ಬೀದಿ ನಾಯಿಗಳ ದಾಳಿ, ವಾಘ್‌ ಬಕ್ರಿ ಕಂಪನಿ ಮಾಲೀಕ ಪರಾಗ್‌ ದೇಸಾಯಿ ಸಾವು

By Santosh Naik  |  First Published Oct 24, 2023, 5:37 PM IST

ಅಕ್ಟೋಬರ್ 15 ರಂದು ತನ್ನ ಮೇಲೆ ದಾಳಿ ಮಾಡಿದ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಪರಾಗ್ ದೇಸಾಯಿ ತೀವ್ರವಾಗಿ ಗಾಯಗೊಂಡಿದಗ್ದರು.


ಅಹಮದಾಬಾದ್‌ (ಅ.24): ವಾಘ್ ಬಕ್ರಿ ಟೀ ಗ್ರೂಪ್‌ನ ಮಾಲೀಕ ಹಾಗೂ ನಿರ್ದೇಶಕರು ಆಗಿದ್ದ ಉದ್ಯಮಿ ಉದ್ಯಮಿ ಪರಾಗ್ ದೇಸಾಯಿ ಅವರು ಭಾನುವಾರ ನಿಧನರಾದರು. ತಮ್ಮ ಮನೆಯ ಹೊರಗಡೆ ಬೀದಿ ನಾಯಿಗಳಿಂದ ತಮ್ಮ ಮೇಲೆ ದಾಳಿ ಆದಾಗ ಅದರಿಂದ ರಕ್ಷಿಸಿಕೊಳ್ಳುವ ಯತ್ನದಲ್ಲಿ ಪರಾಗ್‌ ದೇಸಾವಿ ವಿಫಲರಾಗಿದ್ದರು. ಅವರಿಗೆ 49 ವರ್ಷ ವಯಸ್ಸಾಗಿತ್ತು ಎಂದು ವಾಘ್‌ ಬಕ್ರಿ ಕಂಪನಿ ತನ್ನ  ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ಟೋಬರ್ 15 ರಂದು ದಾಳಿ ಮಾಡಿದ ಬೀದಿ ನಾಯಿಗಳಿಂದ ಓಡಿಹೋಗುವ ಯತ್ನದಲ್ಲಿ ಪರಾಗ್‌ ದೇಸಾಯಿ ತೀವ್ರವಾಗಿ ಗಾಯಗೊಂಡಿದ್ದರು ಎಂದು ಗುಜರಾತ್‌ ಮೂಲದ ಪತ್ರಿಕೆ ವರದಿ ಮಾಡಿದೆ. ಅವರ ನಿವಾಸದ ಹೊರಗಿನ ಭದ್ರತಾ ಸಿಬ್ಬಂದಿ ಘಟನೆಯ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ನಂತರ ಅವರನ್ನು ಶೆಲ್ಬಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಶೆಲ್ಬಿ ಆಸ್ಪತ್ರೆಯಲ್ಲಿ ಒಂದು ದಿನದ ವೀಕ್ಷಣೆಯ ನಂತರ, ದೇಸಾಯಿ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎನ್ನುವ ಕಾರಣಕ್ಕೆ ಝೈಡಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಮಿದುಳು ರಕ್ತಸ್ರಾವಕ್ಕೆ ಒಳಗಾಗಿ ಭಾನುವಾರ ಮೃತಪಟ್ಟಿದ್ದಾರೆ.

ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಶಕ್ತಿಸಿಂಗ್ ಗೋಹಿಲ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದೇಸಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ತುಂಬಾ ದುಃಖದ ಸುದ್ದಿ ತಿಳಿದು ಬಂದಿದೆ. ವಾಘ್‌ ಬಕ್ರೀ ಟೀನ ನಿರ್ದೇಶಕ ಹಾಗೂ ಮಾಲೀಕ ಪರಾಗ್ ದೇಸಾಯಿನಿಧನರಾದರು. ಬಿದ್ದ ನಂತರ ಅವರಿಗೆ ಮೆದುಳಿನ ರಕ್ತಸ್ರಾವವಾಗಿತ್ತು. ಅವರ ಆತ್ಮಕೆ ಶಾಂತಿ ಸಿಗಲಿ. ಭಾರತದಾದ್ಯಂತ ಇರುವ ಇಡೀ ವಾಘ್ ಬಕ್ರಿ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಅವರು ಬರೆದಿದ್ದಾರೆ.

ದೇಸಾಯಿ ಅವರು ವಾಘ್ ಬಕ್ರಿ ಟೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಸೇಶ್ ದೇಸಾಯಿ ಅವರ ಪುತ್ರರಾಗಿದ್ದರು. ಅವರು ಪತ್ನಿ ವಿದಿಶಾ ಮತ್ತು ಮಗಳು ಪರಿಶಾ ಅವರನ್ನು ಅಗಲಿದ್ದಾರೆ. ಎಕ್ಸ್‌ಚೇಂಜ್‌ ಫಾರ್‌ ಮೀಡಿಯಾ ಪ್ರಕಾರ, ದೇಸಾಯಿ ಅವರು 30 ವರ್ಷಗಳ ಉದ್ಯಮದ ಅನುಭವದೊಂದಿಗೆ, ಗ್ರೂಪ್‌ನ ಅಂತರರಾಷ್ಟ್ರೀಯ ವ್ಯಾಪಾರ, ಮಾರಾಟ ಮತ್ತು ಮಾರ್ಕೆಟಿಂಗ್ ಅನ್ನು ಮುನ್ನಡೆಸಿದರು. ಅವರು ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ನಂತಹ ಪ್ರಮುಖ ಉದ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಉದ್ಯಮದ ಪ್ರಮುಖ ಧ್ವನಿ ಎನಿಸಿಕೊಂಡಿದ್ದರು. ₹ 100 ಕೋಟಿ ಸಂಸ್ಥೆಯಿಂದ ₹ 2000 ಕೋಟಿ ಮೌಲ್ಯದ ಕಂಪನಿಯಾಗಿ ಪರಿವರ್ತನೆಗೊಳ್ಳಲು ಪರಾಗ್‌ ದೇಸಾಯಿ ಮುಂದಾಳತ್ವ ವಹಿಸಿದ್ದರು.

Tap to resize

Latest Videos


ಆಸ್ಪತ್ರೆಯ ಹೇಳಿಕೆ: ಈ ನಡುವೆ ಪರಾಗ್‌ ದೇಸಾಯಿ ಅವರಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆ ಪ್ರಕಟಣೆ ನೀಡಿದೆ. ಅಕ್ಟೋಬರ್ 15 ರಂದು ಚಿಕಿತ್ಸೆಗೆ ಬಂದಾಗ ಅವರ ದೇಹದಲ್ಲಿ ಯಾವುದೇ ನಾಯಿ ಕಚ್ಚಿದ ಗುರುತುಗಳಿರಲಿಲ್ಲ ಎಂದು ತಿಳಿಸಿದೆ. ತಮ್ಮ ಮೇಲೆ ದಾಳಿ ಮಾಡಲು ಬಂದ ಬೀದಿ ನಾಯಿಗಳನ್ನು ಓಡಿಸುವ ಯತ್ನದಲ್ಲಿದ್ದಾಗ ಪರಾಗ್‌ ದೇಸಾಯಿ, ಬಿದ್ದು ತೆಲೆಗೆ ಗಾಯ ಮಾಡಿಕೊಂಡಿದ್ದರಿಂದ ಸಾವಾಗಿರಬಹುದು ಎನ್ನಲಾಗಿದೆ. ಅವರು ಅಕ್ಟೋಬರ್ 15 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ತಮ್ಮ ಮನೆಯ ಬಳಿ ಅಡ್ಡಾಡುತ್ತಿದ್ದ ವೇಳೆ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಆರಂಭದಲ್ಲಿ ಅವರನ್ನು ಅಹಮದಾಬಾದ್‌ನ ಶಾಲ್ಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ದಿನದ ನಂತರ, ಅವರನ್ನು ನಗರದ ಝೈಡಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಬೆಡ್‌ ಮೇಲೆ ಬಿದ್ದ ಬೋಲ್ಡ್‌ ಚಿತ್ರಗಳನ್ನು ಹಂಚಿಕೊಂಡ ಬಿಗ್‌ ಬಾಸ್‌ ನಟಿ!

ಅವರ ಮೇಲೆ ಯಾವುದೇ ಕಚ್ಚಿದ ಗುರುತುಗಳಿಲ್ಲ ಎಂದು ಶಾಲ್ಬಿ ಆಸ್ಪತ್ರೆ ಬಹಿರಂಗಪಡಿಸಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಮತ್ತು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆತಂದಾಗ ಪ್ರತಿಕ್ರಿಯಿಸಲಿಲ್ಲ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. "ನಾಯಿಗಳು ಬೆನ್ನಟ್ಟಿದ ನಂತರ ರೋಗಿಯು ಕೆಳಗೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ ಆದರೆ ಅವನ ದೇಹದಲ್ಲಿ ನಾಯಿ ಕಚ್ಚಿದ ಗುರುತುಗಳಿಲ್ಲ" ಎಂದು ಅದು ಹೇಳಿದೆ.

RSS Vijayadashami Utsav: ಮಣಿಪುರ ಹಿಂಸಾಚಾರದ ಹಿಂದೆ ವಿದೇಶಿ ಶಕ್ತಿಗಳ ಕೈವಾಡ, ಸರಸಂಘಚಾಲಕ ಮೋಹನ್‌ ಭಾಗವತ್‌

click me!