Viral Video: ಯೋಧನೊಂದಿಗೆ ಯೋಗ ಮಾಡುವ ಶ್ವಾನ: ವಿಡಿಯೋ ವೈರಲ್

Published : Nov 14, 2022, 06:40 PM ISTUpdated : Nov 14, 2022, 06:45 PM IST
 Viral Video: ಯೋಧನೊಂದಿಗೆ ಯೋಗ ಮಾಡುವ ಶ್ವಾನ: ವಿಡಿಯೋ ವೈರಲ್

ಸಾರಾಂಶ

Viral News: ದೆಹಲಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಶ್ವಾನವೊಂದು ಯೋಗ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ನೋಡುಗರ ಮನ ಸೆಳೆಯುತ್ತಿದೆ.

ಶ್ವಾನಗಳ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ದಿನಗಳ ಹಿಂದಷ್ಟೇ ಶ್ವಾನವೊಂದು ದೇಗುಲದಲ್ಲಿ ಗಂಟೆ ಬಾರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಮಧ್ಯೆ ಈಗ ದೆಹಲಿಯ ಮೆಟ್ರೋ ರೈಲು ನಿಲ್ದಾಣದಲ್ಲಿ ಶ್ವಾನವೊಂದು ಯೋಗ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ನೋಡುಗರ ಮನ ಸೆಳೆಯುತ್ತಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(CISF) ಯೋಧನೊಂದಿಗೆ (soldier) ಭದ್ರತಾ ಶ್ವಾನವೊಂದು ರೈಲು ನಿಲ್ದಾಣದಲ್ಲಿ ಯೋಗ ಮಾಡುತ್ತಿದ್ದು, bharatdefenders ಎಂಬ ಪೇಜ್‌ನಿಂದ ಈ ವಿಡಿಯೋ ಅಪ್ಲೋಡ್ ಆಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಶ್ವಾನ ಹಾಗೂ ಯೋಧ ಇಬ್ಬರಿಗೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ  ಸಿಐಎಸ್‌ಎಫ್ ಸಿಬ್ಬಂದಿ ಶ್ವಾನದೊಂದಿಗೆ ತರಬೇತಿ ಬಾಂಡಿಂಗ್‌ನ್ನು ತೋರಿಸುತ್ತಿದ್ದಾರೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ದೃಶ್ಯವನ್ನು ಮೆಟ್ರೋ ನಿಲ್ದಾಣದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಕೆಲವರು ಅಚ್ಚರಿಯಿಂದ ಗಮನಿಸುತ್ತಾ ನಿಂತರೆ ಮತ್ತೆ ಕೆಲವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ (camera) ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವಿಡಿಯೋ ನೋಡಿದ ಅನೇಕರು ಮೆಚ್ಚುಗೆಯಿಂದ ಹೃದಯದ ಇಮೋಜಿಯನ್ನು ಕಳುಹಿಸಿದ್ದಾರೆ. 

 

ಮಾಲೀಕನ ಹುಡುಕಿಕೊಟ್ಟ ಸಾಕು ನಾಯಿ ಟಾಮಿ

ಶ್ವಾನಗಳು ಬಹಳ ಸ್ವಾಮಿನಿಷ್ಠ ಪ್ರಾಣಿಗಳಾಗಿದ್ದು, ಕೆಲ ದಿನಗಳ ಹಿಂದೆ ರಾಜ್ಯದ ಶಿವಮೊಗ್ಗ(Shivamogga) ಜಿಲ್ಲೆಯಲ್ಲಿ ಶ್ವಾನವೊಂದು ತನ್ನ ಮಾಲೀಕನ ಜೀವ ರಕ್ಷಿಸಿತ್ತು. ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬ ತಲೆ ಸುತ್ತು ಬಂದು ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದು, ಕೊನೆಗೆ ಸಾಕು ನಾಯಿಯಿಂದ ಆತ ಇರುವ ಜಾಗ ಪತ್ತೆಯಾಗಿತ್ತು. ಹೊಸನಗರ ತಾಲೂಕಿನ ಸೂಡೂರಿನಲ್ಲಿ ಈ ಘಟನೆ ನಡೆದಿತ್ತು. ಸೂಡೂರಿನ ಶೇಖರಪ್ಪ ಎಂಬವರು ಆಯನೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದಂದು ಬೆಳಗ್ಗೆ ಸುಮಾರು 6 ಗಂಟೆಗೆ ಕಟ್ಟಿಗೆ ತರೋದಿಕ್ಕೆ ಕಾಡಿಗೆ ಹೋದ ಅವರು 10 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಹೀಗಾಗಿ, ಕುಟುಂಬದವರು ಊರಿನ ಒಂದಿಷ್ಟು ಜನರಿಗೆ ವಿಚಾರ ತಿಳಿಸಿದ್ದಾರೆ. 

ನಾಯಿಗೆ ಮದುವೆ ಮಾಡಿ ಕನ್ಯಾದಾನದ ಬಯಕೆ ತೀರಿಸಿಕೊಂಡ ಮಕ್ಕಳಿಲ್ಲದ ದಂಪತಿ

ಊರಿನವರು ಶೇಖರಪ್ಪ ಅವರನ್ನು ಹುಡುಕಲು ಕಾಡಿಗೆ ಹೋಗಿದ್ದಾರೆ. ಕಾಡಿನಲ್ಲಿ ಎಷ್ಟು ಹುಡುಕಿದರು ಶೇಖರಪ್ಪ ಅವರ ಸುಳಿವು ಸಿಗಲೇ ಇಲ್ಲ. ಆದರೆ, ಈತ ಸಾಕಿದ್ದ ನಾಯಿಯೊಂದು ಶೇಖರಪ್ಪ ಇರುವ ಜಾಗ ಪತ್ತೆ ಹಚ್ಚಿದೆ. ಶ್ವಾನವು ಸುಮಾರು 4 ಗಂಟೆ ಸುಮಾರಿಗೆ ಶೇಖರಪ್ಪ ಇರುವ ಜಾಗಕ್ಕೆ ಊರಿನವರನ್ನು ಕರೆ ತಂದಿದೆ. ಅಸ್ವಸ್ಥಗೊಂಡಿದ್ದ ಶೇಖರಪ್ಪ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ನಾಯಿ ಪ್ರತಿನಿತ್ಯ ಮಾಲೀಕನ ಜೊತೆಯಲ್ಲಿ ಹೋಗುತ್ತಿತ್ತಂತೆ. ಹಾಗಾಗಿಯೇ, ಶೇಖರಪ್ಪ ಅವರನ್ನು ಕಾಡಿನಲ್ಲಿ ಪತ್ತೆ ಮಾಡಿದೆ ಎನ್ನಲಾಗಿದೆ.

ದೇಗುಲದಲ್ಲಿ ಪೂಜೆ ವೇಳೆ ಗಂಟೆ ಬಾರಿಸುವ ಶ್ವಾನ... ವಿಡಿಯೋ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್