
ನವದೆಹಲಿ (ನ.15) ಹಬ್ಬಗಳು ಧರ್ಮಗಳನ್ನು ಮೀರಿದ್ದು.. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಶಕ್ತಿ.. ಅದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.
ದೀಪಾವಳಿ ಸಂದರ್ಭ ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾ ಅಲಂಕೃತಗೊಂಡಿದೆ. ಎಲ್ಲ ಜಾತಿ ಸಮುದಾಯಕ್ಕೆ ಸೇರಿದ ಜನರು ದರ್ಗಾಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಹಬೂಬ್-ಇ-ಇಲಾಹಿಯ ಅನುಯಾಯಿಗಳು ಭೇಟಿ ನೀಡುತ್ತಾರೆ.
ದೀಪಾವಳಿ ವೇಳೆ ಇದರಲ್ಲೊಂದು ಕೆಲಸ ಮಾಡಿದರೆ ಅದೃಷ್ಟ ಒಲಿಯುತ್ತದೆ
'ದಿಯಾ'ಗಳನ್ನು ಸಹ ಬೆಳಗಿಸುತ್ತಾರೆ. ಏಕತೆ ಸಾರಲು ದರ್ಗಾ ಒಂದು ವೇದಿಕೆ ಎಂದು ದರ್ಗಾ ಸಮಿತಿಯ ಪೀರ್ಜಾಡಾ ಅಲ್ತಮಾಶ್ ನಿಜಾಮಿ ಹೇಳುತ್ತಾರೆ. ಅನೇಕ ಭಕ್ತರು ಆಗಮಿಸಿ ದೀಪ ಬೆಳಗಿಸಿದ್ದು ವಿಶೇಷ.
ಭಾರತದ ಹಲವು ಕಡೆ ಈ ರೀತಿ ಸರ್ವಧರ್ಮ ಸಮನ್ವಯ ಸಾರುವ ಕೇಂದ್ರಗಳಿವೆ. ಸಂಪ್ರದಾಯಗಳನ್ನು ಮೀರಿ ಅವರವರ ಆಚರಣೆಯನ್ನು ಅವರವರು ಮಾಡಿಕೊಂಡು ಹೋಗುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ