ಸಾರ್ವಜನಿಕ ವಲಯಗಳ ಖಾಸಗೀಕರಣ; ಭಾರತದ ಅಭಿವೃದ್ಧಿಗೆ ಪ್ರಧಾನಿ ಮೋದಿ ರೋಡ್ ಮ್ಯಾಪ್!

By Suvarna News  |  First Published Feb 24, 2021, 6:30 PM IST

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಕೆಲ ಸಾರ್ವಜನಿಕ ವಲಯಗಳ ಖಾಸಗೀಕರಣ ಕುರಿತು ವೆಬಿನಾರ್ ಆಯೋಜಿಸಲಾಗಿತ್ತು. ದೇಶದ ಉದ್ಯಮ ವಲಯದ ದಿಗ್ಗಜರು, ಅಧಿಕಾರಿಗಳು, ತಜ್ಞರು ಪಾಲ್ಗೊಂಡಿದ್ದ ಈ ವೆಬಿನಾರ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಖಾಸಗೀಕರಣ ಕುರಿತು ಒತ್ತಿ ಹೇಳಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.


ನವದೆಹಲಿ(ಫೆ.24):  ಕೇಂದ್ರ ಸರ್ಕಾರ ಮಂಡಿಸಿರುವ ಆರ್ಥಿಕ ವರ್ಷ 2021-22ರ ಸಾಲಿನ ಬಜೆಟ್ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸ್ಪಷ್ಟ ಮಾರ್ಗಸೂಚಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಜೆಟ್‌ನಲ್ಲಿ ಘೋಷಿಸಿದ ಖಾಸಗೀಕರಣದ ಕುರಿತ ವೆಬ್‌ನಾರ್‌ನಲ್ಲಿ ಹೇಳಿದ್ದಾರೆ.

ಸಂಚಲನ ಹುಟ್ಟಿಸಿದೆ ಮೋದಿ ಸರ್ಕಾರದ ಹೊಸ ಹೆಜ್ಜೆ: ಬ್ಯಾಂಕಿಂಗ್ ವ್ಯವಸ್ಥೆ ಕತೆ ಏನು?

Latest Videos

undefined

ಒಂದು ಕಾಲದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಸ್ಥಾಪನೆಯಾದಾಗ ಅಗತ್ಯತೆ, ಅವಶ್ಯಕತೆ, ಪೂರೈಕೆಗಳು ಭಿನ್ನವಾಗಿತ್ತು.    50-60 ವರ್ಷಗಳ ಹಿಂದೆ ಉತ್ತಮವಾಗಿದ್ದ ನೀತಿಯನ್ನು ಸುಧಾರಿಸಲು ಯಾವಾಗಲೂ ಅವಕಾಶವಿದೆ. 50 ರಿಂದ 60 ವರ್ಷಗಳ ಹಿಂದೆ ಕೆಲ ನೀತಿಗಳು ಉತ್ತಮವಾಗಿತ್ತು. ಆದರೆ ಈಗ ಕೆಲ ಬದಲಾವಣೆಗಳು ಅಗತ್ಯವಾಗಿದೆ.  ಹೊಸ ಸುಧಾರಣೆಗಳಿಂದ ಸಾರ್ವಜನಿಕರ ಹಣವನ್ನು ಅತ್ಯುತ್ತಮವಾಗಿ ಬಳಸಿಸಿಕೊಳ್ಳುವುದೇ ನಮ್ಮ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ. 

 

Speaking on various reforms undertaken in this year’s Budget. Watch. https://t.co/RjP4EEEtet

— Narendra Modi (@narendramodi)

ಸಾರ್ವಜನಿಕ ಉದ್ಯಮ ವಲಯದ ಅಗತ್ಯತೆ,ಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ.  ದೇಶದ ಉದ್ಯಮ ವ್ಯವಹಾರಗಳಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಉದ್ಯಮಗಳಲ್ಲಿ ಸರ್ಕಾರ ಇರಬೇಕಾದ ಅಗತ್ಯವಿಲ್ಲ. ಸಾರ್ವಜನಿಕ ವಲಯದಲ್ಲಿ ಖಾಸಗೀಕರಣ ಕುರಿತು ಮೋದಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ನೀತಿ ಆಯೋಗದ ಸಭೆಯಲ್ಲಿ ಮೋದಿ ಮುಂದೆ ಕೆಲ ಮಹತ್ವದ ಬೇಡಿಕೆ ಇಟ್ಟ ಸಿಎಂ.

ಸದ್ಯ ಹಲವು ಸಾರ್ವಜನಿಕ ವಲಯದ ಉದ್ಯಮಗಳು ನಷ್ಟದಲ್ಲಿದೆ. ಇಷ್ಟೇ ಅಲ್ಲ ಹಲವು ಸರ್ಕಾರಿ ವಲಯದ ಉದ್ಯಮಗಳಿಗೆ ಆರ್ಥಿಕ ಬೆಂಬಲದ ಅಗತ್ಯವಿದೆ. ಇದು ದೇಶದ ಆರ್ಥಿಕತೆ ಮೇಲೆ ಹೊಡೆತ ತರುತ್ತಿದೆ.  ಕೆಲ ಸಾರ್ವಜನಿಕ ವಲಯದ ಉದ್ಯಮಗಳು ಹಲವು ದಶಕಗಳ ಹಿಂದೆ ಆರಂಭಗೊಂಡಿದೆ. ಕೆಲವರ ಲಾಭಕ್ಕಾಗಿ ಈ ಯೋಜನೆಗಳು ಸ್ಥಾಪಿತವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿನ ಆರ್ಥಿಕ ಸಂಕಷ್ಟದ ಕುರಿತು ಮೋದಿ ಮಾಹಿತಿ ಹಂಚಿಕೊಂಡರು

ಆತ್ಮನಿರ್ಭರ್ ಭಾರತ್ ಯೋಜನೆ ಅಡಿ ಉದ್ಯಮ ವಲಯಕ್ಕೆ ಮೂಲಸೌಕರ್ಯ, ಆಧುನಿಕತೆಯ ಸ್ಪರ್ಶ, ಮಲ್ಟಿ ಮೊಡೆಲ್ ಸಂಪರ್ಕ ಕೆಲಸ ನಡೆಯುತ್ತಿದೆ. 111 ಟ್ರಿಲಿಯನ್ ರೂಪಾಯಿಗಳ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಯೋಜನೆ ಚುರುಕುಗೊಂಡಿದೆ. ಈ ಯೋಜನೆಯಲ್ಲಿ ಖಾಸಗಿ ಉದ್ಯಮ ವಲಯಕ್ಕೆ ಸುಮಾರು 25 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಅವಕಾಶವಿದೆ ಎಂದು ಮೋದಿ ಹೇಳಿದರು.

ಕಡಿಮೆ ಬಳಕೆಯಾದ ಹಾಗೂ ಇದುವರೆಗ ಬಳಕೆಯಾಗದ 100ಕ್ಕೆ ಹೆಚ್ಚು ಆಸ್ತಿಗಳನ್ನು ಸರ್ಕಾರ ಹೊಂದಿದೆ. ಇದರಲ್ಲಿ 100 ಆಸ್ತಿಗಳನ್ನು ವಿತ್ತೀಯಗೊಳಿಸಿ ಈ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.

click me!