ವಿಧಾನಸಭೆಯಲ್ಲಿ ವಿಪಕ್ಷದ ಜೊತೆ ಬಿಜೆಪಿ ಶಾಸಕರ ಪ್ರತಿಭಟನೆ!

By Suvarna News  |  First Published Dec 19, 2019, 10:36 AM IST

ವಿಧಾನಸಭೆಯೊಳಗೆ ವಿಪಕ್ಷ ಸದಸ್ಯರ ಜೊತೆ ಬಿಜೆಪಿ ಶಾಸಕರ ಪ್ರತಿಭಟನೆ!| ತಮ್ಮ ಸರ್ಕಾರದ ವಿರುದ್ಧವೇ ಕಮಲ ನಾಯಕರ ಪ್ರತಿಭಟನೆ ಏಕೆ?


ಲಖನೌ[ಡಿ.19]: ಶಾಸನ ಸಭೆಗಳಲ್ಲಿ ಸರ್ಕಾರದ ನೀತಿ-ನಿಲುವುಗಳ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸುವುದು ಸಾಮಾನ್ಯ. ಆದರೆ, ಬಿಜೆಪಿ ಶಾಸಕರೊಬ್ಬರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ವಿಪಕ್ಷಗಳ ಸದಸ್ಯರು ಪ್ರತಿಭಟಿಸಿದ, ಅದಕ್ಕೆ ಬಿಜೆಪಿ ಶಾಸಕರೂ ಬೆಂಬಲ ನೀಡಿ ತಾವೂ ಪ್ರತಿಭಟನೆಯಲ್ಲಿ ಭಾಗಿಯಾದ ಅಚ್ಚರಿಯ ಘಟನೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ನಡೆದಿದೆ.

ಕೈ, ಜೆಡಿಎಸ್‌ ಎಡವಟ್ಟಿಂದ ಬಿಜೆಪಿಗೆ ಭರ್ಜರಿ ಬೋನಸ್‌

Tap to resize

Latest Videos

ತಮ್ಮ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ವಿವರಣೆಗೆ ಅವಕಾಶ ನೀಡಬೇಕೆಂಬ ಬಿಜೆಪಿ ಶಾಸಕ ನಂದ್‌ಕಿಶೋರ್‌ ಕೋರಿಕೆಯನ್ನು ಸ್ಪೀಕರ್‌ ತಳ್ಳಿ ಹಾಕಿದರು. ಈ ವೇಳೆ ಬಿಜೆಪಿ ಶಾಸಕರ ನೆರವಿಗೆ ಧಾವಿಸಿದ ಕಾಂಗ್ರೆಸ್‌ನ ಹಲವು ಶಾಸಕರು ಸದನದ ಭಾವಿಗೆ ಧುಮುಕಿ ಪ್ರತಿಭಟನೆ ನಡೆಸಿದರು.

ಬಳಿಕ ಬಿಜೆಪಿ 100ಕ್ಕೂ ಹೆಚ್ಚು ಶಾಸಕರು ಕೂಡಾ ಪ್ರತಿಭಟನೆ ನಡೆಸಿದರು.

'ಕೇಸರಿ ಬಟ್ಟೆ ಧರಿಸುವ ಬಿಜೆಪಿಗರು ರೇಪಿಸ್ಟ್‌ಗಳು'

click me!