ಅರೆನಗ್ನ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾದ ಬೆನ್ನಲ್ಲೇ 12 ಸೆಕೆಂಡ್ ವಿಡಿಯೋ ಬಹಿರಂಗ

Published : Mar 15, 2026, 10:06 AM IST
Body Found and police search

ಸಾರಾಂಶ

ಅರೆನಗ್ನ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾದ ಬೆನ್ನಲ್ಲೇ 12 ಸೆಕೆಂಡ್ ವಿಡಿಯೋ ಬಹಿರಂಗ, 20ರ ಹರೆಯದ ಯುವತಿ ಮೃತತದೇಹ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಇದರ ಬೆನ್ನಲ್ಲೇ ವೈರಲ್ ಆದ 12 ಸಕೆಂಡ್ ವಿಡಿಯೋದಲ್ಲಿ ಏನಿದೆ? 

ಆಗ್ರಾ (ಮಾ.15) ಅರೆ ನಗ್ನ ಸ್ಥಿತಿಯಲ್ಲಿ 20ರ ಹರೆಯದ ಯುವತಿಯ ಮೃತೇದಹ ಪತ್ತೆಯಾಗಿದೆ. ಭಾರಿ ಹುಡುಕಾಟದ ಬಳಿಕ ಗ್ರಾಮದ ನಿರ್ಜನ ಪ್ರದೇಶದಲ್ಲಿ ಯುವತಿ ಮೃತದೇಹ ಪತ್ತೆಯಾಗಿದೆ. ಯುವತಿ ಮೃತದೇಹ ಪತ್ತೆಯಾದ ಮರುದಿನವೇ ಈಕೆಯ ಬಾಯ್‌ಫ್ರೆಂಡ್ ಮೊಬೈಲ್‌ನಲ್ಲಿ 12 ಸೆಕೆಂಡ್ 12 ಸೆಕೆಂಡ್ ವಿಡಿಯೋ ಒಂದು ಪತ್ತೆಯಾಗಿದೆ. ಕೆಲವರ ವ್ಯಾಟ್ಸಾಪ್ ಗ್ರೂಪ್‌ಗಳಲ್ಲೂ ಈ ವಿಡಿಯೋ ಹರಿದಾಡಿದೆ. ಯುವತಿ ಸಾವಿನ ಹಿಂದಿನ ಕಾರಣ ಈ ವಿಡಿಯೋ ಮೂಲಕ ಬಹಿರಂಗವಾಗಿದೆ. ಈ ಘಟನೆ ಆಗ್ರಾದಲ್ಲಿ ನಡೆದಿದೆ.

ಪೊಲೀಸ್ ಕಾರ್ಯಾಚರಣೆ ವೇಳೆ ಮೃತದೇಹ ಪತ್ತೆ

20ರ ಹರೆಯದ ಆಗ್ರಾದ ಯುವತಿಗೆ ಮನೆಯಲ್ಲಿ ಮದುವೆ ನಿಶ್ಚಯ ಮಾಡಿದ್ದರು. ಶುಕ್ರವಾರ ಯುವತಿ ಔಷದಿ ತರಲು ಮನೆಯಿಂದ ತೆರಳಿದ್ದಾಳೆ. ಆದರೆ ಎಷ್ಟು ಹೊತ್ತಾದರು ಮನೆಗೆ ಮರಳಿಲ್ಲ. ಎಲ್ಲಾ ಕಡೆ ಹುಡುಕಾಟದ ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಯುವತಿ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಯುವತಿ ಮೃತದೇಹ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.

ಅರೆ ನಗ್ನ ಮೃತದೇಹ

ಯುವತಿ ಸಾವಿನ ಕುರಿತು ಸಹೋದರ ಪ್ರತಿಕ್ರಿಯಿಸಿದ್ದಾನೆ. ಸಹೋದರಿ ಮೃತದೇಹವನ್ನು ನಾನು ಹೋಗಿ ನೋಡಿದ್ದೇನೆ. ಆಕೆಯ ಬಾಯಿಗೆ ಬಟ್ಟೆ ತುರುಕಲಾಗಿತ್ತು. ಆಕೆ ಮೈಮೇಲಿನ ಬಟ್ಟೆಗಳು ಇರಲಿಲ್ಲ. ಅರೆ ನಗ್ನವಾಗಿ ಮೃತದೇಹ ಬಿದ್ದಿತ್ತು. ದೇಹದಲ್ಲಿ ಗಾಯದ ಗುರುತುಗಳಿವೆ ಎಂದಿದ್ದಾರೆ. ಇದು ಅತ್ಯಾ**ರ ಹಾಗೂ ಕೊಲೆ ಎಂದು ಸಹೋದರ ಆರೋಪಿಸಿದ್ದಾನೆ.

ಯುವತಿ ಮೃತದೇಹ ಪತ್ತೆ ಮರುದಿನ 12 ಸೆಕೆಂಡ್ ವಿಡಿಯೋ ಪತ್ತೆ

ಯುವತಿ ಮೃತದೇಹ ಪತ್ತೆಯಾದ ಮರುದಿನ 12 ಸೆಕೆಂಡ್ ವಿಡಿಯೋ ಪತ್ತೆಯಾಗಿದೆ. ಅಲಿಘಡ ಜಿಲ್ಲೆಯ 25 ವರ್ಷದ ಯುವಕ ರೈಲು ಹಳಿಗೆ ಹಾರಿ ಬದುಕು ಅಂತ್ಯಗೊಳಿಸಿದ್ದ. ಈತನ ಮೊಬೈಲ್ ಪರಿಶೀಲಿಸಿದಾಗ ಪೊಲೀಸರಿಗೆ ಯುವತಿ ಕೊಲೆಗೂ ಈ ಸಾವಿಗೂ ಲಿಂಕ್ ಗೊತ್ತಾಗಿದೆ. ಈತ ತನ್ನ ಕೊನೆಯ ಕರೆಯನ್ನು ಅಣ್ಣನಿಗೆ ಮಾಡಿದ್ದಾನೆ. ತನ್ನ ಗರ್ಲ್‌ಫ್ರೆಂಡ್ ಮೃತಪಟ್ಟಿದ್ದಾಳೆ. ಆಕೆಯ ಮದುವೆ ಫಿಕ್ಸ್ ಮಾಡಿದ್ದರು. ಗೆಳತಿ ಸಾವು ಕಂಡಿದ್ದಾಳೆ, ಹೀಗಾಗಿ ನಾನು ಬದುಕು ಅಂತ್ಯಗೊಳಿಸುತ್ತೇನೆ ಎಂದಿದ್ದಾನೆ. ಬಳಿಕ ರೈಲು ಹಳಿಯಲ್ಲಿ ಸಾಗಿ ಬದುಕು ಅಂತ್ಯಗೊಳಿಸಿದ್ದಾನೆ. ಈತನ ಮೊಬೈಲ್‌ನಲ್ಲಿ 12 ಸೆಕೆಂಡ್ ವಿಡಿಯೋ ಒಂದು ಪತ್ತೆಯಾಗಿತ್ತು. ಈ ವಿಡಿಯೋದಲ್ಲಿ ಈತ ರೈಲು ಹಳಿಯಲ್ಲಿ ರೈಲು ಬರುತ್ತಿರುವತ್ತೆ ಸಾಗುತ್ತಿರುವು ದೃಶ್ಯವಿದೆ.

ಕೊಲೆ ಮಾಡಿರುವ ಅನುಮಾನ

ಮೇಲ್ನೋಟಕ್ಕೆ ಇದು ಒನ್ ವೇ ಲವ್ ಅನ್ನೋದು ಗೊತ್ತಾಗಿದೆ. ಈತನ ಅತೀಯಾಗಿ ಪ್ರೀತಿಸುತ್ತಿದ್ದರೂ,ಯುವತಿ ಪ್ರೀತಿಸುತ್ತಿರಲಿಲ್ಲ. ಪರಿಚದ ಕಾರಣ ಮಾತನಾಡಿಸುತ್ತಿದ್ದಳು. ಆದರೆ ಪ್ರೀತಿ ಇರಲಿಲ್ಲ ಎಂಬುದು ಯುವತಿ ಆಪ್ತರು ಹೇಳಿದ್ದಾರೆ ಎಂದು ವರದಿಯಾಗಿದೆ. ಯುವತಿ ಮದುವೆ ನಿಶ್ಚಯವಾದ ಹಿನ್ನಲೆಯಲ್ಲಿ ತನಗೆ ಈಕೆ ಸಿಗುವುದಿಲ್ಲ ಎಂದು ಆಕೆ ಮೇಲೆ ಬಲವಂತವದ ಅತ್ಯಾ**ರ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ. ಕುಟುಂಬಸ್ಥರು ಇದೇ ಆರೋಪ ಮಾಡಿದ್ದಾರೆ. ಎರಡು ಮೃತದೇಹ ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Middle East Crisis: ಒಣಹಣ್ಣುಗಳ ಬೆಲೆ ಶೇ.40ರಷ್ಟು ಹೆಚ್ಚಳ, ಇಂಧನ ದರ ಏರಿಕೆಯಿಂದ ಪಾಕ್‌ ಸರ್ಕಾರಿ ನೌಕರರ ಅರ್ಧ ಸಂಬಳ ಕಟ್!
NavIC Navigation System: ‘ನಾವಿಕ್‌’ ದಿಕ್ಸೂಚಿ ಸಿಸ್ಟಂನಲ್ಲಿ ಭಾರೀ ಸಮಸ್ಯೆ, ರಾಷ್ಟ್ರೀಯ ಭದ್ರತೆಗೆ ಅಪಾಯದ ಭೀತಿ!