ಪುದುಚೇರಿ(ಡಿ.30): ಕೋವಿಡ್-19 ಲಸಿಕೆಗೆ ಹೆದರಿ ವ್ಯಕ್ತಿಯೊಬ್ಬ ಮರ ಹತ್ತಿದ ಘಟನೆ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ನಡೆದಿದೆ.
ಪುದುಚೇರಿಯ (Puducherry) ವಿಲಿಯನೂರ್ (Villianur) ಸಮೀಪದ ಹಳ್ಳಿಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಮದಲ್ಲಿ ಜನರಿಗೆ ಲಸಿಕೆ ಹಾಕಲು ಆರೋಗ್ಯ ಅಧಿಕಾರಿಗಳು ಆಗಮಿಸಿದ ತಕ್ಷಣ, ವ್ಯಕ್ತಿ ತನ್ನ ಮನೆಯ ಸಮೀಪವಿರುವ ಮರವನ್ನು ಹತ್ತಿ, ಸತ್ತ ಕೊಂಬೆಗಳನ್ನು ಕತ್ತರಿಸುತ್ತಿರುವಂತೆ ನಟಿಸುವುದಕ್ಕೆ ಮಚ್ಚನ್ನು ಹೊರತೆಗೆದಿದ್ದಾನೆ. ಈ ವೇಳೆ ಆರೋಗ್ಯ ಕಾರ್ಯಕರ್ತರು, ಮರದಲ್ಲಿರುವ ವ್ಯಕ್ತಿಗೆ ಲಸಿಕೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂದು ಕೇಳಿದಾಗ ಆತ ಇದುವರೆಗೂ ಒಂದೇ ಒಂದು ಡೋಸ್ ತೆಗೆದುಕೊಂಡಿಲ್ಲ ಎಂಬುದು ತಿಳಿದು ಬಂದಿದೆ.
ನಂತರ ಆರೋಗ್ಯ ಕಾರ್ಯಕರ್ತರು ಮತ್ತು ನೆರೆಹೊರೆಯವರು ಸೇರಿ ಈ ವ್ಯಕ್ತಿಯನ್ನು ಕೆಳಗಿಳಿಯುವಂತೆ ವಿನಂತಿಸಿದರು ಮತ್ತು ಕೋವಿಡ್ -19 ಸೋಂಕು ತಡೆಗಟ್ಟಲು ವ್ಯಾಕ್ಸಿನೇಷನ್ ಅಗತ್ಯವಿದೆ ಎಂದು ವಿವರಿಸಿದರು. ಆದರೆ ವ್ಯಕ್ತಿ ಇದಕ್ಕೆ ನಿರಾಕರಿಸಿದ್ದಾನೆ. ಅಷ್ಟೇ ಅಲ್ಲದೇ ಆರೋಗ್ಯ ಕಾರ್ಯಕರ್ತರನ್ನು ಮರದ ಮೇಲೆಯೇ ನಿಂತು ನಿಂದಿಸಲು ಶುರು ಮಾಡಿದ್ದಾನೆ. ಆದರು ಆರೋಗ್ಯ ಕಾರ್ಯಕರ್ತರು, ತಾವು ಈ ಹಿಂದೆಯೂ ಗ್ರಾಮದ ಅನೇಕರಿಗೆ ಲಸಿಕೆ ಹಾಕಿದ್ದು ಅವರೆಲ್ಲಾ ಚೆನ್ನಾಗಿದ್ದಾರೆ ಅವರಿಗೆ ಏನೂ ಆಗಿಲ್ಲ ಎಂದು ಹೇಳುವ ಮೂಲಕ ವ್ಯಕ್ತಿಯ ಮನವೊಲಿಕೆ ಮಾಡಲು ಪ್ರಯತ್ನಿಸಿದರು. ಆದರೂ ಆತ ಕೆಳಗಿಳಿಯದ ಕಾರಣ ಬೇರೆ ದಾರಿ ಕಾಣದೇ ಆರೋಗ್ಯ ಕಾರ್ಯಕರ್ತರು ಹಿಂದಿರುಗಿದ್ದಾರೆ.
Vaccine hesitancy at its peak!
"I will not take the vaccine, you can't get me",says a 40 year old man after climbing a tree @ Puducherry when the health dept. workers insisted him to take the jab. pic.twitter.com/1a8B5MdZb1
ಈ ಘಟನೆಯ ವಿಡಿಯೋವನ್ನು ಅಕ್ಕಪಕ್ಕದ ಮನೆಯವರು ಮತ್ತು ಗ್ರಾಮಸ್ಥರು ರೆಕಾರ್ಡ್ ಮಾಡಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯದಲ್ಲಿ ಶೇಕಡಾ 100 ರಷ್ಟು ಕೋವಿಡ್ -19 ಲಸಿಕೆ ಹಾಕುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪುದುಚೇರಿ ಸರ್ಕಾರ ಪ್ರಯತ್ನಿಸುತ್ತಿದ್ದು, ಅದರ ಭಾಗವಾಗಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ಲಸಿಕೆ ಹಾಕುತ್ತಿದ್ದಾರೆ. ಅಲ್ಲದೇ ತಕ್ಷಣವೇ ಜಾರಿಗೆ ಬರುವಂತೆ COVID-19 ಲಸಿಕೆಯನ್ನು ಪುದುಚೇರಿ ಸರ್ಕಾರವು ಕಡ್ಡಾಯಗೊಳಿಸಿದೆ. ಸರ್ಕಾರದ ಈ ಹೊಸ ಆದೇಶವನ್ನು ಉಲ್ಲಂಘಿಸುವ ಜನರು ಕಾನೂನಿನ ನಿಬಂಧನೆಯ ಪ್ರಕಾರ ದಂಡದ ಕ್ರಮಕ್ಕೆ ಒಳಗಾಗುತ್ತಾರೆ.
Sourav Ganguly Health Update: ಗಂಗೂಲಿಗೆ ಕಾಕ್‌ಟೇಲ್ ಥೆರಪಿ ಚಿಕಿತ್ಸೆ
1973 ರ ಸೆಕ್ಷನ್ 8 ರ ಪ್ರಕಾರ ಮತ್ತು ಪುದುಚೇರಿ ಸಾರ್ವಜನಿಕ ಆರೋಗ್ಯ ಕಾಯಿದೆ, 1973 ರ ಸೆಕ್ಷನ್ 54 (1) ರ ನಿಬಂಧನೆಗಳ ಪ್ರಕಾರ, ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕೋವಿಡ್ -19 ಗಾಗಿ ಕಡ್ಡಾಯ ಲಸಿಕೆಯನ್ನು ಜಾರಿಗೊಳಿಸಲಾಗಿದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Covid Curbs In Bengal: ಪ.ಬಂಗಾಳದಲ್ಲಿ ಶಾಲಾ ಕಾಲೇಜು ಬಂದ್ ? ಸೂಚನೆ ಕೊಟ್ಟ ಸಿಎಂ
ಈ ಹಿಂದೆ ರಾಜ್ಯದ ಯಾದಗಿರಿಯಲ್ಲಿ ಕೋವಿಡ್ ಲಸಿಕೆ ಪಡೆಯಲು ಹೆದರಿ ಜನ ತಮ್ಮ ಮೈಮೇಲೆ ದೆವ್ವ ಬಂದಂತೆ ನಾಟಕ ಮಾಡಿದ ಘಟನೆ ನಡೆದಿತ್ತು.