LPG Cylinder: ಗ್ಯಾಸ್ ಬದಲು ಸಿಲಿಂಡರ್‌ನಲ್ಲಿತ್ತು ಬರೀ ನೀರು! ಸ್ಟವ್ ಆನ್ ಮಾಡ್ತಿದ್ದಂತೆ ಬಿಗ್ ಶಾಕ್

Published : Mar 10, 2026, 08:47 PM IST
Woman Shocked

ಸಾರಾಂಶ

ಫುಡ್ ಪ್ರಾಡಕ್ಟ್ಸ್ ಯೂನಿಟ್‌ವೊಂದಕ್ಕೆ ಸಿಕ್ಕ ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಗ್ಯಾಸ್‌ ಬದಲು ನೀರು ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿದಾಗ, ಏಜೆನ್ಸಿಯವರು ಕೈಚೆಲ್ಲಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.

ತಿರುವನಂತಪುರ : ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಗ್ಯಾಸ್‌ ಬದಲು ಬರೀ ನೀರು ತುಂಬಿ ಗ್ರಾಹಕರಿಗೆ ಪೂರೈಕೆ ಮಾಡಿದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.  'ಒರುಮಾ' ಎಂಬ ಫುಡ್ ಪ್ರಾಡಕ್ಟ್ಸ್ ಯೂನಿಟ್ ನಡೆಸುತ್ತಿರುವ ಕಬೀರ್ ರಹಮಾನಿಯ ಎಂಬುವವರಿಗೆ ಈ ಕಹಿ ಅನುಭವವಾಗಿದೆ.  ಕಳೆದ ದಿನ ತಮ್ಮ ಅಂಗಡಿಯಲ್ಲಿ ಚಪಾತಿ ಮಾಡಲು ಈ ಹೊಸ ಸಿಲಿಂಡರ್ ಬಳಸಿದಾಗ, ಸ್ಟವ್ ಇದ್ದಕ್ಕಿದ್ದಂತೆ ಆಫ್ ಆಗಿದೆ. ಅನುಮಾನಗೊಂಡು ಪರಿಶೀಲಿಸಿದಾಗ ಸಿಲಿಂಡರ್‌ನಲ್ಲಿ ಗ್ಯಾಸ್ ಬದಲು ನೀರು ತುಂಬಿರುವುದು ಗೊತ್ತಾಗಿದೆ.

ಕಬೀರ್ ಅವರು ಆಲಪ್ಪುಳದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಏಜೆನ್ಸಿಯಿಂದ ಈ ಸಿಲಿಂಡರ್ ಖರೀದಿಸಿದ್ದರು. ಸಿಲಿಂಡರ್‌ನಲ್ಲಿ ನೀರು ತುಂಬಿರುವ ಬಗ್ಗೆ ದೂರು ನೀಡಿದಾಗ, "ನಾವೇನೂ ಮಾಡಲು ಸಾಧ್ಯವಿಲ್ಲ" ಎಂದು ಏಜೆನ್ಸಿಯವರು ಕೈಚೆಲ್ಲಿದ್ದಾರೆ ಎಂದು ಕಬೀರ್ ಆರೋಪಿಸಿದ್ದಾರೆ. 

ಸಿಲಿಂಡರ್ ಬೆಲೆ ಏರಿಕೆ

ಕೇವಲ ಮೂರು ದಿನಗಳ ಹಿಂದಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹110 ಏರಿಕೆಯಾಗಿ ₹1,880 ಆಗಿತ್ತು. ಭಾನುವಾರದಂದು ಕಬೀರ್ ಅವರು ಇದೇ ದುಬಾರಿ ಬೆಲೆ ಕೊಟ್ಟು ಸಿಲಿಂಡರ್ ಖರೀದಿಸಿದ್ದರು.

ಇದನ್ನೂ ಓದಿ: LPG ಗ್ಯಾಸ್ ಸಿಲಿಂಡರ್ ಬುಕಿಂಗ್​ಗೆ ಬಂತು ಹೊಸ ನಿಯಮ- ಕೂಡಲೇ ಜಾರಿ: ಏನಿದು ರೂಲ್ಸ್​?

 

 

ಗ್ಯಾಸ್ ಬದಲು ನೀರೇ ತುಂಬಿಸಿದ್ರು

ನಿಯಮಗಳ ಪ್ರಕಾರ, ಗ್ಯಾಸ್ ಏಜೆನ್ಸಿ ವಿತರಿಸುವ ಕಮರ್ಷಿಯಲ್ ಸಿಲಿಂಡರ್ ಒಟ್ಟು 38.1 ಕೆ.ಜಿ ತೂಕವಿರಬೇಕು. ಇದರಲ್ಲಿ ಸಿಲಿಂಡರ್ ತೂಕ 19 ಕೆ.ಜಿ ಮತ್ತು ಗ್ಯಾಸ್ ತೂಕ 19.1 ಕೆ.ಜಿ ಇರಬೇಕು. ಆದರೆ, ಕಬೀರ್ ಅವರು ಕೇವಲ 9 ಕೆ.ಜಿ ಗ್ಯಾಸ್ ಬಳಸುವಷ್ಟರಲ್ಲೇ ಅದು ಖಾಲಿಯಾಗಿದೆ. ನಂತರ ಸಿಲಿಂಡರ್ ತೂಕ ನೋಡಿದಾಗ, ಅದು 29 ಕೆ.ಜಿ ಇತ್ತು. ಅಂದರೆ, ಖಾಲಿಯಾಗಬೇಕಿದ್ದ 19.1 ಕೆ.ಜಿ ಗ್ಯಾಸ್ ಪೈಕಿ, 9 ಕೆ.ಜಿ ಬಳಕೆಯಾದ ನಂತರ ಉಳಿದ 10 ಕೆ.ಜಿ ಗ್ಯಾಸ್ ಬದಲು ಬರೀ ನೀರೇ ತುಂಬಿತ್ತು ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್‌ಗೆ ₹915.50 ಕ್ಕಿಂತ ಹೆಚ್ಚು ಹಣ ಕೇಳ್ತಿದ್ದಾರಾ? ಸುಲಿಗೆಕೋರ ಏಜೆನ್ಸಿಗಳಿಗೆ ಬ್ರೇಕ್ ಹಾಕಲು ಹೀಗೆ ದೂರು ನೀಡಿ!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೋಲ್‌ನಲ್ಲಿ ಫಾಸ್ಟ್ಯಾಗ್ ಹಣ ಕಟ್ ಮಾಡಬೇಡಿ, ಹೆಂಡ್ತಿಗೆ ಮೆಸೇಜ್ ಹೋಗುತ್ತೆಂದ ಗಂಡ; ಫ್ರೀಯಾಗಿ ಕಳಿಸಿದ ಸಿಬ್ಬಂದಿ!
ಭಾರೀ ಸಂಕಷ್ಟದ ಬೆನ್ನಲ್ಲೇ ಇಂಡಿಗೋ ವಿಮಾನ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ