ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆ| ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೆರಳಾಗಲಿದೆ ಭಾರತ| ಪೌರತ್ವ ತಿದ್ದುಪಡಿ ಕಾಯ್ದೆ ಭಾರತದಲ್ಲಿ ಧಾರ್ಮಿಕ ಕಂದಕ ಸೃಷ್ಟಿಸಲಿದೆಯೇ?| ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗೆ ನೆರವು| ನಿರ್ಭಿತ ಹಾಗೂ ಸ್ವಚ್ಛಂದ ಸಮಾಜದಲ್ಲಿ ಸ್ವತಂತ್ರ್ಯವಾಗಿ ಉಸಿರಾಡುವ ಅವಕಾಶ| ಕಾಯ್ದೆ ಭಾರತದಲ್ಲೇ ಕೋಮು ದಳ್ಳುರಿಗೆ ಕಾರಣವಾಗಲಿದೆ ಎನ್ನುವ ವಿಪಕ್ಷಗಳು| ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭುಗಿಲೆದ್ದಿರುವ ಹಿಂಸಾಚಾರ| ಭಾರತದಲ್ಲಿ ಆಶ್ರಯ ಪಡೆದಿರುವ ಪಾಕಿಸ್ತಾನಿ ಶರಣಾರ್ಥಿಗಳನ್ನು ಸಂದರ್ಶಿಸಲಿರುವ ಸುವರ್ಣನ್ಯೂಸ್.ಕಾಂ| ಪಾಕಿಸ್ತಾನಿ ಶರಣಾರ್ಥಿಗಳ ಬದುಕು ಬವಣೆಯ ಕುರಿತು ನಿಮ್ಮ ಸುವರ್ಣನ್ಯೂಸ್.ಕಾಂ ವಿಸ್ತೃತ ವರದಿ|
ಬೆಂಗಳೂರು(ಡಿ.19): ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದಲ್ಲಿ ಸಂಚಲನ ಮೂಡಿಸಿದೆ. ದಶಕಗಳಿಂದ ನಮ್ಮ ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೆ ಗುರಿಯಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತ ನೆರಳಾಗುವ ಭರವಸೆ ನೀಡಿದೆ. ಆದರೆ ಈ ಕಾಯ್ದೆ ಭಾರತದಲ್ಲೇ ಧಾರ್ಮಿಕ ಕಂದಕಕ್ಕೆ ಮುನ್ನಡಿ ಬರೆಯಲಿದೆ ಎಂಬ ವಾದವೂ ಮುನ್ನೆಲೆಗೆ ಬಂದಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿರುವ ಹಿಂದೂ, ಬೌದ್ಧ, ಕ್ರಿಶ್ಚಿಯನ್ ಹಾಗೂ ಜೋರಾಸ್ಟ್ರಿಯನ್ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವುದು ಪೌರತ್ವ ತಿದ್ದುಪಡಿ ಕಾಯ್ದೆಯ ಸದುದ್ದೇಶ.
undefined
ಈ ಕ್ರಾಂತಿಕಾರಿ ಕಾಯ್ದೆಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚಿಗಷ್ಟೇ ಜಾರಿಗೆ ತಂದಿದೆ. ಈ ಮೂಲಕ ದಶಕಗಳಿಂದ ತಮ್ಮ ಧರ್ಮದ ಕಾರಣಕ್ಕೆ ಈ ಮೂರು ರಾಷ್ಟ್ರಗಳಲ್ಲಿ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ ಅಲ್ಪಸಂಖ್ಯಾತರಿಗೆ ನಿರ್ಭಿತ ಹಾಗೂ ಸ್ವಚ್ಛಂದ ಸಮಾಜ(ಭಾರತ)ದಲ್ಲಿ ಸ್ವತಂತ್ರ್ಯವಾಗಿ ಉಸಿರಾಡುವ ಅವಕಾಶ ಲಭಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ: ನಿಮ್ಮೆಲ್ಲ ಅನುಮಾನಗಳಿಗೆ ಇಲ್ಲಿದೆ ಉತ್ತರ!
ಆದರೆ ಈ ಕಾನೂನು ಭಾರತದಲ್ಲೇ ಕೋಮು ದಳ್ಳುರಿಗೆ ಕಾರಣವಾಗಲಿದೆ ಎಂಬುದು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳ ವಾದವಾಗಿದೆ. ಅಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ವಿಪಕ್ಷಗಳ ಆರೋಪಕ್ಕೆ ಬಲ ನೀಡಿದೆ.
ಇಷ್ಟು ದಿನ ಬಾಂಗ್ಲಾ ಅಕ್ರಮ ವಲಸಿಗರನ್ನು ಸಹಿಸಿಕೊಂಡ ಈಶಾನ್ಯ ರಾಜ್ಯಗಳು ಇದೀಗ ಮತ್ತೊಂದು ರೀತಿಯ ಸಮಸ್ಯೆ ಎದುರಿಸಬೇಕಿದೆ ಎಂಬುದು ಈ ರಾಜ್ಯಗಳ ಜನರ ಅಳಲಾಗಿದೆ. ಆದರೆ ಕಾಯ್ದೆಯ ಸಂಪೂರ್ಣ ಅರಿವು ಇಲ್ಲವಾಗಿದ್ದು, ಈ ಕುರಿತು ಜನಜಾಗೃತಿ ಮೂಡಿಸುವುದು ಕೇಂದ್ರ ಸರ್ಕಾರದ ಸದ್ಯದ ಆದ್ಯ ಕರ್ತವ್ಯವಾಗಬೇಕಿದೆ.
ಅದೆನೆ ಇರಲಿ, ಪೌರತ್ವ ತಿದ್ದುಪಡಿ ಕುರಿತು ಭಾರತದಲ್ಲೇಕೆ ಚರ್ಚೆ ಶುರುವಾಗಿದೆ? ಕೆಲವರಿಗೇಕೆ ಭೀತಿ ಎದುರಾಗಿದೆ? ಅಷ್ಟಕ್ಕೂ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾರೆಂದರೆ ಯಾರು? ಈ ರಾಷ್ಟ್ರಗಳಲ್ಲಿ ಅವರು ಅನುಭವಿಸುತ್ತಿರುವ ಸಂಕಷ್ಟಗಳೇನು? ಈ ಎಲ್ಲವುಗಳ ಕುರಿತು ನಿಮ್ಮ ಸುವರ್ಣನ್ಯೂಸ್.ಕಾಂ ಸರಣಿ ಲೇಖನ ಪ್ರಕಟಿಸಲಿದೆ.
CAA ಜಾರಿಗೆ ಭಾರತೀಯ ಮುಸ್ಲಿಮರು ಹೆದರಬೇಕಿಲ್ಲ: ಅಹ್ಮದ್ ಬುಖಾರಿ!
ಈ ರಾಷ್ಟ್ರಗಳಲ್ಲಿ ಬದುಕುವುದೇ ದುಸ್ತರವಾಗಿ ಭಾರತದಲ್ಲಿ ಆಶ್ರಯ ಪಡೆದಿರುವ ಹಲವು ಶರಣಾರ್ಥಿಗಳನ್ನು ನೇರವಾಗಿ ಸಂದರ್ಶಿಸಿ ಅವರ ಬದುಕು ಬವಣೆಯ ಕುರಿತು ನಿಮ್ಮ ಸುವರ್ಣನ್ಯೂಸ್.ಕಾಂ ವಿಸ್ತೃತ ವರದಿ ಪ್ರಕಟಿಸಲಿದೆ.
ಇಷ್ಟು ಮಾತ್ರವಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆಯ ಧನಾತ್ಮಕ ಅಂಶಗಳ ಕುರಿತು ಈ ಸರಣಿ ಲೇಖನಗಳಿಂದ ಜನಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಈ ಸರಣಿ ಲೇಖನಗಳಿಂದ ಸಮಾಜದಲ್ಲಿ ಕಾಯ್ದೆಯ ಸಂಪೂರ್ಣ ಅರಿವು ಮೂಡಿದರೆ ನಮ್ಮ ಪ್ರುಯತ್ನ ಸಾರ್ಥಕ.