
ನಮ್ಮ ದೇಶದಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ದೇಶದೆಲ್ಲೆಡೆ ಸ್ವಯಂ ಸೇವಕರು ಆಗಿಂದಾಗ್ಗೆ ಸ್ವಚ್ಛತಾ ಅಭಿಯಾನವನ್ನು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಕಸವನ್ನು ಎಕ್ಕುತ್ತಿದ್ದ ಸ್ವಯಂ ಸೇವಕರಿಗೆ ಮಾನವನ ಮೂಳೆಗಳು ಲಭ್ಯವಾಗಿವೆ. ಅಲ್ಲಿದ್ದವರೆಲ್ಲವೂ ಶಾಕ್ ಆಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ 'ವೃಕ್ಷಿತ್ ಫೌಂಡೇಶನ್' ಸ್ವಯಂಸೇವಕರು ಸ್ವಚ್ಛತಾ ಕಾರ್ಯಕ್ರಮವೊಂದನ್ನು ನಡೆಸುತ್ತಿದ್ದರು. ಈ ವೇಳೆ, ಕಸದ ರಾಶಿಯ ಕೆಳಗೆ ಅವರಿಗೆ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಇದನ್ನು ನೋಡಿದ ತಕ್ಷಣ ಅವರು ಕ್ಲೀನಿಂಗ್ ಕೆಲಸ ನಿಲ್ಲಿಸಿ, ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಫೋರೆನ್ಸಿಕ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಅವಶೇಷಗಳನ್ನು ಕಲೆಕ್ಟ್ ಮಾಡಿದ್ದಾರೆ. ಈಗ ಸಿಕ್ಕಿರುವ ಅಸ್ಥಿಪಂಜರ, ಮೆಡಿಕಲ್ ಕಾಲೇಜುಗಳಲ್ಲಿ ಬಳಸುವಂಥದ್ದಾ ಅಥವಾ ನಿಜವಾದ ಮನುಷ್ಯನದ್ದಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.
ಸ್ವಚ್ಛತಾ ಕಾರ್ಯದ ವೇಳೆ ಕಸದ ರಾಶಿಯಡಿ ಅಸ್ಥಿಪಂಜರ ಸಿಕ್ಕಿರುವ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 'ವೃಕ್ಷಿತ್ ಫೌಂಡೇಶನ್' ನೇತೃತ್ವದಲ್ಲಿ ಈ ಕ್ಲೀನಿಂಗ್ ಡ್ರೈವ್ ನಡೆಯುತ್ತಿತ್ತು. ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಸ್ವಯಂಸೇವಕರು ದೊಡ್ಡ ಕಸದ ರಾಶಿಯನ್ನು ತೆರವುಗೊಳಿಸುತ್ತಿದ್ದರು. ಆಗ, ಅದರ ಕೆಳಗೆ ಮನುಷ್ಯನ ಮೂಳೆಗಳಂತೆ ಕಾಣುವ ವಸ್ತುಗಳು ಪತ್ತೆಯಾಗಿವೆ. ಅನುಮಾನಾಸ್ಪದ ಅವಶೇಷಗಳನ್ನು ಕಂಡ ತಕ್ಷಣ, ತಂಡವು ಕೆಲಸ ನಿಲ್ಲಿಸಿ ಸ್ಥಳೀಯ ಅಧಿಕಾರಿಗಳಿಗೆ ವಿಷಯ ತಿಳಿಸಿದೆ.
ಪೊಲೀಸರು ಮತ್ತು ಫೋರೆನ್ಸಿಕ್ ತಂಡ ಸ್ಥಳಕ್ಕೆ ಬಂದು ವಿವರವಾದ ತನಿಖೆ ನಡೆಸಿದ್ದಾರೆ. ಆದರೆ, ಇದು ಮನುಷ್ಯನ ಮೂಳೆಗಳಾ ಅಥವಾ ಮೆಡಿಕಲ್ ವೇಸ್ಟಾ ಎಂದು ಇನ್ನೂ ಖಚಿತಪಡಿಸಿಲ್ಲ. ಭಾರತದಲ್ಲಿ ಬಯೋಮೆಡಿಕಲ್ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು ಒಂದು ಗಂಭೀರ ಸಮಸ್ಯೆಯಾಗಿದೆ. ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳು ತ್ಯಾಜ್ಯ ವಿಲೇವಾರಿ ಮಾಡುವಾಗ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಆದರೆ, ಹಲವು ಬಾರಿ ಈ ನಿಯಮಗಳನ್ನು ಪಾಲಿಸುವುದಿಲ್ಲ ಎನ್ನುವುದೇ ಸತ್ಯ.
'ವೃಕ್ಷಿತ್ ಫೌಂಡೇಶನ್' ಈ ಘಟನೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಂತರ, ಅದು ವೈರಲ್ ಆಗಿದೆ. 'ಇದು ಮೆಡಿಕಲ್ ವೇಸ್ಟ್ ಆಗಿರಲಿ' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಆದರೆ, ದೆಹಲಿಯ ಅಪರಾಧ ಪ್ರಕರಣಗಳನ್ನು ನೋಡಿದರೆ, ಇದು ಕೊಲೆ ಮಾಡಿ ಮುಚ್ಚಿಹಾಕಿದ ಪ್ರಕರಣವೂ ಆಗಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ