಗ್ರರ ಬಧವನೇ ಇದಕ್ಕೆ ಸಾಕ್ಷಿ. ಇವರಿಗೆ ರಾಷ್ಟ್ರವಿರೋಧಿಗಳು ನೆರವಾಗುತ್ತಿದ್ದಾರೆ. ಇದು ಮತ್ತಷ್ಟು ಆತಂಕ ತರುತ್ತಿದೆ ಎಂದು ಘೋಷ್ ಹೇಳಿದ್ದಾರೆ.

ಬಿಜೆಪಿ ಸಂಸದ‌ ಘೋಷ್‌ ಮೇಲೆ ಹಲ್ಲೆ!.

ಬಂಗಾಳದ ಮುಗ್ದ ಜನತೆ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ನನ್ನ ಹೆಸರು ಉಗ್ರರ ಹಿಟ್‌ಲಿಸ್ಟ್‌ನಲ್ಲಿದೆ. ನನ್ನ ಮೇಲೆ ಅಲಿಪುರದೌರದಲ್ಲಿ ದಾಳಿ ಮಾಡಲಾಗಿತ್ತು. ಇದೇ ಜಾಗದಲ್ಲಿ ರೋಹಿಂಗ್ಯ ಮುಸ್ಲಿಂರಿಗೆ ಆಶ್ರಯ ನೀಡಲಾಗಿದೆ. ಪಶ್ಚಿಮ ಬಂಗಾಳ ರೋಹಿಂಗ್ಯ ಸೇರಿದಂತೆ ಇತರ ನುಸುಳುಕೋರರಿಂದ ತುಂಬಿದೆ. ಇವರೆಲ್ಲಾ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್‌ನ ಮತ ಬ್ಯಾಂಕ್‌ ಎಂದು ದಿಲೀಪ್ ಘೋಷ್ ವಾಗ್ದಾಳಿ ನಡೆಸಿದ್ದಾರೆ.

ಕೆಲ ರಾಜಕೀಯ ಪಕ್ಷಗಳು ಉಗ್ರರಿಗೆ ನೆರವು ನೀಡುತ್ತಿರುವುದು ಮತ್ತಷ್ಟು ಆತಂಕ ತಂದಿದೆ. ಇದು ಎಚ್ಚರಿಕೆ ಕರೆಗಂಟೆಯಾಗಿದೆ. ಬಂಗಾಳ ಉಗ್ರರ ಪಾಲಾಗುವುದನ್ನು ತಪ್ಪಿಸಬೇಕಿದೆ ಎಂದು ಘೋಷ್ ಹೇಳಿದ್ದಾರೆ.

click me!