ದೇಶದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಹೀಗೇಕೆ ಬರ್ತಡೇ ಆಚರಿಸಿದ್ರು...?

By Suvarna News  |  First Published Dec 30, 2021, 4:10 PM IST
  • ಅತ್ಯಂತ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರತನ್‌ ಟಾಟಾ
  • ಕೇವಲ ಒಬ್ಬ ಯುವ ಉದ್ಯೋಗಿಯೊಂದಿಗೆ ಬರ್ತಡೇ ಆಚರಣೆ
  • ಟಾಟಾ ಜೊತೆ ಇರುವ ಯುವ ಉದ್ಯೋಗಿ ಯಾರು..?

ಮುಂಬೈ(ಡಿ.30):  ದೇಶದ ಹಿರಿಯ ಉದ್ಯಮಿ, ಟಾಟಾ ಗ್ರೂಪ್‌ನ ಮುಖ್ಯಸ್ಥ ರತನ್ ಟಾಟಾ ಅವರು ಇತ್ತೀಚೆಗಷ್ಟೇ ತಮ್ಮ 84 ನೇ ವಸಂತಕ್ಕೆ ಕಾಲಿರಿಸಿದ್ದರು. ಕೆಲ ದಿನಗಳ ಹಿಂದೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಟಾಟಾ ಹೇಗೆ ಹುಟ್ಟುಹಬ್ಬ ಆಚರಿಸಿದರು ಎಂಬ ವಿಡಿಯೋ ಈಗ ವೈರಲ್‌ ಆಗಿದೆ.  84 ವರ್ಷದ ಟಾಟಾ ತಮ್ಮ ಸಂಸ್ಥೆಯ ಅತ್ಯಂತ ಕಿರಿಯ ಉದ್ಯೋಗಿ ಜೊತೆ ಒಂದು ಮೇಣದ ಬತ್ತಿಯನ್ನು ಊದಿ ನಂತರ ಸಣ್ಣ ಕಪ್‌ ಕೇಕ್‌ ಕತ್ತರಿಸುವ ಮೂಲಕ ಸರಳವಾಗಿ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. 

ಯಾವುದೇ ಅದ್ದೂರಿ ಸ್ಥಳವಿಲ್ಲ, ಬೃಹತ್ ಬಲೂನ್ ಕಮಾನುಗಳಿಲ್ಲ ಮತ್ತು ದುಬಾರಿ ಮೂರು ಹಂತದ ಕೇಕ್‌ಗಳಿಲ್ಲ, ಆದರೆ ಕೇವಲ ಒಂದು ಸಣ್ಣ ಕಪ್‌ ಕೇಕ್‌ ಮತ್ತು ಸಂಪೂರ್ಣ ಪ್ರೀತಿ, ಇದು ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ ರೀತಿ. ರತನ್ ಟಾಟಾ ಅವರು ಡಿಸೆಂಬರ್ 28 ರಂದು 84 ನೇ ವರ್ಷಕ್ಕೆ ಕಾಲಿಟ್ಟರು. ಇವರಿಗೆ ನೆಟಿಜನ್‌ಗಳು ಮತ್ತು ಗಣ್ಯ ವ್ಯಕ್ತಿಗಳು ಸೇರಿದಂತೆ ಲಕ್ಷಾಂತರ ಮಂದಿ ಶುಭಾಶಯಗಳನ್ನು ಸಲ್ಲಿಸಿದ್ದರು. 

Tap to resize

Latest Videos

undefined

 

ಹುಟ್ಟುಹಬ್ಬ ಎಂದ ಕೂಡಲೇ ಬಹುತೇಕರು ಒಂದು ತಿಂಗಳ ಮೊದಲೇ ತಮ್ಮ ಹುಟ್ಟುಹಬ್ಬಕ್ಕೆ ಸಿದ್ಧತೆ ನಡೆಸುತ್ತಾರೆ. ಸ್ನೇಹಿತರು ಬಂಧುಗಳನ್ನು ಕರೆಯುತ್ತಾರೆ. ಜೊತೆಗೆ ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಪಾರ್ಟಿ ಮಾಡುತ್ತಾರೆ. ಒಟ್ಟಿನಲ್ಲಿ ಇತ್ತೀಚೆಗೆ ಬಹುತೇಕರು ತಮ್ಮ ಹುಟ್ಟಿದ ದಿನವನ್ನು ಹಬ್ಬದಂತೆ ಆಚರಿಸುವುದು ಸಾಮಾನ್ಯವಾಗಿದೆ. ಆದರೆ ದೇಶದ ಅತ್ಯಂತ ದೊಡ್ಡ  ಉದ್ಯಮಿ ಟಾಟಾ ಕೇವಲ ಒಬ್ಬ ಉದ್ಯೋಗಿಯೊಂದಿಗೆ ಸಣ್ಣದಾದ ಒಂದು ಕಪ್‌ ಕೇಕ್‌ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಟಾಟಾ ಮನಸ್ಸು ಮಾಡಿದ್ದರೆ ಎಂಥೆಂಥಾ ಗಣ್ಯರ ಜೊತೆಗೂಡಿ ಹುಟ್ಟುಹಬ್ಬ ಆಚರಿಸಬಹುದಿತ್ತು. ಆದರೆ ಅವರ ಈ ಸರಳತೆ ಈ ವಿಡಿಯೋದಲ್ಲಿ ಕಂಡು ಬಂದಿದೆ. 

Air India ಮಾರಾಟ: ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ ಸರ್ಕಾರ!

ಈ ವಿಡಿಯೋವನ್ನು ಟಾಟಾ ಮೋಟಾರ್ ಫೈನಾನ್ಸ್‌ನ (Tata Motor Finance) ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ ವೈಭವ್ ಭೋರ್ (Vaibhav Bhoir) ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ, ರತನ್ ಟಾಟಾ ಅವರು ಸಣ್ಣ ಕಪ್‌ಕೇಕ್‌ನಲ್ಲಿರುವ ಮೇಣದಬತ್ತಿಗಳನ್ನು ಊದುತ್ತಿರುವ ದೃಶ್ಯ ವಿಡಿಯೋದಲ್ಲಿದೆ.  ನಂತರ  ರತನ್‌ ಟಾಟಾ ಅಸೋಸಿಯೇಟ್ಸ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಶಾಂತನು ನಾಯ್ಡು (Shantanu Naidu) ಅವರು ರತನ್ ಟಾಟಾ ಅವರಿಗೆ ಕಪ್‌ಕೇಕ್ ತುಂಡನ್ನು ತಿನ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 'ಸರಳತೆ, ರಾಷ್ಟ್ರದ ಹೆಮ್ಮೆ ಮತ್ತು ಎಲ್ಲರಿಗೂ ಸ್ಫೂರ್ತಿ ಎಂದು ವೈಭವ್‌ ಭೀರ್ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. 

ಭರವಸೆಯ ಕಂಗಳು: ಉದ್ಯಮಿ ರತನ್ ಟಾಟಾ ಅವರ ಆ ದಿನಗಳು!

ರತನ್ ಟಾಟಾ ತನ್ನ ಜನ್ಮದಿನವನ್ನು ತಮ್ಮ ಮೊಮ್ಮಗನ ಪ್ರಾಯದಷ್ಟು ಚಿಕ್ಕವನಾದ ಶಂತನು ಜೊತೆ ಏಕೆ ಕಳೆದರು ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.  ಶಂತನು ಮೂರು ವರ್ಷಗಳ ಹಿಂದೆ ರತನ್ ಟಾಟಾ ಅವರ ಗಮನಕ್ಕೆ ಬಂದು ನಂತರ ಟಾಟಾ ಗ್ರೂಪ್‌ನಲ್ಲಿ ಉದ್ಯೋಗವನ್ನು ಗಳಿಸಿದರು. ಅಂದಿನಿಂದ, ರತನ್‌ ಟಾಟಾ ಹಾಗೂ ಶಂತನು ನಡುವೆ ಉತ್ತಮ ಬಾಂಧವ್ಯವಿದೆ. ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಕೂಡ ಈ ವಿಡಿಯೋವನ್ನು  ಹಂಚಿಕೊಂಡಿದ್ದಾರೆ. ಅಲ್ಲದೇ ಈ ವಿಡಿಯೋವನ್ನು 3ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

click me!