
ಇಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪರಿ ಮಸೂದೆ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರ ಸಚಿವರು ಮಸೂದೆಯನ್ನು ಮಂಡಿಸಿದ್ದು, ಇಂದೇ ಲೋಕಸಭೆಯಲ್ಲಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಹೀಗಿರುವಾಗ ಲೋಕಸಭೆಯಲ್ಲಿ ಮಂಡನೆಯಾದ ವಕ್ಫ್ ಮಸೂದೆಯ ಉದ್ದೇಶವೇನು? ತಿದ್ದುಪಡಿ ಮಸೂದೆ ಮಂಡನೆಗೆ ಕಾರಣ ಏನು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ಕಾರಣವೇನು?
ವಕ್ಫ್ ಆಸ್ತಿಗಳನ್ನು ವರ್ಗಾಯಿಸಲು ಸಾಧ್ಯವಿಲ್ಲ: ಒಂದು ಬಾರಿ ವಕ್ಫ್ ಆಸ್ತಿ ಎಂದು ಘೋಷಿಸಲ್ಪಟ್ಟರೆ ಆ ಆಸ್ತಿಎಂದೆಂದಿಗೂ ವಕ್ಫ್ ಎಂಬ ಸಿದ್ಧಾಂತವು ಇದುವರೆಗೆ ಇತ್ತು. ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುವ ಅಧಿಕಾರ ಈ ವಕ್ಫ್ ಬೋರ್ಡ್‌ಗೆ ಇತ್ತು. ಹಾಗೂ ಇದನ್ನು ಯಾವುದೇ ಕಾನೂನು ನ್ಯಾಯಾಲಯಗಳಲ್ಲಿ ವಿಚಾರಣೆ ಮಾಡುವ ಅಧಿಕಾರ ಯಾರಿಗೂ ಇರಲಿಲ್ಲ, ಇದರಿಂದ ಕಾನೂನುಬಾಹಿರ ಆಸ್ತಿ ಆಕ್ರಮಣಗಳು ಹೆಚ್ಚಾದವು. ವಕ್ಫ್ ನ್ಯಾಯಮಂಡಳಿಯ ತೀರ್ಮಾನಗಳನ್ನು ಉಚ್ಚ ನ್ಯಾಯಾಲಯಗಳಲ್ಲಿ ವಿಚಾರಣೆ ಮಾಡಲು ಸಾಧ್ಯವಿಲ್ಲ. ಇದರಿಂದ ಯಾವುದೇ ಆಸ್ತಿಯನ್ನು ಅವರು ವಕ್ಪ್ ಆಸ್ತಿ ಎಂದು ಘೋಷಿಸಿದರೆ ಆಸ್ತಿ ಮಾಲೀಕ ಅದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವಂತಿರಲಿಲ್ಲ.
ವಕ್ಫ್ ಕಾನೂನಿನ ದುರುಪಯೋಗ: ಕೆಲವು ರಾಜ್ಯ ವಕ್ಫ್ ಮಂಡಳಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಸಂಘರ್ಷಗಳಿಗೆ ಕಾರಣವಾಗಿವೆ. ವಕ್ಫ್ ಕಾನೂನಿನ 40 ನೇ ವಿಭಾಗವನ್ನು ಬಳಸಿ, ಕೆಲವು ವೈಯಕ್ತಿಕ ಭೂಮಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸಿದರು. 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ, 8 ರಾಜ್ಯಗಳು ಮಾತ್ರ ತಮ್ಮ ಡೇಟಾವನ್ನು ಒದಗಿಸಿದ್ದು, ಅಲ್ಲಿ 515 ಖಾಸಗಿ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.
ಒಂದು ಧರ್ಮಕ್ಕೆ ಮಾತ್ರ ಸೀಮಿತವಾದ ಹಕ್ಕು:
ಈ ಕಾನೂನು ಒಂದು ಧರ್ಮಕ್ಕೆ ಮಾತ್ರ ಅನ್ವಯಿಸುತ್ತದೆ, ಇತರ ಧರ್ಮಗಳಿಗೆ ಇಂತಹ ಕಾನೂನುಗಳಿಲ್ಲ. ಇದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ. ಈ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ವಕ್ಫ್ (ತಿದ್ದುಪಡಿ) ಮಸೂದೆ 2024 ರ ಉದ್ದೇಶ:
ವಕ್ಫ್ (ತಿದ್ದುಪಡಿ) ಮಸೂದೆ 2024 ರ ಉದ್ದೇಶವು ವಕ್ಫ್ ಕಾಯ್ದೆ, 1995 ರಲ್ಲಿ ಬದಲಾವಣೆಗಳನ್ನು ತಂದು, ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು. ಈ ಮಸೂದೆಯ ಮೂಲಕ ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಆಡಳಿತವನ್ನು ಸುಧಾರಿಸಲು ಕೇಂದ್ರ ಸರ್ಕಾರ ಯೋಜಿಸಿದೆ.
ಭಾರತದಲ್ಲಿ ವಕ್ಫ್ ಆಡಳಿತಕ್ಕೆ ಜವಾಬ್ದಾರರಾಗಿರುವ ಸಂಸ್ಥೆಗಳು ಯಾವುವು? ಅವುಗಳ ಪಾತ್ರವೇನು?
ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತವು ವಕ್ಫ್ ಕಾಯ್ದೆ, 1995 ರ ಆಧಾರದ ಮೇಲೆ ನಡೆಯುತ್ತದೆ. ಇದನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತದೆ. ಮುಖ್ಯವಾಗಿ ಈ ಮೂರು ಸಂಸ್ಥೆಗಳು ವಕ್ಫ್ ಆಡಳಿತದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಕೇಂದ್ರ ವಕ್ಫ್ ಕೌನ್ಸಿಲ್ (CWC) :ಸರ್ಕಾರ, ರಾಜ್ಯ ವಕ್ಫ್ ಮಂಡಳಿಗಳಿಗೆ ನೀತಿ ಆಧಾರಿತ ಸಲಹೆಗಳನ್ನು ನೀಡುತ್ತದೆ. ಆದರೆ ಇದು ವಕ್ಫ್ ಆಸ್ತಿಗಳನ್ನು ನೇರವಾಗಿ ನಿರ್ವಹಿಸುವುದಿಲ್ಲ.
ರಾಜ್ಯ ವಕ್ಫ್ ಮಂಡಳಿಗಳು (SWBs): ಪ್ರತಿ ರಾಜ್ಯದಲ್ಲಿ ವಕ್ಫ್ ಆಸ್ತಿಗಳನ್ನು ರಕ್ಷಿಸುವುದು, ನಿರ್ವಹಿಸುವುದು, ಆಡಳಿತದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವುದು ಇದರ ಕೆಲಸ.
ವಕ್ಫ್ ನ್ಯಾಯಮಂಡಳಿಗಳು :ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸುವ ವಿಶೇಷ ನ್ಯಾಯಾಲಯಗಳು.
ಮಸೂದೆ ಮಂಡಿಸುವ ಮೊದಲು ತೆಗೆದುಕೊಂಡ ಕ್ರಮಗಳೇನು?
1) ವಕ್ಫ್ ಮಸೂದೆ 2024 ಕ್ಕೆ ಮೊದಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ವಿವಿಧ ವಲಯಗಳೊಂದಿಗೆ ಸಮಾಲೋಚನೆ ನಡೆಸಿತು. ನಿರ್ದಿಷ್ಟವಾಗಿ, ಸಚಾರ್ ಸಮಿತಿ ವರದಿಯನ್ನು ಪಡೆಯಿತು.
ಮಾಧ್ಯಮ, ಜನರಿಂದ ಬಂದ ದೂರುಗಳನ್ನು ಪಡೆಯಿತು. ವಕ್ಫ್ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದು, ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು, ವಕ್ಫ್ ಆಸ್ತಿಗಳನ್ನು ಸರಿಯಾಗಿ ಬಳಸದೆ ಇರುವುದರ ಬಗ್ಗೆ ಸಾರ್ವಜನಿಕ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆಯಲಾಯಿತು. ರಾಜ್ಯ ವಕ್ಫ್ ಮಂಡಳಿಗಳ ಅಭಿಪ್ರಾಯಗಳನ್ನು ಸಹ ಪಡೆಯಲಾಯಿತು.
2) ಕಾನೂನನ್ನು ಮರುಪರಿಶೀಲಿಸುವ ಪ್ರಕ್ರಿಯೆ
ವಕ್ಫ್ ಕಾಯ್ದೆ, 1995 ಅನ್ನು ತಿದ್ದುಪಡಿ ಮಾಡಲು ಸಚಿವಾಲಯವು ಮರುಪರಿಶೀಲನೆ ಮಾಡಿತು. ಇದಕ್ಕೆ ಎರಡು ಪ್ರಮುಖ ಸಭೆಗಳನ್ನು ನಡೆಸಲಾಯಿತು: 24.07.2023 ರಂದು ಲಕ್ನೋದಲ್ಲಿ ಮತ್ತು 20.07.2023 ರಂದು ದೆಹಲಿಯಲ್ಲಿ ಆ ಸಭೆಗಳು ನಡೆದವು. ಇದರಲ್ಲಿ ವಕ್ಫ್ ಆಡಳಿತಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲಾಯಿತು, ನಂತರ ಕಾನೂನನ್ನು ತಿದ್ದುಪಡಿ ಮಾಡಲು ಒಪ್ಪಿಕೊಳ್ಳಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ